ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಫಿಕ್ಸಿಡ್ ಡೆಪಾಸಿಟ್ ಹೂಡಿಕೆದಾರರಿಗೆ ಸಿಹಿಸುದ್ದಿಯನ್ನು ನೀಡಿದೆ. ಎಸ್‌ಬಿಐ ಡಿಸೆಂಬರ್ 27 ರಿಂದ ಜಾರಿಗೆ ಬರುವಂತೆ ಎಫ್‌ಡಿ ಮೇಲಿ ಬಡ್ಡಿದರಗಳನ್ನು 50 ಬಿಪಿಎಸ್ ಏರಿಕೆ ಮಾಡಿದೆ.
ಎರಡು ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಎಫ್‌ಡಿ ಮೇಲೆ ಬಡ್ಡಿದರಗಳನ್ನು ಪರಿಷ್ಕರಣೆ ಮಾಡಲಾಗಿದೆ. ಎಸ್‌ಬಿಐ ವೆಬ್‌ಸೈಟ್‌ನ ಪ್ರಕಾರ, '46 ದಿನಗಳಿಂದ 179 ದಿನಗಳು', '211 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ' ಮತ್ತು '3 ವರ್ಷಗಳಿಂದ 5 ವರ್ಷಗಳಿಗಿಂತ ಕಡಿಮೆ ಅವಧಿಯ ಎಫ್‌ಡಿ ಮೇಲೆ 25 ಮೂಲಾಂಕ ಬಡ್ಡಿದರ ಹೆಚ್ಚಿಸಲಾಗಿದೆ.

'7 ದಿನಗಳಿಂದ 45 ದಿನಗಳು' ಮತ್ತು '180 ದಿನಗಳಿಂದ 210 ದಿನಗಳು' ಅವಧಿಯ ಎಫ್‌ಡಿ ದರಗಳನ್ನು 50 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಲಾಗಿದೆ. ಎಸ್‌ಬಿಐ ಏಳರಿಂದ 45 ದಿನಗಳಲ್ಲಿ ಮೆಚ್ಯೂರ್ ಆಗುವ ಎಫ್‌ಡಿ ಮೇಲಿನ ದರಗಳನ್ನು 50 ಬೇಸಿಸ್ ಪಾಯಿಂಟ್‌ಗಳಷ್ಟು (ಬಿಪಿಎಸ್) ಹೆಚ್ಚಿಸಿದೆ.
ಆದರೆ '1 ವರ್ಷದಿಂದ 2 ವರ್ಷಗಳಿಗಿಂತ ಕಡಿಮೆ', '2 ವರ್ಷದಿಂದ 3 ವರ್ಷಗಳಿಗಿಂತ ಕಡಿಮೆ' ಮತ್ತು '5 ವರ್ಷಗಳು ಮತ್ತು 10 ವರ್ಷಗಳವರೆಗೆ' ಅವಧಿಯ ಎಫ್‌ಡಿ ದರಗಳನ್ನು ಬದಲಾಗದೆ ಇರಿಸಲಾಗಿದೆ. ಎಫ್‌ಡಿ ಬಡ್ಡಿದರಗಳ ವಿವರವನ್ನು ಇಲ್ಲಿ ನೀಡಲಾಗಿದೆ. ಮುಂದೆ ಓದಿ...
