ನಿಮ್ಮ ಸುಖಕರ ಜೀವನಕ್ಕೆ ಆರ್ಥಿಕ ಭದ್ರತೆ ಎಷ್ಟು ಮುಖ್ಯವೋ ಅದರ ಜೊತಗೆ ಆರೋಗ್ಯ ಭದ್ರತೆಯೂ ಕೂಡ ಮುಖ್ಯವಾಗುತ್ತದೆ.ಆದ್ದರಿಂದ ವಿಮಾ ಪಾಲಿಸಿಯನ್ನು ತೆಗೆದುಕೊಳ್ಳುವುದು ಕಡ್ಡಾಯವಾಗಿದೆ. ನಮ್ಮ ಆರೋಗ್ಯಕ್ಕೆ ವಿಮಾ ಪಾಲಿಸಿಗಳು ಬೇಕು ಅನ್ನಿಸಿದರೂ ದುಬಾರಿ ಪ್ರೀಮಿಯಂ ಕಟ್ಟೋದು ಎಲ್ಲರಿಗೂ ಕಷ್ಟ. ಆದ್ರೆ, ವರ್ಷಕ್ಕೆ ಕೇವಲ 899 ರೂಪಾಯಿ ಕೊಟ್ಟು 15 ಲಕ್ಷ ರೂಪಾಯಿ ಆರೋಗ್ಯ ವಿಮೆ ಪಡೆಯಬಹುದು ಅಂದ್ರೆ ಹೇಗೆ? ಎಂಬುವುದನ್ನು ತಿಳಿಯಲು ಮುಂದೆ ಓದಿ..
ಭಾರತೀಯ ಅಂಚೆ ಕಚೇರಿ (India Post) ಈ ಅವಕಾಶ ನೀಡುತ್ತಿದೆ. ಅಂಚೆ ಕಚೇರಿ ವಿಮಾ ಯೋಜನೆ, ಸಾಮಾನ್ಯ ಜನರ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ರೂಪಿಸಲಾಗಿದೆ. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಮೂಲಕ ಈ ಯೋಜನೆ ಪಡೆಯಬಹುದು. ಕಡಿಮೆ ಹಣದಲ್ಲಿ ಹೆಚ್ಚಿನ ರಕ್ಷಣೆ ನೀಡುವುದು ಇದರ ಉದ್ದೇಶ.

ಈ ಯೋಜನೆ ಗ್ರಾಮೀಣ ಜನರಿಗೆ ತುಂಬಾ ಅನುಕೂಲಕರವಾಗಿದೆ. ಬರಿ 899 ರೂಪಾಯಿ ಕೊಟ್ಟು 15 ಲಕ್ಷ ರೂಪಾಯಿ ವಿಮೆ ಮಾಡಿಸಬಹುದು. ಆರ್ಥಿಕವಾಗಿ ಹಿಂದುಳಿದವರಿಗೂ ಇದು ಕೈಗೆಟಕುವ ಬೆಲೆಯಲ್ಲಿ ಸಿಗುತ್ತೆ.
18 ರಿಂದ 60 ವರ್ಷ ವಯಸ್ಸಿನ ಭಾರತೀಯರು ಈ ಪಾಲಿಸಿಗೆ ಅರ್ಜಿ ಸಲ್ಲಿಸಬಹುದು. ಹುಟ್ಟಿ 91 ದಿನ ಆದ ಮಕ್ಕಳಿಗೂ ಈ ಯೋಜನೆಯಲ್ಲಿ ಸೇರಿಕೊಳ್ಳಬಹುದು. ಬೇರೆ ವಿಮೆ ಮಾಡಿಸಿದವರೂ ಸಹ ಈ ಯೋಜನೆಗೆ ಸೇರಬಹುದು. ಆದರೆ, ಗಂಭೀರ ಕಾಯಿಲೆ ಇರುವವರು ಈ ಪಾಲಿಸಿ ಪಡೆಯಲು ಆಗಲ್ಲ.
