ಜಗತ್ತು ಎಷ್ಟೇ ಬದಲಾದರೂ ಯಾವುದೇ ಡಿಜಿಟಲ್ ಬಂದರೂ ಕೆಲವೊಷ್ಟು ಮಂದಿ ಮಾತ್ರ ಹೊಸ ತಂತ್ರಜ್ಞಾನ ಹೊಂದಿಕೊಳ್ಳವುದಿಲ್ಲ. ಡಿಜಿಟಲ್ ಯುಗದಲ್ಲಿ ಎಲ್ಲಾ ವ್ಯವಹಾರಗಳನ್ನು ಜನರು ಆನ್ಲೈನ್ ಮೂಲಕವಾಗಿ ಮಾಡುತ್ತಾರೆ.ಅದರಲ್ಲೂ ಇತ್ತೀಚೆಗೆ ಹೆಚ್ಚಾಗಿ ಜನರು ಯಾವುದೇ ಶಾಪಿಂಗ್, ತರಕಾರಿ, ನೀರು ಏನೇ ತಗೆದುಕೊಂಡುರು ಇವರು ಹಣವನ್ನು ಡಿಜಿಟಲ್ ಪಾವತಿಯ ಮೂಲಕ ಪಾವತಿ ಮಾಡುತ್ತಾರೆ. ಆದರೆ ಇನ್ನೂ ಕೆಲವು ಮಂದಿ ಇದುವರಿಗೂ ನಗದು ವಹಿವಾಟಿನ ಮೇಲೆ ಅವಲಂಬಿಸಿದ್ದಾರೆ.
ಹೌದು, ಹಲವಾರು ಜನರು ಇಂದಿಗೂ ನಗದು ವಹಿವಾಟಿನ ಮೇಲೆ ಅವಲಂಬಿಸಿದ್ದಾರೆ. ಎಟಿಎಂಗಳಿಂದ ನಗದು ಹಿಂಪಡೆಯಲಾಗುತ್ತದೆ. ಆದರೆ, ಇನ್ನುಮುಂದೆ ನೀವು ಎಟಿಎಂನಿಂದ ಹಣವನ್ನು ಹಿಂಪಡೆಯಲು ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು ಆರ್‌ಬಿಐ ಹೇಳಿದೆ. ಹಾಗಿದ್ರೆ ಎಷ್ಟು ATM ಶುಲ್ಕ ಹೆಚ್ಚಳವಾಗುತ್ತದೆ? ಯಾವಗಿನಿಂದ ಜಾರಿ ಆರ್‌ಬಿಐ ಹೊಸ ನಿಯಮವೇನು ಎಂಬ ಹೆಚ್ಚಿನ ವಿವರ ಇಲ್ಲಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಎಟಿಎಂ ಇಂಟರ್ಚೇಂಜ್ ಶುಲ್ಕ ಹೆಚ್ಚಳಕ್ಕೆ ಅನುಮೋದನೆ ನೀಡಿರುವುದರಿಂದ, ಡೆಬಿಟ್ ಕಾರ್ಡ್ ಬಳಕೆದಾರರು ಶೀಘ್ರದಲ್ಲೇ ಎಟಿಎಂಗಳಲ್ಲಿ ನಗದು ಹಿಂಪಡೆಯುವ ಸೌಲಭ್ಯವನ್ನು ಬಳಸಲು ಹೆಚ್ಚಿನ ಹಣವನ್ನು ಖರ್ಚು ಮಾಡಬೇಕಾಗಬಹುದು. ಆರ್‌ಬಿಐ ಹಣಕಾಸು ವಹಿವಾಟುಗಳಿಗೆ 2 ರೂ. ಮತ್ತು ಹಣಕಾಸೇತರ ವಹಿವಾಟುಗಳಿಗೆ 1 ರೂ ಹೆಚ್ಚಳಕ್ಕೆ ಅನುಮೋದನೆ ನೀಡಿದ್ದು, ಎಟಿಎಂ ಇಂಟರ್‌ಚೇಂಜ್ ಶುಲ್ಕವನ್ನು ಹೆಚ್ಚಿಸಿದೆ. ಈ ಪರಿಷ್ಕರಣೆ ಮೇ 1 ರಿಂದ ಜಾರಿಗೆ ಬರಲಿದೆ ಎಂದು ಮಾಹಿತಿಯನ್ನು ತಿಳಿಸಲಾಗಿದೆ.
