ಎಫ್‌ಡಿ ಬಡ್ಡಿದರ ಏರಿಸಿದ ಎಸ್‌ಬಿಐ, ನೂತನ ದರ ಪರಿಶೀಲಿಸಿ

ದೇಶದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಫಿಕ್ಸಿಡ್ ಡೆಪಾಸಿಟ್ (ಎಫ್‌ಡಿ) ಮೇಲಿನ ಬಡ್ಡಿದರವನ್ನು ಏರಿಕೆ ಮಾಡಿದೆ. ಈ ಬಗ್ಗೆ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಉಲ್ಲೇಖ ಮಾಡಲಾಗಿದ್ದು ಈ ಪರಿಷ್ಕೃತ ಬಡ್ಡಿದರವು ಇಂದಿನಿಂದ ಅಂದರೆ ಅಕ್ಟೋಬರ್ 15, 2022ರಿಂದ ಜಾರಿಗೆ ಬರುತ್ತದೆ.

ಎಸ್‌ಬಿಐ ಬ್ಯಾಂಕ್ 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಎಲ್ಲ ಅವಧಿಯ ಎಫ್‌ಡಿ ಮೇಲಿನ ಬಡ್ಡಿದರವು 20 ಮೂಲಾಂಕ ಏರಿಕೆ ಮಾಡಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸೆಪ್ಟೆಂಬರ್ 30ರಂದು ಸತತ ನಾಲ್ಕನೇ ಬಾರಿಗೆ ರೆಪೋ ದರವನ್ನು ಏರಿಕೆ ಮಾಡಿದೆ.

ಈ ಬೆನ್ನಲ್ಲೇ ಹಲವಾರು ಬ್ಯಾಂಕುಗಳು ಸಾಲದ ಬಡ್ಡಿದರ ಹಾಗೂ ಎಫ್‌ಡಿ ಬಡ್ಡಿದರವನ್ನು ಹೆಚ್ಚಳ ಮಾಡುತ್ತಿದೆ. ಈಗಾಗಲೇ ಆಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್‌ಗಳು ಎಫ್‌ಡಿ ಬಡ್ಡಿದರವನ್ನು ಪರಿಷ್ಕರಿಸಿದೆ. ಈಗ ಎಸ್‌ಬಿಐ ಎಫ್‌ಡಿ ಬಡ್ಡಿದರವನ್ನು ಹೆಚ್ಚಳ ಮಾಡಿದೆ. ನೂತನ ಬಡ್ಡಿದರ ವಿವರ ಇಲ್ಲಿದೆ ಮುಂದೆ ಓದಿ...

 ನೂತನ ಬಡ್ಡಿದರ ಎಷ್ಟಿದೆ?

ನೂತನ ಬಡ್ಡಿದರ ಎಷ್ಟಿದೆ?

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 7 ದಿನದಿಂದ 45 ದಿನದಲ್ಲಿ ಮೆಚ್ಯೂರಿಟಿ ಹೊಂದುವ ಎಫ್‌ಡಿ ಮೇಲಿನ ಬಡ್ಡಿದರವನ್ನು ಶೇಕಡ 2.90ರಿಂದ ಶೇಕಡ 3ಕ್ಕೆ ಏರಿಕೆ ಮಾಡಿದೆ. ಇದು ಸಾಮಾನ್ಯ ನಾಗರಿಕರ ಎಫ್‌ಡಿ ಮೇಲಿನ ಬಡ್ಡಿದರವಾಗಿದೆ. ಆದರೆ ಹಿರಿಯ ನಾಗರಿಕರಿಗೆ ಕೊಂಚ ಅಧಿಕವೇ ಬಡ್ಡಿದರವಿದೆ. 7 ದಿನದಿಂದ 45 ದಿನದಲ್ಲಿ ಮೆಚ್ಯೂರಿಟಿ ಹೊಂದುವ ಎಫ್‌ಡಿ ಮೇಲೆ ಹಿರಿಯ ನಾಗರಿಕರಿಗೆ ಶೇಕಡ 3.5ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ. ಈ ಹಿಂದೆ ಶೇಕಡ 3.4ರಷ್ಟು ಬಡ್ಡಿದರವನ್ನು ನೀಡಲಾಗುತ್ತಿತ್ತು. ಇನ್ನು 46 ದಿನದಿಂದ 179 ದಿನದಲ್ಲಿ ಮೆಚ್ಯೂರಿಟಿ ಹೊಂದುವ ಎಫ್‌ಡಿ ಮೇಲೆ ಶೇಕಡ 4ರಷ್ಟು ಬಡ್ಡಿದರ ನೀಡಲಾಗುತ್ತದೆ. ಹಿರಿಯ ನಾಗರಿಕರಿಗೆ ಶೇಕಡ 4.50ರಷ್ಟು ಬಡ್ಡಿದರ ನೀಡಲಾಗುತ್ತದೆ. 180 ದಿನದಿಂದ 210 ದಿನದಲ್ಲಿ ಮೆಚ್ಯೂರಿಟಿ ಹೊಂದುವ ಎಫ್‌ಡಿ ಮೇಲೆ ಸಾಮಾನ್ಯ ಜನರಿಗೆ ಶೇಕಡ 4.65ರಷ್ಟು ಬಡ್ಡಿದರ ಹಾಗೂ ಹಿರಿಯ ನಾಗರಿಕರಿಗೆ ಶೇಕಡ 5.15ರಷ್ಟು ಬಡ್ಡಿದರ ನೀಡಲಾಗುತ್ತದೆ.

 ಹಿರಿಯ ನಾಗರಿಕರಿಗೆ ಕೊಂಚ ಅಧಿಕ ಬಡ್ಡಿದರ

ಹಿರಿಯ ನಾಗರಿಕರಿಗೆ ಕೊಂಚ ಅಧಿಕ ಬಡ್ಡಿದರ

211 ದಿನದಿಂದ 1 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್‌ಡಿ ಮೇಲೆ ಸಾಮಾನ್ಯ ಜನರಿಗೆ ಶೇಕಡ 4.70 ಹಾಗೂ ಹಿರಿಯ ನಾಗರಿಕರಿಗೆ ಶೇಕಡ 5.20 ಬಡ್ಡಿದರವನ್ನು ಬ್ಯಾಂಕ್ ನೀಡುತ್ತದೆ. 1 ವರ್ಷದಿಂದ 2 ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಮೆಚ್ಯೂರಿಟಿ ಹೊಂದುವ ಫಿಕ್ಸಿಡ್ ಡೆಪಾಸಿಟ್ ಮೇಲೆ ಸಾಮಾನ್ಯ ನಾಗರಿಕರಿಗೆ ಶೇಕಡ 5.60ರಷ್ಟು ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 6.10ರಷ್ಟು ಬಡ್ಡಿದರವನ್ನು ಬ್ಯಾಂಕ್ ನೀಡುತ್ತದೆ. ಇನ್ನು 2 ವರ್ಷದಿಂದ ಮೂರು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಮೆಚ್ಯೂರಿಟಿ ಹೊಂದುವ ಎಫ್‌ಡಿ ಮೇಲೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇಕಡ 5.65ರಷ್ಟು ಬಡ್ಡಿದರವನ್ನು ನೀಡುತ್ತದೆ. ಈ ಹಿಂದೆ ಶೇಕಡ 5.50ರಷ್ಟು ಬಡ್ಡಿದರ ನೀಡುತ್ತಿತ್ತು. ಹಿರಿಯ ನಾಗರಿಕರಿಗೆ ಆದಲ್ಲಿ ಶೇಕಡ 6.50ರಷ್ಟು ಬಡ್ಡಿದರವನ್ನು ನೀಡುತ್ತದೆ. ಈ ಹಿಂದೆ ಶೇಕಡ 6ರಷ್ಟು ಬಡ್ಡಿದರವನ್ನು ನೀಡುತ್ತಿತ್ತು.

 1000 ದಿನದ ಎಫ್‌ಡಿಗೆ ಎಷ್ಟು ಬಡ್ಡಿದರ?

1000 ದಿನದ ಎಫ್‌ಡಿಗೆ ಎಷ್ಟು ಬಡ್ಡಿದರ?

ಇನ್ನು ಮೂರು ವರ್ಷದಿಂದ 5 ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಮೆಚ್ಯೂರಿಟಿ ಹೊಂದುವ ಎಫ್‌ಡಿ ಮೇಲೆ ಸಾಮಾನ್ಯ ನಾಗರಿಕರಿಗೆ ಈ ಹಿಂದಿನ ಬಡ್ಡಿದರ ಶೇಕಡ 5.60ರಿಂದ ಶೇಕಡ 5.80ಕ್ಕೆ ಹೆಚ್ಚಳ ಮಾಡಲಾಗಿದೆ. ಇನ್ನು ಹಿರಿಯ ನಾಗರಿಕರಿಗೆ ಇದೇ ಅವಧಿಯ ಎಫ್‌ಡಿ ಮೇಲೆ ಈ ಹಿಂದೆ ಶೇಕಡ 6.10ರಷ್ಟು ಬಡ್ಡಿದರ ನೀಡಲಾಗುತ್ತಿತ್ತು. ಆದರೆ ಈಗ ಶೇಕಡ 6.30ರಷ್ಟು ಬಡ್ಡಿದರ ನೀಡಲಾಗುತ್ತದೆ. ಇನ್ನು 5 ವರ್ಷದಿಂದ 10 ವರ್ಷದವರೆಗಿನ ಎಫ್‌ಡಿ ಮೇಲಿನ್ ಬಡ್ಡಿದರವನ್ನು ಬ್ಯಾಂಕ್ ಶೇಕಡ 5.65ರಿಂದ ಶೇಕಡ 5.85ಕ್ಕೆ ಏರಿಕೆ ಮಾಡಿದೆ. ಇನ್ನು ಹಿರಿಯ ನಾಗರಿಕರಿಗೆ ಇದೇ ಅವಧಿಯ ಎಫ್‌ಡಿ ಮೇಲಿನ ಬಡ್ಡಿದರವನ್ನು ಶೇಕಡ 6.45ರಿಂದ ಶೇಕಡ 6.65ಕ್ಕೆ ಹೆಚ್ಚಳ ಮಾಡಲಾಗಿದೆ. ಇದನ್ನು ಹೊರತುಪಡಿಸಿ ಬ್ಯಾಂಕ್ 1000 ದಿನದ ವಿಶೇಷ ಎಫ್‌ಡಿಯನ್ನು ಕೂಡಾ ಆರಂಭ ಮಾಡಿದೆ. ಈ ಎಫ್‌ಡಿಗೆ ಶೇಕಡ 6.10ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ. ಈ ನೂತನ ಎಫ್‌ಡಿ ಆಗಸ್ಟ್ 15ರಿಂದ ಆರಂಭವಾಗಿದೆ. ಈ ಎಫ್‌ಡಿಯ ಅವಧಿ 75 ದಿನಗಳು ಆಗಿದೆ. ಸ್ವಾತಂತ್ಯ್ರದ 75ನೇ ವರ್ಷದ ನೆನಪಿನಲ್ಲಿ ಈ ಎಫ್‌ಡಿಯನ್ನು ಬ್ಯಾಂಕ್ ಆರಂಭ ಮಾಡಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+