For Quick Alerts
ALLOW NOTIFICATIONS  
For Daily Alerts

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಗ್ರಾಹಕರಿಗೆ ಐಟಿಆರ್ ಫೈಲಿಂಗ್ ಗೆ ನೆರವು

|

ದೇಶದ ಪ್ರಮುಖ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ತೆರಿಗೆ ಪಾವತಿದಾರರಿಗೆ ಸೇವೆಯೊಂದನ್ನು ಪರಿಚಯಿಸಲಾಗುತ್ತಿದೆ. ಆ ಸೇವೆಯನ್ನು ಬಳಸಿಕೊಂಡು, Yono ಅಪ್ಲಿಕೇಷನ್ ಮೂಲಕ ಐಟಿಆರ್ ಫೈಲ್ ಮಾಡಬಹುದು. ಆರ್ಥಿಕ ವರ್ಷ 2019- 20 ಅಥವಾ ಅಸೆಸ್ ಮೆಂಟ್ ವರ್ಷ 2020- 21ಕ್ಕೆ ಐಟಿಆರ್ ಫೈಲ್ ಮಾಡುವುದಕ್ಕೆ ಗಡುವು ಡಿಸೆಂಬರ್ 31, 2020ಕ್ಕೆ ಕೊನೆಯಾಗುವ ಹಿನ್ನೆಲೆಯಲ್ಲಿ ಈ ಸೇವೆ ನೀಡಲು ಮುಂದಾಗಿದೆ.

ಆದ್ದರಿಂದ ಎಸ್ ಬಿಐ ಗ್ರಾಹಕರಾಗಿದ್ದು, ಯಾರು ಈ ತನಕ ಐಟಿಆರ್ ಫೈಲ್ ಮಾಡಿಲ್ಲವೋ ಅಂಥವರು ಈ ಸೇವೆಯನ್ನು ಉಚಿತವಾಗಿ ಪಡೆಯಬಹುದು. "Yono ಅಪ್ಲಿಕೇಷನ್ ನ Tax2winನಲ್ಲಿ ನಿಮ್ಮ ಆದಾಯ ತೆರಿಗೆ ರಿಟರ್ನ್ ಉಚಿತವಾಗಿ ಫೈಲ್ ಮಾಡಿ," ಎಂದು ಎಸ್ ಬಿಐ ಟ್ವೀಟ್ ಮಾಡಿದೆ.

ಡಿಸೆಂಬರ್ 31ರೊಳಗೆ ಐಟಿಆರ್ ಫೈಲಿಂಗ್ ಮಾಡದಿದ್ದಲ್ಲಿ 10,000 ರು. ದಂಡಡಿಸೆಂಬರ್ 31ರೊಳಗೆ ಐಟಿಆರ್ ಫೈಲಿಂಗ್ ಮಾಡದಿದ್ದಲ್ಲಿ 10,000 ರು. ದಂಡ

ಒಂದು ವೇಳೆ ಚಾರ್ಟರ್ಡ್ ಅಕೌಂಟೆಂಟ್ ಗಳ ನೆರವು ಬೇಕಿದ್ದಲ್ಲಿ ಅದಕ್ಕೆ ಕನಿಷ್ಠ 199 ರುಪಾಯಿ ಪಾವತಿ ಮಾಡಬೇಕಾಗುತ್ತದೆ ಎಂದು ಹೇಳಲಾಗಿದೆ. ಎಸ್ ಬಿಐನ ಉಚಿತ ಸೇವೆ ಪಡೆಯುವುದಕ್ಕೆ ಗ್ರಾಹಕರು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು.

SBIದಿಂದ ಗ್ರಾಹಕರಿಗೆ ಐಟಿಆರ್ ಫೈಲಿಂಗ್ ಗೆ ನೆರವು

- ಮೊಬೈಲ್ ಫೋನ್ ನಲ್ಲಿ YONO ಅಪ್ಲಿಕೇಷನ್ ಗೆ ಲಾಗ್ ಇನ್ ಆಗಬೇಕು.

- "ಶಾಪ್ ಮತ್ತು ಆರ್ಡರ್"ಗೆ ಮುಂದುವರಿದು, 'ತೆರಿಗೆ ಮತ್ತು ಹೂಡಿಕೆ' ಮೇಲೆ ಕ್ಲಿಕ್ ಮಾಡಬೇಕು.

- Tax2Win ನಿಮ್ಮೆದುರು ಬಂದ ಮೇಲೆ ಇನ್ನಷ್ಟು ಮಾಹಿತಿ ಮೇಲೆ ಕ್ಲಿಕ್ ಮಾಡಬೇಕು. ಚಾರ್ಟರ್ಡ್ ಅಕೌಂಟೆಂಟ್ ನೆರವಿನೊಂದಿಗೆ ಟ್ಯಾಕ್ಸ್ ಫೈಲಿಂಗ್ ಮಾಡಬೇಕು ಎಂದಾದಲ್ಲಿ ಕನಿಷ್ಠ 199 ರುಪಾಯಿ ಪಾವತಿಸಬೇಕು.

- ಈ ವ್ಯವಸ್ಥೆಯ ಅನುಕೂಲ ಪಡೆಯಲು ಸವಾಲು ಎದುರಾದಲ್ಲಿ +919660-99-66-55 ಕರೆ ಮಾಡಬೇಕು ಅಥವಾ [email protected] ಇ ಮೇಲ್ ಮಾಡಬೇಕು.

ಇದಕ್ಕೆ ಪರ್ಯಾಯವಾಗಿ ಆದಾಯ ತೆರಿಗೆ ಇಲಾಖೆಯ ಇ- ಫೈಲಿಂಗ್ ಪೋರ್ಟಲ್ ಮೂಲಕ ಕೂಡ ಫೈಲ್ ಮಾಡಬಹುದು. ಇಲ್ಲಿ ಲಾಗಿನ್ ಆಗುವುದಕ್ಕೆ ಪ್ಯಾನ್, ಐಡಿ, ಪಾಸ್ ವರ್ಡ್, ಜನ್ಮ ದಿನಾಂಕ ಮತ್ತು ಇತರ ಮಾಹಿತಿ ನಮೂದಿಸಬೇಕು.

English summary

SBI Free Service To Customers For ITR Filing Through YONO App

India's leading bank providing free service to customers for ITR filing through it's YONO app.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X