ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಜೂನಿಯರ್ ಅಸೋಸಿಯೇಟ್ ಪೋಸ್ಟ್‌ಗಳ (ಕ್ಲರ್ಕ್) ನೇಮಕಾತಿಗಾಗಿ ಪಿಡಿಎಫ್ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ನವೆಂಬರ್ 17, 2023 ರಿಂದ ಡಿಸೆಂಬರ್ 7, 2023 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು sbi.co.in ನಲ್ಲಿ ಸಲ್ಲಿಸಬಹುದು.
ಎಸ್‌ಬಿಐನಲ್ಲಿ ಜೂನಿಯರ್ ಅಸೋಸಿಯೇಟ್ ಪೋಸ್ಟ್‌ಗಳಿಗಾಗಿ ಬ್ಯಾಂಕ್ ದೇಶಾದ್ಯಂತ ಒಟ್ಟು 8773 ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತದೆ. ಅಭ್ಯರ್ಥಿಗಳ ಆಯ್ಕೆಯನ್ನು ಆನ್‌ಲೈನ್ ಪರೀಕ್ಷೆಯ ಆಧಾರದ ಮೇಲೆ ಮಾಡಲಾಗುತ್ತದೆ. ಇದನ್ನು ಎರಡು ಹಂತಗಳಲ್ಲಿ ನಡೆಸಲಾಗುತ್ತದೆ. ಈ ಹುದ್ದೆಗಳ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ...

ಎಸ್‌ಬಿಐ ಕ್ಲರ್ಕ್ ಹುದ್ದೆ 2023
ಅಧಿಕೃತ ವೆಬ್‌ಸೈಟ್‌ನಲ್ಲಿ ಎಸ್‌ಬಿಐ ಕ್ಲರ್ಕ್ ಅಧಿಸೂಚನೆ 2023 ಪಿಡಿಎಫ್ ಲಭ್ಯವಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಎಸ್‌ಬಿಐ ಕ್ಲರ್ಕ್ 2023ರ ಅಧಿಸೂಚನೆಯ ಮುಖ್ಯಾಂಶವನ್ನು ಪರಿಶೀಲಿಸಬಹುದಾಗಿದೆ.
* ಬ್ಯಾಂಕ್ ಹೆಸರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ)
* ಹುದ್ದೆ: ಜೂನಿಯಲ್ ಅಸೋಸಿಯೇಟ್
* ಒಟ್ಟು ಹುದ್ದೆ: 8773
* ಅರ್ಜಿ ಸಲ್ಲಿಕೆ: ನವೆಂಬರ್ 17 ರಿಂದ ಡಿಸೆಂಬರ್ 7 ರವರೆಗೆ
* ಶಿಕ್ಷಣ ಅರ್ಹತೆ: ಪದವಿ
* ವಯೋಮಿತಿ: 20 ರಿಂದ 28 ವರ್ಷ
* ಅಧಿಕೃತ ವೆಬ್‌ಸೈಟ್: www.sbi.co.in
ರಾಜ್ಯವಾರು ಖಾಲಿ ಹುದ್ದೆಗಳ ಪಟ್ಟಿ
ಅಹಮದಾಬಾದ್, ಗುಜರಾತ್: 820
ಅಮರಾವತಿ, ಆಂಧ್ರಪ್ರದೇಶ: 50
ಬೆಂಗಳೂರು, ಕರ್ನಾಟಕ: 450
ಭೋಪಾಲ್, ಮಧ್ಯಪ್ರದೇಶ: 288
ಭೋಪಾಲ್, ಛತ್ತೀಸ್‌ಗಢ: 212
ಭುವನೇಶ್ವರ, ಒಡಿಶಾ: 72
ಚಂಡೀಗಢ/ನವದೆಹಲಿ, ಹರಿಯಾಣ: 267
ಚಂಡೀಗಢ, ಜಮ್ಮು ಮತ್ತು ಕಾಶ್ಮೀರ: 88
ಚಂಡೀಗಢ, ಹಿಮಾಚಲ ಪ್ರದೇಶ: 180
ಚಂಡೀಗಢ, ಲಡಾಖ್ ಯುಟಿ: 50
ಚಂಡೀಗಢ, ಪಂಜಾಬ್: 180
ಚೆನ್ನೈ, ತಮಿಳುನಾಡು: 171
ಚೆನ್ನೈ, ಪಾಂಡಿಚೇರಿ: 4
