ನೀವು ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು (ಎನ್‌ಎಸ್‌ಸಿ), ಇತರವುಗಳನ್ನು ಒಳಗೊಂಡಂತೆ ಸಣ್ಣ ಉಳಿತಾಯ ಖಾತೆದಾರರಾಗಿದ್ದರೆ, ಸೆಪ್ಟೆಂಬರ್ 30, 2023 ರೊಳಗೆ ನಿಮ್ಮ ಆಧಾರ್ ಸಂಖ್ಯೆಯನ್ನು ಈ ಖಾತೆಗಳೊಂದಿಗೆ ಲಿಂಕ್ ಮಾಡುವುದು ಬಹಳ ಮುಖ್ಯ. ನೀವು ಆಧಾರ್ ಲಿಂಕ್ ಮಾಡದಿದ್ರೆ ಈ ಖಾತೆಗಳನ್ನು ಫ್ರೀಜ್ ಮಾಡಲಾಗುತ್ತದೆ.
ಪಿಪಿಎಫ್, ಎನ್‌ಎಸ್‌ಸಿಮ ಎಸ್‌ಸಿಎಸ್‌ಎಸ್‌ಯಂತಹ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಲು ಆಧಾರ್ ಬಳಕೆಯನ್ನು ಕಡ್ಡಾಯಗೊಳಿಸಿ, ಮಾರ್ಚ್ 31, 2023 ರಂದು ಸಂವಹನ ಸಚಿವಾಲಯವು ಪ್ರಕಟಣೆಯನ್ನು ಹೊರಡಿಸಿದೆ. ಈಗಾಗಲೇ ಹೂಡಿಕೆ ಮಾಡಿರುವವರು ತಮ್ಮ ಆಧಾರ್ ಸಂಖ್ಯೆಯನ್ನು ನೀಡಬೇಕು.

ಆಧಾರ್ ಅನ್ನು ಯಾವಾಗ ಸಲ್ಲಿಸಬೇಕು?
(i) ಡೆಪಾಸಿಟ್‌ದಾರರು ಏಪ್ರಿಲ್ 1, 2023 ರಿಂದ 6 ತಿಂಗಳ ಅವಧಿಯಲ್ಲಿ, ಅಂದರೆ, ಸೆಪ್ಟೆಂಬರ್ 30, 2023 ರ ಒಳಗಾಗಿ ಖಾತೆಗೆ ಆಧಾರ್ ಲಿಂಕ್ ಮಾಡಬೇಕು.
(ii) ಖಾತೆ ತೆರೆಯುವಾಗ ಆಧಾರ್ ಅನ್ನು ಅರ್ಜಿಯ ಪುರಾವೆಯಾಗಿ ಒದಗಿಸಬೇಕು. ಇಲ್ಲವಾದರೆ ಖಾತೆ ತೆರೆದ ಆರು ತಿಂಗಳ ಒಳಗಾಗಿ ಆಧಾರ್ ಒದಗಿಸಬೇಕು.
ಹೊಸ ನಿಯಮಗಳ ಪ್ರಕಾರ, ಅಂಚೆ ಕಚೇರಿ ಯೋಜನೆ, ಕಿಸಾನ್ ವಿಕಾಸ್ ಪತ್ರ ಮತ್ತು ಹಿರಿಯ ನಾಗರಿಕರ ಉಳಿತಾಯ ಯೋಜನೆಗಳ ಫಲಾನುಭವಿಗಳು ಸೇರಿದಂತೆ ಎಲ್ಲಾ ಖಾತೆದಾರರು ತಮ್ಮ ಆಧಾರ್ ಸಂಖ್ಯೆಯನ್ನು ಒದಗಿಸಬೇಕು ಮತ್ತು ತಮ್ಮ ಖಾತೆಯ ವಿವರಗಳಲ್ಲಿ ನಮೂದಿಸಬೇಕು. ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ನಲ್ಲಿ ಖಾತೆಯನ್ನು ತೆರೆದಿದ್ದೂ ಕೂಡಾ ಈ ನಿಯಮ ಅನ್ವಯವಾಗುತ್ತದೆ.
ಪಿಪಿಎಫ್, ಎನ್‌ಎಸ್‌ಸಿ, ಎಸ್‌ಸಿಎಸ್‌ಎಸ್ ಖಾತೆ ಏಕೆ ಫ್ರೀಜ್ ಮಾಡುವುದು?
ನಿಮ್ಮ ಸಣ್ಣ ಉಳಿತಾಯ ಖಾತೆ ಪಿಪಿಎಫ್, ಎನ್‌ಎಸ್‌ಸಿ, ಎಸ್‌ಸಿಎಸ್‌ಎಸ್ ಆಗಿರಬಹುದು, ಅದಕ್ಕೆ ನೀವು ಸೆಪ್ಟೆಂಬರ್ 30, 2023 ರ ಒಳಗಾಗಿ ನಿಮ್ಮ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಶಾಖೆಗೆ ಸಲ್ಲಿಸದಿದ್ದರೆ ನಿಮ್ಮ ಖಾತೆ ಫ್ರೀಜ್ ಆಗಬಹುದು.
