For Quick Alerts
ALLOW NOTIFICATIONS  
For Daily Alerts

ಎಂಸಿಎಲ್‌ಆರ್ ಏರಿಸಿದ ಎಸ್‌ಬಿಐ: ಇನ್ಮುಂದೆ ಇಎಂಐ ಹೆಚ್ಚಳ

|

ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ಮೇ 15 ರ ಭಾನುವಾರದಿಂದ ಅನ್ವಯವಾಗುವಂತೆ ಅದರ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್-ಬೇಸ್ಡ್ ಲೆಂಡಿಂಗ್ ದರವನ್ನು (ಎಂಸಿಎಲ್‌ಆರ್) ಹೆಚ್ಚಳ ಮಾಡಿದೆ. ಬ್ಯಾಂಕ್ ಎಂಸಿಎಲ್‌ಆರ್ ಅನ್ನು 10 ಬೇಸಿಸ್ ಪಾಯಿಂಟ್‌ಗಳಷ್ಟು ಏರಿಕೆ ಮಾಡಿದೆ. ಎರಡು ತಿಂಗಳಲ್ಲಿ ಎಸ್‌ಬಿಐ ಎರಡನೇ ಬಾರಿಗೆ ಸಾಲದ ದರವನ್ನು ಹೆಚ್ಚಳ ಮಾಡಿದೆ.

ಎಸ್‌ಬಿಐ ರಾತ್ರೋರಾತ್ರಿ ಒಂದು ತಿಂಗಳು ಮತ್ತು ಮೂರು ತಿಂಗಳ ಎಂಸಿಎಲ್‌ಆರ್‌ ಅನ್ನು ಏರಿಕೆ ಮಾಡಿದೆ. ಪ್ರಸ್ತುತ ಸಾಲದ ದರವು 6.85 ಪ್ರತಿಶತವಾಗಿದ್ದು, ಈ ಹಿಂದೆ 6.75 ಪ್ರತಿಶತದಷ್ಟಿತ್ತು. ಆರು ತಿಂಗಳ ಸಾಲದ ದರ ಶೇಕಡಾ 7.15 ರಷ್ಟಿದೆ, ಒಂದು ವರ್ಷದ ದರವು ಶೇಕಡಾ 7.20 ಆಗಿದೆ. ಇನ್ನು ಎರಡು ವರ್ಷದ ಸಾಲದ ದರವು 7.40 ರಷ್ಟು ಮತ್ತು ಮೂರು ವರ್ಷದ ಸಾಲದ ದರ ಶೇಕಡ 7.50 ರಷ್ಟಿದೆ.

ಎಸ್‌ಬಿಐ ಬಡ್ಡಿದರ ಪರಿಷ್ಕರಣೆ: ಇಲ್ಲಿದೆ ವಿವರಎಸ್‌ಬಿಐ ಬಡ್ಡಿದರ ಪರಿಷ್ಕರಣೆ: ಇಲ್ಲಿದೆ ವಿವರ

ಇತ್ತೀಚೆಗೆ ಆರ್‌ಬಿಐನ ವಿತ್ತೀಯ ನೀತಿ ಸಮಿತಿಯು (ಎಂಪಿಸಿ) ಬೆಂಚ್‌ಮಾರ್ಕ್ ಬಡ್ಡಿ ದರವನ್ನು (ರೆಪೋ ದರ) 40 ಬೇಸಿಸ್ ಪಾಯಿಂಟ್‌ಗಳಿಂದ ಶೇಕಡಾ 4.40 ಕ್ಕೆ ಹೆಚ್ಚಿಸಿದ ನಂತರ ಎಸ್‌ಬಿಐನಿಂದ ಎಂಸಿಎಲ್‌ಆರ್ ಹೆಚ್ಚಳ ಮಾಡಿದೆ.

ಎಂಸಿಎಲ್‌ಆರ್ ಏರಿಸಿದ ಎಸ್‌ಬಿಐ: ಇನ್ಮುಂದೆ ಇಎಂಐ ಹೆಚ್ಚಳ

ಇನ್ನು ಈ ಹಿಂದೆ ಏಪ್ರಿಲ್ 15 ರಿಂದ ಜಾರಿಗೆ ಬರುವಂತೆ ಸಾಲಗಳ ಮೇಲಿನ ಎಂಸಿಎಲ್ಆರ್ ಅನ್ನು ಹತ್ತು ಬೇಸಿಸ್ ಪಾಯಿಂಟ್‌ಗಳಿಂದ (ಬಿಪಿಎಸ್) ಹೆಚ್ಚಿಸಿದೆ ಎಂದು ಎಸ್‌ಬಿಐ ಏಪ್ರಿಲ್‌ನಲ್ಲಿ ಘೋಷಿಸಿತ್ತು.

ಎಫ್‌ಡಿಗಳ ಮೇಲಿನ ಬಡ್ಡಿದರ ಹೆಚ್ಚಿಸಿದ ಎಸ್‌ಬಿಐ: ನೂತನ ದರ ಪರಿಶೀಲಿಸಿಎಫ್‌ಡಿಗಳ ಮೇಲಿನ ಬಡ್ಡಿದರ ಹೆಚ್ಚಿಸಿದ ಎಸ್‌ಬಿಐ: ನೂತನ ದರ ಪರಿಶೀಲಿಸಿ

ಎಂಸಿಎಲ್‌ಆರ್ ಹೆಚ್ಚಳ ಗ್ರಾಹಕರ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

* ಎಂಸಿಎಲ್‌ಆರ್‌ ಎರಡು ಬೆಂಚ್‌ಮಾರ್ಕ್ ದರಗಳಲ್ಲಿ ಒಂದಾಗಿದೆ. ಬ್ಯಾಂಕ್‌ಗಳ ಸಾಲದ ಬಡ್ಡಿದರ ಇದಾಗಿದೆ.
* ಎಂಸಿಎಲ್‌ಆರ್ ಹೆಚ್ಚಳವಾದರೆ ಬಹುತೇಕ ಎಲ್ಲಾ ರೀತಿಯ ಸಾಲಗಳ ಮೇಲಿನ ಬಡ್ಡಿದರಗಳು ಹೆಚ್ಚಾಗುವ ನಿರೀಕ್ಷೆಯಿದೆ.
* ಎಂಸಿಎಲ್‌ಆರ್‌ ಹೆಚ್ಚಳ ಮನೆ, ವಾಹನ ಮತ್ತು ವೈಯಕ್ತಿಕ ಸಾಲಗಳ ಮೇಲೆ ಪರಿಣಾಮ ಬೀರಲಿದೆ. ಮುಂಬರುವ ತಿಂಗಳುಗಳಲ್ಲಿ ಅವುಗಳ ಸಮಾನ ಮಾಸಿಕ ಕಂತುಗಳು (ಇಎಂಐ) ಹೆಚ್ಚಳವಾಗಲಿದೆ.
* ಅಲ್ಲದೆ, ಕಾರ್ಪೊರೇಟ್‌ಗಳು ಹೆಚ್ಚಿನ ಬಡ್ಡಿ ದರದಲ್ಲಿ ಬ್ಯಾಂಕ್‌ಗಳಿಂದ ಸಾಲ ಪಡೆಯಬೇಕಾಗುತ್ತದೆ.

English summary

SBI Alert: Bank Hikes MCLR By 10 Basis Points; EMIs To Rise

SBI Customers ALERT! Bank Hikes MCLR By 10 Basis Points; EMIs To Rise, Details Here.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X