ಉನ್ನತ ಶಿಕ್ಷಣವನ್ನು ಪಡೆಯುವುದು ಎಂದರೆ ಬಡವರಿಗೆ, ಮಧ್ಯಮ ವರ್ಗದವರಿಗೆ ಕೈಗೆಟುಕದ ತುತ್ತಿನಂತಾಗಿದೆ. ಶಿಕ್ಷಣವು ಈಗ ಮಾರಾಟದ ಸರಕಾಗಿದ್ದು, ಹಣವಿದ್ದರೆ ಮಾತ್ರ ಶಿಕ್ಷಣ ಪಡೆಯಲು ಸಾಧ್ಯ ಎಂಬಂತಾಗಿದೆ. ಇಂತಹ ಸಂದರ್ಭದಲ್ಲಿ ಉನ್ನತ ಶಿಕ್ಷಣ ಪಡೆಯಲು ಬಯಸುವವರಿಗೆ ಶಿಕ್ಷಣ ಸಾಲವು ಒಂದು ವರದಾನವೇ ಹೌದು.
ಅದೆಷ್ಟೊ ಕುಟುಂಬ ತಮ್ಮ ಮಕ್ಕಳಿಗೆ ಶಿಕ್ಷಣವನ್ನು ನೀಡುವ ಪ್ರಯತ್ನದಲ್ಲಿ ತಮ್ಮ ಚಿನ್ನ, ಮನೆ, ಆಸ್ತಿಯನ್ನು ಮಾರಾಟ ಮಾಡುತ್ತಾರೆ. ಆದರೆ ಈಗ ಶಿಕ್ಷಣಕ್ಕಾಗಿ ಸಾಲ ಲಭ್ಯವಿರುವಾಗ ಕುಟುಂಬವು ಯಾವುದೇ ಸೊತ್ತನ್ನು ಮಾರಾಟ ಮಾಡಬೇಕಾದ ಅಗತ್ಯ ಬರುವುದಿಲ್ಲ. ಶಿಕ್ಷಣ ಸಾಲವನ್ನು ಪಡೆದು ಪದವಿ ಪಡೆದು, ಉದ್ಯೋಗ ಮಾಡುವಾಗ ಸಾಲವನ್ನು ಮರುಪಾವತಿ ಮಾಡುವ ಆಯ್ಕೆ ಇರುತ್ತದೆ.
ದೇಶದ ಟಾಪ್ ಬ್ಯಾಂಕ್‌ಗಳು ಶಿಕ್ಷಣ ಸಾಲವನ್ನು ನೀಡುತ್ತದೆ. ಬೇರೆ ಬೇರೆ ಕೋರ್ಸ್‌ಗಳಿಗೆ ಶಿಕ್ಷಣ ಸಾಲವನ್ನು ನೀಡುತ್ತದೆ. ನೀವು ಯಾವ ರೀತಿಯ ಶಿಕ್ಷಣ ಸಾಲವನ್ನು ಪಡೆಯುತ್ತೀರೋ ಅದರ ಆಧಾರದಲ್ಲಿ ಮರುಪಾವತಿ ಅವಧಿ ನಿರ್ಧಾರವಾಗುತ್ತದೆ. ಯಾವ ಬ್ಯಾಂಕ್ ಎಷ್ಟು ಬಡ್ಡಿದರಕ್ಕೆ ಶಿಕ್ಷಣ ಸಾಲವನ್ನು ನೀಡುತ್ತದೆ, ಅರ್ಹತಾ ಮಾನದಂಡವೇನು ಎಂದು ತಿಳಿಯೋಣ ಮುಂದೆ ಓದಿ...
ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಿಕ್ಷಣ ಸಾಲ
ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಿಕ್ಷಣ ಸಾಲವನ್ನು ನೀಡುತ್ತಿದೆ. ಬೇರೆ ಬೇರೆ ವಿಧದ ಶಿಕ್ಷಣ ಸಾಲವನ್ನು ನಾವು ಪಡೆಯಲು ಸಾಧ್ಯವಾಗುತ್ತದೆ. ಬಡ್ಡಿದರವು ಯೋಜನೆಯ ಮೇಲೆ ಅವಲಂಭಿತವಾಗಿದೆ. ಪಿಎನ್‌ಬಿಯಲ್ಲಿ 7.5 ಲಕ್ಷ ರೂಪಾಯಿ ಸಾಲಕ್ಕೆ ಗರಿಷ್ಠ ಅವಧಿ 15 ವರ್ಷವಾಗಿದೆ. 7.5 ಲಕ್ಷ ರೂಪಾಯಿವರೆಗೆ ಯಾವುದೇ ಸೆಕ್ಯೂರಿಟಿ ನೀಡಬೇಕಾಗಿಲ್ಲ. ಅದಕ್ಕೂ ಅಧಿಕ ಸಾಲಕ್ಕೆ ಮೇಲಾಧಾರ ನೀಡಬೇಕಾಗಬಹುದು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಿಕ್ಷಣ ಸಾಲ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬೇರೆ ಬೇರೆ ವಿಧದ ಶಿಕ್ಷಣ ಸಾಲವನ್ನು ನೀಡುತ್ತದೆ. ಬೇರೆ ಬೇರೆ ಕೋರ್ಸ್‌ಗಳಿಗೆ ಶಿಕ್ಷಣ ಸಾಲವನ್ನು ಎಸ್‌ಬಿಐ ನೀಡುತ್ತದೆ. 7.5 ಲಕ್ಷ ರೂಪಾಯಿಗೆ ಸಾಲಕ್ಕೆ ಯಾವುದೇ ಗ್ಯಾರಂಟಿ ಬೇಕಾಗಿಲ್ಲ. ಕೋರ್ಸ್ ಅಂತ್ಯವಾದ ಒಂದು ವರ್ಷದ ಬಳಿಕ ಸಾಲವನ್ನು ಮರುಪಾವತಿ ಮಾಡುವ ಅವಧಿ ಆರಂಭವಾಗುತ್ತದೆ. 20 ಲಕ್ಷ ರೂಪಾಯಿ ಸಾಲಕ್ಕೆ ಮರುಪಾವತಿ ಅವಧಿ 15 ವರ್ಷವಾಗಿದೆ. ಕೋರ್ಸ್ ಅಂತ್ಯವಾದ ಬಳಿಕ 15 ವರ್ಷದ ಮರುಪಾವತಿ ಅವಧಿಯಾಗಿದೆ. 12 ವರ್ಷದ ಪ್ರೋಸೆಸಿಂಗ್ ಶುಲ್ಕವನ್ನು ಮನ್ನಾ ಮಾಡಲಾಗುತ್ತದೆ. ಬಡ್ಡಿದರ ಶೇಕಡ 8.30ರಿಂದ ಆರಂಭವಾಗುತ್ತದೆ.
