ಬೆಂಗಳೂರಿನಲ್ಲಿ ಡಿಸೆಂಬರ್‌ನಲ್ಲಿ ಹಲವಾರು ದಿನಗಳ ಕಾಲ ವಿದ್ಯುತ್ ವ್ಯತ್ಯಯವಾಗಿದೆ. ಈಗ ಹೊಸ ವರ್ಷ ಆರಂಭದ ಮೊದಲ ತಿಂಗಳಿನಲ್ಲಿಯೇ ರಾಜ್ಯ ರಾಜಧಾನಿಯ ಹಲವಾರು ಪ್ರದೇಶಗಳಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 15 ದಿನಗಳ ಕಾಲ ವಿದ್ಯುತ್ ವ್ಯತ್ಯಯವಾಗಲಿದೆ.
ಹೌದು ಈ ತಿಂಗಳಲ್ಲಿ ಹಲವಾರು ದಿನಗಳ ಕಾಲ ಬೇರೆ ಬೇರೆ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಜನವರಿ 10 ರಿಂದ 26ರವರೆಗೆ (66 ಕೆವಿ ಮಾರ್ಗದ ದುರಸ್ತಿಯ ಕಾರಣ ಬೆಳಗ್ಗೆ 8 ರಿಂದ ರಾತ್ರಿ 8 ರ ಅವಧಿ ನಡುವೆ 2-3 ಗಂಟೆ ವ್ಯತ್ಯಯ) ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಎಕ್ಸ್ (ಈ ಹಿಂದಿನ ಟ್ವಿಟ್ಟರ್) ನಲ್ಲಿ ಪೋಸ್ಟ್ ಮಾಡಿದೆ. ಇಲ್ಲಿದೆ ಅಧಿಕ ವಿವರ.

ಇಂದು ಎಲ್ಲಿ ವಿದ್ಯುತ್ ಸ್ಥಗಿತ?
ಇಂದು (ಜನವರಿ 9) ಹಿರಿಯೂರಿನ ಹಳೆಯ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಫ್-9 ಹುಳಿಯಾರು ರಸ್ತೆ 11 ಕೆವಿ ಪ್ರಸರಣ ಮಾರ್ಗದಲ್ಲಿ ವಿದ್ಯುತ್ ಸ್ಥಳಾಂತರ ಮಾಡಲು ಕಾಮಗಾರಿ ನಡೆಯಲಿದೆ. ಈ ಕಾರಣದಿಂದಾಗಿ ಜನವರಿ 9ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪೀರ್ ಸಾಬ್ ಮಾಹಿತಿ ನೀಡಿದ್ದಾರೆ.
ಇಂದು ಹಿರಿಯೂರಿನ ಲಕ್ಕವ್ವನಹಳ್ಳಿ ರಸ್ತೆ, ಕುವೆಂಪುನಗರ, ಪುಷ್ಪಾಂಜಲಿ ಚಿತ್ರಮಂದಿರ, ಹರಿಶ್ಚಂದ್ರಘಾಟ್, ಸಾಯಿಬಡಾವಣೆ, ಸಿಎಂ ಬಡಾವಣೆ, ಮೇರಿ ರಸ್ತೆ, ಮಸೀದಿ ರಸ್ತೆಯಲ್ಲಿ ವಿದ್ಯುತ್ ವ್ಯತ್ಯಯ ಅಥವಾ ವಿದ್ಯುತ್ ಕಡಿತವಾಗಲಿದೆ.
ತಾವರೆಕೆರೆ ಸುತ್ತ ನಾಳೆಯಿಂದ (ಜನವರಿ 1) ಪ್ರತಿ ದಿನ 2-3 ಗಂಟೆ ವಿದ್ಯುತ್ ಇರುವುದಿಲ್ಲ. ಕಪಿಟಿಸಿಎಲ್ ಮಾಗಡಿ ಬ್ಯಾಡರಹಳ್ಳಿ 66 ಕೆವಿ ಮಾರ್ಗದ ದುರಸ್ತಿ ನಡೆಯಲಿರುವ ಕಾರಣದಿಂದಾಗಿ ಜನವರಿ 10 ರಿಂದ ಜನವರಿ 26ರವರೆಗೆ ತಾವರೆಕರೆ ಹಾಗೂ ಮಾಚೋಹಳ್ಳಿ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರತಿ ದಿನ ಎರಡರಿಂದ ಮೂರು ಗಂಟೆಗಳ ಕಾಲ ವಿದ್ಯುತ್ ಸ್ಥಗಿತವಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ಯಾವೆಲ್ಲ ಪ್ರದೇಶದಲ್ಲಿ ವಿದ್ಯುತ್ ಇರಲ್ಲ?
ತಾವರೆಕೆರೆ ಸುತ್ತ ಮುತ್ತ ಇರುವ ದೊಡ್ಡಾಲದ ಮರ ರಸ್ತೆ, ಗಾಣಕಲ್ ಕೈಗಾರಿಕಾ ಪ್ರದೇಶ, ಹೊನಗನಹಟ್ಟಿ, ಯಲ್ಲಪ್ಪನ ಪಾಳ್ಯ, ಕೆಂಪಗೊಂಡನಹಳ್ಳಿ, ಯರಪ್ಪ ಕೈಗಾರಿಕಾ ಪ್ರದೇಶ, ಯಲಚಗುಪ್ಪೆ, ಚನ್ನೇನಹಳ್ಳಿ, ದೇವಮಾಚೋಹಳ್ಳಿ, ಪೆದ್ದನಪಾಳ್ಯ, ಗಂಗಪ್ಪಹಳ್ಳಿ, ನಾಗನಹಳ್ಳಿಯಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ.
ಇನ್ನು ಮಾಚೋಹಳ್ಳಿ ಸುತ್ತಮುತ್ತಲಿನ ಪ್ರದೇಶಗಳಾದ ವಿನಾಯಕ ಬಡಾವಣೆ, ಕಲ್ಪಾ ಕೈಗಾರಿಕಾ ಪ್ರದೇಶ, ಮಾಚೋಹಳ್ಳಿ, ಕಾಚೋಹಳ್ಳಿ, ಕಡಬಗೆರೆ ಕ್ರಾಸ್, ಸೀಗೇಹಳ್ಳಿ ಗೇಟ್, ಕೆಕೆ ಲೇಔಟ್, ಚಿಕ್ಕಗೊಲ್ಲರಹಟ್ಟಿ, ಕೆಜಿ ಲಕ್ಕೇನಹಳ್ಳಿ, ಶ್ರೀನಿಧಿ ಲೇಔಟ್, ಮಂಚನಬೆಲೆ ಕಾಲೋನಿ, ಜನಪ್ರಿಯ, ಲಕ್ಷ್ಮೀ ಬಡಾವಣೆ, ಫಾರೆಸ್ಟ್‌ಗೇಟ್ ಕೈಗಾರಿಕಾ ಪ್ರದೇಶ, ಕಡಬಗೆರೆ, ರಾಘವೇಂದ್ರ ಲೇಔಟ್, ಅರ್ಕಾವತಿ ಲೇಔಟ್, ಸೀಗೆಹಳ್ಳಿ, ಮಹಿಮಣ್ಣನಪಾಳ್ಯ, ಬೈಲಾಹೋನೆಹಳ್ಳಿ, ಸ್ಪೂರ್ತಿ ಬಡಾವಣೆ, ರಾಘವೇಂದ್ರ ಬಡಾವಣೆ, ಕಿತ್ನಹಳ್ಳಿ ರಸ್ತೆಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.


Click it and Unblock the Notifications