ಈ ಪಾಲಿಸಿ ಪಡೆಯಲು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಮೂಲಕ ಅರ್ಜಿ ಸಲ್ಲಿಸಬೇಕು. ಎಲ್ಲಾ ಅಂಚೆ ಕಚೇರಿಗಳಲ್ಲಿ ಈ ಸೌಲಭ್ಯ ಸಿಗಲ್ಲ. ಅಂಚೆ ಕಚೇರಿಯಲ್ಲಿ ಖಾತೆ ಇಲ್ಲದಿದ್ದರೆ, 200 ರೂಪಾಯಿ ಕೊಟ್ಟು ಖಾತೆ ತೆರೆಯಬಹುದು. ನಿಮ್ಮ ಹತ್ತಿರದ ಪೋಸ್ಟ್‌ಮ್ಯಾನ್ ಮೂಲಕವೂ ಈ ಯೋಜನೆಗೆ ಸೇರಿಕೊಳ್ಳಬಹುದು.
ಅಂಚೆ ಕಚೇರಿ ವೈಯಕ್ತಿಕ, ಜಂಟಿ ಮತ್ತು ಕುಟುಂಬ ಯೋಜನೆಗಳನ್ನು ನೀಡುತ್ತದೆ. ವೈಯಕ್ತಿಕ ಯೋಜನೆಗೆ ವರ್ಷಕ್ಕೆ 899 ರೂ. ಕೊಡಬೇಕು. ದಂಪತಿಗಳು ಜಂಟಿ ಯೋಜನೆ ತೆಗೆದುಕೊಂಡರೆ 1,399 ರೂ. ಕೊಡಬೇಕು. ಹೆಂಡತಿ, ಗಂಡ ಮತ್ತು ಒಂದು ಮಗುವಿಗೆ 1,799 ರೂ. ಮತ್ತು ಹೆಂಡತಿ, ಗಂಡ, ಇಬ್ಬರು ಮಕ್ಕಳಿದ್ದರೆ 2,199 ರೂ. ಕಟ್ಟಬೇಕಾಗುತ್ತದೆ.
ವಿಮಾ ಪಾಲಿಸಿಗೆ ಅಗತ್ಯವಿರುವ ದಾಖಲೆಗಳು
ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಅಥವಾ ಪ್ಯಾನ್ ಕಾರ್ಡ್. ವಿಳಾಸದ ಪುರಾವೆಯಾಗಿ ನೀವು ಈ ಕೆಳಗಿನವುಗಳಲ್ಲಿ ಒಂದನ್ನು ಒದಗಿಸಬಹುದು:ಪಡಿತರ ಚೀಟಿ, ಪಾಸ್‌ಪೋರ್ಟ್ ಅಥವಾ ಮತದಾರರ ಗುರುತಿನ ಚೀಟಿ.
ಪಾಸ್‌ಪೋರ್ಟ್ ಗಾತ್ರದ ಛಾಯಾಚಿತ್ರ, ಬ್ಯಾಂಕ್ ಖಾತೆ ವಿವರಗಳು ಅಥವಾ ಪಾಸ್‌ಬುಕ್‌ನ ಪ್ರತಿಯನ್ನು ಸಹ ಸಲ್ಲಿಕೆಯನ್ನು ನೀಡಬೇಕು.
Disclaimer: ಈ ಲೇಖನವು ಕೇವಲ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ನೀಡಲಾಗುತ್ತಿದೆ. ಇದು ಅಮೂಲ್ಯವಾದ ಲೋಹದ ಉತ್ಪನ್ನಗಳು, ಸರಕುಗಳು, ಭದ್ರತೆಗಳು ಅಥವಾ ಇತರ ಹಣಕಾಸು ಸಾಧನಗಳನ್ನು ಖರೀದಿಸಲು, ಮಾರಾಟ ಮಾಡಲು ವಿನಂತಿಯಲ್ಲ. ಗ್ರೇನಿಯಂ ಇನ್ಫರ್ಮೇಷನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಅದರ ಅಂಗಸಂಸ್ಥೆಗಳು, ಸಹವರ್ತಿಗಳು ಮತ್ತು ಈ ಲೇಖನದ ಲೇಖಕರು ಈ ಲೇಖನದಲ್ಲಿನ ಮಾಹಿತಿಯ ಆಧಾರದ ಮೇಲೆ ಉಂಟಾಗುವ ನಷ್ಟಗಳು ಮತ್ತು/ಅಥವಾ ಹಾನಿಗಳಿಗೆ ನಾವು ಜವಾಬ್ದಾರರಲ್ಲ.


Click it and Unblock the Notifications