ಪೋಷಕರಿಗೆ ಮಕ್ಕಳೇ ಸರ್ವಸ್ವ! ಎಲ್ಲಾ ಪೋಷಕರು ತಮ್ಮ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವ ಕನಸು ಕಾಣ್ತಾರೆ. ತಮ್ಮ ಮಕ್ಕಳ ಭವಿಷ್ಯದಬಗ್ಗೆ ಹೆಚ್ಚು ಕಾಳಜಿ ವಹಿಸ್ತಾರೆ. ತಮ್ಮ ಮಗುವನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಪ್ರಯತ್ನಿಸ್ತಾರೆ. ಎಲ್ಲಾ ತಂದೆ-ತಾಯಿಗೂ ಮಕ್ಕಳ ಭವಿಷ್ಯದ ಮೇಲೆ ತುಸು ಹೆಚ್ಚು ಯೋಚನೆ. ಮಕ್ಕಳು ಭವಿಷ್ಯದಲ್ಲಿ ಯಾರ ಬಳಿಯೂ ದುಡ್ಡಿಗೆ ಕೈಯೊಡ್ಡಬಾರದು. ಹೀಗಾಗಿ, ತಮ್ಮ ಮಕ್ಕಳ ಭವಿಷ್ಯವನ್ನು ರಕ್ಷಿಸಲು ತಮ್ಮ ವೇತನದಲ್ಲಿ ಒಂದಿಷ್ಟು ದುಡ್ಡು ಸೇವ್ ಮಾಡ್ತಾರೆ. ತಮ್ಮ ಮಕ್ಕಳು ಹುಟ್ಟಿದ ತಕ್ಷಣ ಎಲ್ಲಾ ರೀತಿಯ ಆರ್ಥಿಕ ಯೋಜನೆಗಳನ್ನು ಮಾಡಲು ಶುರು ಮಾಡ್ತಾರೆ.
ನಿಮ್ಮ ಮಕ್ಕಳ ಮುಂದಿನ ಭವಿಷ್ಯ ಏನು ಎಂದು ಯೋಚಿಸ್ತಿದ್ದಿರಾ?
ಪ್ರತಿಯೊಬ್ಬ ತಂದೆ ತಾಯಿಯರು ತಮ್ಮ ಮಗು ಹುಟ್ಟಿದ ತಕ್ಷಣ ಅವರು ಪಿಪಿಎಫ್, ಆರ್‌ಡಿ, ಸುಕನ್ಯಾ ಮುಂತಾದ ಹಲವಾರು ಯೋಜನೆಗಳಲ್ಲಿ ಹೂಡಿಕೆ ಮಾಡಲು ಶುರುಮಾಡುತ್ತಾರೆ. ಇದಲ್ಲದೆ ಅವರು ತಮ್ಮ ಮಕ್ಕಳ ಅಗತ್ಯಗಳನ್ನು ಪೂರೈಸಲು ನಿಶ್ಚಿತ ಠೇವಣಿ ಅಂದರೆ ಒಂದು ದೊಡ್ಡ ಮೊತ್ತವನ್ನು ಹೊಡಿಕೆ ಮಾಡಲು ನಿಮ್ಮಗೆ ಉತ್ತಮ ಆಯ್ಕೆಯ ಬಗ್ಗೆ ಇಂದು ನಾವು ನಿಮಗೆ ಪೋಸ್ಟ್ ಆಫೀಸ್ ಯೋಜನೆಯ ಬಗ್ಗೆ ಹೇಳಲಿದ್ದೇವೆ. ನಿಮಗೆ ಕಡಿಮೆ ಸಮಯದಲ್ಲಿ ಹೆಚ್ಚು ಆದಾಯ ಈ ಯೋಜನೆಯಿಂದ ಸಿಗುತ್ತದೆ. ಈ ಯೋಜನೆಯಡಿ 5 ಲಕ್ಷ ರೂ.ಗಳನ್ನು 15 ಲಕ್ಷ ರೂ ವರೆಗೂ ಆದಾಯವನ್ನು ಪಡೆದುಕೊಳ್ಳಹುದು.ಈ ಯೋಜನೆಯು ಮಾಧ್ಯಮ ವರ್ಗದ ಜನರಿಗೆ ಬಹಳ ಅನುಕೂಲವಾಗುತ್ತದೆ.

ಟರ್ಮ್ ಡೆಪಾಸಿಟ್ ಸ್ಕೀಮ್
ನೀವು ಅತಿ ಹೆಚ್ಚಿನ ಹಣವನ್ನು ಹೂಡಿಕೆ ಮಾಡಲು ಬಯಸಿದರೆ ಪೋಸ್ಟ್ ಆಫೀಸ್ ಟರ್ಮ್ ಡಿಪಾಸಿಟ್ ಅಂದರೆ ಪೋಸ್ಟ್ ಆಫೀಸ್ ಎಫ್‌ಡಿ ನಿಮಗೆ ಉತ್ತಮ ಆಯ್ಕೆಯಾಗಿ ಎಂದೇ ಹೇಳಬಹುದು. ಈ ಅಂಚೆ ಕಚೇರಿಯ ಯೋಜನೆಯು 5 ವರ್ಷಗಳ ಎಫ್‌ಡಿಯಲ್ಲಿ ಉತ್ತಮ ಆದಾಯವನ್ನು ನೀಡುತ್ತಿದೆ. ಇದು ಬ್ಯಾಂಕ್‌ಗಳಿಗಿಂತ ಉತ್ತಮ ಬಡ್ಡಿ ಸಹ ಸಿಗುತ್ತಿದೆ.
ನೀವು ಈ ಯೋಜನೆಯಲ್ಲಿ ನೀವು ಹೊಡಿಕೆ ಮಾಡಿದ್ದರೆ ನಿಮ್ಮ ಹಣದ ಮೊತ್ತವನ್ನು ಮೂರು ಪಟ್ಟು ಹೆಚ್ಚಿಸಬಹುದು.ಆದರೆ ನೀವು ಈ ಯೋಜನೆಯಲ್ಲಿ 5,00,000 ರೂ ಹೂಡಿಕೆ ಮಾಡಿದರೆ, ನಿಮಗೆ 180 ತಿಂಗಳುಗಳಲ್ಲಿ 15,00,000 ರೂ ಪಡೆಯಬಹುದು. ಅದು ಹೇಗೆ ಎಂಬುದನ್ನು ತಿಳಿಯಲು ಮಂದೆ ಓದಿ..
5 ಲಕ್ಷದಿಂದ 15 ಲಕ್ಷ ಗಳಿಸುವುದು ಹೇಗೆ?
ನೀವು 5 ಲಕ್ಷವನ್ನು 15 ಲಕ್ಷಕ್ಕೆ ಹೆಚ್ಚಿಗೆ ಮಾಡಲು ನೀವು ಏನನ್ನೂ ಮಾಡುವ ಅಗತ್ಯವಿಲ್ಲ ಕೇವಲ ನಿಮ್ಮ ಹಣವನ್ನು ಹೊಡಿಕೆ ಮಾಡಬೇಕು. ಯಾಕೆಂದರೆ ನೀವು ನಿಮ್ಮ ಹಣವನ್ನು 5 ವರ್ಷಗಳ ಕಾಲ ಪೋಸ್ಟ್ ಆಫೀಸ್ ಎಫ್‌ಡಿಯಲ್ಲಿ 5 ಲಕ್ಷ ರೂಪಾಯಿಗಳನ್ನು ಠೇವಣಿ ಇಡಬೇಕಾಗುತ್ತದೆ. ಪೋಸ್ಟ್ ಆಫೀಸ್ 5 ವರ್ಷಗಳ FD ಮೇಲೆ ಶೇ.7.5 ಬಡ್ಡಿ ನಿಮ್ಮಗೆ ಸಿಗುತ್ತದೆ. ನಿಮ್ಮ ಹಣ ಅಂಚೆ ಕಚೇರಿಯಲ್ಲಿ 5 ವರ್ಷಗಳ ನಂತರ,ಮುಕ್ತಾಯದ ಮೊತ್ತವು 7,24,974 ರೂ. ಆದರೆ ಈ ಮೊತ್ತವನ್ನು ಹಿಂಪಡೆಯಬೇಕಾಗಿಲ್ಲ. ಆದ್ದರಿಂದ ನೀವು ಮುಂದಿನ 5 ವರ್ಷಗಳವರೆಗೆ ಮತ್ತೆ ಠೇವಣಿಯನ್ನು ಇಡಬೇಕಾಗುತ್ತದೆ.
ನೀವು ನಿಮ್ಮ ಹಣ ಹೊಡಿಕೆ ಮಾಡಿದ 10 ವರ್ಷಗಳಲ್ಲಿ ನೀವು 5 ಲಕ್ಷದ ಮೇಲೆ 5,51,175 ರೂಪಾಯಿಗಳನ್ನು ಬಡ್ಡಿಯಾಗಿ ಪಡೆಯಹುದು. ನಿಮ್ಮ ಮೊತ್ತವು 10,51,175 ಆಗಿರುತ್ತದೆ.ಅದೇ ರೀತಿ ಮತ್ತೊಮ್ಮೆ 5 ವರ್ಷಕ್ಕೆ ನಿಗದಿ ಮಾಡಬೇಕು. ಅಂದರೆ ಪ್ರತಿ 5 ವರ್ಷಕ್ಕೆ ಎರಡು ಬಾರಿ ನೀವು ರೇವಣಿ ಇಡಬೇಕಾಗುತ್ತದೆ. ಈ ರೀತಿಯಲ್ಲಿ ನಿಮ್ಮ ಹಣದ ಮೊತ್ತವನ್ನು ಒಟ್ಟು 15 ವರ್ಷಗಳವರೆಗೆ ಮುಂದುವರಿಸಬೇಕಾಗುತ್ತದೆ. ನಿಮ್ಮ ಹಣ ನಿಮಗೆ 15 ವರ್ಷಗಳಲ್ಲಿ ಮುಕ್ತಾಯದ ಸಮಯದಲ್ಲಿ ನೀವು 5 ಲಕ್ಷ ರೂಪಾಯಿಗಳ ಹೂಡಿಕೆಯ ಮೇಲಿನ ಬಡ್ಡಿಯಿಂದಲ್ಲೇ 10,24,149 ರೂಪಾಯಿಗಳನ್ನು ನೀವು ಪಡೆಯಹುದು. ನಿಮಗೆ ಒಟ್ಟು ಮೊತ್ತವು 15,24,149 ರೂಪಾಯಿಗಳು ನಿಮಗೆ ಸಿಗುತ್ತದೆ.
ಪೋಸ್ಟ್ ಆಫೋಸ್‌ನ ಬಡ್ಡಿದರಗಳ ವಿವರ ಹೀಗಿದೆ ನೋಡಿ
ಒಂದು ವರ್ಷದ ಖಾತೆಯ ಮೇಲೆ ಶೇ.6.9 ವಾರ್ಷಿಕ ಬಡ್ಡಿ ಸಿಗುತ್ತದೆ.
ಎರಡು ವರ್ಷದ ಖಾತೆಯ ಮೇಲೆ ಶೇ.7.0ರಷ್ಟು ವಾರ್ಷಿಕ ಬಡ್ಡಿ ಸಿಗುತ್ತದೆ.
ಮೂರು ವರ್ಷದ ಖಾತೆಯ ಮೇಲೆ ಶೇ.7.1ರಷ್ಟು ವಾರ್ಷಿಕ ಬಡ್ಡಿ ದೊರೆಯುತ್ತದೆ.
ಐದು ವರ್ಷದ ಖಾತೆಯ ಮೇಲೆ ಶೇ.7.5ರಷ್ಟು ವಾರ್ಷಿಕ ಬಡ್ಡಿ ನಿಮ್ಮ ಕೈ ಸೇರುತ್ತದೆ.
ಹೀಗೆ ನೀವು ಅಂಚೆ ಕಚೇರಿಯಲ್ಲಿ ನಿಮ್ಮ ಹಣವನ್ನು ಹೂಡಿಕೆ ಮಾಡಿದ್ರೆ ನಿಮ್ಮ ಮಕ್ಕಳು ಅವರ ಮುಂದಿನ ಭವಿಷ್ಯದಲ್ಲಿ ಯಾರ ಬಳಿಯೂ ದುಡ್ಡು ಕೇಳುವ ಅಗತ್ಯವಿರುವುದಿಲ್ಲ.


Click it and Unblock the Notifications