ಹಣದ ಉಳಿತಾಯ, ಸ್ಥಿರ ಹೂಡಿಕೆ ಯೋಜನೆಗಳಿ ಅಂಚೆ ಕಚೇರಿ ಎಲ್ಲಕ್ಕಿಂತಲೂ ಬೆಸ್ಟ್ ಎನ್ನಬಹುದು. ಇಲ್ಲಿ ನೀವು ಹೂಡಿಕೆ ಮಾಡಿದರೆ ಸೋಲೋ ಮಾತೇ ಇಲ್ಲ. ಯಾಕಂದ್ರೆ ಇದು ಸರ್ಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಇನ್ನು ಉಳಿತಾಯ ಯೋಜನೆಗಳು ಅಂತ ಬಂದಾಗ ನಮ್ಮ ಹಿರಿಯರೆಲ್ಲರೂ ಹೆಚ್ಚಾಗಿ ಅಂಚೆ ಕಚೇರಿಯನ್ನ ಅವಲಂಬಿಸ್ತಿದ್ರು. ಯಾಕಂದ್ರೆ ಪಕ್ಕಾ ಗ್ಯಾರಂಟಿ ಯೋಜನೆಗಳು ಅಂಚೆ ಕಚೇರಿಯಲ್ಲಿದ್ವು. ಇಂದು ಎಷ್ಟೋ ಜನಕ್ಕೆ ಅಂಚೆ ಕಚೇರಿಯಲ್ಲಿ ಇರುವ ಪ್ರಮುಖ ಯೋಜನೆಗಳ ಬಗ್ಗೆ ಅರಿವೇ ಇಲ್ಲ. ಅಂಥ ಒಂದು ಯೋಜನೆಯೇ ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ..

ಹೌದು, ನೀವು ತಿಂಗಳೆಲ್ಲ ದುಡಿದ ಹಣವನ್ನು ಉಳಿಸಿಕೊಂಡು ನಿಮ್ಮ ಬ್ಯಾಂಕ್ ಖಾತೆಯಲ್ಲೇ ಇಟ್ರೆ, ಅದು ಅಷ್ಟೇ ಇರಬಹುದು, ಅಥವಾ ಕಡಿಮೆಯೂ ಆಗಬಹುದು. ಆದ್ರೆ ಅದೇ ಹಣವನ್ನ ನೀವು ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನೀವು ತಿಂಗಳು ತಿಂಗಳು ಹಣ ನೋಡಬಹುದು.
ಇದೊಂದು ಬಹು ಜನಪ್ರಿಯ ಯೋಜನೆಯಾಗಿದೆ. ಅಂದಹಾಗೆ ಫಿಕ್ಸಡ್ ಡೆಪಾಸಿಟ್ ಎಂದು ಎಲ್ಲರೂ ಕೇಳಿರುತ್ತೀರ. ಅದರಂತೆಯೇ ಇದು ಅಂಚೆ ಕಚೇರಿಯ ಫಿಕ್ಸಡ್ ಡೆಪಾಸಿಟ್ ಯೋಜನೆ. ಒಮ್ಮೆ ನೀವು ಇದರಲ್ಲಿ ಹಣ ಉಳಿತಾಯ ಮಾಡಿದರೆ, ಅಂಚೆ ಕಚೇರಿಯು ಪ್ರತಿ ತಿಂಗಳು ನಿಮ್ಮ ಖಾತೆಗೆ ಉತ್ತಮ ಬಡ್ಡಿದರವನ್ನು ಪಾವತಿಸುತ್ತೆ. ಹಾಗಾದ್ರೆ ಬಡ್ಡಿದರದ ಬಗ್ಗೆ ಮಾಹಿತಿ ಪಡೆಯಿರಿ.
ಎಷ್ಟು ಹೂಡಿಕೆಗೆ ಎಷ್ಟು ಬಡ್ಡಿ?
ಒಂದು ವೇಳೆ ನೀವು 2026 ಫೆಬ್ರವರಿಯಲ್ಲಿ ಈ ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ನಿಮಗೆ ವರ್ಷಕ್ಕೆ 7.4% ಬಡ್ಡಿ ಬರುತ್ತೆ ಎಂದಾದರೆ, ಇದನ್ನು ಮಾಸಿಕವಾಗಿ ಪಾವತಿಸಲಾಗುತ್ತದೆ. ಉದಾಹರಣೆಗೆ ನೀವು ಈಗ 9 ಲಕ್ಷ ಹಣವನ್ನು ಹೂಡಿಕೆ ಮಾಡುತ್ತೀರ. ನಿಮ್ಮ ಖಾತೆಗೆ ಪ್ರತಿ ತಿಂಗಳು ಸುಮಾರು 5,550 ರೂ. ಬಡ್ಡಿ ಬಂದಿದೆ. 15 15 ಲಕ್ಷ ರೂ. ಜಂಟಿ ಹೂಡಿಕೆ ಮಾಡಿದರೆ, ಮಾಸಿಕ ಬಡ್ಡಿ ಸುಮಾರು 9,250 ರೂ. ಆಗುತ್ತದೆ.
