ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಬಯಸುವವರು ಹೂಡಿಕೆಗೆ ಸುರಕ್ಷಿತವಾದ ವಿಧಾನವನ್ನು ಆಯ್ಕೆ ಮಾಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಹೂಡಿಕೆದಾರರು ಸರಿಯಾದ ವಿಧಾನಗಳಲ್ಲಿ ಹಣ ಠೇವಣಿ ಮಾಡದಿದ್ದರೆ ನಷ್ಟ ಅನುಭವಿಸುವುದು ಪಕ್ಕಾ.
ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಬಯಸುವವರು ಹೂಡಿಕೆಗೆ ಸುರಕ್ಷಿತವಾದ ವಿಧಾನವನ್ನು ಆಯ್ಕೆ ಮಾಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಹೂಡಿಕೆದಾರರು ಸರಿಯಾದ ವಿಧಾನಗಳಲ್ಲಿ ಹಣ ಠೇವಣಿ ಮಾಡದಿದ್ದರೆ ನಷ್ಟ ಅನುಭವಿಸುವುದು ಪಕ್ಕಾ. ಸುರಕ್ಷಿತ ಸರಳ ಹೂಡಿಕೆಯೊಂದಿಗೆ ಉತ್ತಮ ಆದಾಯ ಒದಗಿಸುವ ಆಯ್ಕೆ ನಿಮ್ಮದಾಗಿರಬೇಕಾಗುತ್ತದೆ. ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ ಖಾತೆ (ಪಿಒಎಂಐಎಸ್) ಇದಕ್ಕೆ ಉತ್ತಮ ಆಯ್ಕೆಯಾಗಬಲ್ಲದು.
ಪ್ರಯೋಜನಗಳೇನು?
ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಿಂದ ನಾಲ್ಕು ಪ್ರಮುಖ ಪ್ರಯೋಜನಗಳಿವೆ.
- ಮಾಸಿಕ ಖಾತೆಯನ್ನು ಯಾರೂ ಬೇಕಾದರೂ ತೆರೆಯಬಹುದಾಗಿದ್ದು, ಠೇವಣಿ ಯಾವಾಗಲೂ ಸುರಕ್ಷಿತವಾಗಿರುತ್ತದೆ.
- ಬ್ಯಾಂಕ್ ಎಫ್ಡಿಗಿಂತ ಅಥವಾ ಇನ್ಯಾವುದೇ ವಿಧಾನಕ್ಕಿಂತ ಹೆಚ್ಚಿನ ಆದಾಯ ಸಿಗುತ್ತದೆ.
- ಪ್ರತಿ ತಿಂಗಳು ನಿಗದಿತ ಆದಾಯವನ್ನು ಗಳಿಸುವಿರಿ ಮತ್ತು ಯೋಜನೆ ಪೂರ್ಣಗೊಂಡ ನಂತರ ಸಂಪೂರ್ಣ ಬಂಡವಾಳವನ್ನು ಪಡೆಯುತ್ತೀರಿ.
- ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ ಮತ್ತೆ ಹೂಡಿಕೆ ಮಾಡಬಹುದು.
ಖಾತೆ ಯಾರು ತೆರೆಯಬಹುದು?
ನಿಮ್ಮ ಮಗುವಿನ ಹೆಸರಿನೊಂದಿಗೆ ಖಾತೆ ತೆರೆಯಬಹುದು. ಮಗು10 ವರ್ಷಕ್ಕಿಂತ ಕಡಿಮೆ ವಯಸ್ಸಿನದ್ದಾಗಿದ್ದರೆ ಮಗುವಿನ ಹೆತ್ತವರು ಅಥವಾ ಪೋಷಕರ ಹೆಸರಿನಲ್ಲಿ ಖಾತೆಯನ್ನು ತೆರೆಯಬಹುದು. ಮಗುವಿಗೆ 10 ವರ್ಷ ತುಂಬಿದಾಗ ಖಾತೆಯನ್ನು ಸ್ವತಃ ನಿರ್ವಹಿಸುವ ಹಕ್ಕನ್ನು ಪಡೆಯುತ್ತದೆ.
ಎಷ್ಟು ಹೂಡಿಕೆ?
ಮಾಸಿಕ ಹೂಡಿಕೆ ಖಾತೆಯನ್ನು ಯಾರು ಬೇಕಾದರೂ ತೆರೆಯಬಹುದಾಗಿದ್ದು, ಒಂದೇ ಖಾತೆಯನ್ನು ಹೊಂದಿದ್ದರೆ ರೂ. 4.5 ಲಕ್ಷದವರೆಗೆ ಹಣ ಹೂಡಬಹುದು. ಕನಿಷ್ಠ ರೂ. 1500 ಠೇವಣಿ ಇಡಬಹುದು. ಅಲ್ಲದೇ ಜಂಟಿ ಖಾತೆಯಿದ್ದರೆ ಗರಿಷ್ಠ ರೂ. 9 ಲಕ್ಷ ಠೇವಣಿ ಇಡಬಹುದು. ಒಬ್ಬ ವ್ಯಕ್ತಿಯು ಒಂದಕ್ಕಿಂತ ಹೆಚ್ಚು ಖಾತೆಯನ್ನು ತೆರೆಯಬಹುದು.