"ಈ ಯೋಜನೆಗಳಲ್ಲಿ ಹೂಡಿಕೆ ಮಾಡಲು ಆಧಾರ್ ಕಾರ್ಡ್ ಪ್ರಮುಖ ದಾಖಲೆಯಾಗಿ ಕಾರ್ಯನಿರ್ವಹಿಸುತ್ತದೆ. ಆಧಾರ್ ಕಾರ್ಡ್ ಲಿಂಕ್ ಆಗದಿದ್ದರೆ ಈ ಯೋಜನೆ ಪ್ರಯೋಜನ ಪಡೆಯಲು ನಿಮಗೆ ಸಾಧ್ಯವಾಗದು. ಒಮ್ಮೆ ಗಡುವು ಕೊನೆಯಾದರೆ ಆ ಬಳಿಕ ನಿಮ್ಮ ಆಧಾರ್ ಸಂಖ್ಯೆಯನ್ನು ಒದಗಿಸುವವರೆಗೆ ನಿಮ್ಮ ಉಳಿತಾಯ ಖಾತೆಯನ್ನು ಫ್ರೀಜ್ ಮಾಡುವ ಹಕ್ಕನ್ನು ಬ್ಯಾಂಕ್ ಅಥವಾ ಅಂಚೆ ಕಛೇರಿ ಹೊಂದಿರುತ್ತದೆ," ಎಂದು ಎಸ್‌ಎಜಿ ಇನ್ಫೋಟೆಕ್‌ನಲ್ಲಿ ವ್ಯವಸ್ಥಾಪಕ ನಿರ್ದೇಶಕ ಅಮಿತ್ ಗುಪ್ತಾ ಹೇಳಿದ್ದಾರೆ.
ಗಡುವಿನೊಳಗೆ ನಿಮ್ಮ ಆಧಾರ್ ಅನ್ನು ನಿಮ್ಮ ಖಾತೆಗೆ ಲಿಂಕ್ ಮಾಡದಿದ್ದರೆ, ನಿಮ್ಮ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಲಿಂಕ್ ಮಾಡುವವರೆಗೂ ಈ ಸಣ್ಣ ಉಳಿತಾಯ ಯೋಜನೆಗಳಿಗೆ ಸಂಬಂಧಿಸಿದ ಯಾವುದೇ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗದು. ಆಧಾರ್ ಲಿಂಕ್ ಮಾಡದಿದ್ದರೆ, ಈ ಉಳಿತಾಯ ಯೋಜನೆಗಳ ಅಡಿಯಲ್ಲಿ ಸಾಲವನ್ನು ಪಡೆಯಲು ಕೂಡಾ ಸಾಧ್ಯವಾಗುವುದಿಲ್ಲ.
ಆಧಾರ್ ಲಿಂಕ್ ಮಾಡುವುದು ಹೇಗೆ?
ಖಾತೆದಾರರು ತಮ್ಮ ಆಧಾರ್ ಸಂಖ್ಯೆಯನ್ನು ತಮ್ಮ ಸಣ್ಣ ಉಳಿತಾಯ ಖಾತೆಗಳೊಂದಿಗೆ ಲಿಂಕ್ ಮಾಡಲು ಹಲವಾರು ವಿಧಾನಗಳು ಇದೆ. ಖಾತೆದಾರರು ತಮ್ಮ ಮ್ಮ ಆಧಾರ್ ಕಾರ್ಡ್ ಮತ್ತು ಪಾಸ್‌ಬುಕ್ ಜೊತೆಗೆ ತಮ್ಮ ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ಭೇಟಿ ನೀಡಬಹುದು. ಅಲ್ಲಿ ಅಧಿಕೃತ ಅಧಿಕಾರಿಗಳು ನಿಮ್ಮ ಖಾತೆಗೆ ಆಧಾರ್ ಲಿಂಕ್ ಮಾಡುತ್ತಾರೆ.
ಇದಕ್ಕೆ ಹೊರತಾಗಿ ಹಲವಾರು ಬ್ಯಾಂಕ್‌ಗಳು ಆಧಾರ್ ಅನ್ನು ಸಣ್ಣ ಉಳಿತಾಯ ಖಾತೆಗಳೊಂದಿಗೆ ಲಿಂಕ್ ಮಾಡಲು ಆನ್‌ಲೈನ್ ವಿಧಾನಗಳನ್ನು ನೀಡುತ್ತವೆ. ಖಾತೆದಾರರು ತಮ್ಮ ಬ್ಯಾಂಕ್‌ನ ಆನ್‌ಲೈನ್ ಬ್ಯಾಂಕಿಂಗ್ ಪೋರ್ಟಲ್‌ಗೆ ಲಾಗ್ ಇನ್ ಆಗಿ ಆಧಾರ್ ಲಿಂಕ್ ಆಯ್ಕೆಯನ್ನು ಹುಡುಕಿ, ಆಧಾರ್ ಸಂಖ್ಯೆಯನ್ನು ನಮೂದಿಸಿ ಲಿಂಕ್ ಮಾಡಿಕೊಳ್ಳಬಹುದು.
ಖಾತೆ ಫ್ರೀಜ್ ಆದ್ರೆ ಏನಾಗುತ್ತೆ?
1) ಬಾಕಿ ಇರುವ ಬಡ್ಡಿಯನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದಿಲ್ಲ.
2) ಪಿಪಿಎಫ್ ಮತ್ತು ಎನ್‌ಎಸ್‌ಸಿಯಂತಹ ಯೋಜನೆಗಳು ಸೇರಿದಂತೆ ನಿಮ್ಮ ಉಳಿತಾಯ ಖಾತೆಗಳಿಗೆ ಡೆಪಾಸಿಟ್ ಮಾಡಲು ಸಾಧ್ಯವಾಗುವುದಿಲ್ಲ.
3) ಅದೇ ಖಾತೆಯ ವಿವರಗಳನ್ನು ಬಳಸಿಕೊಂಡು ನಿಮ್ಮ ಯೋಜನೆಯ ಮೆಚ್ಯೂರಿಟಿ ಮೊತ್ತವನ್ನು ವಿತ್‌ಡ್ರಾ ಮಾಡಲು ಸಾಧ್ಯವಾಗದು.


Click it and Unblock the Notifications