ಹೈದರಾಬಾದ್, ತೆಲಂಗಾಣ: 525
ಜೈಪುರ, ರಾಜಸ್ಥಾನ: 940
ಕೋಲ್ಕತ್ತಾ, ಪಶ್ಚಿಮ ಬಂಗಾಳ: 114
ಕೋಲ್ಕತ್ತಾ, ಅಂಡಮಾನ್ & ನಿಕೋಬರ್ ದ್ವೀಪಗಳು: 20
ಕೋಲ್ಕತ್ತಾ, ಸಿಕ್ಕಿಂ: 4
ಲಕ್ನೋ/ನವದೆಹಲಿ, ಉತ್ತರ ಪ್ರದೇಶ: 1781
ಮಹಾರಾಷ್ಟ್ರ/ಮುಂಬೈ ಮೆಟ್ರೋ, ಮಹಾರಾಷ್ಟ್ರ: 100
ನವ ದೆಹಲಿ, ದೆಹಲಿ: 437
ನವ ದೆಹಲಿ, ಉತ್ತರಾಖಂಡ: 215
ಈಶಾನ್ಯ, ಅರುಣಾಚಲ ಪ್ರದೇಶ: 69
ಈಶಾನ್ಯ, ಅಸ್ಸಾಂ: 430
ಈಶಾನ್ಯ, ಮಣಿಪುರ: 26
ಈಶಾನ್ಯ, ಮೇಘಾಲಯ: 77
ಈಶಾನ್ಯ, ಮಿಜೋರಾಂ: 17
ಈಶಾನ್ಯ, ನಾಗಾಲ್ಯಾಂಡ್: 40
ಈಶಾನ್ಯ, ತ್ರಿಪುರಾ: 26
ಪಾಟ್ನಾ, ಬಿಹಾರ: 415
ಪಾಟ್ನಾ, ಜಾರ್ಖಂಡ್: 165
ತಿರುವನಂತಪುರಂ, ಕೇರಳ: 47
ತಿರುವನಂತಪುರಂ, ಲಕ್ಷದ್ವೀಪ: 3
ಶಿಕ್ಷಣ ಅರ್ಹತೆ, ವಯೋಮಿತಿ
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಭಾಗದಲ್ಲಿ ಪದವಿಯನ್ನು ಪೂರ್ಣಗೊಳಿಸಿರಬೇಕು ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು. ಇಂಟಿಗ್ರೇಟೆಡ್ ಡ್ಯುಯಲ್ ಡಿಗ್ರಿ (IDD) ಪ್ರಮಾಣಪತ್ರವನ್ನು ಹೊಂದಿರುವ ಅಭ್ಯರ್ಥಿಗಳು 31.12.2023 ರಂದು ಅಥವಾ ಮೊದಲು ಐಐಡಿ ದಿನಾಂಕ ಖಚಿತಪಡಿಸಿಕೊಳ್ಳಬೇಕು.
ತಮ್ಮ ಪದವಿಯ ಅಂತಿಮ ವರ್ಷ/ಸೆಮಿಸ್ಟರ್‌ನಲ್ಲಿರುವವರು ತಾತ್ಕಾಲಿಕವಾಗಿ ಆಯ್ಕೆಯಾಗಿದ್ದರೆ, ಅವರು 31.12.2023 ರಂದು ಅಥವಾ ಅದಕ್ಕೂ ಮೊದಲು ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪುರಾವೆಯನ್ನು ಸಲ್ಲಿಸಬೇಕು ಎಂಬ ಷರತ್ತಿಗೆ ತಾತ್ಕಾಲಿಕವಾಗಿ ಅನ್ವಯಿಸಬಹುದು.
ಅಭ್ಯರ್ಥಿಯು 01.04.2023 ರಂತೆ 20 ವರ್ಷಕ್ಕಿಂತ ಕಡಿಮೆ ವಯಸ್ಸಿವರು ಆಗಿರಬಾರದು. ಹಾಗೆಯೇ 28 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರು ಕೂಡಾ ಆಗಿರಬಾರದು. ಅಭ್ಯರ್ಥಿಗಳು 02.04.1995 ಕ್ಕಿಂತ ಮೊದಲು ಮತ್ತು 01.04.2003 ಕ್ಕಿಂತ ನಂತರ (ಎರಡೂ ದಿನಗಳನ್ನು ಒಳಗೊಂಡಂತೆ) ಜನಿಸಿರಬೇಕು. ಆದರೆ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.


Click it and Unblock the Notifications