ಯುಎಸ್ ಡಾಲರ್ ಎದುರು ಭಾರತೀಯ ರೂಪಾಯಿ ದುರ್ಬಲಗೊಳ್ಳುತ್ತಿದೆ. ಒಂದು ವರ್ಷದ ಹಿಂದಿನ ರೂ 73.21 ರ ಮಟ್ಟದಿಂದ ಸುಮಾರು ರೂ 77.62 ಮಟ್ಟಕ್ಕೆ ಕುಸಿದಿದೆ. ಸುಮಾರು 6 ಪ್ರತಿಶತದಷ್ಟು ಕುಸಿತ ಕಂಡಿದೆ. ಕಳೆದ 1 ವರ್ಷದಲ್ಲಿ ರೂಪಾಯಿ ವಿರುದ್ಧ ಡಾಲರ್ ಶೇಕಡಾ 6 ರಷ್ಟು ಏರಿಕೆಯಾಗಿದೆ. ಜನವರಿಯಿಂದ ಯುಎಸ್ ಡಾಲರ್ ಎದುರು ರೂಪಾಯಿ ಶೇಕಡಾ 4 ರಷ್ಟು ದುರ್ಬಲಗೊಂಡಿದೆ. ಯುಎಸ್ ಫೆಡ್ ನಿರೀಕ್ಷಿಸಿದ್ದಕ್ಕಿಂತ ಅಧಿಕ ಬಡ್ಡಿದರ ಏರಿಸಿದರೆ ಇನ್ನಷ್ಟು ರೂಪಾಯಿ ದುರ್ಬಲವಾಗುವ ಸಾಧ್ಯತೆ ಇದೆ.
2017 ರಲ್ಲಿ ನೀವು ಒಂದು ಡಾಲರ್ ಅನ್ನು ಖರೀದಿಸಲು ರೂ 64 ಅನ್ನು ನೀಡಬೇಕಾಗುತ್ತದೆ. ಆದರೆ ಈಗ ನಿಮಗೆ ರೂ 77 ಅಗತ್ಯವಿದೆ. ಇದು ರೂಪಾಯಿ ದುರ್ಬಲವಾಗಿದೆ ಎಂಬುವುದಕ್ಕೆ ಸಾಕ್ಷಿಯಾಗಿದೆ. ಡಾಲರ್ ವಿರುದ್ಧ ವಾರ್ಷಿಕ ಆಧಾರದ ಮೇಲೆ ನೋಡುವಾಗ ರೂಪಾಯಿಯು ಸುಮಾರು 3.75 ಪ್ರತಿಶತದಷ್ಟು ಕುಸಿದಿದೆ. ನೀವು ಕಡಿಮೆ ಹಣದಲ್ಲಿ ಡಾಲರ್ ಅನ್ನು ಖರೀದಿ ಮಾಡಿದರೆ ರೂಪಾಯಿ ಬಲಗೊಂಡಿದೆ ಎಂದು ಅರ್ಥ.
ಕುಸಿಯುತ್ತಿರುವ ಅಥವಾ ದುರ್ಬಲಗೊಳ್ಳುತ್ತಿರುವ ರೂಪಾಯಿಯು ಆರ್ಥಿಕತೆಯ ಮೇಲೆ ಪರಿಣಾಮವನ್ನು ಬೀರುತ್ತದೆ. ಇದರಿಂದಾಗಿ ನಿಮ್ಮ ವೈಯಕ್ತಿಕ ಹಣಕಾಸಿನ ಮೇಲೆಯೂ ಪರಿಣಾಮ ಉಂಟಾಗಲಿದೆ. ರೂಪಾಯಿ ಕುಸಿದಾಗ ರಫ್ತುದಾರರು ಲಾಭ ಪಡೆಯುತ್ತಾರೆ. ಇದರಿಂದಾಗಿ ಭಾರತಕ್ಕೆ ಹೆಚ್ಚು ವೆಚ್ಚವಾಗಲಿದೆ. ವೈಯಕ್ತಿಕ ಹಣಕಾಸಿನ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂಬುವುದು ಇಲ್ಲಿದೆ ಮುಂದೆ ಓದಿ...
ಆಮದು ಮಾಡಿದ ವಸ್ತುಗಳು ದುಬಾರಿ
ಕೆಲವು ಸರಕುಗಳು ದುಬಾರಿಯಾಗುವುದರ ಮೇಲೆ ಪರೋಕ್ಷ ಪರಿಣಾಮವು ಹಣದುಬ್ಬರಕ್ಕೆ ಕಾರಣವಾಗುತ್ತದೆ. ರೂಪಾಯಿ ದುರ್ಬಲವಾದಾಗ, ಆಮದು ಮಾಡಿದ ಸರಕುಗಳು ದುಬಾರಿಯಾಗುತ್ತವೆ. ಭಾರತವು ಪ್ರಮುಖ ತೈಲ ಆಮದುದಾರನಾಗಿರುವುದರಿಂದ, ಇತರ ಸರಕುಗಳ ಮೇಲೂ ವ್ಯಾಪಕ ಪರಿಣಾಮ ಬೀರುತ್ತದೆ. ರೂಪಾಯಿ ಕುಸಿತದ ಕಾರಣದಿಂದಾಗಿ ಹಣದುಬ್ಬರವು ಹೆಚ್ಚಳವಾಗುತ್ತದೆ. ಇದರಿಂದಾಗಿ ದೇಶದಲ್ಲಿ ಬಹುತೇಕ ಎಲ್ಲಾ ಸರಕುಗಳ ಬೆಲೆಯು ಅಧಿಕವಾಗುತ್ತದೆ.
ಸಾಲದ ಬಡ್ಡಿದರ ಹೆಚ್ಚಳ
ರೂಪಾಯಿ ದುರ್ಬಲವಾದಾಗ ಆರ್‌ಬಿಐ ರೆಪೋ ದರವನ್ನು ಏರಿಕೆ ಮಾಡಬೇಕಾಗುತ್ತದೆ. ಇದರಿಂದಾಗಿ ಸಾಲಗಳ ಮೇಲಿನ ಇಎಂಐ ದರವು ಹೆಚ್ಚಾಗಲಿದೆ. ಆರ್‌ಬಿಐ ರೂಪಾಯಿ ದುರ್ಬಲವಾದಾಗ ಹಣದುಬ್ಬರ ಹತ್ತಿಕ್ಕಲು ರೆಪೋ ದರವನ್ನು ಏರಿಕೆ ಮಾಡುತ್ತದೆ. ರೆಪೋ ದರದಲ್ಲಿ ಹೆಚ್ಚಳವಾದಾಗ ಸಾಲದ ಬಡ್ಡಿದರವು ಹೆಚ್ಚಾಗುತ್ತದೆ. ಇದರಿಂದಾಗಿ ಇಎಂಐ ಅಧಿಕವಾಗಲಿದೆ.
ವಿದೇಶಿ ಶಿಕ್ಷಣ ದುಬಾರಿ
ನೀವು ವಿದೇಶಿ ಖಾತೆಯಲ್ಲಿ ರೂಪಾಯಿಯನ್ನು ಸಂಗ್ರಹ ಮಾಡಿದ್ದರೆ, ವಿದೇಶಿ ಶಿಕ್ಷಣಕ್ಕಾಗಿ ಡಾಲರ್‌ಗಳನ್ನು ಕಳುಹಿಸುವುದು ದುಬಾರಿಯಾಗುತ್ತದೆ. ವಿದೇಶಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ರೂಪಾಯಿ ಕುಸಿತದಿಂದ ನಿಮ್ಮನ್ನು ನೀವು ರಕ್ಷಣೆ ಮಾಡಲು ವಿದೇಶಿ ಬ್ಯಾಂಕ್ ಖಾತೆಯಲ್ಲಿ ಡಾಲರ್ ಅನ್ನು ಉಳಿಸಿಕೊಳ್ಳುವುದು ಉತ್ತಮ.
ಅಂತಾರಾಷ್ಟ್ರೀಯ ಪ್ರವಾಸ ದುಬಾರಿ
ನಿಮ್ಮ ಕುಟುಂಬವನ್ನು ಅಂತಾರಾಷ್ಟ್ರೀಯ ಪ್ರವಾಸಕ್ಕೆ ಕರೆದೊಯ್ಯುವುದು ಹೆಚ್ಚು ದುಬಾರಿಯಾಗುತ್ತದೆ. ಬ್ಯಾಂಕ್‌ಗಳು, ಕ್ರೆಡಿಟ್ ಕಾರ್ಡ್‌ಗಳು ಇತ್ಯಾದಿಗಳ ಮೂಲಕ ಡಾಲರ್‌ಗಳನ್ನು ಖರೀದಿಸಲು ನೀವು ರೂಪಾಯಿಯನ್ನು ನೀಡುವಾಗ ಡಾಲರ್ ಪ್ರಬಲವಾಗಿದ್ದರೆ ಹೆಚ್ಚು ರೂಪಾಯಿ ನೀಡಬೇಕಾಗುತ್ತದೆ.
ದುರ್ಬಲ ರೂಪಾಯಿ ವಿರುದ್ಧ ರಕ್ಷಣೆ ಹೇಗೆ?
ದೀರ್ಘಾವಧಿಯಲ್ಲಿ, ಡಾಲರ್ ವಿರುದ್ಧ ರೂಪಾಯಿ ದುರ್ಬಲವಾಗುತ್ತಿದೆ. ಮಕ್ಕಳ ವಿದೇಶಿ ಶಿಕ್ಷಣಕ್ಕಾಗಿ ನೀವು ಪ್ಲಾನ್ ಹೊಂದಿದ್ದರೆ ಯುಎಸ್ ಸ್ಟಾಕ್‌ಗಳನ್ನು ಖರೀದಿ ಮಾಡಿ ಅಥವಾ ವಿದೇಶಿ ಬ್ಯಾಂಕ್ ಖಾತೆಯಲ್ಲಿ ಡಾಲರ್‌ಗಳನ್ನು ಇರಿಸಿ. ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಎಲ್‌ಆರ್‌ಎಸ್ ಮೂಲಕ ವಿದೇಶಕ್ಕೆ ರವಾನೆಗಳನ್ನು ನಿಯಂತ್ರಿಸಲಾಗುತ್ತದೆ. ಹಣಕಾಸು ವರ್ಷದಲ್ಲಿ 2,50,000 ಯುಎಸ್ ಡಾಲರ್‌ವರೆಗೆ ಇರಿಸಿಕೊಳ್ಳಬಹುದು.


Click it and Unblock the Notifications