ಇದರಲ್ಲಿ ಠೇವಣಿ ಇರಿಸಿದ ಮೊತ್ತ ಮತ್ತು ಅದರಿಂದ ಪಡೆಯುವ ಬಡ್ಡಿಗೆ ಯಾವುದೇ ತೆರಿಗೆ ರಿಯಾಯಿತಿಯ ಪ್ರಯೋಜನವಿಲ್ಲ.
ಪ್ರತಿ ತಿಂಗಳು ಆದಾಯ ಎಷ್ಟು?
ಪ್ರತಿ ತಿಂಗಳ ಆದಾಯ ಯೋಜನೆಯಡಿ, ಬಡ್ಡಿ ವಾರ್ಷಿಕ ಶೇ. 7.6 ರಷ್ಟಿರುತ್ತದೆ. ಈ ವಾರ್ಷಿಕ ಬಡ್ಡಿಯನ್ನು 12 ತಿಂಗಳುಗಳಲ್ಲಿ ವಿತರಿಸಲಾಗುತ್ತದೆ. ಅದನ್ನು ನೀವು ಮಾಸಿಕ ಆಧಾರದ ಮೇಲೆ ಪಡೆಯುತ್ತೀರಿ. ನೀವು ರೂ. 9 ಲಕ್ಷ ಠೇವಣಿ ಇಟ್ಟಿದ್ದರೆ, ನಿಮ್ಮ ವಾರ್ಷಿಕ ಬಡ್ಡಿ ಸುಮಾರು ರೂ. 65,700. ಈ ಹಿನ್ನೆಲೆಯಲ್ಲಿ, ನೀವು ಪ್ರತಿ ತಿಂಗಳು ಸುಮಾರು 5,500 ರೂಪಾಯಿ ಆದಾಯವನ್ನು ಹೊಂದಿರುತ್ತೀರಿ. ಆದರೆ ಮುಕ್ತಾಯದ ಅವಧಿಯ ನಂತರ ಬೋನಸ್‌ಗಳನ್ನು ಸೇರಿಸುವ ಮೂಲಕ 9 ಲಕ್ಷ ರೂಪಾಯಿ ಹಿಂತಿರುಗಿಸಲಾಗುತ್ತದೆ.
ಖಾತೆ ತೆರೆಯುವುದು ಹೇಗೆ?
ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ನೀವು ಯಾವುದೇ ಅಂಚೆ ಕಚೇರಿಯಲ್ಲಿ ಖಾತೆಯನ್ನು ತೆರೆಯಬಹುದು. ಇದಕ್ಕಾಗಿ ನೀವು ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪ್ಯಾನ್ ಕಾರ್ಡ್, ಪಡಿತರ ಚೀಟಿ, ಚಾಲನಾ ಪರವಾನಗಿಯೊಂದರ ಫೋಟೋ ನಕಲನ್ನು ಸಲ್ಲಿಸಬೇಕಾಗುತ್ತದೆ. ಇದಲ್ಲದೆ, ವಿಳಾಸ ಪುರಾವೆಗಳನ್ನು ಸಲ್ಲಿಸಬೇಕಾಗಿದೆ. ಇದಲ್ಲದೆ, 2 ಪಾಸ್ಪೋರ್ಟ್ ಗಾತ್ರದ ಛಾಯಾಚಿತ್ರಗಳನ್ನು ಸಲ್ಲಿಸಬೇಕು.
ಮೆಚುರಿಟಿ ಮೊದಲು ಹಣವನ್ನು ಹಿಂತೆಗೆದುಕೊಂಡರೆ?
ತುರ್ತು ಅಗತ್ಯತೆಯ ಸಂದರ್ಭದಲ್ಲಿ ಮೆಚುರಿಟಿ ಮುಕ್ತಾಯಗೊಳ್ಳುವ ಮೊದಲು ಹಣವನ್ನು ಹಿಂತೆಗೆದುಕೊಳ್ಳಬೇಕಾದರೆ, ಖಾತೆಯ 1 ವರ್ಷ ಪೂರ್ಣಗೊಂಡ ನಂತರ ಮಾತ್ರ ಹಿಂತೆಗೆದುಕೊಳ್ಳುತ್ತಿರಿ. ಖಾತೆ ತೆರೆದು 1-3 ವರ್ಷಗಳಾಗಿದ್ದರೆ, ಉಳಿದ ಮೊತ್ತವನ್ನು ಠೇವಣಿ ಮಾಡಿದ ಮೊತ್ತದಿಂದ 2% ಕಡಿತಗೊಳಿಸುವ ಮೂಲಕ ಮರಳಿ ಪಡೆಯುತ್ತೀರಿ. ನೀವು 3 ವರ್ಷಕ್ಕಿಂತ ಹಳೆಯದಾದ ಖಾತೆಯನ್ನು ಹೊಂದಿದ್ದರೆ, ಅದರಲ್ಲಿ ಠೇವಣಿ ಇರಿಸಿದ ಮೊತ್ತದ 1 ಪ್ರತಿಶತವನ್ನು ಕಡಿತಗೊಳಿಸಿ, ಉಳಿದ ಮೊತ್ತವನ್ನು ಮರಳಿ ಪಡೆಯುತ್ತೀರಿ.


Click it and Unblock the Notifications