ಪೆಟ್ರೋಲ್ ಬಂಕ್ ಗೆ ಹೋಗ್ಲಿ,ಶಾಪಿಂಗ್ ಮಾಲ್‌ಗೆ ಹೋಗ್ಲಿ,ಅಥವಾ ದಿನಸಿಯನ್ನು ತರುವುದಕ್ಕಾಗಿ ಹೋದರೆ ಜನರು ಕ್ರೆಡಿಟ್ ಕಾರ್ಡ್ ಗಳನ್ನು ಅತಿಹೆಚ್ಚಾಗಿ ಬಳಕೆ ಮಾಡುತ್ತಾರೆ. ನಿಮ್ಮ ಬಳಿ ಇರುವ ಕ್ರೆಡಿಟ್ ಕಾರ್ಡ್ ಲಾಭಕ್ಕಿಂತ ನಷ್ಟವನ್ನು ಹೆಚ್ಚು ಮಾಡುತ್ತದೆ. ಆದರೆ ನೀವು ಸ್ವಲ್ಪ ಬುದ್ದಿವಂತಿಕೆಯಿಂದ ಕ್ರೆಡಿಟ್ ಕಾರ್ಡ್ ಬಳಸಿದ್ರೆ ಅದ್ರಿಂದನ್ನೂ ಸಹ ಲಾಭ ಪಡೆಯಬಹುದು.ಇದರಿಂದ ನೀವು ನಿಮ್ಮ ಬಿಲ್‌ಗಳನ್ನು ಸಹ ಪಾವತಿಸುವುದು ಅದು ಹೇಗೆ? ಎಂಬ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ...
ಹೌದು, ಕ್ರೆಡಿಟ್ ಕಾರ್ಡ್‌ಗಳು ಇಂದಿನ ದಿನಗಳಲ್ಲಿ ಅನೇಕ ಭಾರತೀಯರ ಆರ್ಥಿಕ ವ್ಯವಹಾರದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ.ಕ್ರೆಡಿಟ್ ಕಾರ್ಡ್ ಸುಲಭವಾದ ಪಾವತಿ ವಿಧಾನದ ಮೂಲಕ ರಿವಾರ್ಡ್ ಪಾಯಿಂಟ್‌ಗಳಂತಹ ಆಕರ್ಷಕ ಪ್ರಯೋಜನಗಳನ್ನು ಪಡೆದುಕೊಳ್ಳಬೇಕಾಗುತ್ತದೆ.

ನೀವು ಕ್ರೆಡಿಟ್ ಕಾರ್ಡ್ ಮೂಲಕ ಖರ್ಚು ಮಾಡುವುದರಿಂದ ನಿಮಗೆ ಉತ್ತಮ ರೀತಿಯಲ್ಲಿ ರಿವಾರ್ಡ್ ಪಾಯಿಂಟ್‌ಗಳು ಸಹ ನಿಮ್ಮಗೆ ಸಿಗುತ್ತವೆ. ದಿನಸಿ ,ಯುಟಿಲಿಟಿ ಬಿಲ್‌ಗಳು, ಉಡುಪು ಖರೀದಿ, ರೆಸ್ಟೋರೆಂಟ್, ಸೂಪರ್‌ಮಾರ್ಕೆಟ್‌ಗಳು, ಟೆಲಿಕಾಂ ಮತ್ತು ಮನರಂಜನೆಯಂತಹ ಕಡಿಮೆ ಅಪಾಯದ ಬಳಕೆ ವಿಭಾಗಗಳಲ್ಲಿ ಖರ್ಚು ಮಾಡುತ್ತಿದ್ದರೆ. ನೀವು ಅವುಗಳ ರಿವಾರ್ಡ್ ಪಾಯಿಂಟ್‌ಗಳನ್ನು ಬಳಸಿಕೊಂಡು ವ್ಯಾಪಾರಿ ಮಳಿಗೆಗಳು ಮತ್ತು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ನೇರವಾಗಿ ಹಣಪಾವತಿಯನ್ನು ಮಾಡಬಹುದು?ಅದು ಹೇಗೆ ಎಂಬುವುದನ್ನು ಈ ಕೇಳಗಿನಂತೆ ತಿಳಿಸಲಾಗಿದೆ.
ಪ್ರಮುಖ ಕ್ರೆಡಿಟ್ ಕಾರ್ಡ್ ನೀಡುವ ಬ್ಯಾಂಕುಗಳು ತಮ್ಮದೇ ಆದ 'ಸ್ಮಾರ್ಟ್ ಬೈ' ಪೋರ್ಟಲ್‌ಗಳನ್ನು ಹೊಂದಿದೆ. ಅವುಗಳು ಇನ್‌ಸ್ಟಾ ವೋಚರ್‌ಗಳು ಮತ್ತು ರಿವಾರ್ಡ್ ಪಾಯಿಂಟ್‌ಗಳನ್ನು ರಿಡೀಮ್ ಮಾಡಲು ಇತರ ವಿಧಾನಗಳನ್ನು ನೀಡುತ್ತವೆ. ಆದರೆ ಇಂಡಸ್‌ಇಂಡ್ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಪ್ರಮುಖ ಬ್ಯಾಂಕುಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವ ರಿವಾರ್ಡ್-ಆಧಾರಿತ ಪಾವತಿ ಜಾಲವಾದ TWID, ವ್ಯಾಪಾರಿ ಔಟ್‌ಲೆಟ್‌ನಲ್ಲಿ ನೇರ ಪಾವತಿಗಳನ್ನು ಮಾಡಲು ನಿಮಗೆ ರಿವಾರ್ಡ್ ಪಾಯಿಂಟ್‌ಗಳನ್ನು ಬಳಸಲು ಅವಕಾಶವನ್ನು ನೀಡಿದೆ.
ನಿಮ್ಮ ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್‌ಗಳನ್ನು ಬಳಸಿಕೊಂಡು ನೇರ ವ್ಯಾಪಾರಿ ಪಾವತಿಗಳನ್ನು ಹೇಗೆ ಮಾಡುವುದು ಹೇಗೆ..?
ಪಾವತಿ ವಿಧಾನವು ಪಾಲುದಾರ ವ್ಯಾಪಾರಿಗಳ ಸೈಟ್‌ನಲ್ಲಿ ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್‌ಗಳನ್ನು ತೋರಿಸುತ್ತದೆ, ಅಲ್ಲಿ ನೀವು ಅವುಗಳನ್ನು ಖರೀದಿಗಳಿಗೆ ಸಹ ಬಳಸಬಹುದು. ನಿಮ್ಮ ಕ್ರೆಡಿಟ್ ಕಾರ್ಡ್‌ನಲ್ಲಿರುವ ನಿಮ್ಮ ರಿವಾರ್ಡ್ ಪಾಯಿಂಟ್‌ಗಳನ್ನು ಬಳಸಿಕೊಂಡು ನೀವು ಸಂಪೂರ್ಣ ಬಿಲ್ ಮೊತ್ತವನ್ನು ಸಹ ಪಾವತಿ ಮಾಡಬಹುದು.
ವ್ಯಾಪಾರಿ ಪೋರ್ಟಲ್‌ನಲ್ಲಿ ನೀವು ಖರೀದಿ ಮಾಡುವಾಗ, ಪಾವತಿ ಗೇಟ್‌ವೇಯಲ್ಲಿ "ರಿವಾರ್ಡ್‌ಗಳೊಂದಿಗೆ ಪಾವತಿಸಿ" ಎಂಬ ಆಯ್ಕೆಯನ್ನು ನೀವು ಆರಿಸಬೇಕಾಗುತ್ತದೆ. ನಂತರ, ನೀವು ಅದನ್ನು ಆಯ್ಕೆ ಮಾಡಿದರೆ, ನಿಮ್ಮನ್ನು ಪಾಯಿಂಟ್‌ಗಳನ್ನು ಆರಿಸಿ ಎಂಬ ವಿಭಾಗಕ್ಕೆ ತೋರಿಸುತ್ತದೆ. ಅಲ್ಲಿ, ನಿಮ್ಮ ಕ್ರೆಡಿಟ್ ಕಾರ್ಡ್‌ನ ರಿವಾರ್ಡ್ ಪಾಯಿಂಟ್‌ಗಳು ಸ್ವಯಂಚಾಲಿತವಾಗಿ ಪಾಪ್ ಅಪ್ ಆಗಿ ಪರಿವರ್ತಿಸಲಾಗುತ್ತದೆ. ನೀವು ಅವುಗಳನ್ನು ಬಿಲ್ ಪಾವತಿಸಲು ಬಳಸಬಹುದು, ಮತ್ತು ಹೋಲ್ಡ್ ಮಾಡಿದ ಪಾಯಿಂಟ್‌ಗಳನ್ನು ಬಳಸಲು ಸಹ ನೀವು ನಿರ್ಧರಿಸಬಹುದು.