ಎಸ್‌ಬಿಐ ನೂತನ ಬಡ್ಡಿದರ
7 ದಿನಗಳಿಂದ 45 ದಿನಗಳು: ಸಾಮಾನ್ಯ ಜನರಿಗೆ ಶೇಕಡ 3.5, ಹಿರಿಯ ನಾಗರಿಕರಿಗೆ ಶೇಕಡ 4.00 ಬಡ್ಡಿದರ
46 ದಿನಗಳಿಂದ 179 ದಿನಗಳು: ಸಾಮಾನ್ಯ ಜನರಿಗೆ ಶೇಕಡ 4.75, ಹಿರಿಯ ನಾಗರಿಕರಿಗೆ ಶೇಕಡ 5.25 ಬಡ್ಡಿದರ
180 ದಿನಗಳಿಂದ 210 ದಿನಗಳು: ಸಾಮಾನ್ಯ ಜನರಿಗೆ ಶೇಕಡ 5.75, ಹಿರಿಯ ನಾಗರಿಕರಿಗೆ ಶೇಕಡ 6.25 ಬಡ್ಡಿದರ
211 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ ಅವಧಿ: ಸಾಮಾನ್ಯ ಜನರಿಗೆ ಶೇಕಡ 6, ಹಿರಿಯ ನಾಗರಿಕರಿಗೆ ಶೇಕಡ 6.50 ಬಡ್ಡಿದರ
1 ವರ್ಷದಿಂದ 2 ವರ್ಷಕ್ಕಿಂತ ಕಡಿಮೆ ಅವಧಿ: ಸಾಮಾನ್ಯ ಜನರಿಗೆ ಶೇಕಡ 6.80, ಹಿರಿಯ ನಾಗರಿಕರಿಗೆ ಶೇಕಡ 7.30 ಬಡ್ಡಿದರ
2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ ಅವಧಿ: ಸಾಮಾನ್ಯ ಜನರಿಗೆ ಶೇಕಡ 7.00, ಹಿರಿಯ ನಾಗರಿಕರಿಗೆ ಶೇಕಡ 7.50 ಬಡ್ಡಿದರ
3 ವರ್ಷದಿಂದ 5 ವರ್ಷಕ್ಕಿಂತ ಕಡಿಮೆ ಅವಧಿ: ಸಾಮಾನ್ಯ ಜನರಿಗೆ ಶೇಕಡ 6.50, ಹಿರಿಯ ನಾಗರಿಕರಿಗೆ ಶೇಕಡ 7.00 ಬಡ್ಡಿದರ
5 ವರ್ಷದಿಂದ 10 ವರ್ಷಗಳವರೆಗೆ ಅವಧಿ: ಸಾಮಾನ್ಯ ಜನರಿಗೆ ಶೇಕಡ 6.50, ಹಿರಿಯ ನಾಗರಿಕರಿಗೆ ಶೇಕಡ 7.50 ಬಡ್ಡಿದರ
ಎಸ್‌ಬಿಐ ವೆಬ್‌ಸೈಟ್‌ನ ಪ್ರಕಾರ, "400 ದಿನಗಳ' (ಅಮೃತ್ ಕಲಶ) ನಿರ್ದಿಷ್ಟ ಅವಧಿಯ ಯೋಜನೆಯು ಶೇಕಡ 7.10 ರ ಬಡ್ಡಿದರದಲ್ಲಿ ಜಾರಿಗೆ ಬರುತ್ತದೆ. ಏಪ್ರಿಲ್ 12, 2023 ಜಾರಿಯಲ್ಲಿರುತ್ತದೆ. ಹಿರಿಯ ನಾಗರಿಕರು ಶೇಕಡ 7.60 ರ ಬಡ್ಡಿದರಕ್ಕೆ ಅರ್ಹರಾಗಿರುತ್ತಾರೆ. ಈ ಯೋಜನೆಯು ಮಾರ್ಚ್ 31, 2024 ರವರೆಗೆ ಮಾನ್ಯವಾಗಿರುತ್ತದೆ.
ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಹಣಕಾಸು ನೀತಿ ಪ್ರಸರಣಕ್ಕೆ ಬ್ಯಾಂಕ್‌ಗಳಿಗೆ ಅವಕಾಶವಿದೆ ಎಂದು ಹೇಳಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಈ ತಿಂಗಳ ಆರಂಭದಲ್ಲಿ ನಡೆದ ಹಿಂದಿನ ಹಣಕಾಸು ನೀತಿ ಸಭೆಯ ಬಳಿಕ ಆರ್‌ಬಿಐ ರೆಪೊ ದರವನ್ನು ಸತತ 5ನೇ ಬಾರಿಗೆ ಶೇ.6.5ಕ್ಕೆ ಯಥಾಸ್ಥಿತಿಯಲ್ಲಿಟ್ಟಿತ್ತು. ಅದಕ್ಕೂ ಮುನ್ನ ಆರ್‌ಬಿಐ ಎಂಪಿಸಿ ಮೇ 2022ರಿಂದ ಆರು ಬಾರಿ ಏರಿಕೆಯಾಗಿದೆ.


Click it and Unblock the Notifications