ನೀವು ಯಾವುದೇ ರಿಸ್ಕ್ ಇಲ್ಲದೇ ನಿಮ್ಮ ಆರ್ಥಿಕ ಭವಿಷ್ಯವನ್ನು ಸಧೃಢವಾಗಿ ಇಡಲು ಒಮದು ಉತ್ತಮ ಸುರಕ್ಷಿತ ಹಾಗೂ ಸರ್ಕಾರಿ ಬೆಂಬಲಿತ ಯೋಜನೆಯನ್ನು ಹುಡುತ್ತಿದ್ದೀರಾ..? ಹಾಗಿದ್ದರೆ ನಿಮ್ಮಗೆ ಈ ಯೋಜನೆ ಬೆಸ್ಟ್ ಎಂದೇ ಹೇಳಬಹುದು. ಹೌದು, ಸುರಕ್ಷಿತವಾಗಿ ಒಂದು ಒಳ್ಳೆಯ ಕಡೆಯಲ್ಲಿ ಹೂಡಿಕೆ ಮಾಡಬೇಕೆಂದುಕೊಂಡರೆ ನೀವು ಅಂಚೆ ಕಚೇರಿಯ ಯೋಜನೆಗಳು ಉತ್ತಮವಾದ ಆಯ್ಕೆ ಎಂದೇ ಹೇಳಬಹುದು.

ಪ್ರತಿನಿತ್ಯ ಜೀವಶೈಲಿ ಬದಲಾದಂತೆ ನಮ್ಮ ಆರ್ಥಿಕ ಸ್ಥಿತಿ ಕೂಡ ಬದಲಾಗಬೇಕು.ಯಾಕೆಂದರೆ ನಿವೃತ್ತಿ ವೇಳೆಗೆ ನಿಮ್ಮ ಕಷ್ಟಕ್ಕೆ ಆಗುವುದು ನೀವೆ ಈಗ ಉಳಿಸಿದಂತಹ ಉಳಿತಾಯದ ಹಣವಷ್ಟೇ.. ಅಂಚೆ ಕಚೇರಿಯಲ್ಲಿ ಹಲವಾರು ಯೋಜನೆಗಳು ಇವೆ ಇದರಲ್ಲಿ ಯಾವುದಲ್ಲಿ ಹೂಡಿಕೆ ಮಾಡಬೇಕು ಎಂದು ತಿಳಿಯಲು ಮುಂದೆ ಓದಿ...
ನೀವು ಹೆಚ್ಚಿನ ಆದಾಯವನ್ನು ಗಳಿಸಲು ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿ (RD) ಯೋಜನೆಯಲ್ಲಿ ಹೂಡಿಕೆ ಮಾಡುವುದು ಯತ್ತಮ ಯೋಜನೆಯಾಗಿದೆ. ಸಣ್ಣ ಮತ್ತು ಮಧ್ಯಮ ಆದಾಯದವರಿಗೆ ಈ ಯೋಜನೆಯೂ ಉತ್ತಮ ಯೋಜನೆಯಾಗಿದೆ.
ಆರ್‌ಡಿ ಎಂದರೇನು?
ಆರ್‌ಡಿ ಅಥವಾ ಮರುಕಳಿಸುವ ಠೇವಣಿ ಎನ್ನುವುದು ಒಂದು ರೀತಿಯ ಉಳಿತಾಯ ಯೋಜನೆ. ಇಲ್ಲಿ ಪ್ರತಿ ತಿಂಗಳು ಬ್ಯಾಂಕ್ ಅಥವಾ ಅಂಚೆ ಕಚೇರಿಯ ಮೂಲಕ ಒಂದು ನಿರ್ದಿಷ್ಟ ಮೊತ್ತವನ್ನು ಠೇವಣಿಯನ್ನು ಮಾಡಬಹುದು. ಮುಕ್ತಾಯದ ಸಮಯದಲ್ಲಿ ಒಂದು ದೊಡ್ಡ ಮೊತ್ತವನ್ನು ಒದಗಿಸುತ್ತದೆ. ಪೋಸ್ಟ್ ಆಫೀಸ್ ಆರ್‌ಡಿ ಸರ್ಕಾರಿ ಖಾತರಿಯಡಿಯಲ್ಲಿ ಕಾರ್ಯನಿರ್ವಹಿಸುವುದರಿಂದ ಲಭ್ಯವಿರುವ ಸುರಕ್ಷಿತ ಹಣಕಾಸು ಸಾಧನಗಳಲ್ಲಿ ಒಂದಾಗಿದೆ.
