ದೆಹಲಿ: ಕೇಂದ್ರ ಬ್ಯಾಂಕ್ ಅಥವಾ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಹಣಕಾಸು ನೀತಿ ಸಮಿತಿ ಸಭೆ ಈಗಾಗಲೇ ಮುಗಿದಿದೆ. ಸಭೆಯ ನಿರ್ಧಾರಗಳನ್ನು ಸಹ ಈಗಾಗಳೇ ಘೋಷಣೆ ಮಾಡಲಾಗಿದೆ. ಆರ್‌ಬಿಐ ಒಂದು ತನ್ನ ಫೆಬ್ರವರಿ 2026ರ ಸಭೆಯಲ್ಲಿ ರೆಪೋ ದರವನ್ನು (Repo Rate) ಯಾವುದೇ ಬದಲಾವಣೆ ಮಾಡದೆ, ಸ್ಥಿರವಾಗಿಟ್ಟಿದೆ. ಅಂದರೆ ಕಳೆದ ವರ್ಷದಷ್ಟೇ 5.25% ರಷ್ಟೇ ರೆಪೋ ರೇಟ್ ಮುಂದುವರೆಯಲಿದೆ ಎಂದು ಗವರ್ನರ್ ಸಂಜಯ್ ಮಲ್ಹೋತ್ರಾ ಘೋಷಿಸಿದರು.

ಹಿಂದಿನ ದರ ಕಡಿತಗಳ ನಂತರ ಆರ್‌ಬಿಐ ತೆಗೆದುಕೊಂಡ ವಿರಾಮ ಇದಾಗಿದ್ದು, ಗೃಹ ಸಾಲಗಳ ಇಎಂಐಗಳ ಮೇಲೆ ಸದ್ಯಕ್ಕೆ ಯಾವುದೇ ರೀತಿಯಲ್ಲಿ ಏರಿಳಿತಗಳಾಗುವುದಿಲ್ಲ. ಈ ನಿರ್ಧಾರವು ಗೃಹ ಸಾಲಗಾರರಿಗೂ ಸ್ಥಿರತೆಯನ್ನು ನೀಡಿದೆ. ಹಾಗಿದ್ರೆ ಗೃಹಸಾಲಗಾರರಿಗೆ ಇದರಿಂದ ಏನಾದರೂ ಪರಿಣಾಮ ಬೀಳಲಿದ್ಯಾ?
ರೆಪೋ ದರ ಎಂದರೇನು?
ರೆಪೋ ರೇಟ್ ಎಂದರೆ ವಾಣಿಜ್ಯ ಬ್ಯಾಂಕುಗಳು ತಮ್ಮ ದೈನಂದಿನ ಹಣದ ಅವಶ್ಯಕತೆಗಾಗಿ ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ಸಾಲ ಪಡೆಯುವಾಗ ಪಾವತಿಸುವ ಬಡ್ಡಿದರ. ಇದು ಆರ್‌ಬಿಐ ವಿಧಿಸುವ ಬಡ್ಡಿದರವಾಗಿದ್ದು, ಈ ದರಕ್ಕನುಗುಣವಾಗಿ ಬ್ಯಾಂಕುಗಳು ಗ್ರಾಹಕರ ಮೇಲೆ ವಿಧಿಸುತ್ತದೆ.
ರೆಪೋ ದರ ಸ್ಥಿರ, ಸಾಲಗಾರರ ಮೇಲೆ ಪ್ರಭಾವ:
- ಇನ್ನು ರೆಪೋ ರೇಟ್ ಬದಲಾವಣೆಯಾದ್ರೆ ಗೃಹ ಸಾಲ ಮಾಡಿದವರ ಮೇಲೂ ಪ್ರಭಾವ ಬೀರುತ್ತದೆ.
- ಇಎಂಐಗಳು ಸ್ಥಿರವಾಗಿರುತ್ತದೆ: ಹೆಚ್ಚಿನ ಹೋಮ್ ಲೋನ್‌ಗಳು ಫ್ಲೋಟಿಂಗ್ ರೇಟ್ ಅಥವಾ ರೆಪೋ ಲಿಂಕ್ಡ್ ಲೆಂಡಿಂಗ್ ರೇಟ್ (RLLR) ಆಧಾರಿತವಾಗಿರುತ್ತದೆ. ಆದ್ದರಿಂದ ರೆಪೋ ರೇಟ್ ಬದಲಾಗದಿದ್ದರೆ ಇಎಂಐಗಳಲ್ಲೂ ಯಾವುದೇ ಬದಲಾವಣೆಯಾಗುವುದಿಲ್ಲ. ಅಂದರೆ ನೀವು ಪಾವತಿಸುವ ಇಎಂಐ ಕಂತುಗಳು ಹಾಗೆಯೇ ಮುಂದುವರೆಯುತ್ತದೆ.
- ನಿರೀಕ್ಷೆಗೆ ನಿರಾಸೆ: ಕಳೆದ ವರ್ಷ ಡಿಸೆಂಬರ್‌ನಲ್ಲಿ ರೆಪೋ ರೇಟ್ ಕಡಿತ ಮಾಡಲಾಗಿತ್ತು. ಈ ಹಿನ್ನೆಲೆ ಇಎಂಐನಲ್ಲೂ ಭಾರೀ ಕಡಿಮೆಯಾಗಿತ್ತು. ಆದರೆ ಈ ಬಾರಿಯೂ ಭಾರೀ ನಿರೀಕ್ಷೆಯಿದ್ದರಿಂದ ಯಾವುದೇ ಬದಲಾವಣೆಯಿಲ್ಲ.
- ಬಿಗ್ ರಿಲೀಫ್: ರೆಪೋ ದರ ಸ್ಥಿರವಾಗಿರುವುದರಿಂದ ಇಎಂಐ ಏರಿಕೆಯಾಗುತ್ತೆ ಅನ್ನೋ ಭಯವೂ ಇಲ್ಲ. ಹೊಸ ಸಾಲ ತೆಗೆದುಕೊಳ್ಳುವವರಿಗೂ ಅಥವಾ ಈಗಾಗಲೇ ಸಾಲ ತೆಗೆದುಕೊಂಡವರಿಗೂ ಪ್ಲಾನಿಂಗ್ ಮಾಡಲು ಸುಲಭವಾಗುತ್ತದೆ.
ಸದ್ಯ ಆರ್‌ಬಿಐ ಸ್ಥಿರ ನಿರ್ಧಾರಕ್ಕೆ ಬಂದಿದ್ದು, ಹಣದುಬ್ಬರ ಕೂಡಾ 2.1% ಇಳಿಕೆಯಾಗಿದೆ. ಇನ್ನು ಜಿಡಿಪಿ ಬೆಳವಣಿಗೆಯ ನಿರೀಕ್ಷೆಯಿದೆ.
ಆರ್ಥಿಕ ಬೆಳವಣಿಗೆಯು ಸ್ಥಿರವಾಗಿರುವುದು ಮತ್ತು ಹಣದುಬ್ಬರವು ಆರ್‌ಬಿಐ ನಿಗದಿಪಡಿಸಿದ ಮಿತಿಯಲ್ಲೇ ಇರುವುದು ಈ ನಿರ್ಧಾರಕ್ಕೆ ಮುಖ್ಯ ಕಾರಣಗಳಾಗಿವೆ. ಮಾರುಕಟ್ಟೆ ತಜ್ಞರ ನಿರೀಕ್ಷೆಗೆ ಅನುಗುಣವಾಗಿಯೇ ಆರ್‌ಬಿಐ ಈ ಕ್ರಮ ಕೈಗೊಂಡಿದೆ. ಈ ಕ್ರಮವು ಮುಂಬರುವ ತಿಂಗಳುಗಳಲ್ಲಿ ಗೃಹ ಸಾಲಗಳ ಬಡ್ಡಿದರಗಳನ್ನು ಸ್ಥಿರವಾಗಿಡಲು ಸಹಾಯ ಮಾಡಲಿದೆ.
ರೆಪೊ ದರಕ್ಕೆ ಸಂಬಂಧಿಸಿದ ಗೃಹ ಸಾಲಗಳನ್ನು ಹೊಂದಿರುವವರಿಗೆ, ಇಎಂಐ ಅಥವಾ ಸಾಲದ ದರಗಳಲ್ಲಿ ತಕ್ಷಣದ ಬದಲಾವಣೆ ಇರುವುದಿಲ್ಲ. ನೀತಿ ನಿಲುವು ಅಥವಾ ಲಿಕ್ವಿಡಿಟಿ ಪರಿಸ್ಥಿತಿಗಳಲ್ಲಿ ಯಾವುದೇ ಬದಲಾವಣೆ ಆಗದ ಹೊರತು ಬ್ಯಾಂಕುಗಳು ಸದ್ಯಕ್ಕೆ ಗೃಹ ಸಾಲದ ಬಡ್ಡಿದರಗಳನ್ನು ಪರಿಷ್ಕರಿಸುವ ಸಾಧ್ಯತೆ ಇಲ್ಲ.
ರೆಪೋ ದರದಲ್ಲೇಕೆ ಬದಲಾವಣೆಯಾಗಿಲ್ಲ?
- ಹಣದುಬ್ಬರ ನಿಯಂತ್ರಣದಲ್ಲಿದೆ
- ಆರ್ಥಿಕ ಬೆಳವಣಿಗೆ ಕಾಣುತ್ತಿದೆ.
- ಯುಎಸ್-ಭಾರತ ವ್ಯಾಪಾರ ಒಪ್ಪಂದ ಮತ್ತು ಇತರ ಅಂತರಾಷ್ಟ್ರೀಯ ನಿರ್ಣಯಗಳು
- ಕಳೆದ ಬಾರಿ ಕಡಿತ ಮಾಡಿದ ಹಿನ್ನೆಲೆ, ಈ ಬಾರಿ ಸ್ಥಿರವಾಗಿದೆ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications