ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗೃಹ ಸಾಲದ (ಇಬಿಎಲ್‌ಆರ್) ಅನ್ನು 40 ಬೇಸಿಸ್ ಪಾಯಿಂಟ್‌ಗಳು ಹೆಚ್ಚಳ ಮಾಡಿದ್ದು ಅದು ಜೂನ್ ಒಂದರಿಂದ ಅನ್ವಯವಾಗಿದೆ. ಇಬಿಎಲ್‌ಆರ್ 7.05 ಶೇಕಡಾ + CRP ಇರಲಿದೆ. ಈ ನಡುವೆ ಆರ್‌ಎಲ್‌ಎಲ್‌ಆರ್ 6.65 ಪ್ರತಿಶತ ಪ್ಲಸ್ CRP ಆಗಿರುತ್ತದೆ.
ಎಸ್‌ಬಿಐನ ವೆಬ್‌ಸೈಟ್ ಪ್ರಕಾರ, ಜೂನ್ 1, 2022 ರಿಂದ ಈ ಪರಿಷ್ಕೃತ ಬಡ್ಡಿದರವು ಜಾರಿಗೆ ಬರಲಿದೆ. ಹಾಗೆಯೇ ಬಾಹ್ಯ ಬೆಂಚ್‌ಮಾರ್ಕ್ ಆಧಾರಿತ ಸಾಲ ದರ (ಇಬಿಎಲ್‌ಆರ್), ಬಾಹ್ಯ ಬೆಂಚ್‌ಮಾರ್ಕ್ ದರ (EBR) + ಕ್ರೆಡಿಟ್ ರಿಸ್ಕ್ ಪ್ರೀಮಿಯಂ (CRP) ಗೆ ಸಮನಾಗಿರುತ್ತದೆ. ಅಂದರೆ EBR ಹಾಗೂ CRP ಸೇರಿ ಇಬಿಎಲ್‌ಆರ್ ಆಗಲಿದೆ.
ಮನೆ ಮತ್ತು ವಾಹನ ಸಾಲ ಸೇರಿದಂತೆ ಯಾವುದೇ ರೀತಿಯ ಸಾಲವನ್ನು ನೀಡುವಾಗ ಬ್ಯಾಂಕ್‌ಗಳು EBLR ಮತ್ತು RLLR ಗಳ ಮೇಲೆ ಕ್ರೆಡಿಟ್ ರಿಸ್ಕ್ ಪ್ರೀಮಿಯಂ (CRP) ಅನ್ನು ಸೇರಿಸುತ್ತವೆ. ಇಬಿಎಲ್‌ಆರ್ ಲಿಂಕ್ಡ್ ಲೋನ್‌ಗಳ ಅಡಿಯಲ್ಲಿ ಕನಿಷ್ಠ ಮೂರು ತಿಂಗಳಿಗೊಮ್ಮೆ ಬಡ್ಡಿ ದರಗಳನ್ನು ಮೌಲ್ಯಮಾಪನ ಮಾಡಿ ಬದಲಾವಣೆ ಮಾಡಲಾಗುತ್ತದೆ. ಪರಿಣಾಮವಾಗಿ, ಬಾಹ್ಯ ಮಾನದಂಡದಲ್ಲಿನ ಯಾವುದೇ ಬದಲಾವಣೆಯು (ಉದಾಹರಣೆಗೆ, ರೆಪೊ ದರ ಏರಿಕೆ ಅಥವಾ ಇಳಿಕೆ) ನಿಮ್ಮ ಇಎಂಐ ಮೊತ್ತವು ವೇಗವಾಗಿ ಏರಿಳಿತ ಹೊಂದಲು ಕಾರಣವಾಗುತ್ತದೆ. ಹಾಗಾದರೆ ಬಡ್ಡಿದರ ಎಷ್ಟಾಗುತ್ತದೆ, ನೀವು ಎಷ್ಟು ಅಧಿಕ ಇಎಂಐ ಪಾವತಿ ಮಾಡಬೇಕಾಗುತ್ತದೆ ಎಂದು ತಿಳಿಯಲು ಮುಂದೆ ಓದಿ..
ಕ್ರೆಡಿಟ್ ಸ್ಕೋರ್ ಹೇಗೆ ಮುಖ್ಯ?