ಪ್ರಸ್ತುತ ನಿಯಮಗಳ ಪ್ರಕಾರ, ಗ್ರಾಹಕರು ತಿಂಗಳಿಗೆ ಐದು ಉಚಿತ ಎಟಿಎಂ ವಹಿವಾಟುಗಳನ್ನು ಹೊಂದಿದ್ದಾರೆ. ಈ ಮಿತಿಯನ್ನು ಮೀರಿದ ನಂತರ ನಗದು ಹಿಂಪಡೆಯಲು ಶುಲ್ಕಗಳು ಅನ್ವಯವಾಗುತ್ತವೆ. ಆದರೆ, ಇನ್ನುಮುಂದೆ ಈ ಎಟಿಎಂ ಇಂಟರ್ಚೇಂಜ್ ಶುಲ್ಕಗಳು ಹೆಚ್ಚಳವಾಗಲಿದೆ.
ಈ ಹಿಂದಿನಂತೆ ಐದು ಉಚಿತ ಎಟಿಎಂ ವಹಿವಾಟುಗಳ ಬಳಿಕ, ಬ್ಯಾಂಕುಗಳು ಪ್ರತಿ ವಹಿವಾಟಿಗೆ 21 ರೂ. ಶುಲ್ಕ ವಿಧಿಸುತ್ತಿದ್ದರೆ, ಈಗ ಈ ಶುಲ್ಕವನ್ನು 22 ರೂ.ಗೆ ಹೆಚ್ಚಿಸಲು ಎನ್‌ಪಿಸಿಐ ಯೋಜಿಸುತ್ತಿದೆ. ಇದು ಗ್ರಾಹಕರ ಮೇಲೆ ಹೆಚ್ಚುವರಿ ಹೊರೆಯಾಗಲಿದೆ.
ಇಂಟರ್ಚೇಂಜ್ ಶುಲ್ಕಗಳಲ್ಲಿ ಬದಲಾವಣೆ
ಬೇರೆ ಬ್ಯಾಂಕಿನ ಎಟಿಎಂ ಬಳಸಿ ಹಣವನ್ನು ಹಿಂಪಡೆಯುವಾಗ, ನಿಮ್ಮ ಬ್ಯಾಂಕ್ ಇಂಟರ್ಚೇಂಜ್ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ.
ಹೆಚ್ಚಿನ ಇಂಟರ್‌ಚೇಂಜ್ ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸಬೇಕೆ ಅಥವಾ ಬೇಡವೇ ಎಂದು ಬ್ಯಾಂಕುಗಳು ಇನ್ನೂ ನಿರ್ಧರಿಸಿಲ್ಲವಾದರೂ, ಗ್ರಾಹಕರು ಅಂತಿಮವಾಗಿ ಬೆಲೆಯನ್ನು ಪಾವತಿಸಬೇಕಾಗುತ್ತದೆ. ಇದರರ್ಥ ಬ್ಯಾಂಕಿಂಗ್ ಗ್ರಾಹಕರು ಎಟಿಎಂಗಳಿಂದ ಹಣವನ್ನು ಹಿಂಪಡೆಯಲು ಹೆಚ್ಚುವರಿ ಹಣವನ್ನು ಖರ್ಚು ಮಾಡಬೇಕಾಗುತ್ತದೆ.
ಎಟಿಎಂ ಇಂಟರ್ಚೇಂಜ್ ಶುಲ್ಕ ಎಷ್ಟು?
