ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಹಲವಾರು ಸೇವೆಗಳನ್ನು ತಮ್ಮ ಯೋನೋ ಆಪ್ ಮೂಲಕ ನೀಡುತ್ತಾ ಬಂದಿದೆ. ಪ್ರಸ್ತುತವೂ ಬ್ಯಾಂಕ್ ಈ ಆಪ್ ಮೂಲಕ ಸೇವೆ ನೀಡುತ್ತಿದೆ. ಆದರೆ ಯೋನೋ ಆಪ್‌ಗೆ ಪ್ಯಾನ್ ಕಾರ್ಡ್ ಅನ್ನು ಅಪ್‌ಡೇಟ್ ಮಾಡದಿದ್ದರೆ, ನಿಮ್ಮ ಯೋನೋ ಖಾತೆಯನ್ನು ಬ್ಲಾಕ್ ಮಾಡಲಾಗುತ್ತದೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ಸುದ್ದಿಯ ಬಗ್ಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸ್ಪಷ್ಟಣೆಯನ್ನು ನೀಡಿದೆ. ಯೋನೋ ಆಪ್‌ನಲ್ಲಿ ಪ್ಯಾನ್ ಕಾರ್ಡ್ ಅನ್ನು ಅಪ್‌ಡೇಟ್ ಮಾಡದಿದ್ದರೆ, ನಿಮ್ಮ ಯೋನೋ ಆಪ್ ಅನ್ನು ಬ್ಲಾಕ್ ಮಾಡಲಾಗುತ್ತದೆ ಮತ್ತು ಕ್ಲೋಸ್ ಮಾಡಲಾಗುತ್ತದೆ ಎಂಬ ಸುದ್ದಿಯನ್ನು ಎಸ್‌ಬಿಐ ತಳ್ಳಿಹಾಕಿದೆ. ಇದು ಸುಳ್ಳು ಸುದ್ದಿ ಎಂದು ಎಸ್‌ಬಿಐ ಹೇಳಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸುತ್ತೋಲೆಯೊಂದು ಹರಿದಾಡುತ್ತಿದೆ. ಈ ಸುತ್ತೋಲೆಯಲ್ಲಿ ಪ್ಯಾನ್ ಲಿಂಕ್ ಮಾಡದಿದ್ದರೆ, ಖಾತೆ ಬ್ಲಾಕ್ ಆಗಲಿದೆ ಎಂದು ಸುತ್ತೋಲೆಯಲ್ಲಿ ಉಲ್ಲೇಖ ಮಾಡಲಾಗಿದೆ. ಆದರೆ ಪ್ರೆಸ್ ಇನ್‌ಫಾರ್ಮೆಷನ್ ಬ್ಯೂರೋ (ಪಿಎಐಬಿ) ಈ ಸುದ್ದಿಯನ್ನು ಪರಿಶೀಲನೆ ಮಾಡಿದ್ದು, ಸುದ್ದಿ ಸುಳ್ಳು ಎಂದು ಸ್ಪಷ್ಟಣೆ ನೀಡಿದೆ.

ಎಸ್‌ಬಿಐ ಹಲವಾರು ವರ್ಷಗಳಿಂದ ಸೇವೆಯನ್ನು ನೀಡುತ್ತಾ ಬಂದಿದೆ. ಬ್ಯಾಂಕಿಂಗ್ ಸೇವೆಯನ್ನು ಸರಳಗೊಳಿಸಿದೆ. ಕಳೆದ ಕೆಲವು ವರ್ಷಗಳಿಂದ ಎಸ್‌ಬಿಐನ ಯೋನೋ ಮೊಬೈಲ್ ಬ್ಯಾಂಕಿಂಗ್ ಆಪ್ ಬಳಕೆ ಹೆಚ್ಚಳವಾಗುತ್ತಿದೆ. ಈ ಆಪ್ ಮೂಲಕವೇ ಹಲವಾರು ಸೇವೆಗಳನ್ನು ಎಸ್‌ಬಿಐ ನೀಡುತ್ತಾ ಬಂದಿದೆ.
ಸೈಬರ್ ಕ್ರೈಮ್ ಬಗ್ಗೆ ಎಚ್ಚರಿಕೆ ನೀಡಿದ ಬ್ಯಾಂಕ್
ಇನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಸೈಬರ್ ಕ್ರೈಮ್ ಬಗ್ಗೆಯೂ ಮಾಹಿತಿ ನೀಡಿದೆ. ಹಾಗೆಯೇ ತನ್ನ ವೈಯಕ್ತಿಕ ಮಾಹಿತಿಯಾದ ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ, ಪ್ಯಾನ್ ಕಾರ್ಡ್ ಸಂಖ್ಯೆ, ಕ್ರೆಡಿಟ್ ಕಾರ್ಡ್/ಡೆಬಿಟ್ ಕಾರ್ಡ್ ಸಂಖ್ಯೆ, ಒಟಿಪಿಯನ್ನು ನೀಡದಿರಿ ಎಂದು ಕೂಡಾ ಬ್ಯಾಂಕ್ ತಿಳಿಸಿದೆ.
ಹಲವಾರು ಸಮಯದಿಂದ ಎಸ್‌ಬಿಐ ತನ್ನ ಗ್ರಾಹಕರಿಗೆ ಸೈಬರ್‌ಕ್ರೈಮ್ ಬಗ್ಗೆ ಮಾಹಿತಿಯನ್ನು ನೀಡುತ್ತಾ ಬಂದಿದೆ. ಹಾಗೆಯೇ ಮೆಸೇಜ್ ಮತ್ತು ಇಮೇಲ್ ಮೂಲಕ ಯಾವುದೇ ಲಿಂಕ್ ಬಂದರೂ ಅದನ್ನು ಕ್ಲಿಕ್ ಮಾಡಬಾರದು ಎಂದು ಕೂಡಾ ಬ್ಯಾಂಕ್ ಹೇಳಿದೆ. ಯಾವುದೇ ಅನಾಮಧೇಯ ವ್ಯಕ್ತಿಗೆ ಮಾಹಿತಿ ನೀಡಬೇಡಿ ಎಂದು ಬ್ಯಾಂಕ್ ಹೇಳಿದೆ. ಎಚ್ಚರವಾಗಿರುವುದರಿಂದ ಗ್ರಾಹಕರು ಸೈಬರ್ ಕ್ರೈಮ್‌ನ ಬಲೆಗೆ ಬೀಳುವುದನ್ನು ತಡೆಯಬಹುದು ಎಂದು ಕೂಡಾ ತಿಳಿಸಿದೆ.
ಗ್ರಾಹಕರು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಸುಳ್ಳು ಸುದ್ದಿಯನ್ನು ನಂಬಬಾರದು. ಯಾವುದೇ ಮಾಹಿತಿಯನ್ನು ಎಸ್‌ಬಿಐ ವೆಬ್‌ಸೈಟ್ ಅಥವಾ ಮೊಬೈಲ್ ಆಪ್ ಮೂಲಕ ಪಡೆಯಬೇಕು ಎಂದು ಎಸ್‌ಬಿಐ ಹೇಳಿದೆ.


Click it and Unblock the Notifications