SBI Gold Loan: ಎಸ್‌ಬಿಐ ಚಿನ್ನದ ಸಾಲದ ಬಡ್ಡಿದರ, ಅರ್ಜಿ ಸಲ್ಲಿಕೆ ಇತರೆ ಮಾಹಿತಿ

ನಮಗೆ ಯಾವುದೇ ಸಂದರ್ಭದಲ್ಲಿ ತುರ್ತು ಹಣ ಬೇಕಾದಾಗ ಇಕ್ಕಟ್ಟಿನಲ್ಲಿ ಸಿಲುಕಬಹುದು. ನಮಗೆ ಬೇಕಾದ ಸಮಯಕ್ಕೆ ಸರಿಯಾಗಿ ಹಣವನ್ನು ಹೊಂದಿಸಿಕೊಳ್ಳಲು ಸಾಧ್ಯವಾಗದೆ ಇರಬಹುದು. ಇಂತಹ ಸಂದರ್ಭದಲ್ಲಿ ನಮಗೆ ಬ್ಯಾಂಕುಗಳು ಸಾಲ ನೀಡುವ ಮೂಲಕ ಸಹಾಯ ಮಾಡುತ್ತದೆ. ಆದರೆ ಅದಕ್ಕೂ ಕೆಲವೊಂದು ಪ್ರಕ್ರಿಯೆಗಳು ಇದೆ. ಬಡ್ಡಿದರವೂ ಪಾವತಿಸಬೇಕಾಗುತ್ತದೆ. ಆದರೆ ನಾವು ಚಿನ್ನದ ಸಾಲವನ್ನು ಪಡೆಯುವಾಗ ಈ ಬಡ್ಡಿದರದ ಹೊರೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ.

ಭಾರತದಲ್ಲಿ ಚಿನ್ನ ಅಡವಿಟ್ಟು ಪಡೆಯುವ ಸಾಲವನ್ನು ಒಂದು ಸುರಕ್ಷತಾ ಸಾಲ ಎಂದೇ ಪರಿಗಣಿಸಲಾಗುತ್ತದೆ. ಈ ಚಿನ್ನದ ಸಾಲದಲ್ಲಿ ನಾವು ನಮ್ಮ ಚಿನ್ನದ ಆಭರಣ, ಕಾಯಿನ್‌ಗಳನ್ನು ಬ್ಯಾಂಕು ಅಥವಾ ಹಣಕಾಸು ಸಂಸ್ಥೆಗಳಲ್ಲಿ ಅಡವಿಟ್ಟು ಸಾಲವನ್ನು ಪಡೆಯಲು ಸಾಧ್ಯವಾಗುತ್ತದೆ. ಚಿನ್ನದ ಮೌಲ್ಯ ಆಧಾರದಲ್ಲಿ ಸಾಲದ ಮೊತ್ತವನ್ನು ಎಂದಿಗೂ ನಿರ್ಧಾರ ಮಾಡಲಾಗುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ/ಎಸ್‌ಬಿಐನಲ್ಲಿಯೂ ನಾವು ಚಿನ್ನದ ಸಾಲವನ್ನು ಪಡೆಯಬಹುದಾಗಿದೆ. ಈ ಬಗ್ಗೆ ಅಧಿಕ ಮಾಹಿತಿ ಇಲ್ಲಿದೆ.

 ಎಸ್‌ಬಿಐ ಚಿನ್ನದ ಸಾಲದ ಬಗ್ಗೆ ಪ್ರಮುಖ ಮಾಹಿತಿ

ಎಸ್‌ಬಿಐ ಚಿನ್ನದ ಸಾಲದ ಬಗ್ಗೆ ಪ್ರಮುಖ ಮಾಹಿತಿ

ವೈಶಿಷ್ಠ್ಯ: ಗರಿಷ್ಠವಾಗಿ 50 ಲಕ್ಷ ರೂಪಾಯಿ ಮತ್ತು ಕನಿಷ್ಠವಾಗಿ 20 ಸಾವಿರ ರೂಪಾಯಿ ಸಾಲ ನೀಡಲಾಗುತ್ತದೆ.
ಸುರಕ್ಷತೆ: ಗುಣಮಟ್ಟ ಮತ್ತು ಪ್ರಮಾಣದ ಆಧಾರದಲ್ಲಿ ಸಾಲವನ್ನು ನೀಡಲಾಗುತ್ತದೆ.
ಪ್ರಕ್ರಿಯಾ ಶುಲ್ಕ: ಇಲ್ಲ (31.03.2023 ಅಥವಾ ಮಾರ್ಚ್ 31, 2023ರವರೆಗೆ ಶುಲ್ಕವಿಲ್ಲ)
ಇತರೆ: ಗೋಲ್ಡ್ ಅಪ್ರೇಸರ್ ಶುಲ್ಕವನ್ನು ವಿಧಿಸಲಾಗುತ್ತದೆ.
ವಯೋಮಿತ: 18 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸು
ವೃತ್ತಿ: ಯಾವುದೇ ನಿಗದಿತ ಆದಾಯವನ್ನು ಹೊಂದಿರುವ ವ್ಯಕ್ತಿ