ಒಂದು ಬ್ಯಾಂಕಿನ ಗ್ರಾಹಕರು ಮತ್ತೊಂದು ಬ್ಯಾಂಕಿನ ಎಟಿಎಂ ಅನ್ನು ಬಳಸಿದಾಗ, ಮೊದಲ ಬ್ಯಾಂಕ್ ಪ್ರತಿ ಬಾರಿಯೂ ಇನ್ನೊಂದು ಬ್ಯಾಂಕಿಗೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದನ್ನು ಎಟಿಎಂ ಇಂಟರ್ಚೇಂಜ್ ಶುಲ್ಕ ಎಂದು ಕರೆಯಲಾಗುತ್ತದೆ. ಈ ಶುಲ್ಕವನ್ನು ಸಾಮಾನ್ಯವಾಗಿ ವಹಿವಾಟಿನ ಶೇಕಡಾವಾರು ಪ್ರಮಾಣದಲ್ಲಿ ಲೆಕ್ಕಹಾಕಲಾಗುತ್ತದೆ ಮತ್ತು ಇದನ್ನು ಹೆಚ್ಚಾಗಿ ಗ್ರಾಹಕರ ಬಿಲ್‌ನಲ್ಲಿ ಸೇರಿಸಲಾಗುತ್ತದೆ.
ಪ್ರಸ್ತುತ ಶುಲ್ಕ ಎಷ್ಟಿದೆ?
ನಗದು ಹಿಂಪಡೆಯುವಿಕೆ ಮುಂತಾದ ಹಣಕಾಸು ವಹಿವಾಟುಗಳ ಇಂಟರ್‌ಚೇಂಜ್ ಶುಲ್ಕಗಳು 17 ರೂ.ಗಳಿಂದ 19 ರೂ.ಗಳಿಗೆ ಏರಿದ್ದರೆ, ಬ್ಯಾಲೆನ್ಸ್ ಪರಿಶೀಲಿಸುವಂತಹ ಹಣಕಾಸು ಚಟುವಟಿಕೆಗಳ ಶುಲ್ಕಗಳು 6 ರೂ.ಗಳಿಂದ 7 ರೂ.ಗಳಿಗೆ ಹೇರಿಯಾಗಿವೆ.
ಒಬ್ಬ ಬ್ಯಾಂಕ್ ಬಳಕೆದಾರರು ಇತರ ಬ್ಯಾಂಕುಗಳ ಎಟಿಎಂಗಳಲ್ಲಿ ಪ್ರತಿ ತಿಂಗಳು ಐದು ಉಚಿತ ವಹಿವಾಟುಗಳನ್ನು ಮಾಡಬಹುದು, ಆದರೆ ನಗರೇತರ ಪ್ರದೇಶಗಳಲ್ಲಿ ಉಚಿತ ವಹಿವಾಟುಗಳ ಸಂಖ್ಯೆ ಮೂರಕ್ಕೆ ಸೀಮಿತವಾಗಿದೆ.
ಇಂಟರ್ಚೇಂಜ್ ಶುಲ್ಕ ಏಕೆ ಹೆಚ್ಚಾಗಿದೆ?
ಕಾರ್ಯನಿರ್ವಹಿಸಲು ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿರುವ ವೈಟ್-ಲೇಬಲ್ ಎಟಿಎಂ ನಿರ್ವಾಹಕರ ಕೋರಿಕೆಯ ಮೇರೆಗೆ, ಇಂಟರ್ಚೇಂಜ್ ಶುಲ್ಕವನ್ನು ಪರಿಷ್ಕರಿಸುವ ನಿರ್ಧಾರವನ್ನು ಬ್ಯಾಂಕುಗಳು ಮತ್ತು ಇತರ ಪಾಲುದಾರರಿಗೆ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ತಿಳಿಸಿದೆ.


Click it and Unblock the Notifications