ಬ್ಯಾಂಕಿನ ಗೃಹ ಸಾಲದ ಮೇಲಿನ ಬಡ್ಡಿ ದರವು ಕ್ರೆಡಿಟ್ ಸ್ಕೋರ್ ಅನ್ನು ಅವಲಂಬಿಸಿ ಬದಲಾಗುತ್ತದೆ. ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆಯಿದ್ದರೆ, ವಿಧಿಸಲಾಗುವ ಬಡ್ಡಿ ದರವು ಹೆಚ್ಚಾಗಿರುತ್ತದೆ. ಆದ್ದರಿಂದ ಯಾವುದೇ ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು ಕ್ರೆಡಿಟ್ ಸ್ಕೋರ್ ಅನ್ನು ಪರಿಶೀಲನೆ ಮಾಡಿಕೊಳ್ಳಿ. ಎಸ್‌ಬಿಐನಲ್ಲಿ 750 ರಿಂದ 799 ರವರೆಗಿನ ಕ್ರೆಡಿಟ್ ಸ್ಕೋರ್‌ಗಳಿಗೆ ಬಡ್ಡಿದರವು ಶೇಕಡಾ 7.15ರಿಂದ ಆರಂಭವಾಗುತ್ತದೆ. 700 ರಿಂದ 749 ರ ಕ್ರೆಡಿಟ್ ಸ್ಕೋರ್‌ಗಳಿಗೆ ಶೇಕಡಾ 7.25 ರಷ್ಟಿರುತ್ತದೆ. 650-699 ಕ್ರೆಡಿಟ್ ಸ್ಕೋರ್‌ಗೆ 7.35 ಪ್ರತಿಶತ ಮತ್ತು ಕ್ರೆಡಿಟ್ ಸ್ಕೋರ್ 550-649 ಆಗಿದ್ದರೆ ಬಡ್ಡಿ ದರವು ಶೇಕಡಾ 7.25 ಆಗಲಿದೆ.
ರೂ 35 ಲಕ್ಷ ಸಾಲ, 800ಕ್ಕಿಂತ ಅಧಿಕ ಸಿಬಿಲ್ ಸ್ಕೋರ್?
ನೀವು ರೂ 35 ಲಕ್ಷದವರೆಗೆ ಗೃಹ ಸಾಲವನ್ನು ತೆಗೆದುಕೊಂಡರೆ, ನಿಮ್ಮ ಸಿಬಿಲ್ ಸ್ಕೋರ್ 800 ಅಥವಾ ಅದಕ್ಕಿಂತ ಹೆಚ್ಚಿನದಾಗಿದ್ದರೆ ಬಡ್ಡಿ ದರವು 7.05 ಪ್ರತಿಶತ ಇರುತ್ತದೆ. ಈ ವೇಳೆ ರಿಸ್ಕ್ ಪ್ರೀಮಿಯಂ ಇಲ್ಲ.
* ಸಾಲದ ಮೊತ್ತ: ರೂ 35 ಲಕ್ಷ
* ಸಾಲ ಪಾವತಿ ಅವಧಿ: 20 ವರ್ಷ
* ಈ ಹಿಂದಿನ ಬಡ್ಡಿದರ: 6.65%
* ಈ ಹಿಂದಿನ ಇಎಂಐ: 26,405 ರೂಪಾಯಿ
* ಹೊಸ ಬಡ್ಡಿದರ: 7.05%
* ಹೊಸ ಇಎಂಐ: 27,241 ರೂಪಾಯಿ
* ಇಎಂಐ ಹೆಚ್ಚಳ: 836 ರೂಪಾಯಿ
ರೂ 75 ಲಕ್ಷ ಸಾಲಕ್ಕೆ ಎಷ್ಟು ಬಡ್ಡಿದರ?
ನೀವು ರೂ 75 ಲಕ್ಷದವರೆಗಿನ ಗೃಹ ಸಾಲವನ್ನು ಪಡೆದುಕೊಂಡರೆ, ನಿಮ್ಮ CIBIL ಸ್ಕೋರ್ 800 ಮತ್ತು ಅದಕ್ಕಿಂತ ಹೆಚ್ಚಿನದಾಗಿದ್ದರೆ ನಿಮ್ಮ ಸಾಲದ ಮೇಲಿನ ಬಡ್ಡಿ ದರವು 7.05 ಶೇಕಡಾ ಆಗಿರುತ್ತದೆ. ಈ ವೇಳೆ ರಿಸ್ಕ್ ಪ್ರೀಮಿಯಂ ಇಲ್ಲ.
