For Quick Alerts
ALLOW NOTIFICATIONS  
For Daily Alerts

ಸೆಕೆಂಡ್ ಹ್ಯಾಂಡ್ ಕಾರು ಖರೀದಿಗೆ ಸಸ್ತಾ ಬಡ್ಡಿ ದರ: ಯಾವ ಬ್ಯಾಂಕ್, ಏನು ಆಫರ್?

|

ಕೊರೊನಾದ ಕಾರಣಕ್ಕೆ ಹಲವರಿಗೆ ಸಾರ್ವಜನಿಕ ವಾಹನ ಬಳಸುವುದು ಕೂಡ ಆತಂಕ ಪಡುವಂತಾಗಿದೆ. ಅನಿವಾರ್ಯವಾಗಿ ಸಾರ್ವಜನಿಕ ಸಾರಿಗೆ ಬಳಸುವವರಿಗೆ ಕೊರೊನಾದ ಭಯ ಕಾಡುತ್ತಲೇ ಇದೆ. ಆ ಪೈಕಿ ಕೆಲವರು ಹೇಗಾದರೂ ಒಂದು ಕಾರನ್ನಾದರೂ ಖರೀದಿ ಮಾಡಬೇಕು ಎಂದು ಯೋಚಿಸುವವರಿದ್ದಾರೆ. ಅದರಲ್ಲೂ ಮೊದಲ ಕಾರಿನ ಮಾಲೀಕರಾಗುವ ತವಕದಲ್ಲಿದ್ದಾರೆ.

ಆದರೆ, ಆರ್ಥಿಕತೆ ಸಂಕಷ್ಟದಲ್ಲಿ ಇರುವಾಗ ಹಾಗೂ ಉದ್ಯೋಗ ನಷ್ಟ, ವೇತನ ಕಡಿತದ ಭಯ ಎದುರಿಸುತ್ತಿ-ರುವಾಗ, ವ್ಯಾಪಾರ- ವ್ಯವಹಾರ ಕೂಡ ಕೈ ಕಚ್ಚಿರುವಾಗ ಹೊಸ ಕಾರನ್ನು ಖರೀದಿ ಮಾಡುವುದು ಹೇಗೆ? ಆದರೆ ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಮಾಡಬೇಕು ಅಂತಿರುವವರಿಗೆ ಕಡಿಮೆ ಬಡ್ಡಿ ದರದಲ್ಲಿ, ಹೆಚ್ಚಿನ ಅವಧಿಗೆ ಸಾಲ ನೀಡುವ ಬ್ಯಾಂಕ್ ಗಳಿವೆ.

ಮಾರುತಿ ಸುಜುಕಿಯಿಂದ ಲೀಸ್ ಸಬ್ ಸ್ಕ್ರಿಪ್ಷನ್ ಸೇವೆ ಆರಂಭಮಾರುತಿ ಸುಜುಕಿಯಿಂದ ಲೀಸ್ ಸಬ್ ಸ್ಕ್ರಿಪ್ಷನ್ ಸೇವೆ ಆರಂಭ

ಅದರಲ್ಲೂ ಅದೇ ಬ್ಯಾಂಕ್ ನಲ್ಲಿ ಗೃಹ ಸಾಲ ಪಡೆದವರಿಗೆ ಬಡ್ಡಿ ದರದಲ್ಲಿ ರಿಯಾಯಿತಿ ನೀಡುತ್ತವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿಂದ ಆ ರೀತಿಯ ಸಾಲ ಯೋಜನೆಗಳಿವೆ. ಈಗಿನ ಸಾಲ ಪಡೆಯುವುದಕ್ಕೆ ಕಟ್ಟುವ ಇಎಂಐ ಕೂಡ ಸೇರಿದಂತೆ ನಿಮ್ಮ ವೇತನದ 40 ಪರ್ಸೆಂಟ್ ಗಿಂತ ಹೆಚ್ಚು ಮೊತ್ತ ಸಾಲಕ್ಕಾಗಿಯೇ ಕಟ್ಟುವುದಿಲ್ಲ ಎಂಬುದನ್ನು ಖಾತ್ರಿ ಪಡಿಸಬೇಕು.

ಸೆಕೆಂಡ್ ಹ್ಯಾಂಡ್ ಕಾರು ಖರೀದಿಗೆ ಸಸ್ತಾ ಬಡ್ಡಿ ದರ

ಕೆಲವು ಬ್ಯಾಂಕ್ ಗಳಲ್ಲಿ 3 ವರ್ಷದೊಳಗಿನ ಹಳೆಯ ಕಾರಿಗೆ ಅದರ ಖರೀದಿ ಮೌಲ್ಯದ ಶೇಕಡಾ ನೂರರಷ್ಟು ಹಣಕಾಸು ಸಾಲ ಹಾಗೂ ಏಳು ವರ್ಷಗಳ ಸಾಲ ಮರುಪಾವತಿಗೆ ಅವಕಾಶ ಇದೆ. ಇನ್ನು ಹಲವು ಕಡೆ ಡೌನ್ ಪೇಮೆಂಟ್ ಕೇಳಬಹುದು. ಇನ್ಷೂರೆನ್ಸ್ ಮೊತ್ತ ಸಾಲದಲ್ಲಿ ಒಳಗೊಂಡಿರುವುದಿಲ್ಲ. ಹೊಸ ಕಾರಿಗಿಂತ ಸೆಕೆಂಡ್ ಹ್ಯಾಂಡ್ ಕಾರಿಗೆ ಇದು ಕಡಿಮೆ ಇರುತ್ತದೆ.

ಪ್ರೊಸೆಸಿಂಗ್ ಶುಲ್ಕ, ಪೂರ್ವಪಾವತಿ ಮಾಡಿದರೆ ಅದಕ್ಕೆ ಕಟ್ಟಬೇಕಾದ ಶುಲ್ಕ, ಇಎಂಐ ಕಟ್ಟುವುದು ತಡವಾದರೆ ವಿಧಿಸುವ ಶುಲ್ಕ ಇತ್ಯಾದಿಗಳನ್ನು ಆಯಾ ಬ್ಯಾಂಕ್ ಗಳಲ್ಲೇ ವಿಚಾರಿಸಬೇಕು. ಯಾವ ಬ್ಯಾಂಕ್ ನಲ್ಲಿ ಎಷ್ಟು ಬಡ್ಡಿ ದರ ಎಂಬ ಮಾಹಿತಿಯನ್ನು ನೀಡಲಾಗುತ್ತಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 9.50- 10.50%

ಎಚ್ ಡಿಎಫ್ ಸಿ 9.75- 16.95%

ಐಸಿಐಸಿಐ ಬ್ಯಾಂಕ್ 14.25%

ಪಿಎನ್ ಬಿ 7.40- 7.65%

ಕೆನರಾ ಬ್ಯಾಂಕ್ 7.30- 9.90%

ಆಕ್ಸಿಸ್ ಬ್ಯಾಂಕ್ 14.80- 16.80%

ಬ್ಯಾಂಕ್ ಆಫ್ ಇಂಡಿಯಾ 7.35- 7.95%

ಯೂನಿಯನ್ ಬ್ಯಾಂಕ್ 10.40- 10.50%

ಈ ಬಡ್ಡಿ ದರದ ಮಾಹಿತಿಯು ಜುಲೈ 2, 2020ಕ್ಕೆ ಅನ್ವಯ ಆಗುವಂತೆ ಇದೆ. ಇನ್ನು ಬಡ್ಡಿ ದರವನ್ನು ಬದಲಾಯಿಸುವುದು ಆಯಾ ಬ್ಯಾಂಕ್ ವಿವೇಚನೆಗೆ ಬಿಟ್ಟ ವಿಚಾರವಾಗಿರುತ್ತದೆ.

Read more about: car emi ಕಾರು ಇಎಂಐ
English summary

Pre Owned Car Loan At Attractive Interest Rate In major Banks

Who want to buy pre owned cars, here is an attractive interest rates in various banks.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X