ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅಕ್ಟೋಬರ್ 4, 2025ರಿಂದ ಚೆಕ್ ಕ್ಲಿಯರಿಂಗ್ ಪ್ರಕ್ರಿಯೆಯಲ್ಲಿ ಹೊಸ ತಂತ್ರವನ್ನು ಪರಿಚಯಿಸುತ್ತಿದೆ. ಈಗಿನಂತೆ ಚೆಕ್ ರಿಲೀಸ್ ಆಗಿ ಹಣ ಕ್ರೆಡಿಟ್ ಮಾಡಲು ಎರಡು ದಿನಗಳ ಕಾಲ ಬೇಕಾಗಲ್ಲ. RBI ಈ ಸಮಯವನ್ನು ಕಡಿಮೆ ಮಾಡಿ, ಬ್ಯಾಂಕ್‌ಗಳಿಗೆ ಚೆಕ್‌ಗಳನ್ನು ಸಲ್ಲಿಸಿದ ಕೆಲವೇ ಗಂಟೆಗಳಲ್ಲಿ ನಿರಂತರವಾಗಿ ತೆರವುಗೊಳಿಸಲು ಅವಕಾಶ ಕಲ್ಪಿಸಲಾಗುತ್ತದೆ. ಈ ಹೊಸ ಕ್ರಮದಿಂದ ಚೆಕ್ ಕ್ಲಿಯರಿಂಗ್ ಹೆಚ್ಚು ವೇಗವಾಗಿ, ದಕ್ಷವಾಗಿ ನಡೆದು ಕೆಲವೇ ಗಂಟೆಗಳ ಒಳಗೆ ಪೇಮೆಂಟ್ ಕ್ರೆಡಿಟ್ ಆಗುತ್ತದೆ.

ಹೊಸ ಪ್ರಕ್ರಿಯೆ ಹೇಗಿರಲಿದೆ?
ಹೊಸ ವ್ಯವಸ್ಥೆಯಲ್ಲಿ, ಬ್ಯಾಂಕ್‌ಗಳು ಶಾಖೆಗಳಲ್ಲಿ ಸ್ವೀಕರಿಸಿದ ಚೆಕ್‌ಗಳನ್ನು ಸ್ಕ್ಯಾನ್ ಮಾಡಿ ತಕ್ಷಣವೇ ಕ್ಲಿಯರಿಂಗ್ ಹೌಸ್‌ಗೆ ಕಳುಹಿಸಬೇಕು. ಪ್ರತಿ ಚೆಕ್‌ಗಾಗಿ ಡ್ರಾವೀ ಬ್ಯಾಂಕ್ ಧನಾತ್ಮಕ ಅಥವಾ ಋಣಾತ್ಮಕ ದೃಢೀಕರಣವನ್ನು ನೀಡಬೇಕು. ಧನಾತ್ಮಕ ದೃಢೀಕರಣವು ಚೆಕ್ ಪಾವತಿ ತ್ವರಿತವಾಗಿ ನಡೆಯಲು ಸಹಾಯ ಮಾಡುತ್ತದೆ, ಋಣಾತ್ಮಕ ದೃಢೀಕರಣವು ಅನಧಿಕೃತ ಚೆಕ್‌ಗಳನ್ನು ತಡೆಯುತ್ತದೆ.
CTSನಲ್ಲಿ ನಿರಂತರ ಕ್ಲಿಯರಿಂಗ್:
ಚೆಕ್ ಟ್ರಂಕೇಶನ್ ಸಿಸ್ಟಮ್ (CTS) ಈಗಿನ ಬ್ಯಾಚ್ ಸಂಸ್ಕರಣೆಯ ವಿಧಾನದಿಂದ 'ಆನ್-ರಿಯಲೈಸ್‌ಮೆಂಟ್-ಸೆಟಲ್‌ಮೆಂಟ್' ನಿರಂತರ ಕ್ಲಿಯರಿಂಗ್‌ಗೆ ಪರಿವರ್ತಿಸಲಾಗಿದೆ. ಈ ಪ್ರಕ್ರಿಯೆಯನ್ನು ಎರಡು ಹಂತಗಳಲ್ಲಿ ಜಾರಿಗೆ ತರಲಾಗಿದೆ.
ಹಂತ 1: ಅಕ್ಟೋಬರ್ 4, 2025ರಿಂದ ಜನವರಿ 2, 2026 ರವರೆಗೆ ನಡೆಯಲಿದೆ. ಡ್ರಾವೀ ಬ್ಯಾಂಕ್‌ಗಳು ತಮ್ಮ ಸ್ವೀಕರಿಸಿದ ಚೆಕ್‌ಗಳನ್ನು ದಿನದ ಅಂತ್ಯದ ಮೊದಲು ಧನಾತ್ಮಕ ಅಥವಾ ಋಣಾತ್ಮಕ ದೃಢೀಕರಣ ನೀಡಬೇಕು. ದೃಢೀಕರಣ ನೀಡದ ಚೆಕ್‌ಗಳು ಸ್ವಯಂಅನುಮೋದಿತವಾಗುತ್ತದೆ ಮತ್ತು ಇತ್ಯರ್ಥಕ್ಕೆ ಸೇರಿಸಲಾಗುತ್ತದೆ.
ಹಂತ 2: ಜನವರಿ 3, 2026ರಿಂದ ಪ್ರಾರಂಭವಾಗುತ್ತದೆ. ಈ ಹಂತದಲ್ಲಿ ಚೆಕ್‌ಗಳ ಐಟಂ ಮುಕ್ತಾಯ ಸಮಯವನ್ನು T+3 ಗಂಟೆಗಳಲ್ಲಿ ನಿಗದಿಪಡಿಸಲಾಗುತ್ತದೆ. ಉದಾಹರಣೆಗೆ, ಬೆಳಿಗ್ಗೆ 10:00-11:00 ರವರೆಗೆ ಸ್ವೀಕರಿಸಿದ ಚೆಕ್‌ಗಳನ್ನು ಮಧ್ಯಾಹ್ನ 2:00 ಗಂಟೆಯೊಳಗೆ ದೃಢೀಕರಿಸಬೇಕು.
ಇತ್ಯರ್ಥ ಮತ್ತು ಸುರಕ್ಷತಾ ಕ್ರಮಗಳು:
ಚೆಕ್ ಇತ್ಯರ್ಥ ಪೂರ್ಣಗೊಂಡ ನಂತರ, ಕ್ಲಿಯರಿಂಗ್ ಹೌಸ್ ದೃಢೀಕರಣದ ಮಾಹಿತಿಯನ್ನು ಪ್ರಸ್ತುತಪಡಿಸಿದ ಬ್ಯಾಂಕ್‌ಗೆ ಬಿಡುಗಡೆ ಮಾಡುತ್ತದೆ. ಬ್ಯಾಂಕ್‌ಗಳು ಇತ್ಯರ್ಥ ಪೂರ್ಣಗೊಂಡ 1 ಗಂಟೆ ನಂತರ ತಮ್ಮ ಸಾಮಾನ್ಯ ಸುರಕ್ಷತಾ ಕ್ರಮಗಳಿಗೆ ಅನುಸರಿಸಬೇಕು. ಈ ಮೂಲಕ, ಚೆಕ್ ಪಾವತಿಗಳ ಪ್ರಕ್ರಿಯೆ ಹೆಚ್ಚು ಶೀಘ್ರ, ಸುರಕ್ಷಿತ ಮತ್ತು ನಿರಂತರವಾಗುತ್ತದೆ.
ಗ್ರಾಹಕರಿಗೆ ಮಾಹಿತಿ ನೀಡುವ ಅಗತ್ಯ:
ಆರ್‌ಬಿಐ ಬ್ಯಾಂಕ್‌ಗಳಿಗೆ ಸೂಚನೆ ನೀಡಿದ್ದು, ತಮ್ಮ ಗ್ರಾಹಕರಿಗೆ ಈ ಬದಲಾವಣೆಗಳ ಬಗ್ಗೆ ಸಮರ್ಪಕ ಮಾಹಿತಿ ನೀಡಬೇಕು. ನಿಗದಿತ ದಿನಾಂಕಗಳಲ್ಲಿ ಬ್ಯಾಂಕ್‌ಗಳು CTS ನಲ್ಲಿ ನಿರಂತರ ಕ್ಲಿಯರಿಂಗ್‌ನಲ್ಲಿ ಭಾಗವಹಿಸಲು ಸಿದ್ಧರಾಗಿರಬೇಕು. ಹೊಸ ಕ್ರಮದಿಂದ ಚೆಕ್ ಕ್ಲಿಯರಿಂಗ್ ವೇಗ, ದಕ್ಷತೆ ಮತ್ತು ಗ್ರಾಹಕರ ಅನುಭವದಲ್ಲಿ ಉತ್ತಮ ಸುಧಾರಣೆ ಆಗಲಿದೆ.
ಈ ಹೊಸ ನಿರಂತರ ಚೆಕ್ ಕ್ಲಿಯರಿಂಗ್ ವ್ಯವಸ್ಥೆಯಿಂದ ಬ್ಯಾಂಕ್‌ಗಳಿಗೆ ಮತ್ತು ಗ್ರಾಹಕರಿಗೆ ಹಲವಾರು ಲಾಭಗಳು ದೊರಕಲಿದೆ. ಪ್ರಕ್ರಿಯೆ ವೇಗವಾಗಿ ನಡೆಯುವುದರಿಂದ ಪಾವತಿಗಳು ತ್ವರಿತವಾಗಿ ಪೂರ್ಣಗೊಳ್ಳುತ್ತವೆ. ಬ್ಯಾಂಕ್‌ಗಳು ತಮ್ಮ ಹಣಕಾಸು ನಿರ್ವಹಣೆಯಲ್ಲಿ ಹೆಚ್ಚು ದಕ್ಷರಾಗುತ್ತವೆ, ಮತ್ತು ಗ್ರಾಹಕರಿಗೆ ಶೀಘ್ರ, ಸುರಕ್ಷಿತ ಪಾವತಿ ಅನುಭವ ಸಿಗುತ್ತದೆ.


Click it and Unblock the Notifications