SBI Fixed deposit: ಹಿರಿಯ ನಾಗರಿಕರಿಗಾಗಿ ಭದ್ರತೆ ಹೂಡಿಕೆ ಅವಕಾಶ..₹9 ಲಕ್ಷ ಹೂಡಿಕೆ, ₹13 ಲಕ್ಷಕ್ಕಿಂತ ಹೆಚ್ಚು ಲಾಭ..!

SBI fixed deposit: ಭಾರತದಲ್ಲಿ ಹಣ ಹೂಡಿಕೆ ಮಾಡಲು ಸಾಕಷ್ಟು ಆಯ್ಕೆಗಳಿವೆ. ಹೂಡಿಕೆ ಅವಕಾಶಗಳು ವ್ಯಾಪಕವಾಗಿರುವುದರಿಂದ, ಬೇಕಾದ ರೀತಿಯಲ್ಲಿ ನಾವು ಅದನ್ನು ಬಳಸಿಕೊಳ್ಳಬಹುದು. ಎಲ್ಲಾ ಹೂಡಿಕೆದಾರರು ಸಾಮಾನ್ಯವಾಗಿ ಆರ್ಥಿಕ ಭದ್ರತೆಯನ್ನೇ ನಿರೀಕ್ಷಿಸುತ್ತಾರೆ. ಖಾಸಗಿ ಕ್ಷೇತ್ರದಲ್ಲಿ ಸಾಕಷ್ಟು ಆಯ್ಕೆಗಳಿವೆ. ಆದರೂ ಹೆಚ್ಚು ವಿಶ್ವಾಸ ಮತ್ತು ಭದ್ರತೆ ನೀಡುತ್ತಿರುವುದು ಸರ್ಕಾರದ ಮಾಲಕತ್ವದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ. ಎಸ್‌ಬಿಐ ಬ್ಯಾಂಕ್ ಎಲ್ಲಾ ವಿಧದ ಹೂಡಿಕೆದಾರರಿಗೆ ನೂತನ ಎಫ್‌ಡಿ ಯೋಜನೆಗಳನ್ನು ನೀಡುತ್ತಿದೆ.

SBI FD: ಹಿರಿಯ ನಾಗರಿಕರಿಗಾಗಿ ಭದ್ರತೆ ಹೂಡಿಕೆ ಅವಕಾಶ..!

ಸಾಮಾನ್ಯವಾಗಿ ಎಲ್ಲಾ ವರ್ಗದವರಿಗೂ ಎಸ್‌ಬಿಐ ಉತ್ತಮ ರೀತಿಯ ಸೇವೆ ಒದಗಿಸುತ್ತಿದೆ. ಆದರೆ ಇದರಲ್ಲಿ ಪ್ರಮುಖವಾಗಿ ಹಿರಿಯ ನಾಗರಿಕರಿಗೆ ನೀಡಲಾಗುವ ವಿಶೇಷ ಬಡ್ಡಿದರಗಳು ಮತ್ತು ಸುರಕ್ಷಿತ ಮೆಚ್ಯೂರಿಟಿ ಮೊತ್ತವು ಗಮನ ಸೆಳೆಯುವಂತಹುದಾಗಿದೆ. ಸ್ವಲ್ಪ ಹಣ ಹೂಡಿಸಿದರೂ, ಕೆಲವೇ ವರ್ಷಗಳಲ್ಲಿ ಲಕ್ಷಾಂತರ ರೂಪಾಯಿಗಳ ಲಾಭವನ್ನು ಪಡೆಯಬಹುದಾಗಿದೆ.

ಹಿರಿಯ ನಾಗರಿಕರಿಗೆ ಹೆಚ್ಚು ಬಡ್ಡಿ:
ಹೌದು, ಎಸ್‌ಬಿಐ ತನ್ನ ನಿಯಮಿತವಾಗಿರುವ ಸ್ಥಿರ ಠೇವಣಿ (fixed deposit) ಬಡ್ಡಿ ದರಕ್ಕಿಂತ ಹೆಚ್ಚು ಪಟ್ಟಾಗಿ, ಹಿರಿಯ ನಾಗರಿಕರಿಗೆ ಒದಗಿಸಲು ಮುಂದಾಗಿದೆ. ಅಂದರೆ ಶೇಕಡ ಶೇಕಡಾ 0.50 ರಷ್ಟು ಹೆಚ್ಚುವರಿ ಬಡ್ಡಿಯನ್ನು ಹಿರಿಯ ನಾಗರಿಕರಿಗೆ ನೀಡುತ್ತದೆ. ಇದರಿಂದಾಗಿ ನಿವೃತ್ತರಾದವರು ಅಥವಾ ಉಳಿತಾಯದ ಮೇಲೆ ಬದುಕು ನಂಬಿರುವವರು, ಜೀವನೋಪಾಯಕ್ಕೆ ಉತ್ತಮ ಲಾಭ ಪಡೆಯಬಹುದು. ಎಫ್‌ಡಿ ಯೋಜನೆಗಳು ಬಡ್ಡಿದರದ ಮೇಲೆ ಹೆಚ್ಚು ಲಾಭ ನೀಡುವ ಸೌಲಭ್ಯವನ್ನು ಹೊಂದಿವೆ. ಆರ್ಥಿಕ ಭದ್ರತೆ ಬಯಸುವ ಹಿರಿಯರಿಗಾಗಿ ಈ ಯೋಜನೆಗಳು ನಿಖರವಾದ ಆಯ್ಕೆಯಾಗಿ ಇವೆ. ನಾವು ಉದಾಹರಣೆಯಾಗಿ ಎಷ್ಟು ವರ್ಷಗಳ ಯೋಜನೆ, ಎಷ್ಟು ಉತ್ತಮ ಎಂದು ಒಂದೊಂದನ್ನೇ ನೋಡುತ್ತಾ ಹೋಗೋಣ.

1. 1 ವರ್ಷದ ಎಫ್‌ಡಿ ಯೋಜನೆ:

ಎಸ್‌ಬಿಐ ಬ್ಯಾಂಕ್‌ನಲ್ಲಿ 1 ವರ್ಷದ ಅವಧಿಯ FD ಯೋಜನೆಯಲ್ಲಿ ಎಸ್‌ಬಿಐ ಶೇಕಡಾ 7.30% ಬಡ್ಡಿದರವನ್ನು ನೀಡುತ್ತಿದೆ. ಇದರ ಅಡಿಯಲ್ಲಿ, ₹3 ಲಕ್ಷ ಹೂಡಿಕೆ ಮಾಡಿದರೆ ಮೆಚ್ಯೂರಿಟಿ ವೇಳೆಗೆ ₹3,72,164 ಲಭ್ಯವಾಗುತ್ತದೆ. ₹6 ಲಕ್ಷ ಹೂಡಿಕೆ ಮಾಡಿದರೆ ₹7,44,328 ಹಾಗೂ ₹9 ಲಕ್ಷ ಹೂಡಿಕೆ ಮಾಡಿದರೆ ₹11,16,492 ಲಭ್ಯವಾಗುತ್ತದೆ.

2. 3 ವರ್ಷದ ಎಫ್‌ಡಿ ಯೋಜನೆ:

ಎಸ್‌ಬಿಐ ಬ್ಯಾಂಕ್‌ನಲ್ಲಿ 3 ವರ್ಷದ FD ಯೋಜನೆಯ ಬಡ್ಡಿದರ ಶೇಕಡಾ 7.25% ಆಗಿದೆ. ಹೀಗಾಗಿ ನೀವು ಇದರಲ್ಲಿ ₹3 ಲಕ್ಷ ಹೂಡಿಕೆ ಮಾಡಿದರೂ ₹3,72,164 ಲಾಭ ಸಿಗುತ್ತದೆ. ಇದೇ ಪದ್ದತಿಯಲ್ಲಿ ₹6 ಲಕ್ಷ ಹೂಡಿಕೆ ಮಾಡಿದರೆ ₹7,44,328 ಮತ್ತು ₹9 ಲಕ್ಷ ಹೂಡಿಕೆ ಮಾಡಿದರೆ ₹11,16,492 ಮೆಚ್ಯೂರಿಟಿ ಮೊತ್ತವಾಗಿ ಲಭ್ಯವಾಗುತ್ತದೆ.

3. 5 ವರ್ಷದ ಎಫ್‌ಡಿ ಯೋಜನೆ:

ಇನ್ನು ಇದೇ ರೀತಿಯಾಗಿ ಎಸ್‌ಬಿಐ ಬ್ಯಾಂಕ್‌ನಲ್ಲಿ 5 ವರ್ಷದ FD ಯೋಜನೆ ಶೇಕಡಾ 7.50% ಬಡ್ಡಿದರವನ್ನು ಒದಗಿಸುತ್ತದೆ. ಇದರ ಅಡಿಯಲ್ಲಿ ₹3 ಲಕ್ಷ ಹೂಡಿಕೆ ಮಾಡಿದರೆ ₹4,34,984, ₹6 ಲಕ್ಷ ಹೂಡಿಕೆ ಮಾಡಿದರೆ ₹8,69,969 ಮತ್ತು ₹9 ಲಕ್ಷ ಹೂಡಿಕೆ ಮಾಡಿದರೆ ₹13,04,953 ಗಳಿಸಬಹುದು.

ಇನ್ನು ಈ ಸ್ಥಿರ ಠೇವಣಿ ಯೋಜನೆಗಳು ಬಡ್ಡಿದರ ಹಾಗೂ ಅವಧಿಯನ್ನು ಹೊಂದಿಸಿ ಸುಸ್ಥಿರ ಆದಾಯ ಸೃಷ್ಟಿಸಲು ಉತ್ತಮ ಆಯ್ಕೆಯಾಗಿದೆ. ಬ್ಯಾಂಕ್‌ನಲ್ಲಿ ಹೂಡಿಕೆದಾರರಿಗೆ ನಾಮಿನೇಷನ್ ಹಾಗೂ ಭದ್ರತೆಗೆ ಹೆಚ್ಚು ಒತ್ತು ನೀಡಿರುವ ಕಾರಣ, ಇದು ಹೂಡಿಕೆದಾರರಿಗೆ ಹೆಚ್ಚು ನಂಬಿಕೆಯನ್ನು ಒದಗಿಸುತ್ತದೆ.

ಅಲ್ಲದೇ ಆರ್ಥಿಕ ಭದ್ರತೆ ಬೇಕೆಂದರೆ ಹಿರಿಯ ನಾಗರಿಕರಿಗೆ, ಸ್ಥಿರ ಠೇವಣಿಗಿಂತ (FD) ಮತ್ತೊಂದು ಉತ್ತಮವಾದ ಹೂಡಿಕೆ ಇಲ್ಲ. ಎಫ್‌ಡಿಯು ಅತಿಹೆಚ್ಚು ಸುರಕ್ಷಿತವಾಗಿರುತ್ತದೆ. ಎಸ್‌ಬಿಐ ನೀಡುವ ಹೆಚ್ಚಿನ ಬಡ್ಡಿದರ, ನಾಮನಿರ್ದೇಶನ ಸೌಲಭ್ಯ ಮತ್ತು ಆರ್ಥಿಕ ಭದ್ರತೆಯೊಂದಿಗೆ, ಇದು ನಿವೃತ್ತ ಜೀವನದ ಚಿಕ್ಕ ಉಳಿತಾಯಕ್ಕೂ ಶ್ರೇಷ್ಠ ಆಯ್ಕೆಯಾಗಿದೆ. ನೀವು ನಿಮ್ಮ ಹಣವನ್ನು ಸುರಕ್ಷಿತವಾಗಿ ಉಳಿಸಲು ಹಾಗೂ ಲಾಭ ಪಡೆಯಲು ಯೋಚಿಸುತ್ತಿದ್ದರೆ, ಈ ಎಫ್‌ಡಿ ಯೋಜನೆಗಳು ಖಂಡಿತವಾಗಿ ಗಮನಾರ್ಹವಾಗಿದೆ.

ಹೂಡಿಕೆದಾರರು ತಮ್ಮ ಕುಟುಂಬದ ಸದಸ್ಯರನ್ನು ನಾಮನಿರ್ದೇಶಕರಾಗಿ ಆಯ್ಕೆಮಾಡಬಹುದು. ಹೀಗಾಗಿ ಹೂಡಿಕೆದಾರರ ನಿಧನದ ನಂತರ ಹಣ ನೇರವಾಗಿ ಆ ವ್ಯಕ್ತಿಗೆ ದೊರೆಯುತ್ತದೆ. ಅವಶ್ಯಕತೆ ಇದ್ದರೆ ಎಫ್‌ಡಿಯನ್ನು ಮುಂಚಿತವಾಗಿ ಮುರಿದುಕೊಳ್ಳಬಹುದು. ಆದರೆ ಇದರ ಮೇಲಿನ ಬಡ್ಡಿದರ ಸ್ವಲ್ಪ ಕಡಿಮೆಯಾಗಬಹುದು. ಆದರೂ ಸಹ, ತುರ್ತು ಪರಿಸ್ಥಿತಿಗೆ ಇದು ಉಪಯೋಗವಾಗುತ್ತದೆ. ಎಸ್‌ಬಿಐನ ನೆಟ್ ಬ್ಯಾಂಕಿಂಗ್ ಅಥವಾ ಮೊಬೈಲ್ ಆಪ್ ಬಳಸಿ ನೀವು ಎಫ್‌ಡಿ ಖಾತೆ ಆರಂಭಿಸಬಹುದು. ಇದರಿಂದಾಗಿ ಬ್ಯಾಂಕ್‌ಗೆ ಹೋಗುವ ಅವಶ್ಯಕತೆ ಇಲ್ಲದೆ ಸುಲಭವಾಗಿ ಹೂಡಿಕೆ ಮಾಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+