ನಿಮ್ಮ ಹಣವನ್ನು ಒಂದು ಕಡೆ ಸುರಕ್ಷಿತವಾಗಿ ಹೂಡಿಕೆ ಮಾಡಬೇಕು ಅಂದುಕೊಂಡಿದ್ದೀರಾ...? ಹಾಗಿದ್ದರೆ ನಿಮ್ಮಗೆ ಅಂಚೆ ಕಚೇರಿಯ ಮರುಕಳಿಸುವ ಠೇವಣಿ (RD) ಯೋಜನೆ ಬೆಸ್ಟ್ ಎಂದೇ ಹೇಳಬಹುದು.ಮುಂದಿನ ಆರ್ಥಿಕ
ಭವಿಷ್ಯದ ಉಳಿತಾಯಕ್ಕಾಗಿ ಹಣಕಾಸಿನ ಶಿಸ್ತುಬದ್ಧ ವಿಧಾನವನ್ನು ಅನುಸರಿಸುವರಿಗೇ ಈ ಯೋಜನೆ ಹೇಳಿಮಾಡಿಸಿದ ಯೋಜನೆಯಾಗಿದೆ. ಕಡಿಮೆ ಹಣದಿಂದ ಹೂಡಿಕೆ ಮಾಡುವವರಿಗೆ ಅಂಚೆ ಕಚೇರಿಯ ಆರ್ ಡಿ ಯೋಜನೆಯು ಜನಪ್ರಿಯ ಹೂಡಿಕೆ ಆಯ್ಕೆಯಾಗಿದೆ. ನೀವು ಈ ಯೋಜನೆಯ ಮೂಲಕ ಹಣವನ್ನು ಪ್ರತಿ ತಿಂಗಳು ಹೂಡಿಕೆಯನ್ನು ಮಾಡಬಹುದು. ನಾವಿಂದು ಈ ಲೇಖನದಲ್ಲಿ ಅಂಚೆ ಕಚೇರಿಯ ಆರ್ ಡಿ ಯೋಜನೆಯ ಪ್ರಯೋಜನಗಳು..? ಬಡ್ಡಿದರವನ್ನು ಹೇಗೆ ಲೆಕ್ಕಾಚಾರ ಮಾಡಬಹುದು ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ.

ಮರುಕಳಿಸುವ ಠೇವಣಿ (RD) ಮತ್ತು ಸ್ಥಿರ ಠೇವಣಿ(FD) ನಡುವಿನ ವ್ಯತ್ಯಾಸವೇನು?
ಆರ್‌ಡಿ ಉಳಿತಾಯ ಯೋಜನೆಯಾಗಿದೆ. ನೀವು ಆಯ್ಕೆಮಾಡಿದ ಅವಧಿಯಲ್ಲಿ ನಿಯಮಿತವಾದ ನಿಗದಿತ ಮೊತ್ತವನ್ನು ಠೇವಣಿ ಮಾಡಬೇಕು.ಶಿಸ್ತುಬದ್ಧ ಉಳಿತಾಯವನ್ನು ಬಯಸಿದವರಿಗೆ ಈ ಯೋಜನೆ ಬೆಸ್ಟ್.
ಸ್ಥಿರ ಠೇವಣಿಗಳು (ಎಫ್‌ಡಿಗಳು) ಒಟ್ಟು ಮೊತ್ತವನ್ನು ನೀವು ಇಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಹೆಚ್ಚಿನ ಬಡ್ಡಿದರ ಸಿಗುತ್ತದೆ.
ಪೋಸ್ಟ್ ಆಫೀಸ್ ಆರ್‌ಡಿ ಯೋಜನೆ ಎಂದರೇನು?
ಮರುಕಳಿಸುವ ಠೇವಣಿ (RD) ಯೋಜನೆಯು ಅಂಚೆ ಕಚೇರಿಯ ಜನಪ್ರಿಯ ಉಳಿತಾಯ ಯೋಜನೆ. 5 ವರ್ಷಗಳ ಅವಧಿಯವರಿಗೂ ನೀವು ಇಲ್ಲಿ ಹೂಡಿಕೆಯನ್ನು ಮಾಡಬಹುದು.
