ಕೇಂದ್ರ ಸರ್ಕಾರವು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಫೆಬ್ರವರಿ ಒಂದರಂದು ಮಂಡಿಸಲಿದೆ. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ರೈಲ್ವೆ ಬಜೆಟ್ ಅನ್ನು ಕೂಡಾ ಮಂಡನೆ ಮಾಡುತ್ತದೆ. ಈ ಹಿಂದೆ ರೈಲ್ವೆ ಜಜೆಟ್ ಅನ್ನು ಪ್ರತ್ಯೇಕವಾಗಿಇ ಮಂಡಿಸಲಾಗುತ್ತಿತ್ತು. ಆದರೆ ಸುಮಾರು 92 ವರ್ಷಗಳ ಹಳೆಯ ಪದ್ಧತಿಗೆ ಅಂತ್ಯ ಹಾಡಿದ್ದ 2016ರ ಕೇಂದ್ರ ಸರ್ಕಾರವು ಈ ಎರಡೂ ಬಜೆಟ್ ಅನ್ನು ವಿಲೀನಗೊಳಿಸಿದೆ.
ಆ ಸಂದರ್ಭದಲ್ಲೇ ಭಾರೀ ವಿರೋಧ ವ್ಯಕ್ತವಾಗಿದೆ. ರೈಲ್ವೆ ಬಜೆಟ್ ವಿಲೀನಗೊಳಿಸುವುದರಿಂದ ರೈಲ್ವೆಯ ಸ್ವಾಯತ್ತೆಗೆ ಧಕ್ಕೆ ಉಂಟಾಗುತ್ತದೆ ಎಂದು ವಿರೋಧ ಪಕ್ಷಗಳು ವಾದ ಮಾಡಿದ್ದವು. ಆದರೆ 2017ರಿಂದ ಕೇಂದ್ರ ಬಜೆಟ್ ಹಾಗೂ ರೈಲ್ವೆ ಬಜೆಟ್ ಅನ್ನು ಜೊತೆಯಾಗಿ ಮಂಡಿಸಲಾಗುತ್ತದೆ. ಸಾಮಾನ್ಯ ಬಜೆಟ್‌ನಲ್ಲೇ ರೈಲ್ವೆ ಬಜೆಟ್ ಸೇರಿದೆ.
ಇದಾದ ಕೆಲವೇ ಕೆಲವು ವರ್ಷಗಳಲ್ಲಿ ಕೇಂದ್ರ ಬಜೆಟ್ ಮೇಲಿನ ಪ್ರಾಮುಖ್ಯತೆ ಕುಗ್ಗುತ್ತಾ ಹೋಗಿದೆ. ಆದರೆ ಪ್ರಯಾಣಿಕರು ಮಾತ್ರ ಹೊಸ ಹೊಸ ರೈಲುಗಳ ಪ್ರಾರಂಭಕ್ಕೆ ಕಾತುರದಿಂದ ಕಾಯುತ್ತಿದ್ದಾರೆ. ಕಳೆದ ಬಜೆಟ್‌ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮುಂದಿನ ಮೂರು ವರ್ಷದಲ್ಲಿ 400 ಸೆಮಿ-ಹೈ ಸ್ಪೀಡ್‌ನ ವಂದೇ ಭಾರತ್ ರೈಲನ್ನು ಪ್ರಾರಂಭಿಸುವುದಾಗಿ ತಿಳಿಸಿದ್ದಾರೆ. ಮುಂದಿನ ಬಜೆಟ್‌ನಲ್ಲಿ ರೈಲ್ವೆ ವಲಯದ ನಿರೀಕ್ಷೆಗಳು ಏನಿದೆ, ತಿಳಿಯೋಣ ಮುಂದೆ ಓದಿ.....
ಅಧಿಕ ವಂದೇ ಭಾರತ್ ರೈಲುಗಳು
ಈ ಹಿಂದಿನ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಘೋಷಣೆ ಮಾಡಿದಂತೆ 400 ಸೆಮಿ-ಹೈ ಸ್ಪೀಡ್‌ನ ವಂದೇ ಭಾರತ್ ರೈಲನ್ನು ಪ್ರಾರಂಭಿಸುವ ಬಗ್ಗೆ ಕಾರ್ಯನಿರ್ವಹಣೆ ಈ ಬೆಜಟ್ ಬಳಿಕ ಆರಂಭವಾಗುವ ಸಾಧ್ಯತೆಯಿದೆ. 2019ರಲ್ಲಿ ಭಾರತದಲ್ಲಿ ವಂದೇ ಭಾರತ್ ರೈಲನ್ನು ಪ್ರಾರಂಭಿಸಲಾಗಿದ್ದು, ಪ್ರಸ್ತುತ ಬೆಂಗಳೂರು-ಮೈಸೂರಿಗೆ ವಂದೇ ಭಾರತ್ ರೈಲಿದೆ. ಈ ಬಜೆಟ್‌ನಲ್ಲಿ ಹೊಸದಾಗಿ ನೂರಾರು ವಂದೇ ಭಾರತ್ ರೈಲನ್ನು ಆರಂಭಿಸುವ ಘೋಷಣೆ ಮಾಡುವ ನಿರೀಕ್ಷೆಯಿದೆ. ಅತೀ ವೇಗದ ರೈಲಿನ ರೈಲು ಆರಂಭದ ನಿರೀಕ್ಷೆಯೂ ಇದೆ. ರಾಜಧಾನಿ, ಶತಾಬ್ಧಿಗಳಿಗಿಂತ ಅಧಿಕ ವೇಗದ, 180 kmph ಅಧಿಕ ವೇಗದ ರೈಲು ಪರಿಚಯಿಸುವ ನಿರೀಕ್ಷೆಯಿದೆ. ಇನ್ನು