* ಸಾಲದ ಮೊತ್ತ: ರೂ 75 ಲಕ್ಷ
* ಸಾಲ ಪಾವತಿ ಅವಧಿ: 20 ವರ್ಷ
* ಈ ಹಿಂದಿನ ಬಡ್ಡಿದರ: 6.65%
* ಈ ಹಿಂದಿನ ಇಎಂಐ: 56,582 ರೂಪಾಯಿ
* ಹೊಸ ಬಡ್ಡಿದರ: 7.05%
* ಹೊಸ ಇಎಂಐ: 58,373 ರೂಪಾಯಿ
* ಇಎಂಐ ಹೆಚ್ಚಳ: 1791 ರೂಪಾಯಿ
ರೂ 35 ಲಕ್ಷ ಸಾಲ, ಸಿಬಿಲ್ ಸ್ಕೋರ್ 750-799?
ನೀವು ರೂ 35 ಲಕ್ಷದವರೆಗಿನ ಗೃಹ ಸಾಲವನ್ನು ಪಡೆದುಕೊಂಡರೆ, ನಿಮ್ಮ CIBIL ಸ್ಕೋರ್ 750-799 ರ ನಡುವೆ ಇದ್ದರೆ ನಿಮ್ಮ ಸಾಲದ ಮೇಲಿನ ಬಡ್ಡಿ ದರವು 7.15 ಶೇಕಡಾ ಆಗಿರುತ್ತದೆ. ರಿಸ್ಕ್ ಪ್ರೀಮಿಯಂ 10 ಬೇಸಿಸ್ ಪಾಯಿಂಟ್ ಆಗಲಿದೆ.
* ಸಾಲದ ಮೊತ್ತ: ರೂ 35 ಲಕ್ಷ
* ಸಾಲ ಪಾವತಿ ಅವಧಿ: 20 ವರ್ಷ
* ಈ ಹಿಂದಿನ ಬಡ್ಡಿದರ: 6.75%
* ಈ ಹಿಂದಿನ ಇಎಂಐ: 26,613 ರೂಪಾಯಿ
* ಹೊಸ ಬಡ್ಡಿದರ: 7.15%
* ಹೊಸ ಇಎಂಐ: 27,451 ರೂಪಾಯಿ
* ಇಎಂಐ ಹೆಚ್ಚಳ: 838 ರೂಪಾಯಿ
ರೂ. 75 ಲಕ್ಷ ಸಾಲ, ಬಿಲ್ ಸ್ಕೋರ್ 750-799?
ನೀವು ರೂ. 75 ಲಕ್ಷದವರೆಗಿನ ಗೃಹ ಸಾಲವನ್ನು ಪಡೆದುಕೊಂಡರೆ, ನಿಮ್ಮ CIBIL ಸ್ಕೋರ್ 750-799 ರ ನಡುವೆ ಇದ್ದರೆ ನಿಮ್ಮ ಸಾಲದ ಮೇಲಿನ ಬಡ್ಡಿ ದರವು 7.15 ಶೇಕಡಾ ಆಗಿರುತ್ತದೆ. ರಿಸ್ಕ್ ಪ್ರೀಮಿಯಂ 10 ಬೇಸಿಸ್ ಪಾಯಿಂಟ್ ಆಗಲಿದೆ.
* ಸಾಲದ ಮೊತ್ತ: ರೂ 75 ಲಕ್ಷ
* ಸಾಲ ಪಾವತಿ ಅವಧಿ: 20 ವರ್ಷ
* ಈ ಹಿಂದಿನ ಬಡ್ಡಿದರ: 6.75%
* ಈ ಹಿಂದಿನ ಇಎಂಐ: 57,027 ರೂಪಾಯಿ
* ಹೊಸ ಬಡ್ಡಿದರ: 7.15%
* ಹೊಸ ಇಎಂಐ: 58,825 ರೂಪಾಯಿ
* ಇಎಂಐ ಹೆಚ್ಚಳ: 1,798 ರೂಪಾಯಿ


Click it and Unblock the Notifications