ಯಾರು ಖಾತೆಯನ್ನು ತೆರೆಯಬಹುದು?
ಪೋಸ್ಟ್ ಆಫೀಸ್ ಆರ್‌ಡಿ ಸ್ಕೀಮ್ ಖಾತೆಯನ್ನು ಒಬ್ಬ ವಯಸ್ಕ, ಗರಿಷ್ಠ ಮೂರು ವಯಸ್ಕರೊಂದಿಗೆ ಜಂಟಿ ಖಾತೆ ಅಪ್ರಾಪ್ತ ವಯಸ್ಕರ ಪರವಾಗಿ ಪೋಷಕರು ತಮ್ಮ ಹೆಸರಿನಲ್ಲಿ ಖಾತೆಯನ್ನು ತೆರೆಯಬಹುದು.
ನಿಯಮಗಳು?
ಪೋಸ್ಟ್ ಆಫೀಸ್ ಆರ್‌ಡಿ ಯೋಜನೆಯಲ್ಲಿ ಕನಿಷ್ಠ 100 ರೂಪಾಯಿಗಳಿಂದ ನೀವು ಹೂಡಿಕೆಯನ್ನು ಆರಂಭ ಮಾಡಬಹುದು.
ಬಡ್ಡಿ ದರ ಎಷ್ಟು?
ಫೆಬ್ರವರಿ 26, 2025ರಿಂದ ಪೋಸ್ಟ್ ಆಫೀಸ್ ಆರ್‌ಡಿಗಳ ಮೇಲಿನ ಬಡ್ಡಿದರವು ವಾರ್ಷಿಕ ಶೇಕಡಾ 6.7 ರಷ್ಟಿದೆ
ಅಂಚೆ ಕಚೇರಿಯ ಆರ್‌ಡಿಯ ಬಡ್ಡಿಯನ್ನು ಲೆಕ್ಕಚಾರ ಮಾಡವುದು ಹೇಗೆ..?
ಅಂಚೆ ಕಚೇರಿಯಲ್ಲಿ ತಿಂಗಳಿಗೆ 1,000 ರೂ ರಂತೆ 5 ವರ್ಷಗಳ ಕಾಲ ಶೇ. 6.7 ಬಡ್ಡಿದರದಲ್ಲಿ ಹೂಡಿಕೆ ಮಾಡಿದ ನಂತರ ನಿಮ್ಮಗೆ 60,000 ರೂ ಹಣವಾಗುತ್ತದೆ. ಮುಕ್ತಾಯ ವೇಳೆಗೆ ಈ ಮೊತ್ತವು 71,369 ರೂ ಆಗಿದ್ದು, ಇದರಲ್ಲಿ ಈ ಅವಧಿಯಲ್ಲಿ ಗಳಿಸಿದ ಬಡ್ಡಿ11,369 ರೂ ನಿಮ್ಮಕೈ ಸೇರುತ್ತದೆ.
ನಿಮ್ಮ ಹಣವನ್ನು 12 ಕಂತುಗಳಲ್ಲಿ ಠೇವಣಿ ಇಟ್ಟರೆ ಸಾಲ ಸೌಲಭ್ಯ ಕೂಡ ಸಿಗುತ್ತದೆ. ಆರ್‌ಡಿ ಸ್ಕೀಮ್ ಖಾತೆಯನ್ನು ನೀವು ತೆರೆದ ದಿನಾಂಕದಿಂದ ಐದು ವರ್ಷಕ್ಕೆ ಹೂಡಿಕೆ ಮಾಡಿ ಅದನ್ನು ಇನ್ನೂ ಮುಂದುವರಿಸುವಂತಹ ಇಚ್ಛಿ ಇದ್ದರೆಅಂಚೆ ಕಚೇರಿಯಲ್ಲಿ ಅರ್ಜಿಯನ್ನು ಸಲ್ಲಿಸುವ ಮೂಲಕ ಇದನ್ನು ಹೆಚ್ಚುವರಿ ಐದು ವರ್ಷಗಳವರೆಗೆ ವಿಸ್ತರಣೆಯನ್ನು ಕೂಡ ಮಾಡಬಹುದು.


Click it and Unblock the Notifications