ಬೆಂಗಳೂರಿನಲ್ಲಿ ಈಗಾಗಲೇ ಶುಕ್ರವಾರದಿಂದ ಭಾನುವಾರದವರೆಗೆ (ಡಿಸೆಂಬರ್ 15ರಿಂದ ಡಿಸೆಂಬರ್ 17) ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಈಗ ಮತ್ತೆ ಬೆಂಗಳೂರಿನಲ್ಲಿ ಮೂರು ದಿನಗಳ ಕಾಲ ವಿದ್ಯುತ್ ಕಡಿತವಾಗಲಿದೆ. ಬೆಳ್ಳಿಗ್ಗೆ 10 ಗಂಟೆಯಿಂದ ರಾತ್ರಿ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಮಂಗಳವಾರದಿಂದ ಗುರುವಾರದವರೆಗೆ ವಿದ್ಯುತ್ ಕಡಿತ ಮಾಡಲಾಗುತ್ತದೆ. ಬೆಂಗಳೂರು ವಿದ್ಯುತ್ ಸರಬರಾಜು ಸಂಸ್ಥೆ (ಬೆಸ್ಕಾಂ) ಮತ್ತು ಕರ್ನಾಟಕ ಪವರ್ ಟ್ರಾನ್ಸಿಮಿಷನ್ ಕಾಪೋರೇಷನ್ ಲಿಮಿಟೆಡ್ (ಕೆಪಿಟಿಸಿಎಲ್) ಹಲವಾರು ಪ್ರದೇಶಗಳಲ್ಲಿ ರಿಪೇರಿ ಕಾರ್ಯವನ್ನು ಮಾಡುತ್ತಿದೆ. ಈ ನಿಟ್ಟಿನಲ್ಲಿ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಮರಗಿಡ ತೆಗೆಯುವುದು, ನವೀಕರಣ, ಆಧುನಿಕರಣ, ಡಿಟಿಸಿ ನಿರ್ವಹಣೆ, ಲೈನ್ ನಿರ್ವಹಣೆ, ಮೊದಲಾದ ಕಾರಣದಿಂದಾಗಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಡಿಸೆಂಬರ್ 19, 20, 21 ರಂದು ಯಾವೆಲ್ಲ ಪ್ರದೇಶದಲ್ಲಿ ವಿದ್ಯುತ್ ಕಡಿತವಾಗಲಿದೆ ಎಂಬ ವಿವರ ಇಲ್ಲಿದೆ ಮುಂದೆ ಓದಿ....
ಡಿಸೆಂಬರ್ 19 ರಂದು ವಿದ್ಯುತ್ ಕಡಿತ
ವಿಧಾನಸೌಧ, ಗಣೇಶ ದೇವಸ್ಥಾನ ಆರ್‌ಎಂಯು, ಮಿಲ್ಲರ್ ರಸ್ತೆ, ಜಯಮಹಲ್, ಎಂಕೆ ಸ್ಟ್ರೀಟ್, ಕನ್ನಿಂಗ್‌ಹ್ಯಾಮ್ ರಸ್ತೆ, ಕೆಂಪ್ ರಸ್ತೆ, ಬೆನ್ಸನ್ ಟೌನ್, ಸ್ಪೆನ್ಸರ್ ರಸ್ತೆ, ಎಸ್‌ಜಿ ರಸ್ತೆ, ಆರ್‌ಎಂಜೆಡ್ ಮಿಲೇನಿಯಾ, ಬಿ&ಎಲ್‌ಸಿ ಆಸ್ಪತ್ರೆ, ಚಿಕ್ಕಬಜಾರ್ ರಸ್ತೆ, ಜಿನೀವಾ ಹೌಸ್, ತಿಮ್ಮಯ್ಯ ರಸ್ತೆ, ಟಾಸ್ಕರ್ ಟೌನ್, ಪಿ.ಜಿ.ಹಳ್ಳಿ, ಹೈನ್ಸ್ ರಸ್ತೆ, ಚಂದ್ರಯ್ಯ, ಮುನೇಶ್ವರ ನಗರ, ಶಿವಾಜಿ ನಗರದಲ್ಲಿ ವಿದ್ಯುತ್ ಕಡಿತವಾಗಲಿದೆ.