ನೀವು ಯಾವುದೇ ರಿವಾರ್ಡ್‌ಗಳನ್ನು ಆಯ್ಕೆ ಮಾಡಬಹುದು ಮತ್ತು ವಹಿವಾಟನ್ನು ಪೂರ್ಣಗೊಳಿಸಲು "ಪಾವತಿಸಲು ಮುಂದುವರಿಯಿರಿ" ಎಂಬ ಬಟನ್ ಕ್ಲಿಕ್ ಮಾಡಿ. ಆದರೆ, ರಿವಾರ್ಡ್ ಪಾಯಿಂಟ್‌ಗಳನ್ನು ಖರೀದಿಗಳಿಗೆ ಬಳಸಲು, ನೀವು ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ನಿಮ್ಮ ಕ್ರೆಡಿಟ್ ಕಾರ್ಡ್‌ನಲ್ಲಿರುವ ನೋಂದಾಯಿತ ಮೊಬೈಲ್ ಸಂಖ್ಯೆಯು ಬ್ಯಾಂಕಿನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಗೂ,ಹಾಗೂ ವ್ಯಾಪಾರಿಯೊಂದಿಗೆ ಒಂದೇ ಇರಬೇಕಾಗಿದೆ
ರಿವಾರ್ಡ್ ಪಾಯಿಂಟ್‌ಗಳನ್ನು ರಿಡೀಮ್ ಮಾಡಲು ಪಿನ್ ಅಗತ್ಯವಿಲ್ಲ. ವ್ಯಾಪಾರಿ ನಿಮ್ಮ ಕ್ರೆಡಿಟ್ ಕಾರ್ಡ್ ಅನ್ನು ಪಿಒಎಸ್ (ಪಾಯಿಂಟ್ ಆಫ್ ಸೇಲ್) ಯಂತ್ರದಲ್ಲಿ ಸ್ವೈಪ್ ಮಾಡುತ್ತಾರೆ ಮತ್ತು ನೀವು ಸಾಮಾನ್ಯ ವಹಿವಾಟುಗಳಿಗೆ ಬಳಸುವಂತೆಯೇ ನಿಮ್ಮ ಖರೀದಿಗಳಿಗೆ ಪ್ರತಿಯಾಗಿ ನಿಮ್ಮ ರಿವಾರ್ಡ್ ಪಾಯಿಂಟ್‌ಗಳನ್ನು ರಿಡೀಮ್ ಮಾಡುತ್ತಾರೆ.
ನೀವು ಪಾವತಿಗಳಿಗೆ ಲಭ್ಯವಿರುವ ರಿವಾರ್ಡ್ ಪಾಯಿಂಟ್‌ಗಳು ನಿಮ್ಮ ಕ್ರೆಡಿಟ್ ಕಾರ್ಡ್‌ನೊಂದಿಗೆ ಕ್ಯಾಶ್‌ಬ್ಯಾಕ್ ಆಗಿ ನೀವು ಗಳಿಸುವ ಪಾಯಿಂಟ್‌ಗಳ ಸಂಖ್ಯೆಗೆ ಹೋಲುತ್ತವೆ. ಆದರೆ, ಕ್ರೆಡಿಟ್ ಕಾರ್ಡ್ ನೀಡುವ ಬ್ಯಾಂಕ್‌ಗಳು ಆಯ್ದ ವ್ಯಾಪಾರಿಗಳ ಗುಂಪುಗಳೊಂದಿಗೆ ಮಾತ್ರ ಒಪ್ಪಂದ ಮಾಡಿಕೊಂಡಿರುವುದರಿಂದ, ಔಟ್‌ಲೆಟ್‌ನಲ್ಲಿ ರಿವಾರ್ಡ್ ಪಾಯಿಂಟ್‌ಗಳನ್ನು ಪಾವತಿಯಾಗಿ ಸ್ವೀಕರಿಸಲಾಗುವುದೇ ಎಂದು ನೀವು ಮೊದಲೇ ಪರಿಶೀಲನೆ ಮಾಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ, ಖರೀದಿಯವರೆಗೆ ಮುಂಚಿತವಾಗಿ ವ್ಯಾಪಾರಿ ಆನ್ಲೈನ್ ಪಾವತಿ ಪ್ಲಾಟ್‌ಫಾರ್ಮ್‌ನಲ್ಲಿ ಇರಬೇಕಾಗುತ್ತದೆ.
