ಗೃಹ ಸಾಲ ತೆಗೆದುಕೊಂಡು, ನೀವೇನಾದರೂ ಮನೆ ಖರೀದಿ ಮಾಡಬೇಕು ಅಂತಿದ್ದೀರಾ? ಪ್ರಧಾನಮಂತ್ರಿ ಆವಾಸ್ ಯೋಜನಾ (PMAY) ಅಡಿಯಲ್ಲಿ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಸ್ಕೀಮ್ ನಲ್ಲಿ (CLSS) ಬಡ್ಡಿ ಮೇಲೆ ಸಬ್ಸಿಡಿ ಪಡೆಯುವುದಕ್ಕೆ ಕೊನೆ ದಿನ ಹತ್ತಿರ ಬಂದಿದೆ. ಮಾರ್ಚ್ 31, 2020 ಕೊನೆ ದಿನಾಂಕ. ಇನ್ನೇನು ಕೊನೆ ದಿನ ಹತ್ತಿರ ಇರುವುದರಿಂದ PMAYಗೆ ಅರ್ಜಿ ಹಾಕಿಕೊಳ್ಳಲು ಪ್ರಕ್ರಿಯೆ ಆರಂಭಿಸಬಹುದು.
ಎಷ್ಟು ಸಬ್ಸಿಡಿ ಸಿಗಬಹುದು ಎಂಬುದು ನಿಮ್ಮ ಆದಾಯದ ಮೇಲೆ ಅವಲಂಬಿತವಾಗಿದೆ. ಸಿಎಲ್ ಎಸ್ ಎಸ್ ಎರಡು ವಿಭಾಗದವರಿಗೆ ದೊರೆಯುತ್ತದೆ. MIG |, MIG ||ಗೆ. CLSSನಲ್ಲಿ MIG | ಅಂದರೆ, ಆದಾಯ ವಾರ್ಷಿಕವಾಗಿ 6ರಿಂದ 12 ಲಕ್ಷ ರುಪಾಯಿ ಇರುವವರು. ಇನ್ನು MIG || ಅಂದರೆ, 12ರಿಂದ 18 ಲಕ್ಷ ರುಪಾಯಿ ವಾರ್ಷಿಕ ಆದಾಯ ಇರುವವರು.
CLSS ಯೋಜನೆ ಅಡಿಯಲ್ಲಿ ಸಾಲ ಪಡೆಯಬೇಕು
MIG |, MIG ||ಗೆ ದೊರೆಯುವ ಗರಿಷ್ಠ ಸಬ್ಸಿಡಿ ಮೊತ್ತ ಅಂದರೆ, ಕ್ರಮವಾಗಿ 2,35,068 ರುಪಾಯಿ ಹಾಗೂ 2,30,156 ರುಪಾಯಿ. ಇದರರ್ಥ CLSS ಯೋಜನೆ ಅಡಿಯಲ್ಲಿ ಸಾಲ ಪಡೆದುಕೊಂಡರೆ ಕೊನೆಯಲ್ಲಿ ಒಟ್ಟಾರೆ ಇಷ್ಟು ಮೊತ್ತದ ಬಡ್ಡಿಯನ್ನು ಉಳಿತಾಯ ಮಾಡಬಹುದು.
4 ಪರ್ಸೆಂಟ್ ಹಾಗೂ 3 ಪರ್ಸೆಂಟ್ ಬಡ್ಡಿ ದರದ ಸಬ್ಸಿಡಿ
MIG | ಅಡಿಯಲ್ಲಿ 4 ಪರ್ಸೆಂಟ್ ಬಡ್ಡಿ ಸಬ್ಸಿಡಿ ದೊರೆಯುತ್ತದೆ. ಸಾಲದ ಮೊತ್ತವು 9 ಲಕ್ಷ ರುಪಾಯಿ ತನಕದ ಸಾಲಕ್ಕೆ ಈ ಸಬ್ಸಿಡಿ ದೊರೆಯುತ್ತದೆ. MIG || ವಿಭಾಗದಲ್ಲಿ 3 ಪರ್ಸೆಂಟ್ ಬಡ್ಡಿ ದರದ ಸಬ್ಸಿಡಿ ದೊರೆಯುತ್ತದೆ. ಸಾಲದ ಮೊತ್ತ 12 ಲಕ್ಷದ ತನಕ ಸಿಗುತ್ತದೆ. ಇದಕ್ಕಿಂತ ಹೆಚ್ಚಿನ ಮೊತ್ತದ ಸಾಲಕ್ಕೆ ಬಡ್ಡಿ ಮೇಲೆ ಸಬ್ಸಿಡಿ ಪಡೆಯಲು ಸಾಧ್ಯವಿಲ್ಲ.
ಮೊದಲಿಗೆ ಖಾತೆಗೆ ಜಮೆ
ಇದರರ್ಥ 9 ಮತ್ತು 12 ಲಕ್ಷಕ್ಕಿಂತ ಹೆಚ್ಚು ಸಾಲ ಪಡೆಯುವುದು ಸಾಧ್ಯವಿಲ್ಲ ಅಂತಲ್ಲ. ಆಯಾ ಅರ್ಜಿದಾರರ ಅರ್ಹತೆಗೆ ಅನುಗುಣವಾಗಿಯೇ ಸಾಲ ಸಿಗುತ್ತದೆ. ಆದರೆ ಸಬ್ಸಿಡಿಯನ್ನು ಮಾತ್ರ 9 ಮತ್ತು 12 ಲಕ್ಷದ ಮೇಲೆ ಲೆಕ್ಕ ಹಾಕಲಾಗುತ್ತದೆ. ಒಂದು ಸಲ PMAY ಅಡಿಯಲ್ಲಿ ಸಬ್ಸಿಡಿ ಲೆಕ್ಕ ಹಾಕಿದ ಮೇಲೆ ಸಾಲದ ಮೊತ್ತದ ಮೇಲಿನ ಸಬ್ಸಿಡಿಯನ್ನು ಮೊದಲಿಗೆ ಖಾತೆಗೆ ಜಮೆ ಮಾಡಲಾಗುತ್ತದೆ. ಇದರಿಂದ ಸಾಲ ಪಡೆಯುವವರಿಗೆ ಇಎಂಐ ಕಡಿಮೆ ಆಗುತ್ತದೆ. ಬಡ್ಡಿ ದರದಲ್ಲಿ ಉಳಿತಾಯ ಆಗುತ್ತದೆ.
ಬ್ಯಾಂಕ್ ನಿಂದ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿಕೊಳ್ಳಬೇಕು
ಉದಾಹರಣೆಗೆ: ಒಬ್ಬ ವ್ಯಕ್ತಿ 40 ಲಕ್ಷ ರುಪಾಯಿ ಸಾಲಕ್ಕೆ ಅರ್ಜಿ ಹಾಕಿದ್ದಾರೆ ಅಂದುಕೊಳ್ಳಿ. ಅವರು MIG ||ಗೆ ಬಂದರೆ, 12 ಲಕ್ಷಕ್ಕೆ 3 ಪರ್ಸೆಂಟ್ ಸಬ್ಸಿಡಿ ಅನ್ವಯಿಸುತ್ತದೆ. ಬಾಕಿ 28 ಲಕ್ಷಕ್ಕೆ ಸಾಲ ಮಾಡಿದವರು ಮಾಮೂಲಿನಂತೆಯೇ ಬಡ್ಡಿದರವನ್ನು ಬ್ಯಾಂಕ್ ಗೆ ಪಾವತಿ ಮಾಡುತ್ತಾರೆ. PMAYನ CLSS ಅಡಿಯಲ್ಲಿ ಅನುಕೂಲಕ ಪಡೆದುಕೊಳ್ಳಬೇಕು ಅಂದರೆ, ಮೊದಲಿಗೆ ಬ್ಯಾಂಕ್ ನಿಂದ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿಕೊಳ್ಳಬೇಕು. ಇದು ಮೊದಲ ಬಾರಿಗೆ ಮನೆ ಖರೀದಿಸುವವರಿಗೆ ಅನ್ವಯ ಆಗುತ್ತದೆ. ಇದರಿಂದ ಇಎಂಐ ಕಡಿಮೆಯಾಗಿ, ಬಡ್ಡಿ ದರವೂ ಕಡಿಮೆಯಾಗುತ್ತದೆ. ಈ ಯೋಜನೆ ಆರ್ಥಿಕ ವರ್ಷದ ಕೊನೆ ತನಕ ದೊರೆಯುತ್ತದೆ. ಬಿಲ್ಡರ್ ಅಥವಾ ಬ್ಯಾಂಕ್ ಗೆ ಭೇಟಿ ಕೊಟ್ಟು, ಈ ಸವಲತ್ತು ಪಡೆಯಬಹುದು.


Click it and Unblock the Notifications