ಸಣ್ಣ ಮೊತ್ತದಿಂದ ಆರಂಭಿಸುವರಿಗೆ ಇದು ಸೂಕ್ತವಾದ ಯೋಜನೆಯಗಿದೆ. ಏಕೆಂದರೆ ಈ ಯೋಜನೆಯ ಠೇವಣಿಗಳ್ತಿಂಲಿ ನೀವು ಕೇವಲ 100 ರೂ.ಗಳಿಂದ ಆರಂಭವನ್ನು ಮಾಡಬಹುದು. ಉದಾಹರಣೆಗೆ ನೀವು ಮರುಕಳಿಸುವ ಠೇವಣಿಯಲ್ಲಿ
ಐದು ವರ್ಷಗಳವರೆಗೆ ತಿಂಗಳಿಗೆ 10,000 ರೂ.ಗಳನ್ನು ಠೇವಣಿ ಮಾಡಿದರೆ, ನೀವು ಮುಕ್ತಾಯದ ಸಮಯದಲ್ಲಿ 7,13,659 ರೂ.ಗಳನ್ನು ಪಡೆದುಕೊಳ್ಳಬಹುದು. ಇದರಲ್ಲಿ ನಿಮ್ಮಗೆ ನಿಮ್ಮ ಒಟ್ಟು ಠೇವಣಿಗಳಾದ 6 ಲಕ್ಷ ರೂ.ಗಳು ಮತ್ತು ಬಡ್ಡಿಯ ರೂಪದಲ್ಲಿ 1,13,659 ರೂ.ಗಳು ಸೇರಿ ಮೂರು ತಿಂಗಳ ಬಡ್ಡಿಯನ್ನು ಲೆಕ್ಕಹಾಕಲಾಗುತ್ತದೆ.
ಜುಲೈನಿಂದ ಸೆಪ್ಟೆಂಬರ್ 2025 ರವರೆಗಿನ ಮೂರು ತಿಂಗಳ ಅಂಚೆ ಕಚೇರಿ ಆರ್ ಡಿ ಬಡ್ಡಿದರವು ವಾರ್ಷಿಕ ಶೇ. 6.7 ಆಗಿದೆ.ಈ ದರವನ್ನು ಸರ್ಕಾರವು ಪ್ರತಿ ಮೂರು ತಿಂಗಳಿಗೊಮ್ಮೆ ಪರಿಶೀಲಿಸುತ್ತದೆ ಮತ್ತು ಪರಿಷ್ಕರಿಸಲಾಗುತ್ತದೆ.
ಆರ್‌ಡಿ ಯೋಜನೆಯಲ್ಲಿ ಒಂದು ವರ್ಷ ಪೂರ್ಣಗೊಳಿಸಿದ ನಂತರ, ಠೇವಣಿದಾರರು ತಮ್ಮ ಒಟ್ಟು ಠೇವಣಿ ಮೊತ್ತದ ಶೇ.50 ವರೆಗೆ ಸಾಲವನ್ನು ಪಡೆಯಬಹುದು. ಈ ಯೋಜನೆಯು ಸಂಬಳ ಪಡೆಯುವ ಉದ್ಯೋಗಿಗಳು, ಸಣ್ಣ ವ್ಯಾಪಾರಿಗಳು ಹೆಚ್ಚಿನ ಅನುಕೂಲವಾಗಲಿದೆ.
ಉನ್ನತ ಶಿಕ್ಷಣ, ಮದುವೆ ವೆಚ್ಚಗಳು ಅಥವಾ ಮನೆ ನಿರ್ಮಾಣದಂತಹ ಕಾರ್ಯಗಳಿಗೆ ಉಳಿತಾಯ ಮಾಡುವವರಿಗೆ ಇದು ಹೆಚ್ಚಿನ ಸೂಕ್ತವಾದ ಯೋಜನೇ ಎಂದು ಹೇಳಬಹುದು.
ಎಷ್ಟು ಅವಧಿಯವರೆಗೂ ಹೂಡಿಕೆಯನ್ನು ಮಾಡಬಹುದು?
ಅಂಚೆ ಕಚೇರಿ ಆರ್‌ಡಿ ಯೋಜನೆಯ ಮೂಲಕ ಐದು ವರ್ಷಗಳ ಅವಧಿಯವೆಗೂ ನೀವು ಹೂಡಿಕೆಯನ್ನು ಮಾಡಬಹುದು,. ಇನ್ನೂ ಹೆಚ್ಚು ಕಾಲ ಹಣವನ್ನು ಹೂಡಿಕೆ ಮಾಡಬೇಕೆಂದುಕೊಂಡರೆ ವಿಸ್ತರಣೆಯನ್ನು ಕೂಡ ಮಾಡಬಹುದು.
ಆರ್‌ಡಿ ಖಾತೆ ತೆರೆಯಲು ಯಾವ ದಾಖಲೆಗಳು ಬೇಕು?
ಆಧಾರ್, ಪ್ಯಾನ್ ಕಾರ್ಡ್ ಮತ್ತು ಪಾಸ್‌ಪೋರ್ಟ್ ಸೇಜ್ ಭಾವಚಿತ್ರ ಬೇಕಾಗುತ್ತದೆ.
ಅಂಚೆ ಕಚೇರಿಯ ಆರ್‌ಡಿ ಯೋಜನೆಯು ಸರ್ಕಾರದ ಬೆಂಬಲಹೊಂದಿಗೆ ಆರ್ಥಿಕ ಭದ್ರತೆಯನ್ನು ನೀಡುತ್ತದೆ.


Click it and Unblock the Notifications