SBI: ಎಸ್‌ಬಿಐ ಸಾಲದ ಬಡ್ಡಿದರ 70 ಬಿಪಿಎಸ್ ಏರಿಕೆ, 1996ರ ಬಳಿಕ ನಡೆದ ಭಾರೀ ದರ ಹೆಚ್ಚಳ!

ದೇಶದ ಅತೀ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಬೇಂಚ್‌ಮಾರ್ಕ್ ಪ್ರೈಮ್ ಲೆಂಡಿಂಗ್ ರೇಟ್ (ಬಿಪಿಎಲ್‌ಆರ್ - ಸಾಲದ ದರ) ಹೆಚ್ಚಳ ಮಾಡಿದೆ. ಸಾಲದ ದರವನ್ನು 70 ಮೂಲಾಂಕ ಹೆಚ್ಚಿಸಲಾಗಿದ್ದು, ಬಿಪಿಎಲ್‌ಆರ್ ಶೇಕಡ 14.85ಕ್ಕೆ ತಲುಪಿದೆ. ಇನ್ನು ಮೂಲ ದರ ಅಥವಾ ಬೇಸ್‌ ರೇಟ್ ಅನ್ನು ಕೂಡಾ 70 ಬಿಪಿಎಸ್ ಏರಿಸಲಾಗಿದ್ದು ದರವು ಶೇಕಡ 10.10 ತಲುಪಿದೆ ಎಂದು ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಸಾಮಾನ್ಯವಾಗಿ ಬ್ಯಾಂಕ್ ತ್ರೈಮಾಸಿಕ ಆಧಾರದಲ್ಲಿ ಈ ದರವನ್ನು ಪರಿಷ್ಕರಣೆ ಮಾಡುತ್ತದೆ. ಬ್ಯಾಂಕ್‌ ವೆಬ್‌ಸೈಟ್‌ನಲ್ಲಿ ಉಲ್ಲೇಖ ಮಾಡಿರುವ ನೂತನ ದರವು ಸೆಪ್ಟೆಂಬರ್ 6, 1996ರ ಬಳಿಕದ ಅತೀ ಅಧಿಕ ಬಿಪಿಎಲ್‌ಆರ್ ಆಗಿದೆ. ಸೆಪ್ಟೆಂಬರ್ 6, 1996ರಲ್ಲಿ ಎಸ್‌ಬಿಐನ ಬಿಪಿಎಲ್‌ಆರ್ ಶೇಕಡ 15.50 ಆಗಿದ್ದು, ಮೂಲ ದರವು ಶೇಕಡ 10.10 ಆಗಿತ್ತು. ಅದಾದ ಬಳಿಕ ಆ ದರದ ಆಸುಪಾಸಿಗೆ ಬಿಪಿಎಲ್‌ಆರ್ ತಲುಪಿದ ದರ ಏರಿಕೆ ಇದಾಗಿದೆ.

 ಎಸ್‌ಬಿಐ ಸಾಲದ ಬಡ್ಡಿದರ ಏರಿಕೆ, 1996ರ ಬಳಿಕ ನಡೆದ ಭಾರೀ ದರ ಹೆಚ್ಚಳ!

ಇನ್ನು ಮಾರ್ಜಿನಲ್ ಕಾಸ್ಟ್ ಆಫ್ ಫಂಡ್-ಬೇಸ್ಡ್ ಲೆಂಡಿಂಗ್ ರೇಟ್ (ಎಂಸಿಎಲ್‌ಆರ್) ಅನ್ನು ಯಾವುದೇ ಬದಲಾವಣೆ ಮಾಡಲಾಗಿದೆ. ಕಳೆದ ತಿಂಗಳು ಎಂಸಿಎಲ್‌ಆರ್ ಅನ್ನು ಎಲ್ಲ ಅವಧಿಯ ಸಾಲಕ್ಕೆ 10 ಬಿಪಿಎಸ್ ಹೆಚ್ಚಿಸಲಾಗಿದೆ. ಓವರ್‌ನೈಟ್ ಎಂಸಿಎಲ್‌ಆರ್ ಪ್ರಸ್ತುತ ಶೇಕಡ 7.95, ಒಂದು ವರ್ಷದ ಎಂಸಿಎಲ್‌ಆರ್ ಶೇಕಡ 8.50, ಮೂರು ವರ್ಷದ ಎಂಸಿಎಲ್‌ಆರ್ ಪ್ರಸ್ತುತ ಶೇಕಡ 8.70 ಆಗಿದೆ.

ಸಾಲ ಪಡೆದವರ ಮೇಲೆ ಪ್ರಭಾವ ಬೀರಲಿದೆಯೇ?

ಬಿಪಿಎಲ್‌ಆರ್ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿರುವುದು ಸಾಮಾನ್ಯವಾಗಿ ಸಾಲ ಪಡೆದವರ ಮೇಲೆ ಹೆಚ್ಚಿನ ಪ್ರಭಾವ ಉಂಟು ಮಾಡಲಾರದು. ಸಾಲ ಪಡೆದ ಬಹುತೇಕರ ಸಾಲವು ಎಕ್ಸ್‌ಟರ್ನಲ್ ಬೇಂಚ್‌ಮಾರ್ಕ್ ಲಿಂಕ್ಡ್ ರೇಟ್ (ಇಬಿಎಲ್‌ಆರ್) ಅಥವಾ ಎಂಸಿಎಲ್‌ಆರ್‌ಗೆ ಲಿಂಕ್ ಆಗಿದೆ. ಬಿಪಿಎಲ್‌ಆರ್ ಲಿಂಕ್ಡ್ ಬಡ್ಡಿದರ ಆಧಾರದಲ್ಲಿ ಸಾಲ ಪಡೆದವರಿಗೆ ಮಾತ್ರ ಈ ಸಾಲದ ಬಡ್ಡಿದರ ಏರಿಕೆ ಪ್ರಭಾವ ಉಂಟು ಮಾಡಲಿದೆ.

2022ರ ನವೆಂಬರ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದ ಎಸ್‌ಬಿಐನ ಚೇರ್‌ಮನ್ ದಿನೇಶ್ ಖಾರಾ, "ಬ್ಯಾಂಕ್‌ನ ಒಟ್ಟು ಗೃಹ ಸಾಲದ ಪೈಕಿ ಶೇಕಡ 74ರಷ್ಟು ಗೃಹ ಸಾಲವು ಎಂಸಿಎಲ್‌ಆರ್ ಅಥವಾ ಇಬಿಎಲ್‌ಆರ್ ಮೇಲೆ ಆಧಾರಿತವಾಗಿದೆ ಅಥವಾ ಲಿಂಕ್ ಆಗಿದೆ ಎಂದು ತಿಳಿಸಿದ್ದಾರೆ. ಶೇಕಡ 21ರಷ್ಟು ಸಾಲವು ನಿಗದಿತ ಬಡ್ಡಿದರವನ್ನು ಹೊಂದಿದೆ. ಇನ್ನುಳಿದಂತೆ ಶೇಕಡ 4ರಷ್ಟು ಸಾಲವು ಬಿಪಿಎಲ್‌ಆರ್ ದರದ ಮೇಲೆ ಆಧಾರಿತವಾಗಿದೆ ಎಂದು ಕೂಡಾ ಎಸ್‌ಬಿಐನ ಚೇರ್‌ಮನ್ ದಿನೇಶ್ ಖಾರಾ ಮಾಹಿತಿ ನೀಡಿದ್ದಾರೆ.

ಗೃಹ ಸಾಲದ ಬಡ್ಡಿದರ ಇಳಿಕೆ

ಈ ಹಿಂದೆ ಜನವರಿ ಅಂತ್ಯದಲ್ಲಿ ದೇಶದ ಅತೀ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಥವಾ ಎಸ್‌ಬಿಐ ಹೊಸ ಬಡ್ಡಿದರವನ್ನು ಜಾರಿಗೆ ಮಾಡಿದೆ. ಗೃಹ ಸಾಲದ ಬಡ್ಡಿದರವನ್ನು ಸರಿಸುಮಾರು 30ರಿಂದ 40 ಮೂಲಾಂಕ ಇಳಿಸಿದೆ. ಈ ಆಫರ್ ಮಾರ್ಚ್ 31, 2023ರವರೆಗೆ ಇರಲಿದೆ. ಈ ಆಫರ್‌ನ ಅಡಿಯಲ್ಲಿ ಗೃಹ ಸಾಲವನ್ನು ಪಡೆಯುವವರಿಗೆ ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲ ಲಭ್ಯವಾಗಲಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್‌ಬಿಐ) ಈ ಹೊಸ ಆಫರ್‌ನ ಪ್ರಯೋಜನವನ್ನು ಪಡೆಯುವವರು ಎಸ್‌ಬಿಐನ ಗೃಹ ಸಾಲವನ್ನು ಅತೀ ಕಡಿಮೆ ಎಂದರೆ ಶೇಕಡ 8.60ರಷ್ಟು ಬಡ್ಡಿದರಲ್ಲಿ ಪಡೆಯಬಹುದು. ಆದರೆ ಎಸ್‌ಬಿಐನ ಗೃಹ ಸಾಲವು ಕ್ರೆಡಿಟ್ ಸ್ಕೋರ್ ಅಥವಾ ರೇಟಿಂಗ್ ಆಧಾರದಲ್ಲಿ ನಿರ್ಧರಿತವಾಗುತ್ತದೆ. ಎಸ್‌ಬಿಐ ಸ್ಟಾಂಡರ್ಡ್ ಹಾಗೂ ಟಾಪ್‌-ಅಪ್‌ ಸಾಲಕ್ಕೆ ಪ್ರೋಸೆಸಿಂಗ್ ಶುಲ್ಕವನ್ನು ಕೂಡಾ ಮನ್ನಾ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+