For Quick Alerts
ALLOW NOTIFICATIONS  
For Daily Alerts

ಎಫ್‌ಡಿಗಳ ಮೇಲಿನ ಬಡ್ಡಿದರ ಹೆಚ್ಚಿಸಿದ ಎಸ್‌ಬಿಐ: ನೂತನ ದರ ಪರಿಶೀಲಿಸಿ

|

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಹಲವಾರು ಫಿಕ್ಸಿಡ್ ಡೆಪಾಸಿಟ್‌ಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿದೆ. ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿನ ನವೀಕರಣದ ಪ್ರಕಾರ, ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ರೂ 2 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿದೆ.

ಹೊಸ ದರಗಳು ಮಂಗಳವಾರ, ಮೇ 10 ರಿಂದ ಜಾರಿಗೆ ಬರಲಿವೆ. ಆದರೆ, 7 ರಿಂದ 45 ದಿನಗಳವರೆಗೆ ಅಲ್ಪಾವಧಿಯ ಸ್ಥಿರ ಠೇವಣಿ ಮೇಲಿನ ಬಡ್ಡಿಯನ್ನು ಎಸ್‌ಬಿಐ ಹೆಚ್ಚಳ ಮಾಡಿಲ್ಲ. ಹೊಸ ದರಗಳ ಅಡಿಯಲ್ಲಿ, 46 ದಿನಗಳಿಂದ 149 ದಿನಗಳವರೆಗಿನ ಅವಧಿಯ ಎಫ್‌ಡಿಗಳು 50 ಬೇಸಿಸ್ ಪಾಯಿಂಟ್ ಹೆಚ್ಚಿನ ಆದಾಯವನ್ನು ನೀಡುತ್ತವೆ.

ಭಾನುವಾರವೂ ಎಸ್‌ಬಿಐನ ಎಲ್ಲಾ ಶಾಖೆಗಳು ಓಪನ್: ಇಲ್ಲಿದೆ ಕಾರಣಭಾನುವಾರವೂ ಎಸ್‌ಬಿಐನ ಎಲ್ಲಾ ಶಾಖೆಗಳು ಓಪನ್: ಇಲ್ಲಿದೆ ಕಾರಣ

ಒಂದು ವರ್ಷಕ್ಕಿಂತ ಹೆಚ್ಚು ಮತ್ತು 2 ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳಿಗೆ ಬಡ್ಡಿಯನ್ನು 40 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಲಾಗಿದೆ. 2 ರಿಂದ 3 ವರ್ಷಗಳ ನಡುವಿನ ಅವಧಿಯ ಠೇವಣಿಗಳಿಗೆ, ಬಡ್ಡಿದರವನ್ನು 65 ಮೂಲ ಅಂಕಗಳಷ್ಟು ಹೆಚ್ಚಿಸಲಾಗಿದೆ.

ಎಫ್‌ಡಿಗಳ ಮೇಲಿನ ಬಡ್ಡಿದರ ಹೆಚ್ಚಿಸಿದ ಎಸ್‌ಬಿಐ: ನೂತನ ದರ ಪರಿಶೀಲಿಸಿ

3 ರಿಂದ 5 ವರ್ಷಗಳವರೆಗೆ ಮತ್ತು 5 ರಿಂದ 10 ವರ್ಷಗಳವರೆಗೆ ಎಫ್‌ಡಿಯಲ್ಲಿ ಹೆಚ್ಚಳವು ಇದೆ. ಈ ಹಿಂದೆ 3 ರಿಂದ 5 ವರ್ಷಗಳವರೆಗೆ ಮತ್ತು 5 ರಿಂದ 10 ವರ್ಷಗಳವರೆಗೆ ಎಫ್‌ಡಿ ಮೇಲೆ ಹೂಡಿಕೆದಾರರು ಶೇಕಡ 3.6 ರಷ್ಟು ಬಡ್ಡಿದರವನ್ನು ಪಡೆಯುತ್ತಿದ್ದರು. ಆದರೆ ಇನ್ನು ಮುಂದೆ ಶೇಕಡ 4.5 ರ ಬಡ್ಡಿಯನ್ನು ಪಡೆಯುತ್ತಾರೆ.

ಕಳೆದ ವಾರ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೋ ದರವನ್ನು 40 ಬೇಸಿಸ್ ಪಾಯಿಂಟ್‌ಗಳಿಂದ ಶೇಕಡಾ 4.4 ಕ್ಕೆ ಏರಿಸುವುದಾಗಿ ಘೋಷಿಸಿದ ನಂತರ ಹಲವಾರು ಬ್ಯಾಂಕ್‌ಗಳು ದರ ಏರಿಕೆಯನ್ನು ಘೋಷಿಸುತ್ತಿವೆ.

ಇತ್ತೀಚಿನ ಎಸ್‌ಬಿಐ ಎಫ್‌ಡಿ ಬಡ್ಡಿದರ ಪರಿಶೀಲಿಸಿ

7 ರಿಂದ 45 ದಿನಗಳ ಅವಧಿ: 3 ಶೇಕಡ ಬಡ್ಡಿದರ
46 ರಿಂದ 179 ದಿನಗಳ ಅವಧಿ: 3.5 ಶೇಕಡ ಬಡ್ಡಿದರ
180 ದಿನಗಳಿಂದ 210 ದಿನಗಳ ಅವಧಿ: 3.5 ಶೇಕಡ ಬಡ್ಡಿದರ
211 ದಿನಗಳಿಂದ 1 ವರ್ಷದ ಅವಧಿ: 3.75 ಶೇಕಡ ಬಡ್ಡಿದರ
1 ವರ್ಷದಿಂದ 2 ವರ್ಷದ ಅವಧಿ: 4 ಶೇಕಡ ಬಡ್ಡಿದರ
2 ವರ್ಷದಿಂದ 3 ವರ್ಷದ ಅವಧಿ: 4.25 ಶೇಕಡ ಬಡ್ಡಿದರ
3 ವರ್ಷದಿಂದ 5 ವರ್ಷದ ಅವಧಿ: 4.5 ಶೇಕಡ ಬಡ್ಡಿದರ
5 ವರ್ಷದಿಂದ 10 ವರ್ಷದ ಅವಧಿ: 4.5 ಶೇಕಡ ಬಡ್ಡಿದರ

ಈ ಹಿಂದೆ ಎಸ್‌ಬಿಐ ಡಿಸೆಂಬರ್‌ 15, 2021 ರಂದು ಬಡ್ಡಿದರವನ್ನು ಏರಿಕೆ ಮಾಡಿದ್ದವು. ಸಾಮಾನ್ಯ ನಾಗರಿಕರಿಗೆ ಫಿಕ್ಸಿಡ್‌ ಡೆಪಾಸಿಟ್‌ ಮೇಲಿನ ಬಡ್ಡಿದರವನ್ನು ಹತ್ತು ಬೇಸಿಸ್ ಪಾಯಿಂಟ್ ಹೆಚ್ಚಳ ಮಾಡಿದ್ದವು. ಇನ್ನು ಆರ್‌ಬಿಐ ರೆಪೋ ದರ ಏರಿಕೆ ಮಾಡಿದ ಬಳಿಕ ಹಲವಾರು ಬ್ಯಾಂಕ್‌ಗಳು ಎಫ್‌ಡಿ ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡಿದೆ.

English summary

SBI Hikes Interest Rates on FDs, Check New Rates

SBI Hikes Interest Rates on FDs; Check New Rates From May 10 Here.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X