ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಿದ್ಯುತ್ ಕಡಿತದ ಬಗ್ಗೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ಮಾಹಿತಿ ನೀಡಿದೆ. ನೀವು ವರ್ಕ್ ಫ್ರಮ್ ಹೋಮ್ ಮಾಡುವುದಾದರೆ ಅಥವಾ ವಿದ್ಯುತ್ ತೀರಾ ಅಗತ್ಯವಾದ ಯಾವುದೇ ಕಾರ್ಯವನ್ನು ಮಾಡುವುದಾದರೆ ವಿದ್ಯುತ್ ಕಡಿತದ ಮಾಹಿತಿಯನ್ನು ತಿಳಿದುಕೊಳ್ಳಿ.
ಪ್ರಮುಖವಾಗಿ ಬೆಂಗಳೂರಿನಲ್ಲಿ ಮೂರು ದಿನಗಳ ಕಾಲ ವಿದ್ಯುತ್ ವ್ಯತ್ಯಯವಾಗಲಿದೆ. ಶುಕ್ರವಾರದಿಂದ ಭಾನುವಾರದವರೆಗೆ ಅಂದರೆ ಇಂದಿನಿಂದ (ಡಿಸೆಂಬರ್ 15) ಡಿಸೆಂಬರ್ 17 ರವರೆಗೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಯಾವೆಲ್ಲ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ, ಎಂಬ ಮಾಹಿತಿ ಇಲ್ಲಿದೆ ಮುಂದೆ ಓದಿ....

ಶುಕ್ರವಾರ ಯಾವೆಲ್ಲ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ
ಸಿಬಿ ಹಳ್ಳಿ, ಎಎಂಎಸ್ ಲೇಔಟ್, ಬಿಇಎಲ್ 1 ರಿಂದ 7 ಬ್ಲಾಕ್‌ಗಳು, ಎಚ್‌ಎಂಟಿ 1 ರಿಂದ 7 ಬ್ಲಾಕ್‌ಗಳು, ಎನ್‌ಟಿಐ ಲೇಔಟ್, ವೈಷ್ಣವಿ ಲೇಔಟ್, ಆಕಾಶವಾಣಿ ಲೇಔಟ್, ಯಲಹಂಕ, ಯಲಹಂಕ ಓಲ್ಡ್ ಟೌನ್, ಚೌಡೇಶ್ವರಿ ಲೇಔಟ್, ಕೊಂಡಪ್ಪ ಲೇಔಟ್, ಮಾರುತಿ ನಗರ, ಪ್ರಕೃತಿ ನಗರ, ನೆಹರು ನಗರ, ಅಲ್ಲಾಳಸಂದ್ರ, ಅತ್ತೂರು ಲೇಔಟ್, ಸಂತೋಷ ನಗರ, ಮುನೇಶ್ವರ ಲೇಔಟ್, ಸ್ವಾಗತ್ ಲೇಔಟ್, ಆದಿತ್ಯ ನಗರ, ಸಾಯಿ ನಗರ, ಭರತ್ ನಗರ, ಎಂ.ಎಸ್.ಪಾಳ್ಯ.
ಶನಿವಾರ ಈ ಪ್ರದೇಶದಲ್ಲಿ ಪವರ್ ಕಟ್
ಜಿಎಸ್ ಪಾಳ್ಯ, ಬಸವನಗರ, ಕೃಷ್ಣಾ ರೆಡ್ಡಿ ಲೇಔಟ್, ಬಯೋಕಾನ್, ಸೆಮಿಕಾನ್ ಪಾರ್ಕ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಆನಂದ್ ರೆಡ್ಡಿ ಲೇಔಟ್, ಗ್ಲೋಬಲ್ ಟೆಕ್ ಪಾರ್ಕ್, ಎಲೆಕ್ಟ್ರಾನಿಕ್ ಸಿಟಿ ಹಂತ-2.
ಭಾನುವಾರ ವಿದ್ಯುತ್ ವ್ಯತ್ಯಯ
ಜಿ.ಬಿ.ಪಾಳ್ಯ, ಲಕ್ಷ್ಮಿ ಲೇಔಟ್, ರಾಗವೇಂದ್ರ ಲೇಔಟ್, ನ್ಯೂ ಮೈಕೋ ಲೇಔಟ್, ಹೊಸೂರು ಮುಖ್ಯರಸ್ತೆ, ಬೇಗೂರು ಮುಖ್ಯರಸ್ತೆ, ಹೊಂಗಸಂದ್ರ, ಬಾಲಾಜಿ ಲೇಔಟ್, ಸಿಲ್ಕ್ ಬೋರ್ಡ್ ಜಂಕ್ಷನ್, ಬೊಮ್ಮನಹಳ್ಳಿ, ಎಲೆಕ್ಟ್ರಾನಿಕ್ಸ್ ಸಿಟಿ, ಅಕ್ಕಪಕ್ಕದ ಪ್ರದೇಶಗಳು.


Click it and Unblock the Notifications