ಹಿರೇಕೋಗಲೂರು, ಸೋಮನಹಳ್ಳಿ, ಬೆಳ್ಳಿಗನೂಡು, ಗೊಲ್ಲರಹಳ್ಳಿ, ದೊಡ್ಡಮಲ್ಲಾಪುರ, ಚಿಕ್ಕಕೋಗಲ್ಲು, ಮಂಗೇನನಹಳ್ಳಿ, ಭೀಮಾನರೆ, ತನಿಗೆರೆ, ಉಪ್ಪನಾಯಕನಹಳ್ಳಿ, ಮರಡಿ, ಕಾಕನೂರು, ಸಂತೆಬೆನ್ನೂರು, ಅರಳಿಕಟ್ಟೆ, ದೊಡ್ಡೇರಿಕಟ್ಟೆ, ಕುಳೇನೂರು, ಶಿವಕುಳೇನೂರು, ಕೊಂಡದಹಳ್ಳಿ, ಚಿಕ್ಕೋಡ, ಹಿರೇಹಳ್ಳಿ ಕೈಗಾರಿಕಾ ಪ್ರದೇಶ, ಹಿರೇಹಳ್ಳಿ, ಬಿ ಎಂ ಪಾಳ್ಯ, ಕರೆಕಲ್ಲು ಪಾಳ್ಯ, ಬಸವಪಟ್ಟಣ, ಬಸವೇಶ್ವರ ಬಡಾವಣೆ, ಎಸ್.ಎಸ್. ಮಠ, ಚಿಕ್ಕಹಳ್ಳಿ, ಸಣ್ಣಪ್ಪನ ಪಾಲ್ಯ, ಸಂಗಪುರ, ಕೋಲಿಹಳ್ಳಿ, ನಂದಿಹಳ್ಳಿ, ಪೆಮ್ಮನಹಳ್ಳಿ, ಬಂಡಿಹಳ್ಳಿ ಮತ್ತು ಕೋಳಿಹಳ್ಳಿಯಲ್ಲಿ ವಿದ್ಯುತ್ ಕಡಿತವಾಗಲಿದೆ.
ಡಿಸೆಂಬರ್ 20 ರಂದು ವಿದ್ಯುತ್ ವ್ಯತ್ಯಯ
ಅಂಗವಿಕಲಾ ಆಶಾಕಿರಣ ಟ್ರಸ್ಟ್, ಎಸ್‌ಎಸ್ ಲೇಔಟ್ ಎ ಬ್ಲಾಕ್, ಬಸವನಗುಡಿ, ಎಸ್‌ಎಸ್ ಮಾಲ್, ಗ್ಲಾಸ್ ಹೌಸ್ ಏರಿಯಾ, ಶಾಮನೂರು ರಸ್ತೆ, ಲಕ್ಷ್ಮಿ ಫ್ಲೋರ್ ಮಿಲ್, ಸಿದ್ದವೀರಪ್ಪ ಬಡವಾಣೆ, ಕುವೆಂಪು ನಗರ, ಮಾವಿನ ತೋಪು, ಜಿಎಚ್ - ಪಾರ್ಕ್, ಗ್ಲೋಬಲ್ ಮಾಲ್, ಶೋಭಾ ಇಂದ್ರಪ್ರಸ್ಥ ಅಪಾರ್ಟ್‌ಮೆಂಟ್, ಓಕಳ್ಳಿ, ಬೇವಿನಹಳ್ಳಿ, ನಂದಿಹಳ್ಳಿ, ಓಕಳ್ಳಿಪುರ, ಬಹದ್ದೂರಘಟ್ಟ ಮತ್ತು ಕೋಗುಂಡೆಯಲ್ಲಿ ಡಿಸೆಂಬ್ 20 ರಂದು ವಿದ್ಯುತ್ ಕಡಿತವಾಗಲಿದೆ.
ಡಿಸೆಂಬರ್ 21 ರಂದು ಈ ಪ್ರದೇಶದಲ್ಲಿ ವಿದ್ಯುತ್ ಕಡಿತ
ಮೌನೇಶ್ವರ ಬಡಾವಣೆ, ಜಯನಗರ, ಹೋಂಡಾ ಸರ್ಕಲ್, ಜಾಲಿ ನಗರ, ಶಿವಾಜಿ ನಗರ, ಎಂ.ಬಿ.ಕೇರಿ, ಚಲುವಾದಿ ಕೇರಿ, ಮಂಜುನಾಥ ನಗರ, ತಿಮ್ಮಯ್ಯ ರಸ್ತೆ, ಭೋವಿ ಕಾಲೋನಿ, ಮಹಾಗಣಪತಿ ನಗರ, ಪುಷ್ಪಾಂಜಲಿ ಅಪಾರ್ಟ್‌ಮೆಂಟ್, ಶಿವನಹಳ್ಳಿ ಪಾರ್ಕ್, ಆದರ್ಶ ನಗರ, ಆದರ್ಶ ಲೇಔಟ್, ಯುನಿಕ್ಸ್ ನಗರ, ಇಂದಿರಾ ನಗರ, ಮಂಜುನಾಥ್ ನಗರ, 3ನೇ ಹಂತ 1ನೇ ಬ್ಲಾಕ್, ಟೊಯೊಟಾ ಶೋ ರೂಂ, ಎಸ್ಟೀಮ್ ಕ್ಲಾಸಿಕ್ ಅಪಾರ್ಟ್‌ಮೆಂಟ್, ಲುಮೋಸ್ ಅಪಾರ್ಟ್‌ಮೆಂಟ್, ಐಗೂರು, ಲಿಂಗದಹಳ್ಳಿ ಮತ್ತು ಒಡ್ಡನಹಳ್ಳಿಯಲ್ಲಿ ವಿದ್ಯುತ್ ಕಡಿತವಾಗಲಿದೆ.


Click it and Unblock the Notifications