ಆರ್‌ಬಿಐ ರೆಪೊ ದರ ಕಡಿತದ ನಂತರ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ವಸತಿ ಮತ್ತು ವಾಹನ ಸಾಲಗಳು ಸೇರಿದಂತೆ ಚಿಲ್ಲರೆ ಸಾಲಗಳ ಮೇಲಿನ ಬಡ್ಡಿದರಗಳನ್ನು 25 ಬೇಸಿಸ್ ಪಾಯಿಂಟ್‌ಗಳವರೆಗೆ ಕಡಿತಗೊಳಿಸಿದೆ. ಹಾಗಿದ್ರೆ ವೈಯಕ್ತಿಕ,ಗೃಹ,ಕಾರು ಸಾಲಗಳ ಮೇಲಿನ ಬಡ್ಡಿದರವನ್ನು ಯಾವ ಬ್ಯಾಂಕ್‌ಗಳಲ್ಲಿ ಕಡಿತ ಮಾಡಲಾಗಿದೆ ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.
ಹೌದು,ಪ್ರಮುಖ ಬ್ಯಾಂಕ್‌ದ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಚಿಲ್ಲರೆ ಸಾಲಗಳ ಮೇಲಿನ ಬಡ್ಡಿದರಗಳನ್ನು 25 ಬೇಸಿಸ್ ಪಾಯಿಂಟ್ಸ್ ಕಡಿತಗೊಳಿಸುವುದಾಗಿ ಗುರುವಾರ ಪ್ರಕಟಣೆಯಲ್ಲಿ ಮಾಹಿತಿಯನ್ನು ತಿಳಿಸಿದೆ.

ರೆಪೊ ದರ ಕಡಿಮೆ
ಆರ್ ಬಿಐ ಸುಮಾರು 5 ವರ್ಷಗಳ ನಂತರ ರೆಪೊ ದರ ಕಡಿಮೆ ಮಾಡಿದೆ.ಇದರೊಂದಿಗೆ ಬ್ಯಾಂಕ್‌ಗಳು ತಮ್ಮ ಸಾಲದ ಬಡ್ಡಿದರಗಳನ್ನು ಪರಿಷ್ಕರಿಸುತ್ತಿವೆ.ಇತ್ತೀಚೆಗೆ ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಬಡ್ಡಿದರಗಳನ್ನು ಕಡಿಮೆ ಮಾಡಿದೆ. ಆದರೆ ಇದೀಗ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಸಹ ಇದೇ ನಿರ್ಧಾರವನ್ನು ತೆಗೆದುಕೊಂಡಿದೆ.
ಚಿಲ್ಲರೆ ಸಾಲಗಳ ಮೇಲಿನ ಬಡ್ಡಿದರವನ್ನು PNB ಬ್ಯಾಂಕ್ 25 ಮೂಲಾಂಶಗಳವರೆಗೆ ಕಡಿಮೆ ಮಾಡುತ್ತಿದೆ ಎಂದು ಗುರುವಾರ ಘೋಷಣೆ ಮಾಡಿದೆ.
ಗೃಹ, ವಾಹನ ಮತ್ತು ಶಿಕ್ಷಣ ಸಾಲಗಳ ಮೇಲಿನ ಬಡ್ಡಿದರ ಇಳಿಕೆ
ಶಿಕ್ಷಣ ಸಾಲದ ಮೇಲಿನ ಕನಿಷ್ಠ ಬಡ್ಡಿಯನ್ನು ಶೇ.7.85ಕ್ಕೆ ಇಳಿಸಲಾಗಿದೆ. ಇತ್ತೀಚಿನ ಪರಿಷ್ಕರಣೆಯೊಂದಿಗೆ, ಪಿಎನ್‌ಬಿಯಲ್ಲಿ ಗೃಹ ಸಾಲಗಳ ಮೇಲಿನ ಆರಂಭಿಕ ಬಡ್ಡಿ ದರವು ಶೇ.8.15ಕ್ಕೆ ಇಳಿಕೆ ಕಂಡಿದೆ.1 ಲಕ್ಷ ಸಾಲಕ್ಕೆ ಮಾಸಿಕ ಕಂತು (ಇಎಂಐ) ರೂ.744 ಆಗಲಿದೆ ಎಂದು ಪಿಎನ್‌ಬಿ ಮಾಹಿತಿಯನ್ನು ತಿಳಿಸಿದೆ. ಹೊಸ ದರಗಳು ಫೆಬ್ರವರಿ 10 ರಿಂದಲೇ ಅನ್ವಯವಾಗುವಂತೆ ಜಾರಿ ಮಾಡಲಾಗಿತ್ತು.