ಆಕ್ಸಿಸ್ ಬ್ಯಾಂಕ್ ಶಿಕ್ಷಣ ಸಾಲ
ಭಾರತದಲ್ಲಿ ಮತ್ತು ವಿದೇಶದಲ್ಲಿ ಶಿಕ್ಷಣವನ್ನು ಪಡೆಯಲು ಆಕ್ಸಿಸ್ ಬ್ಯಾಂಕ್ ಸಾಲವನ್ನು ನೀಡುತ್ತದೆ. ಆಕ್ಸಿಸ್ ಬ್ಯಾಂಕ್ ಶಿಕ್ಷಣ ಸಾಲವು 50 ಸಾವಿರ ರೂಪಾಯಿಯಿಂದ ಆರಂಭವಾಗುತ್ತದೆ. ಬೇರೆ ಬೇರೆ ಬಡ್ಡಿದರ ಇರುತ್ತದೆ. ಆಕ್ಸಿಸ್ ಬ್ಯಾಂಕ್‌ನಲ್ಲಿ ಶಿಕ್ಷಣ ಸಾಲ ಪಡೆಯುವುದು ಸುಲಭವಾಗಿದೆ. ಸರಳವಾಗಿ ದಾಖಲೆಗಳನ್ನು ಪ್ರಸ್ತುತಪಡಿಸುವುದು, ಶೀಘ್ರ ಸಾಲ ಪಡೆಯುವುದು, ಆದಾಯ ತೆರಿಗೆ ಕಾಯ್ದೆ 80(E) ಅಡಿಯಲ್ಲಿ ತೆರಿಗೆ ಪ್ರಯೋಜನ, ದೀರ್ಘ ಮರುಪಾವತಿ ಅವಧಿ ಮೊದಲಾದ ಲಾಭವನ್ನು ನಾವು ಈ ಬ್ಯಾಂಕ್‌ನಲ್ಲಿ ಪಡೆಯಬಹುದು. 4 ಲಕ್ಷದವರೆಗಿನ ಸಾಲಕ್ಕೆ ಬಡ್ಡಿದರ ಶೇಕಡ 6.25 ಆಗಿದೆ. ಅದಕ್ಕಿಂತ ಅಧಿಕ 7.5 ಲಕ್ಷವರೆಗಿನ ಸಾಲಕ್ಕೆ ಬಡ್ಡಿದರ ಶೇಕಡ 6.25 ಆಗಿದೆ.
ಬ್ಯಾಂಕ್ ಆಫ್ ಬರೋಡಾ ಶಿಕ್ಷಣ ಸಾಲ
ಬ್ಯಾಂಕ್ ಆಫ್ ಬರೋಡಾದಲ್ಲಿ ನಾವು ಹಲವಾರು ವಿಧದ ಶಿಕ್ಷಣ ಸಾಲವನ್ನು ಪಡೆಯಲು ಸಾಧ್ಯವಿದೆ. 4 ಲಕ್ಷ ರೂಪಾಯಿವರೆಗೆ ಯಾವುದೇ ಮೇಲಾಧಾರವನ್ನು ನೀಡದರೆ ಸಾಲವನ್ನು ಪಡೆಯಬಹುದು. ಆದಾಯ ತೆರಿಗೆಯ ಸೆಕ್ಷನ್ 80E ಅಡಿಯಲ್ಲಿ ಈ ಸಾಲಕ್ಕೆ ಪಾವತಿಸಿದ ಬಡ್ಡಿದರದ ಮೇಲೆ ತೆರಿಗೆ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುತ್ತದೆ. ಗರಿಷ್ಠ ಅವಧಿ 10-15 ವರ್ಷವಾಗಿದೆ. 7.5 ಲಕ್ಷ ರೂಪಾಯಿವರೆಗಿನ ಸಾಲಕ್ಕೆ ಯಾವುದೇ ಸೆಕ್ಯೂರಿಟಿಯನ್ನು ಒದಗಿಸಬೇಕಾಗಿಲ್ಲ. ಪ್ರೋಸೆಸಿಂಗ್ ಹಾಗೂ ದಾಖಲೀಕರಣಕ್ಕೆ ಶುಲ್ಕವಿಲ್ಲ. ಬಡ್ಡಿದರವು ಶೇಕಡ 8.85ರಿಂದ ಆರಂಭವಾಗುತ್ತದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications