ರಕ್ಷಾ ಬಂಧನ ಸಹೋದರ, ಸಹೋದರಿಯರ ನಡುವಿನ ಒಂದು ಭಾಂದವ್ಯದ ಪ್ರತೀಕ. ಒಡಹುಟ್ಟಿದವರು ಪರಸ್ಪರ ಪ್ರೀತಿ ಮತ್ತು ಕಾಳಜಿಯನ್ನು ವ್ಯಕ್ತಪಡಿಸುವ ಸಮಯ ಇದಾಗಿದೆ. ಸಹೋದರಿ ತನ್ನ ಸಹೋದರರಿಗೆ ರಾಖಿಯನ್ನು ಕಟ್ಟುವುದು, ಸಹೋದರರು ಸಹೋದರಿಗೆ ಉಡುಗೊರೆಯನ್ನು ನೀಡುವುದು ರೂಢಿಯಾಗಿದೆ. ಸಾಂಪ್ರದಾಯಿಕ ಉಡುಗೊರೆಯಾಗಿ ಸಿಹಿತಿಂಡಿಗಳನ್ನು ನೀಡುವುದಾದರೂ ಕೂಡಾ ಆಭರಣಗಳು ಮತ್ತು ಬಟ್ಟೆಗಳ ಜೊತೆಗೆ ಹಣಕಾಸಿನ ಉಡುಗೊರೆಗಳನ್ನು ನೀಡುವ ಪ್ರವೃತ್ತಿ ಬೆಳೆಯುತ್ತಿದೆ.
ಪ್ರಸ್ತುತ ಹಣದುಬ್ಬರ ಅಧಿಕವಾಗಿದೆ. ಎಲ್ಲವೂ ಕೂಡಾ ದುಬಾರಿಯಾಗಿದೆ. ಬಹುತೇಕ ಎಲ್ಲ ಕುಟುಂಬಗಳಿಗೂ ಹಣಕಾಸು ಸಮಸ್ಯೆಗಳು ಇದೆ. ಈ ನಡುವೆ ನಿಮ್ಮ ಸಹೋದರಿಗೆ ಭವಿಷ್ಯದ ಸುರಕ್ಷತೆಗೆ ಈಗ ತಯಾರಿ ನಡೆಸಲು ಆಗದೆ ಇರಬಹುದು. ಇದಕ್ಕಾಗಿ ನೀವು ನಿಮ್ಮ ಸಹೋದರಿಗೆ ಸಹಾಯ ಮಾಡಿದರೆ ಹೇಗೆ?. ಈ ಮೂಲಕ ನಿಮ್ಮ ಗಿಫ್ಟ್ ಬೆಸ್ಟ್ ಗಿಫ್ಟ್ ಎಂದು ಕರೆಸಿಕೊಳ್ಳಬಹುದು!.

ನಿಮ್ಮ ಸಹೋದರಿಗೆ ಈ ಹಣಕಾಸು ಗಿಫ್ಟ್ ನೀಡಿ
ಆರೋಗ್ಯ ವಿಮೆ: ನಾನು ಸಹೋದರನಾಗಿ ನನ್ನ ಸಹೋದರಿಗೆ ರಕ್ಷಣೆಯಾಗಿರುತ್ತೇನೆ ಎಂಬ ಅರ್ಥವಾಗಿ ನೀವು ರಕ್ಷಾ ಬಂಧನವನ್ನು ಕಟ್ಟಿಸಿಕೊಳ್ಳುವಾಗ ನಿಮ್ಮ ಸಹೋದರಿಯ ಆರೋಗ್ಯ ರಕ್ಷಣೆಯೂ ನಿಮ್ಮ ಹೊಣೆಯಲ್ಲವೇ?. ಅದಕ್ಕಾಗಿ ಸಹೋದರಿಗೆ ಆರೋಗ್ಯ ವಿಮೆಯನ್ನು ಮಾಡಿಸಿ. ಈ ಆರೋಗ್ಯ ವಿಮೆಯು ಆಸ್ಪತ್ರೆಯ ವೆಚ್ಚ, ಚಿಕಿತ್ಸೆ ವೆಚ್ಚ, ಆಸ್ಪತ್ರೆ ರೂಮ್ ಬಾಡಿಗೆ, ಇತರೆ ವೆಚ್ಚವನ್ನು ಕವರ್ ಮಾಡುತ್ತದೆ. ಇದರಿಂದಾಗಿ ಎಂದಿಗೂ ಇದು ನಿಮ್ಮ ಸಹೋದರಿಗೆ ಸಹಾಯವಾಗಲಿದೆ.
ಡಿಜಿಟಲ್ ಗೋಲ್ಡ್/ ಗೋಲ್ಡ್ ಇಟಿಎಫ್: ಪ್ರಸ್ತುತ ರಕ್ಷಾ ಬಂಧನವೆಂದಾಗ ಸಹೋದರಿಗೆ ಚಿನ್ನವನ್ನು ಉಡುಗೊರೆಯಾಗಿ ನೀಡುವುದು ಹೆಚ್ಚಾಗುತ್ತಿದೆ. ನೀವು ಚಿನ್ನದ ಆಭರಣವನ್ನು ಉಡುಗೊರೆಯಾಗಿ ನೀಡುವ ಬದಲಾಗಿ ಈ ಡಿಜಿಟಲ್ ಯುಗದಲ್ಲಿ ಡಿಜಿಟಲ್ ರೂಪದಲ್ಲಿ ಚಿನ್ನವನ್ನು ಉಡುಗೊರೆ ನೀಡಬಹುದು. ಡಿಜಿಟಲ್ ಗೋಲ್ಡ್, ಗೋಲ್ಡ್ ಇಟಿಎಫ್‌ಗಳನ್ನು ನೀವು ನಿಮ್ಮ ಸಹೋದರಿಗೆ ಉಡುಗೊರೆಯಾಗಿ ನೀಡಬಹುದು.
ಮ್ಯೂಚುವಲ್ ಫಂಡ್: ನೀವು ಭವಿಷ್ಯದ ಸುರಕ್ಷತೆಗೆ ಆದ್ಯತೆ ನೀಡುವವರಾದರೆ ನಿಮ್ಮ ಸಹೋದರಿಗೆ ಮ್ಯೂಚುವಲ್ ಫಂಡ್ ಅನ್ನು ಈ ರಕ್ಷಾ ಬಂಧನ ದಿನ ಗಿಫ್ಟ್ ಆಗಿ ನೀಡಬಹುದು. ಆದರೆ ನೀವು ಸರಿಯಾಗಿ ತಜ್ಞರ ಸಲಹೆಯನ್ನು ಪಡೆದು ಮ್ಯೂಚುವಲ್ ಫಂಡ್ ಅನ್ನು ಖರೀದಿ ಮಾಡಿ. ಇದರಿಂದ ನಿಮ್ಮ ಸಹೋದರಿಗೆ ನಿರಂತರ ಆದಾಯ ಲಭ್ಯವಾಗಲಿದೆ.
ಎಲ್‌ಐಸಿ ಪಾಲಿಸಿ ಹೂಡಿಕೆ: ಎಲ್‌ಐಸಿಯಲ್ಲಿ ವಿಮೆ ಮಾತ್ರವಲ್ಲದೆ ಹಲವಾರು ಉಳಿತಾಯ ಯೋಜನೆಗಳು ಕೂಡಾ ಇದೆ. ವಿಮೆಯ ಜೊತೆಯೆ ಹಣ ಉಳಿತಾಯ ಮಾಡಲು ಸಹಾಯವಾಗುವ ಯೋಜನೆಗಳು ಎಲ್‌ಐಸಿಯಲ್ಲಿದೆ. ನಿಮ್ಮ ಒಡಹುಟ್ಟಿದವರ ಸುರಕ್ಷತೆ ಮತ್ತು ಆರ್ಥಿಕ ಸ್ಥಿರತೆಯ ಬಗ್ಗೆ ನೀವು ಕಾಳಜಿ ವಹಿಸುತ್ತಿದ್ದರೆ, ಸಹೋದರಿಗೆ ಎಲ್‌ಐಸಿ ಪಾಲಿಸಿಯನ್ನು ಉಡುಗೊರೆಯಾಗಿ ನೀಡಿ. ಎಲ್‌ಐಸಿ ಭಿಮಾ ಜ್ಯೋತಿ, ಎಲ್‌ಐಸಿ ಭಿಮಾ ರತ್ನ, ಎಲ್‌ಐಸಿ ನ್ಯೂ ಜೀವನ್ ಆನಂದ್ ಪಾಲಿಸಿ ಖರೀದಿಸಿ ಸಹೋದರಿಗೆ ಗಿಫ್ಟ್ ಆಗಿ ನೀಡಬಹುದು.
ಷೇರು ಹೂಡಿಕೆ: ನೀವು ನಿಮ್ಮ ಸಹೋದರಿ ಹೆಸರಿನಲ್ಲಿ ಸ್ಟಾಕ್‌ನಲ್ಲಿ ಹೂಡಿಕೆ ಮಾಡುವ ಮೂಲಕವು ವಿಶೇಷ ಗಿಫ್ಟ್ ಅನ್ನು ನಿಮ್ಮ ಸಹೋದರಿಗೆ ನೀಡಬಹುದು. ದೀರ್ಘಾವಧಿಯ ಹೂಡಿಕೆಯನ್ನು ಹೊಂದಿರುವ ಸ್ಟಾಕ್ ಅನ್ನು ಖರೀದಿ ಮಾಡಿ ನಿಮ್ಮ ಸಹೋದರಿಗೆ ಉಡುಗೊರೆಯನ್ನಾಗಿ ನೀಡಬಹುದು. ಇದಕ್ಕೂ ಕೂಡಾ ನೀವು ಹಣಕಾಸು ತಜ್ಞರ ಸಹಾಯವನ್ನು ಪಡೆಯುವುದು ಅತೀ ಮುಖ್ಯವಾಗಿದೆ.
ಎಫ್‌ಡಿ, ಆರ್‌ಡಿ: ಅತೀ ಸುರಕ್ಷಿತವಾದ ಹೂಡಿಕೆ ಫಿಕ್ಸಿಡ್ ಡೆಪಾಸಿಟ್/ ಎಫ್‌ಡಿ ಅಥವಾ ರಿಕ್ಯೂರಿಂಗ್ ಡೆಪಾಸಿಟ್/ ಆರ್‌ಡಿ ಎಂದು ನಂಬಲಾಗುತ್ತದೆ. ಸಹೋದರಿ ಹೆಸರಲ್ಲಿ ಹಣವನ್ನು ಫಿಕ್ಸಿಡ್ ಇಡಬಹುದು. ಆರ್‌ಡಿ ಖಾತೆಯನ್ನು ತೆರೆದು ಪ್ರತಿ ತಿಂಗಳು ಅದಕ್ಕೆ ಹೂಡಿಕೆಯನ್ನು ಮಾಡಬಹುದು. ಇದು ನಿಮ್ಮ ಸಹೋದರಿಗೆ ಭವಿಷ್ಯದಲ್ಲಿ ಸಹಕಾರಿಯಾಗಲಿದೆ.


Click it and Unblock the Notifications