ಯಾರಿಗೆ ಈ ಯೋಜನೆ ಉತ್ತಮ:
ಇನ್ನು ಈ ಯೋಜನೆಯು ನಿವೃತ್ತಿ ಹೊಂದಿದವರಿಗೆ ಅಥವಾ ಸ್ಥಿರ ಆದಾಯವನ್ನು ಬಯಸುವವರಿಗೆ ಉತ್ತಮ ಆಯ್ಕೆ ಎನ್ನಬಹುದು. ಹಾಗೂ ಯಾವುದೇ ಬೇಸರವಿಲ್ಲದೇ ನೀವು ನಿಮ್ಮ ಹಣವನ್ನು ಪೋಸ್ಟ್ ಆಫೀಸ್‌ನಲ್ಲಿ ಇಡಬಹುದು. ಅಂದಹಾಗೆ ಈ ಯೋಜನೆಯಲ್ಲಿ ಬಡ್ಡಿ ತೆರಿಗೆ ವಿಧಿಸಲಾಗುತ್ತದೆ. ಆದರೆ ಟಿಡಿಎಸ್ ಕಡಿತವಿರುವುದಿಲ್ಲ. ಮತ್ತು 80C ಕಡಿತವೂ ನೀಡುವುದಿಲ್ಲ. ಹೀಗಾಗಿ, ಬಡ್ಡಿಯನ್ನು ಸರಿಯಾಗಿ ವರದಿ ಮಾಡಬೇಕು.
ಒಂದೇ ಖಾತೆಗೆ ಗರಿಷ್ಠ ಹೂಡಿಕೆ ಎಷ್ಟು?
ಇನ್ನು ಒಂದು ಖಾತೆಗೆ ಎಷ್ಟು ಗರಿಷ್ಠ ಹೂಡಿಕೆ ಎಂಬ ಪ್ರಶ್ನೆ ಇದ್ದರೆ ಇಲ್ಲಿದೆ ಸ್ಪಷ್ಟ ಉತ್ತರ. ಒಂದೇ ಖಾತೆಗೆ ಗರಿಷ್ಠ ಎಂದರೆ 9 ಲಕ್ಷ ರೂ. ಹೂಡಿಕೆ ಮಾಡಬಹುದು. ಹಾಗೂ ಜಂಟಿ ಖಾತೆಗೆ ಗರಿಷ್ಠ ಎಂದರೆ 15 ಲಕ್ಷ ರೂ. ಹೂಡಿಕೆ ಮಾತ್ರ ಮಾಡಬಹುದು.
ಹೀಗೆ, ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯಲ್ಲಿ ನಿಮ್ಮ ಹಣವನ್ನು ಸ್ಥಿರವಾಗಿ ವೃದ್ಧಿಸಬಹುದು. ಇದೊಂದು ಒಂದು ಸರಳ, ನಿಶ್ಚಿತ, ನಗದು ಆದಾಯ ಕೇಂದ್ರಿತ ಹೂಡಿಕೆಯಾಗಿದೆ. ನೀವು ಮಾರುಕಟ್ಟೆ ತಿರುವುಗಳನ್ನು ನೋಡಬೇಕಾಗಿಲ್ಲ, ನಿರಂತರ ತೊಂದರೆ ಇಲ್ಲ, ಮತ್ತು ಐದು ವರ್ಷಗಳ ಕಾಲ ಶಾಂತ ಮನಸ್ಸಿನಿಂದ ನಿಮ್ಮ ಹಣವು ಕಾರ್ಯನಿರ್ವಹಿಸುತ್ತದೆ. ಹೀಗಾಗಿ, ಹೂಡಿಕೆ ಮಾಡುವ ಮುನ್ನ ನಿಮ್ಮ ಹಣದ ಅವಶ್ಯಕತೆ, ತೆರಿಗೆ ಸ್ಥಿತಿ, ಮತ್ತು ನಗದು ಹರಿವಿನ ಅಗತ್ಯಗಳನ್ನು ಪರಿಗಣಿಸಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಬಹುದು.
(ಹಕ್ಕುತ್ಯಾಗ: ವ್ಯಕ್ತಿಗತ ವಿಶ್ಲೇಷಕರ ಅಥವಾ ಘಟಕಗಳ ಅಭಿಪ್ರಾಯಗಳು ಮತ್ತು ಶಿಫಾರಸುಗಳು ಮಾತ್ರ ಇಲ್ಲಿ ಸೂಚಿಸಲಾಗಿದೆ ಮತ್ತು ಅವು Goodreturns.in ಅಥವಾ Greynium Information Technologies Private Limited (ಒಟ್ಟಿಗೆ "ನಾವು" ಎಂದು ಉಲ್ಲೇಖಿಸಲಾಗಿದೆ) ಅವರ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಯಾವುದೇ ವಿಷಯದ ನಿಖರತೆ, ಪೂರ್ಣತೆ ಅಥವಾ ನಂಬಿಕಾರ್ಹತೆಯನ್ನು ನಾವು ಖಚಿತಪಡಿಸುವುದಿಲ್ಲ, ಸಮರ್ಥಿಸುತ್ತಿಲ್ಲ ಅಥವಾ ಹೊಣೆಗಾರರಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ_SECURITIES_ ಖರೀದಿ ಅಥವಾ ಮಾರಾಟವನ್ನು ಪ್ರೇರೇಪಿಸುವುದಿಲ್ಲ. ಎಲ್ಲಾ ಮಾಹಿತಿಯು ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ ನೀಡಲಾಗಿದ್ದು, ಯಾವುದೇ ಹೂಡಿಕೆ ನಿರ್ಧಾರಗಳನ್ನು ಕೈಗೊಳ್ಳುವ ಮೊದಲು ಲೈಸೆನ್ಸ್ ಪಡೆದ ಹಣಕಾಸು ಸಲಹೆಗಾರರಿಂದ ಸ್ವತಃ ಪರಿಶೀಲಿಸುವುದು ಅಗತ್ಯ.)
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications