ನಿಮ್ಮ ಜೀವನದಲ್ಲಿ ಆರ್ಥಿಕವಾಗಿ ಸದೃಢರಾಗಲು ಹೂಡಿಕೆ ಮಾಡುವುದು ತುಂಬಾನೇ ಮುಖ್ಯ. ನೀವೆ ಏನು ದೊಡ್ಡ ಮಟ್ಟದಲ್ಲಿ ಹಣ ಹೂಡಿಕೆ ಮಾಡಬೇಕೆಮಬುವುದು ಏನು ಇಲ್ಲ. ಪ್ರತಿ ದಿನ ಸ್ವಲ್ಪ ಮಟ್ಟದಲ್ಲಿ ಉಳಿಕೆ ಮಾಡಿ ಹೂಡಿಕೆ ಮಾಡಿದ್ದರೆ ಅಷ್ಟೇ ಸಾಕು. ಸರ್ಕಾರ ಹೂಡಿಕೆ ಮಾಡಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲೂ ಸರ್ಕಾರಿ ಬೆಂಬಲಿತ ಸುರಕ್ಷಿತ ಹೂಡಿಕೆಗಳನ್ನು ಜಾರಿಗೆ ತಂದಿದೆ. ಅಂತಹ ಹೂಡಿಕೆಗಳಲ್ಲಿ ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿ (ಆರ್‌ಡಿ) ಒಂದು ಉತ್ತುಮ ಯೋಜನೆಯಾಗಿದೆ. ಇದು ನಿಮಗೆ ಪ್ರತಿ ತಿಂಗಳು ನಿಗದಿತ ಮೊತ್ತವನ್ನು ಠೇವಣಿ ಮಾಡಲು ಮತ್ತು ಅದರ ಮೇಲೆ ಬಡ್ಡಿಯನ್ನು ಗಳಿಸಲು ಸಹಾಯವಾಗುತ್ತದೆ.
ಹೌದು, ನೀವು ಸಣ್ಣ ಮೊತ್ತದಲ್ಲಿ ಹೂಡಿಕೆಯನ್ನು ಆರಂಭಿಸಬೇಕೆಂದುಕೊಂಡರೆ ನಿಮ್ಮಗೆ ಪೋಸ್ಟ್ ಆಫೀಸ್ ಆರ್‌ಡಿ ಯೋಜನೆ ಬೆಸ್ಟ್. ಇದರಲ್ಲಿ ನಿಮ್ಮ ಹಣವು ಸಂಪೂರ್ಣವಾಗಿ ಸುರಕ್ಷಿತವಾಗಿ ಇರುತ್ತದೆ.

ಪೋಸ್ಟ್ ಆಫೀಸ್ ಆರ್‌ಡಿ ಯೋಜನೆ ಎಂದರೇನು?
ಪೋಸ್ಟ್ ಆಫೀಸ್ ಆರ್‌ಡಿ ಐದು ವರ್ಷಗಳ ಯೋಜನೆಯಾಗಿದ್ದು, ಇದರಲ್ಲಿ ನೀವು ಪ್ರತಿ ತಿಂಗಳು ಸಣ್ಣ ಮೊತ್ತವನ್ನು ಹೂಡಿಕೆ ಮಾಡಬಹುದು. ಪ್ರಸ್ತುತ, ಈ ಯೋಜನೆಯು ವಾರ್ಷಿಕ ಶೇ. 6.7 ದರದಲ್ಲಿ ಬಡ್ಡಿಯನ್ನು ನೀಡುತ್ತದೆ.
ಪ್ರತಿದಿನ 100 ರೂಪಾಯಿ ಉಳಿಸುವುದರಿಂದಾಗುವ ಪ್ರಯೋಜನಗಳು
ನೀವು ದಿನಕ್ಕೆ 100 ರೂ. ಉಳಿಸಿದರೆ, ನೀವು ತಿಂಗಳಿಗೆ 3,000 ರೂ. ಠೇವಣಿ ಇಡುತ್ತೀರಿ. ಈ ರೀತಿಯಾಗಿ, 5 ವರ್ಷಗಳಲ್ಲಿ ನಿಮ್ಮ ಒಟ್ಟು ಠೇವಣಿ ಮೊತ್ತ 1,80,000 ರೂ. ಶೇ. 6.7 ಬಡ್ಡಿದರದಲ್ಲಿ, ನಿಮಗೆ ಸರಿಸುಮಾರು 34,097 ರೂ. ಬಡ್ಡಿ ಸಿಗುತ್ತದೆ. ಈ ರೀತಿಯಾಗಿ, ನೀವು ಮುಕ್ತಾಯದ ಸಮಯದಲ್ಲಿ ಒಟ್ಟು 2,14,097 ರೂ.ಗಳನ್ನು ಪಡೆದುಕೊಳ್ಳಬಹುದು. ನಿಮಗೆ ಹಣದ ಅವಶ್ಯಕತೆ ಇದ್ದರೆ, 12 ಕಂತುಗಳನ್ನು ಪಾವತಿಸಿದ ನಂತರ ಠೇವಣಿ ಮೊತ್ತದ ಶೇ. 50 ವರೆಗೆ ಸಾಲವನ್ನು ಪಡೆಯಬಹುದು. ಈ ಸಾಲದ ಮೇಲಿನ ಬಡ್ಡಿಯು ಆರ್‌ಡಿ ಮೇಲಿನ ಬಡ್ಡಿಗಿಂತ ಶೇಕಡಾ 2 ಹೆಚ್ಚಾಗಿರುತ್ತದೆ.
ನೀವು ಆರ್‌ಡಿ ಖಾತೆಯನ್ನು ವಿಸ್ತರಿಸುವ ಸೌಲಭ್ಯ 5 ವರ್ಷಗಳ ನಂತರವೂ ನೀವು RD ಯ ಪ್ರಯೋಜನಗಳನ್ನು ಪಡೆಯಲು ಬಯಸಿದರೆ, ನೀವು ಅದನ್ನು ಮುಂದಿನ 5 ವರ್ಷಗಳವರೆಗೆ ವಿಸ್ತರಣೆ ಕೂಡ ಮಾಡಿಕೊಳ್ಳಬಹುದು.ನೀವು ಖಾತೆಯನ್ನು ತೆರೆಯುವ ಸಮಯದಲ್ಲಿ ಅನ್ವಯವಾಗುವ ಬಡ್ಡಿದರವು ವಿಸ್ತೃತ ಖಾತೆಗಳಿಗೂ ಸಹ ಅನ್ವಯವಾಗುತ್ತದೆ. ವಿಸ್ತೃತ ಖಾತೆಯನ್ನು ವಿಸ್ತರಣೆಯ ಸಮಯದಲ್ಲಿ ಯಾವುದೇ ಸಮಯದಲ್ಲಿ ಮುಚ್ಚಬಹುದು. RD ಖಾತೆಯ ಬಡ್ಡಿದರವು ಇಡೀ ವರ್ಷಕ್ಕೆ ಅನ್ವಯವಾಗುತ್ತದೆ ಮತ್ತು ಒಂದು ವರ್ಷಕ್ಕಿಂತ ಕಡಿಮೆ ಅವಧಿಗೆ, ಉಳಿತಾಯ ಖಾತೆಯ ಪ್ರಕಾರ ಬಡ್ಡಿಯನ್ನು ನೀಡಲಾಗುತ್ತದೆ
ಉದಾಹರಣೆಗೆ, ನೀವು 2 ವರ್ಷ 6 ತಿಂಗಳ ನಂತರ ವಿಸ್ತೃತ ಖಾತೆಯನ್ನು ಮುಚ್ಚಿದರೆ, ನಿಮಗೆ 2 ವರ್ಷಗಳವರೆಗೆ 6.7% ದರದಲ್ಲಿ ಬಡ್ಡಿ ಸಿಗುತ್ತದೆ, ಆದರೆ 6 ತಿಂಗಳ ಮೊತ್ತದ ಮೇಲೆ, ಅಂಚೆ ಕಚೇರಿ ಉಳಿತಾಯ ಖಾತೆಯ ಪ್ರಕಾರ ನಿಮಗೆ 4% ದರದಲ್ಲಿ ಬಡ್ಡಿ ಸಿಗುತ್ತದೆ.