ಯುರೋಪ್, ದಕ್ಷಿಣ ಅಮೆರಿಕ, ಪಶ್ಚಿಮ ಏಷ್ಯಾದ ಮಾರುಕಟ್ಟೆಗೆ 2025-26ರ ವೇಳೆಗೆ ಸಾಮಾಗ್ರಿಗಳ ರಫ್ತಿಗಾಗಿ ರೈಲನ್ನು ಆರಂಭಿಸುವ ನಿರೀಕ್ಷೆಯಿದೆ. ಹಣಕಾಸು ವರ್ಷ 2026ರ ವೇಳೆಗೆ ವಂದೇ ಭಾರತ್ ರೈಲಿನ ಮೂಲಕ ರಫ್ತು ಆರಂಭವಾಗಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಹೊಸ ರೈಲು ಹಳಿ
ಮುಂದಿನ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಹೊಸ ರೈಲು ಹಳಿಯ ಬಗ್ಗೆ ಘೋಷಣೆ ಮಾಡುವ ನಿರೀಕ್ಷೆಯಿದೆ. ಮುಂದಿನ 25 ವರ್ಷದಲ್ಲಿ 100,000 ಕಿಲೋ ಮೀಟರ್ ದೂರದ ರೈಲು ಹಳಿಯ ನಿರ್ಮಾಣದ ಘೋಷನೆ ಸಾಧ್ಯತೆಯಿದೆ. ಅಧಿಕ ವೇಗದ ರೈಲುಗಳ ಸಂಖ್ಯೆಯನ್ನು ಹೆಚ್ಚಿಸುವ ನಿರೀಕ್ಷೆ ಕೂಡಾ ಇದೆ. ಹಣಕಾಸು ವರ್ಷ 2024ರ ಒಳಗೆ 7,000 ಕಿಲೋ ಮೀಟರ್ ರೈಲ್ವೆ ದಾರಿಯನ್ನು 10,000 ಕೋಟಿ ರೂಪಾಯಿಯಲ್ಲಿ ಎಲೆಕ್ಟ್ರಿಫೈ ಮಾಡುವ ನಿರೀಕ್ಷೆಯಿದೆ.
ರೈಲ್ವೆ ಬಜೆಟ್: ಬುಲೆಟ್ ರೈಲು
2023-24ನೇ ಸಾಲಿನ ಬಜೆಟ್‌ನಲ್ಲಿ ಹೊಸ ಬುಲೆಟ್ ರೈಲುಗಳ ಆರಂಭಕ್ಕಾಗಿ ಸರ್ಕಾರವು ಮೊತ್ತ ಹಂಚಿಕೆ ಮಾಡುವ ನಿರೀಕ್ಷೆಯಿದೆ. ಹಾಗೆಯೇ ಅಹಮದಾಬಾದ್-ಮುಂಬೈ ಬುಲೆಟ್ ರೈಲು ಯೋಜನೆಗೆ ಮೊತ್ತ ಹಂಚಿಕೆ ಮಾಡುವ ಸಾಧ್ಯತೆಯಿದೆ. ಹಾಗೆಯೇ ಈ ಹಿಂದೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ 2026ರ ವೇಳೆಗೆ ದೇಶದಲ್ಲಿ ಮೊದಲ ಬುಲೆಟ್ ರೈಲು ಆರಂಭವಾಗಲಿದೆ ಎಂದು ತಿಳಿಸಿದ್ದಾರೆ. ಇನ್ನು ಈಗಾಗಲೇ ವಿಳಂಭವಾಗಿರುವ ಯೋಜನೆಗಳನ್ನು 2026ರ ವೇಳೆಗೆ ಮುಗಿಸುವ ಭರವಸೆಯನ್ನು ಕೂಡಾ ಕೇಂದ್ರ ಸಚಿವರು ನೀಡಿದ್ದಾರೆ.
ಬಜೆಟ್ ಮೊತ್ತ ಹೆಚ್ಚಳ ಸಾಧ್ಯತೆ
ಭಾರತೀಯ ರೈಲ್ವೆ ಮೂಲಸೌಕರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರವು ಬಜೆಟ್‌ನಲ್ಲಿ ಹೆಚ್ಚಿನ ಮೊತ್ತವನ್ನು ಹಂಚಿಕೆ ಮಾಡುವ ನಿರೀಕ್ಷೆಯಿದೆ. ವಂದೇ ಭಾರತ್ ರೈಲು, 35 ಹೈಡ್ರೋಜನ್ ಫ್ಯೂಲ್ ರೈಲು, 4000 ಹೊಸ ಆಟೋಮೊಬೈಲ್ ಕೋಚ್, 5000 ಎಲ್‌ಎಚ್‌ಬಿ ಕೋಚ್, 58 ಸಾವಿರ ವಾಗನ್‌ಗೆ ಅಂದಾಜು 2.70 ಲಕ್ಷ ಕೋಟಿ ರೂಪಾಯಿ ಬಜೆಟ್ ಮಂಡಿಸುವ ನಿರೀಕ್ಷೆಯಿದೆ. ಇದು ಈವರೆಗಿನ ಬಜೆಟ್‌ನಲ್ಲಿ ಅತೀ ಅಧಿಕ ಮೊತ್ತದ ಬಜೆಟ್ ಆಗಲಿದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?



Click it and Unblock the Notifications