ನೀವು ಅಂಚೆ ಕಚೇರಿಯಲ್ಲಿ ಹಣವನ್ನು ಹೂಡಿಕೆ ಮಾಡಬೇಕು ಎಂದುಕೊಂಡಿದ್ದೀರಾ..? ಹಾಗಿದ್ದರೆ ಈ ಸುದ್ದಿಯನ್ನು ತಪ್ಪದೇ ಓದಿ... ಸುರಂಕ್ಷಿತ ಹೂಡಿಕೆಗೆ ಅಂಚೆ ಕಚೇರಿಯ ಯೋಜನೆಗಳು ಉತ್ತಮ ಆಯ್ಕೆ ಎಂದೇ ಹೇಳಬಹುದು. ಬಹುಬೇಗನೆ ನೀವು ಹೂಡಿಕೆಯನ್ನು ನೀವು ಆಂಚೆಕಚೇರಿಯಲ್ಲಿ ಆರಂಭಿಸಿದ್ಧಾರೆ ನಿಮ್ಮ ನಿವೃತ್ತಿ ವೇಳೆಗೆ ಹೆಚ್ಚಿನ ಹಣವನ್ನು ಗಳಿಸಬಹುದು. ವೃದ್ದಾಪ್ಯದಲ್ಲಿ ಮನೆಯಲ್ಲಿ ಕುಳಿತು ಹಣವನ್ನು ಗಳಿಸಬಹುದು.. ಯಾವುದು ಯೋಜನೆ..? ತೆರಿಗೆಯ ಪ್ರಯೋಜನ ಇದ್ಯಾ..? ಎಷ್ಟು ಬಡ್ಡಿ ಸಿಗುತ್ತದೆ ಎಂಬ ಹೆಚ್ಚಿನ ವಿವರ ಇಲ್ಲಿದೆ.
ಹೌದು, ನಿವೃತ್ತಿಯ ಹೊತ್ತಿಗೆ ಉಳಿತಾಯವನ್ನು ಮಾಡಬೇಕೆಂದುಕೊಂಡರೆ ನಿಮ್ಮಗೆ ಹಿರಿಯ ನಾಗರಿಕರ ಉಳಿತಾಯ ಯೋಜನೆ (Senior Citizens Savings Scheme - SCSS) ಒಂದು ಉತ್ತಮ ಆಯ್ಕೆಯಾಗಿದೆ. ನೀವು ನಿಮ್ಮ ಉತ್ತಮ ಜೀವನವನ್ನು ಸುಲಭವಾಗಿ ಕಳೆಯಲು ಇದು ನಿಮ್ಮ ನೆರವಿಗೆ ಬರುತ್ತದೆ. ಆದರೆ ನೀವು ಹೂಡಿಕೆ ಮಾಡಲು ಆದಷ್ಟು ಬೇಗ ಆರಂಭವನ್ನು ಮಾಡಬೇಕು. ಹಿರಿಯ ನಾಗರಿಕರ ಉಳಿತಾಯ ಯೋಜನೆ ನಿಮ್ಮಗೆ ಸುರಕ್ಷಿತ ಹಾಗೂ ಹೆಚ್ಚಿನ ಆದಾಯವನ್ನು ನೀಡುತ್ತದೆ.

ಯಾರು ಹೂಡಿಕೆ ಮಾಡಬಹುದು?
ಅಂಚೆ ಕಚೇರಿಯ ಹಿರಿಯ ನಾಗರಿಕರ ಉಳಿತಾಯ ಯೋಜನೆ ಅಡಿಯಲ್ಲಿ 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಯಾವುದೇ ವ್ಯಕ್ತಿ ಈ ಯೋಜನೆಯಲ್ಲಿ ಖಾತೆಯನ್ನು ತೆರೆಯಬಹುದು. 55 ರಿಂದ 60 ವರ್ಷ ವಯಸ್ಸಿನ ನಡುವೆ ಸ್ವಯಂ ನಿವೃತ್ತಿ (Voluntary Retirement Scheme - VRS) ಪಡೆದ ನಾಗರಿಕ ವಲಯದ ಸರ್ಕಾರಿ ನೌಕರರು ಸಹ ಇದರಲ್ಲಿ ಹೂಡಿಕೆ ಮಾಡಬಹುದು. ರಕ್ಷಣಾ ವಲಯದಿಂದ (ಭೂಸೇನೆ, ವಾಯುಪಡೆ, ನೌಕಾಪಡೆ) ನಿವೃತ್ತರಾದ 50 ರಿಂದ 60 ವರ್ಷ ವಯಸ್ಸಿನ ವ್ಯಕ್ತಿಗಳು ಈ ಯೋಜನೆಯಡಿ ಏಕ ಅಥವಾ ಜಂಟಿ ಖಾತೆಯನ್ನು ತೆರೆಯಲು ಅವಕಾಶವಿದೆ.
ಬಡ್ಡಿದರ ಮತ್ತು ಹೂಡಿಕೆಯ ಮಿತಿ ಎಷ್ಟು..?