 ಮರುಪಾವತಿ ಆಯ್ಕೆ, ವಿಧಾನ

ಮರುಪಾವತಿ ಆಯ್ಕೆ, ವಿಧಾನ

ಚಿನ್ನದ ಸಾಲ (ಇಎಂಐ ಆಧಾರ): ಸಾಲದ ಮೊತ್ತ ಬಡ್ಡಿದರ ಜೊತೆಗೆ ಇಎಂಐ ರೂಪದಲ್ಲಿ ಪಾವತಿ ಮಾಡುವುದು.
ಲಿಕ್ವಿಡ್ ಗೋಲ್ಡ್ ಲೋನ್ (ಓವರ್‌ಡ್ರಾಫ್ಟ್): ವಹಿವಾಟು ಅವಕಾಶವಿರುವ ಓವರ್‌ಡ್ರಾಫ್ಟ್ ಖಾತೆ
ಮಾಸಿಕ ಬಡ್ಡಿದರವನ್ನು ವಿಧಿಸಲಾಗುತ್ತದೆ. ಚಿನ್ನ ಅಡವಿಡುವಾಗ ಚಿನ್ನದ ದರ ಎಷ್ಟಿರುತ್ತದೆಯೋ ಅದರ ಆಧಾರದಲ್ಲಿ ಸಾಲವನ್ನು ನೀಡಲಾಗುತ್ತದೆ.
3 ತಿಂಗಳ ಬುಲೆಟ್ ಮರುಪಾವತಿ: ಅವಧಿಗೂ ಮುನ್ನ ಬಡ್ಡಿದರ ಹಾಗೂ ಸಾಲದ ಮೊತ್ತ ಪಾವತಿ
6 ತಿಂಗಳ ಬುಲೆಟ್ ಮರುಪಾವತಿ: ಅವಧಿಗೂ ಮುನ್ನ ಬಡ್ಡಿದರ ಹಾಗೂ ಸಾಲದ ಮೊತ್ತ ಪಾವತಿ
12 ತಿಂಗಳ ಬುಲೆಟ್ ಮರುಪಾವತಿ: ಅವಧಿಗೂ ಮುನ್ನ ಬಡ್ಡಿದರ ಹಾಗೂ ಸಾಲದ ಮೊತ್ತ ಪಾವತಿ

 ಮರುಪಾವತಿ ಅವಧಿ, ಬೇಕಾದ ದಾಖಲೆ

ಮರುಪಾವತಿ ಅವಧಿ, ಬೇಕಾದ ದಾಖಲೆ

ಚಿನ್ನದ ಸಾಲ (ಇಎಂಐ ಆಧಾರ): 36 ತಿಂಗಳು
ಲಿಕ್ವಿಡ್ ಗೋಲ್ಡ್ ಲೋನ್ (ಓವರ್‌ಡ್ರಾಫ್ಟ್): 36 ತಿಂಗಳು
3 ತಿಂಗಳ ಬುಲೆಟ್ ಮರುಪಾವತಿ: 3 ತಿಂಗಳು
6 ತಿಂಗಳ ಬುಲೆಟ್ ಮರುಪಾವತಿ: 6 ತಿಂಗಳು
12 ತಿಂಗಳ ಬುಲೆಟ್ ಮರುಪಾವತಿ: 12 ತಿಂಗಳು

ಅರ್ಜಿ ಸಲ್ಲಿಸಲು ಅರ್ಜಿದಾರರ ಛಾಯಾಚಿತ್ರ, ಗುರುತು ಮತ್ತು ವಿಳಾಸೆ ಪುರಾವೆ, ಅಶಿಕ್ಷಿತರು ಸಾಲ ಪಡೆಯುವುದಾದರೆ ಸಾಕ್ಷಿ ಪತ್ರ ಬೇಕಾಗುತ್ತದೆ. ಬ್ಯಾಂಕ್ ಸಾಲವನ್ನು ನಿಮಗೆ ನೀಡುವಾಗ ಡಿಮ್ಯಾಂಡ್ ಪ್ರೊಮಿಷರಿ (ಡಿಪಿ) ನೋಟ್, ಚಿನ್ನದ ಆಭರಣದ ಪತ್ರ, ಅರೆಂಜ್‌ಮೆಂಟ್ ಲೆಟರ್ ಬೇಕಾಗುತ್ತದೆ.

