For Quick Alerts
ALLOW NOTIFICATIONS  
For Daily Alerts

ರಕ್ಷಾ ಬಂಧನ 2022: ಸಹೋದರಿಗೆ ಚಿನ್ನ ಉಡುಗೊರೆ ನೀಡುವುದು ಉತ್ತಮವೇ?

|

ಈ ರಕ್ಷಾ ಬಂಧನದಲ್ಲಿ ನೀವು ನಿಮ್ಮ ಸಹೋದರಿಗೆ ಯಾವ ಉಡುಗೊರೆ ನೀಡುವುದು ಎಂದು ಆಲೋಚನೆ ಮಾಡುತ್ತಿರಬಹುದು. ಹಾಗಿರುವಾಗ ನಿಮಗೆ ಇಲ್ಲಿ ನಾವು ಸಲಹೆಯನ್ನು ನೀಡುತ್ತೇವೆ. ಈ ವರ್ಷದ ಹಬ್ಬಕ್ಕೆ ಸಹೋದರಿಗೆ ಚಿನ್ನದ ನಾಣ್ಯ ಅಥವಾ ಚಿನ್ನದ ಆಭರಣ ನೀಡಿದರೆ ಹೇಗೆ?. ಈಗ ಡಿಜಿಟಲ್ ಫಾರ್ಮ್‌ನಲ್ಲೂ ಚಿನ್ನದಲ್ಲಿ ಹೂಡಿಕೆ ಮಾಡಬಹುದು. ಆದರೆ ಚಿನ್ನವನ್ನು ಖರೀದಿ ಮಾಡುವುದು ಅಥವಾ ನಿಮ್ಮ ಸಹೋದರಿ ಹೆಸರಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡುವುದು ಉತ್ತಮ ಆಯ್ಕೆಯೇ?

 

ಭಾರತೀಯರಿಗೆ ಚಿನ್ನ ಎಂಬುವುದು ಸಂಸ್ಕೃತಿಯ ಪ್ರತೀಕವಾಗಿದೆ. ಯಾವುದೇ ಹಬ್ಬ, ವಿವಾಹ ಮೊದಲಾದ ಕಾರ್ಯಕ್ರಮ ಬಂದಾಗ ಭಾರತೀಯರು ಚಿನ್ನವನ್ನು ಖರೀದಿ ಮಾಡುವುದು ರೂಢಿಯಾಗಿದೆ. ಚಿನ್ನವನ್ನು ನಾವು ಖರೀದಿ ಮಾಡಿದ್ದರೆ ಅದು ಯಾವುದೇ ಕಾಲದಲ್ಲೂ ನಮ್ಮ ಸಹಾಯಕ್ಕೆ ಬರುವ ವಸ್ತು ಎಂದು ನಂಬಲಾಗಿದೆ. ಹೀಗಿರುವಾಗ ಈ ರಕ್ಷಾ ಬಂಧನ ವೇಳೆ ನಿಮ್ಮ ಸಹೋದರಿಗೆ ಚಿನ್ನ ನೀಡುವುದು ಉತ್ತಮವೇ ಅಲ್ಲವೇ.

Gold Rate Today: ಚಿನ್ನದ ಬೆಲೆ ಏರಿಕೆ, ನಿಮ್ಮ ನಗರದಲ್ಲಿ ಆಗಸ್ಟ್‌ 9ರ ದರ ಎಷ್ಟಿದೆ ನೋಡಿ

ಚಿನ್ನ ಎಂದಿಗೂ ಎವರ್‌ಗ್ರೀನ್ ಆದ ಲೋಹವಾಗಿದೆ. 2022ರಲ್ಲಿ ಚಿನ್ನದ ಮೌಲ್ಯವು ಕೂಡಾ ಅಧಿಕವಾಗುತ್ತಿದೆ. ಪ್ರಸ್ತುತ ಚಿನ್ನವು ಸುಮಾರು 47ರಿಂದ 48 ಸಾವಿರದವರೆಗೆ ಮೌಲ್ಯವನ್ನು ಹೊಂದಿದೆ. ಕಳೆದ ಏಳು ತಿಂಗಳಿನಲ್ಲಿ ಚಿನ್ನದ ಮೇಲಿನ ಹೂಡಿಕೆಯಿಂದ ಅಧಿಕ ಲಾಭವೇ ಇದೆ. ಈ ವರ್ಷ ಚಿನ್ನದ ಹೂಡಿಕೆಗೆ ಉತ್ತಮ ಎಂದು ತಜ್ಞರು ಹೇಳುತ್ತಾರೆ. ಹಾಗಿರುವಾಗ ಸಹೋದರಿಗೆ ನೀವು ಚಿನ್ನ ಉಡುಗೊರೆ ನೀಡಬಹುದೇ ಎಂದು ತಿಳಿಯೋಣ ಮುಂದೆ ಓದಿ....

 ಚಿನ್ನದ ಮೇಲಿನ ಹೂಡಿಕೆ ಹೇಗೆ?

ಚಿನ್ನದ ಮೇಲಿನ ಹೂಡಿಕೆ ಹೇಗೆ?

" 2022ರ ಕಳೆದ ಏಳು ತಿಂಗಳಿನಲ್ಲಿ ಚಿನ್ನವು ಉತ್ತಮವಾಗಿ, ಹೂಡಿಕೆಗೆ ಯೋಗ್ಯವಾದ ಲೋಹವಾಗಿದೆ. ಈಕ್ವಿಟಿ ಮಾರುಕಟ್ಟೆಯಲ್ಲೂ ಚಿನ್ನವು ಉತ್ತಮವಾಗಿದೆ. ಭೌಗೋಳಿಕ ಬಿಕ್ಕಟ್ಟು, ಹಣದುಬ್ಬರದ ಬಿಕ್ಕಟ್ಟು, ತೈಲ ಹಾಗೂ ಇತರೆ ವಸ್ತುಗಳ ಬೆಲೆ ಏರಿಕೆಯ ನಡುವೆ ಚಿನ್ನದ ಬೆಲೆಯು ಏರಿಳಿತ ಕಾಣುತ್ತಿದೆ. ಆದರೆ ಈ ಸಂದರ್ಭದಲ್ಲಿ ಚಿನ್ನದ ಮೇಲಿನ ಹೂಡಿಕೆ ಉತ್ತಮ. ಚಿನ್ನ ಸರ್ವ ಕಾಲಕ್ಕೂ ಉತ್ತಮ ಆಯ್ಕೆ," ಎಂದು ಆಕ್ಸಿಸ್ ಸೆಕ್ಯುರಿಟೀಸ್ ಹೇಳುತ್ತದೆ.

 ಚಿನ್ನ ಎಂದಿನವರೆಗೆ ಉತ್ತಮ ಆಯ್ಕೆ?

ಚಿನ್ನ ಎಂದಿನವರೆಗೆ ಉತ್ತಮ ಆಯ್ಕೆ?

ಈ ಹಣದುಬ್ಬರ ನಡುವೆ ಚಿನ್ನವು ಎಂದಿಗೂ ನಮಗೆ ಸುರಕ್ಷಿತವಾಗಿದೆ. ಹಣಕಾಸು ಬಿಕ್ಕಟ್ಟಿನ ಸಂದರ್ಭದಲ್ಲಿ ಚಿನ್ನವನ್ನು ಮಾರಾಟ ಮಾಡಿ ಅಥವಾ ಅಡವಿಟ್ಟು ನಾವು ಹಣವನ್ನು ಪಡೆಯಲು ಸಾಧ್ಯವಾಗಲಿದೆ. ಈ ದೃಷ್ಟಿಕೋನದಲ್ಲಿ ನಾವು ನೋಡಿದಾಗ ಚಿನ್ನವನ್ನು ಖರೀದಿ ಮಾಡುವುದು ಅಥವಾ ಚಿನ್ನದ ಮೇಲೆ ಹೂಡಿಕೆ ಮಾಡುವುದು ಉತ್ತಮ ಆಯ್ಕೆ ಕೂಡಾ ಹೌದು. ಕಳೆದ ಎರಡು ತಿಂಗಳಿನಲ್ಲಿ ಚಿನ್ನದ ಬೆಲೆಯು ಹೆಚ್ಚು ಏರಿಳಿತ ಕಂಡು ಬಂದಿಲ್ಲ. ಒಂದು ನಿರ್ದಿಷ್ಟ ದರದಲ್ಲಿ ಇದೆ. ಉಕ್ರೇನ್ ಹಾಗೂ ರಷ್ಯಾದ ನಡುವಿನ ಯುದ್ಧವು ಒಂದು ಕೊನೆ ಹಂತಕ್ಕೆ ಬರುವವರೆಗೂ ಚಿನ್ನವು ಪ್ರಮುಖ ಸುರಕ್ಷಿತ ಆಯ್ಕೆಯಾಗಿಯೇ ಉಳಿಯಲಿದೆ.

 ಭಾರತದಲ್ಲಿ ಚಿನ್ನ ಖರೀದಿಯ ಟ್ರೆಂಡ್
 

ಭಾರತದಲ್ಲಿ ಚಿನ್ನ ಖರೀದಿಯ ಟ್ರೆಂಡ್

ಭಾರತದಲ್ಲಿ ಜುಲೈ ತಿಂಗಳಿನಲ್ಲಿ ಚಿನ್ನದ ಬೇಡಿಕೆಯು ಕೊಂಚ ಕಡಿಮೆಯಾಗಿದೆ. ಮದುವೆಯ ಸೀಸನ್ ಅಲ್ಲದ ಕಾರಣದಿಂದಾಗಿ ಹಾಗೂ ಚಿನ್ನದ ಮೇಲಿನ ಆಮದು ಸುಂಕ ಅಧಿಕವಾದ ಕಾರಣದಿಂದಾಗಿ ಭಾರತದಲ್ಲಿ ಚಿನ್ನದ ಬೇಡಿಕೆ ಜುಲೈ ತಿಂಗಳಿನಲ್ಲಿ ಕೊಂಚ ಇಳಿಕೆಯಾಗಿದೆ. ಆದರೆ ಜುಲೈ ಮೂರನೇ ವಾರದಲ್ಲಿ ಕೊಂಚ ಚಿನ್ನದ ಬೇಡಿಕೆ ಅಧಿಕವಾಗಿದೆ. ಆದರೆ ಮತ್ತೆ ಬೇಡಿಕೆ ಇಳಿಕೆಯಾಗಿದೆ. ಪ್ರಮುಖವಾಗಿ ರಿಟೇಲ್ ಬೇಡಿಕೆ ಅಧಿಕವಾಗಿದೆ.

ಇಂದಿನ ಚಿನ್ನದ ದರ

ಇಂದಿನ ಚಿನ್ನದ ದರ

ಆಗಸ್ಟ್ 9ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 350 ರೂಪಾಯಿ ಇಳಿಕೆಯಾಗಿದ್ದು ಪ್ರಸ್ತುತ 47,600 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 380 ರೂಪಾಯಿ ಕುಸಿದಿದ್ದು ಪ್ರಸ್ತುತ 51,930 ರೂಪಾಯಿ ಆಗಿದೆ.

English summary

Raksha Bandhan 2022: Is It a Good Idea to Gift Gold to Your Sister on Raksha Bandhan?

Raksha Bandhan 2022 Gold Gift : is it a good idea to gift gold to your sister on Raksha Bandhan? Let’s take a look at what the trends say about the gold as an asset class in 2022.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X