ಅಂಚೆ ಕಚೇರಿಯ ಹಿರಿಯ ನಾಗರಿಕರ ಉಳಿತಾಯ ಯೋಜನೆಯು 5 ವರ್ಷಗಳವರೆಗೂ ನೀವು ಹೂಡಿಕೆಯನ್ನು ಮಾಡಬಹುದು. ಈ ಯೋಜನೆನಯ ಮೂಲಕ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ, 1.5 ಲಕ್ಷ ರೂ.ಗಳವರೆಗಿನ ಹೂಡಿಕೆಯ ಮೇಲೆ ತೆರಿಗೆ ವಿನಾಯಿತಿ ಲಭ್ಯವಿದೆ. ಹಿರಿಯ ನಾಗರಿಕರು ಕನಿಷ್ಠ 1,000 ರೂ.ಗಳಿಂದ ಗರಿಷ್ಠ 30 ಲಕ್ಷ ರೂ.ಗಳವರೆಗೆ ಹೂಡಿಕೆ ಮಾಡಬಹುದು. ಈ ಹಿಂದೆ ಗರಿಷ್ಠ ಹೂಡಿಕೆಯ ಮಿತಿ 15 ಲಕ್ಷ ರೂ.ಗಳಷ್ಟಿತ್ತು. ಪ್ರಸ್ತುತ, ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಮೇಲೆ ಶೇ. 8.2 ರಷ್ಟು ಬಡ್ಡಿದರವನ್ನು ನೀಡಲಾಗುತ್ತಿದೆ.
ಬ್ಯಾಂಕುಗಳಲ್ಲಿ ಹಿರಿಯ ನಾಗರಿಕರಿಗೆ ಸಾಮಾನ್ಯವಾಗಿ, ಶೇ. 6 ರಿಂದ ಶೇ. 7 ರವರೆಗೆ ಬಡ್ಡಿದರವನ್ನು ನೀಡುತ್ತವೆ. ಆದ್ದರಿಂದ, ಅಂಚೆ ಕಚೇರಿಯ ಈ ಯೋಜನೆಯು ಬ್ಯಾಂಕ್ ಎಫ್‌ಡಿಗಳಿಗಿಂತ (Fixed Deposits) ಉತ್ತಮ ಆಯ್ಕೆಯಾಗಿದೆ. ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡುವುದರಿಂದ ಯಾವುದೇ ಅಪಾಯವಿಲ್ಲ. ಒಂದು ವೇಳೆ, ಒಬ್ಬ ವ್ಯಕ್ತಿಯು ಸುಮಾರು 30 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದರೆ, ಅವರಿಗೆ ವಾರ್ಷಿಕವಾಗಿ 2.46 ಲಕ್ಷ ರೂ.ಗಳ ಬಡ್ಡಿ ನಿಮ್ಮಗೆ ಸಿಗುತ್ತದೆ. ನೀವು ತಿಂಗಳಿಗೆ ಸುಮಾರು 20,000 ರೂ. ಆದಾಯ ಪಡೆಯಬಹುದು.
ಹಿರಿಯ ನಾಗರಿಕರ ಉಳಿತಾಯ ಯೋಜನೆಯನ್ನು ಯಾವಾಗ ಕ್ಲೋಸ್ ಮಾಡಬಹದು..?
ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಖಾತೆಯನ್ನು ತೆರೆದ ನಂತರ, ಅಗತ್ಯವಿದ್ದಲ್ಲಿ ಅದನ್ನು ಯಾವುದೇ ಸಮಯದಲ್ಲಿ ಮುಚ್ಚಬಹುದು. ಆದರೆ, ಖಾತೆಯನ್ನು ತೆರೆದ ಒಂದು ವರ್ಷದೊಳಗೆ ಮುಚ್ಚಿದರೆ, ಹೂಡಿಕೆ ಮಾಡಿದ ಮೊತ್ತಕ್ಕೆ ಯಾವುದೇ ಬಡ್ಡಿಯನ್ನು ಪಾವತಿಸಲಾಗುವುದಿಲ್ಲ. ಖಾತೆಯನ್ನು 1 ರಿಂದ 2 ವರ್ಷಗಳ ನಡುವೆ ಮುಚ್ಚಿದರೆ, ಬಡ್ಡಿ ಮೊತ್ತದಲ್ಲಿ ಶೇ. 1.5 ರಷ್ಟು ಕಡಿತ ಮಾಡಲಾಗುತ್ತದೆ. ಅದೇ ರೀತಿ, ಹೂಡಿಕೆಯನ್ನು 2 ರಿಂದ 5 ವರ್ಷಗಳ ನಡುವೆ ಮುಚ್ಚಿದರೆ, ಮೊತ್ತದಿಂದ ಶೇ. 1 ರಷ್ಟು ಕಡಿತಗೊಳಿಸಲಾಗುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ ಅಂಚೆ ಕಚೇರಿಯ ಹಿರಿಯ ನಾಗರಿಕರ ಉಳಿತಾಯ ಯೋಜನೆಯು ನಿವೃತ್ತಿ ಜೀವನಕ್ಕೆ ಆರ್ಥಿಕ ಭದ್ರತೆಯನ್ನು ಒದಗಿಸುವ ಒಂದು ಉತ್ತಮ ಯೋಜನೆಯ ಆಯ್ಕೆಯಾಗಿದೆ.


Click it and Unblock the Notifications