 

 ಎಸ್‌ಬಿಐ ಚಿನ್ನದ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?

ಎಸ್‌ಬಿಐ ಚಿನ್ನದ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?

ಹಂತ 1: ಎಸ್‌ಬಿಐನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
ಹಂತ 2: Loan ಸೆಕ್ಷನ್ ಮೇಲೆ ಕ್ಲಿಕ್ ಮಾಡಿ
ಹಂತ 3: Loan ಸೆಕ್ಷನ್‌ನಲ್ಲಿ Gold Loan ಆಯ್ಕೆ ಮೇಲೆ ಕ್ಲಿಕ್ ಮಾಡಿ
ಹಂತ 4: ಹೊಸ ಪುಟ ತೆರೆಯಲಿದೆ, ಅಲ್ಲಿ SBI Personal Gold Loan ಆಯ್ಕೆಯನ್ನು ಕ್ಲಿಕ್ ಮಾಡಿ
ಹಂತ 5: Apply Now ಆಯ್ಕೆ ನಿಮಗೆ ಲಭ್ಯವಾಗಲಿದೆ
ಹಂತ 6: ಆ ಆಯ್ಕೆ ಮೇಲೆ ಕ್ಲಿಕ್ ಮಾಡಿ, ಮುಂದಿನ ಹಂತದಲ್ಲಿ ತಿಳಿಸಿರುವಂತೆ ಮಾಡಿ

 ಎಸ್‌ಬಿಐ ಚಿನ್ನದ ಸಾಲದ ಬಡ್ಡಿದರ

ಎಸ್‌ಬಿಐ ಚಿನ್ನದ ಸಾಲದ ಬಡ್ಡಿದರ

ಚಿನ್ನದ ಸಾಲ (ಇಎಂಐ ಆಧಾರ): 1 ವರ್ಷದ ಎಂಸಿಎಲ್‌ಆರ್ ಶೇಕಡ 8.50, ಹೆಚ್ಚುವರಿ ಶೇಕಡ 0.30, ಅಂತಿಮ ಬಡ್ಡಿದರ ಶೇಕಡ 8.80
ಲಿಕ್ವಿಡ್ ಗೋಲ್ಡ್ ಲೋನ್ (ಓವರ್‌ಡ್ರಾಫ್ಟ್): 1 ವರ್ಷದ ಎಂಸಿಎಲ್‌ಆರ್ ಶೇಕಡ 8.50, ಹೆಚ್ಚುವರಿ ಶೇಕಡ 0.30, ಅಂತಿಮ ಬಡ್ಡಿದರ ಶೇಕಡ 8.80
12 ತಿಂಗಳ ಬುಲೆಟ್ ಮರುಪಾವತಿ: 1 ವರ್ಷದ ಎಂಸಿಎಲ್‌ಆರ್ ಶೇಕಡ 8.50, ಹೆಚ್ಚುವರಿ ಶೇಕಡ 0.30, ಅಂತಿಮ ಬಡ್ಡಿದರ ಶೇಕಡ 8.80
3 ತಿಂಗಳ ಬುಲೆಟ್ ಮರುಪಾವತಿ: 3 ತಿಂಗಳ ಎಂಸಿಎಲ್‌ಆರ್ ಶೇಕಡ 8.10, ಹೆಚ್ಚುವರಿ ಶೇಕಡ 0.55, ಅಂತಿಮ ಬಡ್ಡಿದರ ಶೇಕಡ 8.65
6 ತಿಂಗಳ ಬುಲೆಟ್ ಮರುಪಾವತಿ: 6 ತಿಂಗಳ ಎಂಸಿಎಲ್‌ಆರ್ ಶೇಕಡ 8.40, ಹೆಚ್ಚುವರಿ ಶೇಕಡ 0.30, ಅಂತಿಮ ಬಡ್ಡಿದರ ಶೇಕಡ 8.70

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+