ಆಟೋಮೊಬೈಲ್ ಸಾಲಗಳ ಮೇಲಿನ ಬಡ್ಡಿ ದರವು ಶೇ 8.50 ರಿಂದ ಪ್ರಾರಂಭವಾಗುತ್ತದೆ. ಅಂದರೆ ಮಾಸಿಕ ಕಂತು (ಇಎಂಐ) 1,240 ರೂಗಳಿಂದ ಆರಂಭವಾಗುತ್ತದೆ. ಬಡ್ಡಿದರಗಳಲ್ಲಿನ ಕಡಿತವು ವೈಯಕ್ತಿಕ ಸಾಲಗಳಿಗೆ ಮತ್ತು ಮನೆ, ವಾಹನ ಮತ್ತು ಶಿಕ್ಷಣ ಸಾಲಗಳಿಗೆ ಅನ್ವಯವಾಗುತ್ತದೆ.
20 ಲಕ್ಷದವರೆಗಿನ ವೈಯಕ್ತಿಕ ಸಾಲಗಳ ಮೇಲಿನ ಪರಿಷ್ಕೃತ ಬಡ್ಡಿ ದರ ಶೇ11.25ರಷ್ಟು ಆಗಿರುತ್ತದೆ.
ಫೆಬ್ರವರಿ 7 2025 ರಂದು, ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ಗಳಿಂದ ಶೇ.6.50 ರಿಂದ ಶೇ. 6.25 ಪ್ರತಿಶತಕ್ಕೆ ಇಳಿಸಿತ್ತು.ಇದರೊಂದಿಗೆ ಬ್ಯಾಂಕುಗಳು ತಮ್ಮ ಸಾಲದ ಮೇಲಿನ ಬಡ್ಡಿದರವನ್ನು ಕಡಿಮೆ ಮಾಡುತ್ತಿವೆ.
ಗೃಹ ಸಾಲದ ಮೇಲೆ ವಿವಿಧ ಬ್ಯಾಂಕ್‌ಗಳು ವಿಧಿಸುವ ಬಡ್ಡಿ ದರಗಳ ವಿವರ ಇಲ್ಲಿದೆ ನೋಡಿ
ಬ್ಯಾಂಕ್: ಶೇ.8.40
ಬ್ಯಾಂಕ್ ಆಫ್ ಇಂಡಿಯಾ: ಶೇ.8.40
ಕೋಟಕ್ ಮಹೀಂದ್ರಾ ಬ್ಯಾಂಕ್: ಶೇ.8.75
HDFC ಬ್ಯಾಂಕ್: ಶೇ.8.75
ಬ್ಯಾಂಕ್ ಆಫ್ ಬರೋಡಾ: ಶೇ.8.40
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ: ಶೇ.8.35
ಆಕ್ಸಿಸ್ ಬ್ಯಾಂಕ್: ಶೇ 8.75
IDBI ಬ್ಯಾಂಕ್: ಶೇ.8.50
ಎಲ್ಐಸಿ ಹೌಸಿಂಗ್ ಫೈನಾನ್ಸ್ : ಶೇ.8.50
ಈ ತಿಂಗಳ ಆರಂಭದಲ್ಲಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಆರ್‌ಬಿಐ ನೀತಿ ದರ ಕಡಿತಕ್ಕೆ ಅನುಗುಣವಾಗಿ ವಸತಿ ಸೇರಿದಂತೆ ಚಿಲ್ಲರೆ ಸಾಲಗಳ ಮೇಲಿನ ಬಡ್ಡಿದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಿತ್ತು. RBI (ಭಾರತೀಯ ರಿಸರ್ವ್ ಬ್ಯಾಂಕ್) 5 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ರೆಪೋ ದರ ಇಳಿಸಿದೆ. ಇದರ ಪರಿಣಾಮ ಶಿವಾಲಿಕ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ತನ್ನ ಎಫ್‌ಡಿ ಖಾತೆಗಳ ಮೇಲಿನ ಬಡ್ಡಿಯನ್ನು ಕಡಿತಗೊಳಿಸಿದೆ. ಸುಮಾರು 6.50% ನಿಂದ 6.25%ಗೆ ರೆಪೋ ದರ ಇಳಿದಿದ್ದು, ಎಫ್‌ಡಿ ಖಾತೆಗಳ ಮೇಲಿನ ಬಡ್ಡಿ ದರಕ್ಕೆ ಎಫೆಕ್ಟ್ ಆಗಿದೆ. ರೆಪೋ ದರ ಇಳಿಕೆಯ ಅನುಸಾರವಾಗಿ ಎಫ್‌ಡಿ ಮೇಲಿನ ಬಡ್ಡಿ ದರ ಕಡಿತಗೊಳಿಸಿರುವ ಶಿವಾಲಿಕ್ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಸದ್ಯ ಸಾಮಾನ್ಯ ವರ್ಗದ ಜನರಿಗೆ ಎಫ್‌ಡಿಯಿಂದ 3.50% ಇಂದ 8.55%ವರೆಗೂ ಬಡ್ಡಿಯನ್ನು ನೀಡುತ್ತಿದೆ.


Click it and Unblock the Notifications