ನೀವು ಪಾವತಿ ಆಯ್ಕೆಗಳನ್ನು ಒಪ್ಪಿಗೆಯಾದರೆ ಮಾತ್ರ ನಿಮ್ಮ ರಿವಾರ್ಡ್ ಪಾಯಿಂಟ್‌ಗಳನ್ನು ಬಳಸಿ ಪಾವತಿಸಬಹುದು. ನೀವು ಖರೀದಿಯನ್ನು ಮುಚ್ಚುವ ಮೊದಲು ಈ ವಿವರಗಳನ್ನು ಪರಿಶೀಲಿಸುವುದು ಉತ್ತಮ.
ಯಾತ್ರಾ, ಜೆಪ್ಟೊ, ಬುಕ್‌ಮೈಶೋ, ನೆಟ್‌ಮೆಡ್ಸ್, ಮೆಡಿಬಡ್ಡಿ ಮತ್ತು ಅಭಿಬಸ್‌ನಂತಹ ಇ-ಕಾಮರ್ಸ್ ಪೂರೈಕೆದಾರರು ರಿವಾರ್ಡ್ ಪಾಯಿಂಟ್‌ಗಳನ್ನು ಪಾವತಿಯಾಗಿ ಸ್ವೀಕರಿಸುತ್ತಾರೆ. ಗೋದ್ರೇಜ್ ನೇಚರ್ಸ್ ಬಾಸ್ಕೆಟ್, ಜ್ಯಾಕ್ ಮತ್ತು ಜೋನ್ಸ್, ಆರ್ಚೀಸ್, ಕ್ಲಾರ್ಕ್ಸ್ ಮತ್ತು ಗ್ಲೋಬಸ್ ಸ್ಟೋರ್‌ಗಳು ಆಯ್ದ ನಗರಗಳಲ್ಲಿನ ತಮ್ಮ ಮಳಿಗೆಗಳಲ್ಲಿ ಖರೀದಿಗಳಿಗೆ ರಿವಾರ್ಡ್ ಪಾಯಿಂಟ್‌ಗಳನ್ನು ಸ್ವೀಕರಿಸುವ ವ್ಯಾಪಾರಿಗಳಲ್ಲಿ ಸೇರಿವೆ.
ಪ್ರಸ್ತುತ, TWID 10 ಕ್ಕೂ ಹೆಚ್ಚು ವಿತರಕರೊಂದಿಗೆ ಪಾಲುದಾರಿಕೆ ಹೊಂದಿದೆ. ಜಿಯೋಮಾರ್ಟ್, ಮೈ ಜಿಯೋ, ವೊಡಾಫೋನ್ ಐಡಿಯಾ, ಮೆಕ್‌ಡೊನಾಲ್ಡ್ಸ್, ಲೈಸಿಯಸ್, ಇಕ್ಸಿಗೊ, ಮೇಕ್‌ಮೈಟ್ರಿಪ್ ಮತ್ತು ಮೈಂತ್ರಾ ಸೇರಿದಂತೆ 1 ಲಕ್ಷಕ್ಕೂ ಹೆಚ್ಚು ವ್ಯಾಪಾರಿಗಳು ರಿವಾರ್ಡ್ ಪಾಯಿಂಟ್‌ಗಳ ಆಧಾರಿತ ಪಾವತಿಗಳಿಗಾಗಿ TWID ನೊಂದಿಗೆ ಒಪ್ಪಂದಗಳನ್ನು ಹೊಂದಿದೆ.
ನೀವು ರಿವಾರ್ಡ್ ಪಾಯಿಂಟ್‌ಗಳ ಮೂಲಕ ಸಂಪೂರ್ಣ ಬಿಲ್ ಮೊತ್ತವನ್ನು ಪಾವತಿಸಬಹುದೇ?
ಇದು ಪ್ರತಿ ಬ್ಯಾಂಕ್‌ಗೂ ಬದಲಾವಣೆಯಾಗುತ್ತದೆ. ಉದಾಹರಣೆಗೆ,ಇಂಡಸ್‌ಇಂಡ್ ಬ್ಯಾಂಕ್ ಬಿಲ್ ಪಾವತಿ ಮೊತ್ತ ಶೇ25 ಅಥವಾ ನಿಮ್ಮ ರಿವಾರ್ಡ್ ಪಾಯಿಂಟ್‌ಗಳ ಬ್ಯಾಲೆನ್ಸ್‌ನ ಶೇ.25 ಯಾವುದು ಕಡಿಮೆಯೋ ಅದಕ್ಕೆ ಮಾತ್ರ ರಿವಾರ್ಡ್ ಪಾಯಿಂಟ್‌ಗಳ ಗರಿಷ್ಠ ರಿಡೆಂಪ್ಶನ್ ಮಾಡಬಹುದು ಎಂದು ಷರತ್ತು ವಿಧಿಸಿದೆ. ಬ್ಯಾಲೆನ್ಸ್ ಮೊತ್ತವನ್ನು ಬ್ಯಾಂಕಿನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಮಾತ್ರ ಪಾವತಿಸಬಹುದು .ಆದರೆ ಹಲವಾರು ಬ್ಯಾಂಕುಗಳು ರಿವಾರ್ಡ್ ಪಾಯಿಂಟ್‌ಗಳ ಮೂಲಕ ಪೂರ್ಣ ಪಾವತಿಗಳನ್ನು ಅನುಮತಿಸುತ್ತವೆ.
ವಹಿವಾಟುವಿನ ಪಾವತಿ ವಿಫಲವಾದರೆ ಏನಾಗುತ್ತದೆ?
ವಹಿವಾಟು ಪಾವತಿ ವಿಫಲವಾದ ಸಂದರ್ಭದಲ್ಲಿ, ವ್ಯಾಪಾರಿಯ ನಿಯಮಗಳು ಮತ್ತು ಷರತ್ತುಗಳು ಅನ್ವಯವಾಗುತ್ತವೆ. ಮರುಪಾವತಿಗೆ ಸಂಬಂಧಿಸಿದಂತೆ, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳ ಮೂಲಕ ಮಾಡಿದ ಪಾವತಿಗೆ ಮೊದಲು ಪರಿಹಾರವನ್ನು ಒದಗಿಸಿಕೊಂಡಲಾಗುತ್ತದೆ.
ಗ್ರಾಹಕರು ಅಗತ್ಯ ವಸ್ತಗಳಿಗಾಗಿ ಮತ್ತು ಜೀವನಶೈಲಿ ಖರೀದಿಗಳಿಗೆ ರಿವಾರ್ಡ್ ಪಾಯಿಂಟ್‌ಗಳನ್ನು ಸಕ್ರಿಯವಾಗಿ ಬಳಸುವುದರಿಂದ , ಇ-ಕಾಮರ್ಸ್, ವಾಣಿಜ್ಯ, ಪ್ರಯಾಣ ಮತ್ತು ಉಪಯುಕ್ತತೆಗಳಿಗೆ ರಿವಾರ್ಡ್ ಪಾಯಿಂಟ್ ಪಾವತಿಗಳಿಗೆ ಜನಪ್ರಿಯ ವರ್ಗಗಳಾಗಿ ಹೊರಹೊಮ್ಮಿವೆ ಎಂದೇ ಹೇಳಬಹುದು.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications