ಮಹಿಳೆಯರು ಆರ್ಥಿಕವಾಗಿ ಸದೃಢರನ್ನಾಗಿ ಮಾಡಲು ಪೋಸ್ಟ್ ಆಫೀಸ್ ನಲ್ಲಿ ಹಲವಾರು ಹೂಡಿಕೆಯ ಯೋಜನೆಗಳು ಜಾರಿಯಲ್ಲಿಇವೆ. ನೀವು ಈ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ದರೆ, ಸಾಮಾಜಿಕವಾಗಿ ಮಾತ್ರವಲ್ಲದೆ ಆರ್ಥಿಕವಾಗಿಯೂ ಆದಾಯವನ್ನು ಗಳಿಸಬಹುದು. ಹಾಗಿದ್ರೆ ನಿಮಗಾಗಿ ಅಂಚೆ ಕಚೇರಿಯಲ್ಲಿ ಇರುವಂತಹ ಐದು ಪ್ರಮುಖ ಯೋಜನೆಗಳ ಬಗ್ಗೆ ತಿಳಿಯೋಣ ಬನ್ನಿ.....
ಸುಕನ್ಯಾ ಸಮೃದ್ಧಿ ಉಳಿತಾಯ ಯೋಜನೆ
ಸುಕನ್ಯಾ ಸಮೃದ್ಧಿ ಉಳಿತಾಯ ಯೋಜನೆಯೂ ವಿಶೇಷವಾಗಿ ಹೆಣ್ಣು ಮಕ್ಕಳ ಭವಿಷ್ಯವನ್ನು ರೂಪಿಸಲು ಇರುವಮತಹ ಯೋಜನೆಯಾಗಿದೆ. ಹೆಣ್ಣು ಮಕ್ಕಳಿಗೆ 10 ವರ್ಷ ತುಂಬುವ ಮೊದಲು ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡಬಹುದು.

ಇದರಲ್ಲಿ ಹೂಡಿಕೆ ಮಾಡಿದ್ರೆ ವಾರ್ಷಿಕ 8.2% ಬಡ್ಡಿದರ ಸಿಗುತ್ತದೆ. ನೀವು ಖಾತೆಯನ್ನು ತೆರೆದ ನಂತರ ಅಂದ್ರೆ ಗರಿಷ್ಠ 15 ವರ್ಷಗಳವರೆಗೆ ಖಾತೆಯನ್ನು ಚಾಲ್ತಿಯಲ್ಲಿರುತ್ತದೆ. ಇದರ ಬಡ್ಡಿ ದರವು ಪ್ರತಿ ಮೂರು ತಿಂಗಳಿಗೊಮ್ಮೆ ಪರಿಶೀಲನೆಯಾಗುತ್ತದೆ. ಪ್ರತಿ ಹಣಕಾಸು ವರ್ಷದ ಕೊನೆಯಲ್ಲಿ ಬಡ್ಡಿಯನ್ನು ಖಾತೆಗೆ ಜಮಾ ಮಾಡಲಾಗುತ್ತದೆ. ಈ ಯೋಜನೆಯಡಿಯಲ್ಲಿ ಮಾಡಿದ ಠೇವಣಿಗಳು ಸೆಕ್ಷನ್ 80C ಗೆ ಒಳಪಟ್ಟಿರುತ್ತದೆ.
ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ
ನಿಮ್ಮ ಉಳಿತಾಯದಿಂದ ಪ್ರತಿ ತಿಂಗಳು ಆದಾಯವನ್ನು ನೀವು ಬಯಸಿದರೆ,ನಿಮಗೆ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ ಉತ್ತಮ ಆಯ್ಕೆಯಾಗಿದೆ. ಈ ಯೋಜನೆಯಲ್ಲಿ ಕನಿಷ್ಠ ಹೂಡಿಕೆ ರೂ 1000, ಮತ್ತು ಇದು 7.4% ಬಡ್ಡಿದರವನ್ನು ಈ ಯೋಜನೆ ನೀಡುತ್ತದೆ.
ಮಹಿಳಾ ಸಮ್ಮಾನ್ ಉಳಿತಾಯ ಪತ್ರ
ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರವು ಮಹಿಳಾ ಹೂಡಿಕೆದಾರರಿಗೆ ಮುಕ್ತ ಯೋಜನೆಯಾಗಿದೆ. ಎಲ್ಲಾ ವಯಸ್ಸಿನ ಮಹಿಳೆಯರು ಇದರಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಖಾತೆಗೆ ಗರಿಷ್ಠ 2 ಲಕ್ಷ ರೂ. ಇಲ್ಲಿ ವಾರ್ಷಿಕವಾಗಿ 7.5% ಬಡ್ಡಿ ಲಭ್ಯವಿದೆ, ಮತ್ತು ಒಂದು ವರ್ಷದ ನಂತರ ನಿಮ್ಮ ಠೇವಣಿಯ 40% ಅನ್ನು ನೀವು ಹಿಂಪಡೆಯಬಹುದು.
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರವು ಸುರಕ್ಷಿತ ಮತ್ತು ಕಡಿಮೆ-ಅಪಾಯದ ಯೋಜನೆಯಾಗಿದ್ದು, ಎಲ್ಲಾ ರೀತಿಯ ಹೂಡಿಕೆದಾರರಿಗೆ ಸೂಕ್ತವಾಗಿದೆ. ಇದರಲ್ಲಿ ಕನಿಷ್ಠ ಹೂಡಿಕೆ ರೂ 100, ಮತ್ತು ಅದರ ಮುಕ್ತಾಯ ಅವಧಿ 5 ವರ್ಷಗಳು. ಆದಾಗ್ಯೂ, ಅಕ್ಟೋಬರ್ 1, 2024 ರಿಂದ, ಹೊಸ NSC ನಲ್ಲಿ ಠೇವಣಿಗಳ ಮೇಲೆ ಯಾವುದೇ ಬಡ್ಡಿ ಇರುವುದಿಲ್ಲ, ಆದರೆ ಸೆಪ್ಟೆಂಬರ್ 30, 2024 ರವರೆಗೆ ಠೇವಣಿಗಳ ಮೇಲೆ 7.5% ಬಡ್ಡಿ ಸಿಗುತ್ತದೆ.
ಪೋಸ್ಟ್ ಆಫೀಸ್ PPF ಯೋಜನೆ
ಅಂಚೆ ಕಛೇರಿಯ ಸಾರ್ವಜನಿಕ ಭವಿಷ್ಯ ನಿಧಿ (PPF) ಯೋಜನೆಯು ದೀರ್ಘಾವಧಿಯ ಹೂಡಿಕೆ ಯೋಜನೆಯಾಗಿದೆ. ಅದರಲ್ಲಿ ಕನಿಷ್ಠ 500 ರೂಪಾಯಿ ಹೂಡಿಕೆ ಮಾಡಬೇಕು ಮತ್ತು ಅದರ ಮೇಲಿನ ಬಡ್ಡಿ ದರ 7.1%. ಈ ಯೋಜನೆಯು ದೀರ್ಘಾವಧಿಯ ಹೂಡಿಕೆದಾರರಿಗೆ ಸುರಕ್ಷಿತ ಮತ್ತು ಪ್ರಯೋಜನಕಾರಿ ಆಯ್ಕೆಯಾಗಿದೆ.
ಈ ಎಲ್ಲಾ ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ನೀವು ಹೂಡಿಕೆ ಮಾಡುವ ಮೂಲಕ, ತಮ್ಮ ಬದಕನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿ ಮಾಡಿಕೊಳ್ಳಬಹುದು.


Click it and Unblock the Notifications