ಪೋಸ್ಟ್ ಆಫೀಸ್ ರಿಕರಿಂಗ್ ಡೆಪಾಸಿಟ್ (RD) ಅಪಾಯ-ಮುಕ್ತ ಮತ್ತು ಸ್ಥಿರ ಆದಾಯ ಯೋಜನೆಯಾಗಿದೆ. ಇದನ್ನು ಪೋಸ್ಟ್ ಆಫೀಸ್ RD ಎಂದೂ ಕರೆಯುತ್ತಾರೆ. ಪೋಸ್ಟ್ ಆಫೀಸ್‌ನ ಈ ಯೋಜನೆ 5 ವರ್ಷಗಳ ಅವಧಿಗೆ ಲಭ್ಯವಿದೆ. ನೀವು ಪ್ರತಿದಿನ ಕೇವಲ 100 ರೂ.ಗಳನ್ನು ಉಳಿಸಿ ಅದರಲ್ಲಿ ಹೂಡಿಕೆ ಮಾಡಿದರೆ, ನೀವು 5 ವರ್ಷಗಳಲ್ಲಿ ಲಕ್ಷಾಂತರ ರೂಪಾಯಿಗಳನ್ನು ಠೇವಣಿ ಮಾಡಬಹುದು.
ಅಂಚೆ ಕಚೇರಿಯ ವೆಬ್‌ಸೈಟ್ ಪ್ರಕಾರ, ಅಂಚೆ ಕಚೇರಿಯಲ್ಲಿ ಕೇವಲ 100 ರೂಪಾಯಿಗಳೊಂದಿಗೆ ಆರ್‌ಡಿ ಖಾತೆಯನ್ನು ತೆರೆಯಬಹುದು ಮತ್ತು ಅದರಲ್ಲಿ ಹೂಡಿಕೆ ಮಾಡಲು ಗರಿಷ್ಠ ಮಿತಿಯಿಲ್ಲ. ಅಗತ್ಯವಿರುವ ಸಮಯದಲ್ಲಿ ನೀವು ಅಂಚೆ ಕಚೇರಿಯಲ್ಲಿ ಆರ್‌ಡಿ ಖಾತೆಯ ಮೇಲೆ ಸಾಲವನ್ನು ಸಹ ಪಡೆಯಬಹುದು.
ನಿಯಮಗಳ ಪ್ರಕಾರ, 12 ಕಂತುಗಳನ್ನು ಠೇವಣಿ ಮಾಡಿದ ನಂತರ, ಖಾತೆಯಲ್ಲಿ ಠೇವಣಿ ಇಟ್ಟ ಮೊತ್ತದ 50% ವರೆಗೆ ಸಾಲವನ್ನು ತೆಗೆದುಕೊಳ್ಳಬಹುದು. ಸಾಲವನ್ನು ಒಟ್ಟು ಮೊತ್ತ ಅಥವಾ ಕಂತುಗಳಲ್ಲಿ ಮರುಪಾವತಿಸಬಹುದು. ಸಾಲದ ಬಡ್ಡಿದರವು ಆರ್‌ಡಿಯಲ್ಲಿ ಪಡೆದ ಬಡ್ಡಿಗಿಂತ 2% ಹೆಚ್ಚಾಗಿರುತ್ತದೆ.


Click it and Unblock the Notifications