ನೀವು ಯಾವುದೇ ರಿಸ್ಕ್ ಇಲ್ಲದೇ ಸ್ಥಿರ ಆದಾಯವನ್ನು ಗಳಿಸಬೇಕು ಎಂದು ಯೋಚನೆ ಮಾಡುತ್ತಿದ್ದೀರಾ..? ಹಾಗಿದ್ದರೆ ನಿಮ್ಮಗೆ ಈ ಯೋಜನೆ ಬೆಸ್ಟ್ ಎಂದೇ ಹೇಳಬಹುದು. ಹೌದು, ಸುರಕ್ಷಿತವಾಗಿ ಒಂದು ಒಳ್ಳೆಯ ಕಡೆಯಲ್ಲಿ ಹೂಡಿಕೆ ಮಾಡಬೇಕೆಂದುಕೊಂಡರೆ ನೀವು ಅಂಚೆ ಕಚೇರಿಯ ಯೋಜನೆಗಳು ಬೆಸ್ಟ್.
ಸಾರ್ವಜನಿಕರು ಆರ್ಥಿಕವಾಗಿ ಸಧೃಢರಾಗಬೇಕೆಂದು ಸರ್ಕಾರಗಳು ಅಂಚೆ ಕಚೇರಿಯ ಮೂಲಕ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಪೈಕಿ ಅಂಚೆ ಕಚೇರಿ ಟೈಮ್ ಠೇವಣಿ ಯೋಜನೆ ಕೂಡ ಒಂದು. ಈ ಯೋಜನೆಯ ಮೂಲಕ ತಮ್ಮ ಭವಿಷ್ಯದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಣೆ ಮಾಡಬಹುದು.
ಪೋಸ್ಟ್ ಆಫೀಸ್ ಟೈಮ್ ಠೇವಣಿ ಯೋಜನೆ (TD) ಇದಕ್ಕೆ ಉತ್ತಮ ಆಯ್ಕೆಯಾಗಿದೆ, ಆದರೆ ಅದು ನಿಮಗೆ ಎಷ್ಟು ಒಳ್ಳೆಯದು? ಅದರಲ್ಲಿ ಹೂಡಿಕೆ ಮಾಡುವುದು ಸರಿಯೇ ಅಥವಾ ಇಲ್ಲವೇ? ಟೈಮ್ ಠೇವಣಿ ಯೋಜನೆಯಲ್ಲಿ ಬಡ್ಡಿದರ ಎಷ್ಟು? ನೀವು ಎಷ್ಟು ವರ್ಷಗಳವರೆಗೆ ಹೂಡಿಕೆ ಮಾಡಬಹುದು? ಟೈಮ್ ಠೇವಣಿ ಯೋಜನೆಯಲ್ಲಿ ಯಾರು ಹೂಡಿಕೆ ಮಾಡಲು ಅರ್ಹರು? ಪೋಸ್ಟ್ ಆಫೀಸ್ ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಪ್ರಕ್ರಿಯೆಯನ್ನು ಹೇಗೆ ಎಂಬುವುದನ್ನು ತಿಳಿಯಲು ಮುಂದೆ ಓದಿ.
ಪೋಸ್ಟ್ ಆಫೀಸ್ ಟೈಮ್ ಠೇವಣಿ ಯೋಜನೆ
ಪೋಸ್ಟ್ ಆಫೀಸ್ ಟೈಮ್ ಠೇವಣಿ ಯೋಜನೆಯು ಒಂದು ರೀತಿಯ ಸ್ಥಿರ ಠೇವಣಿ ಯೋಜನೆ ಆಗಿದೆ. ನೀವು ಯೋಜನೆಯಲ್ಲಿ
ವಿವಿಧ ಅವಧಿಗಳಿಗೆ ಹೂಡಿಕೆಯನ್ನು ಮಾಡಬಹುದು. ಸರ್ಕಾರಿ ಸಮಯ ಠೇವಣಿ ಯೋಜನೆಯಲ್ಲಿ, 1, 2, 3 ಮತ್ತು 5 ವರ್ಷಗಳ ಅವಧಿಗೆ ಹೂಡಿಕೆ ಮಾಡಬಹುದು. ಇದು ಸರ್ಕಾರಿ ಯೋಜನೆಯಾಗಿರುವುದರಿಂದ, ಈ ಯೋಜನೆಯಲ್ಲಿ ಹೂಡಿಕೆ ಮಾಡುವುದನ್ನು ಸುರಕ್ಷಿತವಾಗಿರುತ್ತದೆ.
ಸಮಯ ಠೇವಣಿ ಯೋಜನೆಯಲ್ಲಿ ಬಡ್ಡಿದರ ಎಷ್ಟು ಸಿಗಬಹುದು..?
- ನೀವೇನಾದರೂ ಈ ಯೋಜನೆಯ ಮೂಲಕ ಒಂದು ವರ್ಷ ಹೂಡಿಕೆ ಮಾಡಿದರೆ ವರ್ಷಕ್ಕೆ ಶೇಕಡಾ.6.9 ಬಡ್ಡಿ ಸಿಗುತ್ತದೆ.
- ಎರಡು ವರ್ಷಗಳ ಕಾಲ ಹೂಡಿಕೆ ಮಾಡಿದರೆ ವಾರ್ಷಿಕ ಶೇ. 7.0 ಬಡ್ಡಿ ಸಿಗುತ್ತದೆ .
- ಮೂರು ವರ್ಷಗಳ ಅವಧಿಗೆ ಹೂಡಿಕೆ ಮಾಡಿದರೆ ವಾರ್ಷಿಕ ಶೇ. 7.1ಬಡ್ಡಿ ಸಿಗುತ್ತದೆ.
- ಐದು ವರ್ಷಕ್ಕೆ ಹೂಡಿಕೆ ಮಾಡಿದರೆ ವರ್ಷಕ್ಕೆ ನಿಮ್ಮಗೆ ಶೇಕಡಾ 7.5 ಬಡ್ಡಿ ಮತ್ತು ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿ ಸಿಗುತ್ತದೆ.
ಸಮಯ ಠೇವಣಿ ಯೋಜನೆಯಲ್ಲಿ ಯಾರು ಹೂಡಿಕೆ ಮಾಡಬಹುದು..?
ಯಾವುದೇ ಭಾರತೀಯ ನಾಗರಿಕರು ಈ ಪೋಸ್ಟ್ ಆಫೀಸ್ ಸಮಯ ಠೇವಣಿ ಯೋಜನೆಯಲ್ಲಿ ಹೂಡಿಕೆ ಮಾಡಬಹುದು, 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿರಬೇಕು. ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಏಕ ಮತ್ತು ಜಂಟಿ ಖಾತೆ ತೆರೆಯುವ ಸೌಲಭ್ಯಗಳನ್ನು ಒದಗಿಸಲಾಗಿದೆ. ಒಂದು ಸಮಯದಲ್ಲಿ 3 ಜನರು ಜಂಟಿ ಖಾತೆಗೆ ಸೇರಬಹುದು. ತಮ್ಮ ಮಕ್ಕಳಿಗಾಗಿ ಹೂಡಿಕೆ ಮಾಡುವ ಪೋಷಕರು ಮಗುವಿನ ಹೆಸರಿನಲ್ಲಿ ಸಮಯ ಠೇವಣಿ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
ಈ ಠೇವಣಿಯ ಯೋಜನೆಯಲ್ಲಿ ಒಂದು ಬಾರಿ ಎಷ್ಟು ಹಣವನ್ನು ಹೂಡಿಕೆ ಮಾಡಬಹುದು..?
ಪೋಸ್ಟ್ ಆಫೀಸ್ ಸಮಯ ಠೇವಣಿ ಯೋಜನೆಯಲ್ಲಿ ಕನಿಷ್ಠ ಸಾವಿರ ರೂಪಾಯಿಗಳವರೆಗೂ ಹೂಡಿಕೆಯನ್ನು ಮಾಡಬಹುದು. ಗರಿಷ್ಠ ರೀತಿಯಲ್ಲಿ ಹೂಡಿಕೆಗೆ ಮಾಡಬೇಕೆಂದರೆ ಯಾವುದೇ ಮಿತಿಯಿಲ್ಲ. ಈ ಯೋಜನೆಯಲ್ಲಿ ವಾರ್ಷಿಕವಾಗಿ ಬಡ್ಡಿಯನ್ನು ಪಾವತಿಸಲಾಗುತ್ತದೆ.
ನೀವು 5 ವರ್ಷಗಳ ಯೋಜನೆಯನ್ನು ತೆಗೆದುಕೊಂಡರೆ, ನೀವು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿ ಪಡೆಯಬಹುದು.

ಸಮಯ ಠೇವಣಿ (TD) ಹೂಡಿಕೆ ಮಾಡುವುದು ಹೇಗೆ..?
ಸಮಯ ಠೇವಣಿಗಳಲ್ಲಿ ಹೂಡಿಕೆ ಮಾಡಲು, ನೀವು ಅಂಚೆ ಕಚೇರಿಗೆ ಹೋಗಬೇಕು. ಇಲ್ಲಿ ನೀವು ಉಳಿತಾಯ ಖಾತೆ ಅಥವಾ ಸಮಯ ಠೇವಣಿಗಳಿಗಾಗಿ ಖಾತೆಯನ್ನು ತೆರೆಯಬಹುದು. ಇದಕ್ಕಾಗಿ, ನೀವು ಒಂದು ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ. ಹೆಸರು, ವಿಳಾಸ, ಫೋನ್ ಸಂಖ್ಯೆಯನ್ನು ಹೊರತುಪಡಿಸಿ, ನೀವು ಫಾರ್ಮ್‌ನಲ್ಲಿ ಹೂಡಿಕೆ ಮಾಡಲು ಬಯಸುವ ಅವಧಿಯನ್ನು ಸಹ ಬರೆಯಬೇಕು. ಈ ಯೋಜನೆಯಲ್ಲಿ ನೀವು ತಿಂಗಳಿಗೆ ಕನಿಷ್ಠ 1000 ರೂ. ಹೂಡಿಕೆ ಮಾಡಬಹುದು. 1, 2, 3 ಮತ್ತು 5 ವರ್ಷಗಳ ಅವಧಿಗೆ ಹೂಡಿಕೆಗಳನ್ನು ಮಾಡುವಮತಹ ಸೌಲಭಗಳು ಇರುತ್ತೇವೆ.


Click it and Unblock the Notifications