For Quick Alerts
ALLOW NOTIFICATIONS  
For Daily Alerts

ಸತತ 3ನೇ ಬಾರಿಗೆ SBI ಫಿಕ್ಸೆಡ್ ಡೆಪಾಸಿಟ್ ಮೇಲಿನ ಬಡ್ಡಿ ದರ ಇಳಿಕೆ

|

ದೇಶದ ಬಹುದೊಡ್ಡ ಬ್ಯಾಂಕ್ ಎಸ್‌ಬಿಐ ಸ್ಥಿರ ಠೇವಣಿ (ಫಿಕ್ಸೆಡ್ ಡೆಪಾಸಿಟ್) ಮೇಲಿನ ಬಡ್ಡಿ ದರಗಳನ್ನು ಮತ್ತೆ ಕಡಿತಗೊಳಿಸಿದೆ. ಫಿಕ್ಸೆಡ್ ಡೆಪಾಸಿಟ್ ಬಡ್ಡಿ ದರಗಳನ್ನು ಇಳಿಕೆ ಮಾಡಿದ್ದು ಮಾರ್ಚ್ 10ರಿಂದಲೇ ಹೊಸ ದರಗಳು ಅನ್ವಯವಾಗಲಿವೆ.

 

ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಕೆಲ ನಿರ್ದಿಷ್ಟ ಅವಧಿಯ ಠೇವಣಿಯ ಮೇಲಿನ ಬಡ್ಡಿ ದರಗಳನ್ನು ಜನವರಿಯಲ್ಲಿ 0.15 ಪರ್ಸೆಂಟ್ ಕಡಿಮೆ ಮಾಡಿತ್ತು. ನಂತರ ಫೆಬ್ರವರಿಯಲ್ಲೂ 0.50 ಪರ್ಸೆಂಟ್ ವರೆಗೂ ತಗ್ಗಿಸಿತ್ತು. ಇದೀಗ ಸತತ ಮೂರನೇ ತಿಂಗಳು ಕಡಿತಗೊಳಿಸಿದ್ದು , ಕಡಿಮೆ ಅವಧಿಯ ಫಿಕ್ಸೆಡ್ ಡೆಪಾಸಿಟ್‌ಗಳಿಗೆ ಅಂದರೆ 45 ದಿನಗಳವರೆಗಿನ ಡೆಪಾಸಿಟ್‌ಗೆ 0.50 ಬೇಸಿಸ್ ಪಾಯಿಂಟ್‌ಗಳನ್ನು ಕಡಿಗೊಳಿಸಿದೆ.

ಅರ್ಧ ಪರ್ಸೆಂಟ್ ಬಡ್ಡಿ ದರ ಕುಸಿತ

ಅರ್ಧ ಪರ್ಸೆಂಟ್ ಬಡ್ಡಿ ದರ ಕುಸಿತ

ಹೊಸ ಬಡ್ಡಿದರಗಳು ಅನ್ವಯದ ಬಳಿಕ 7 ರಿಂದ 45 ದಿನಗಳ ಡೆಪಾಸಿಟ್‌ಗಳಿಗೆ ಬಡ್ಡಿದರವು 4.5 ಪರ್ಸೆಂಟ್‌ನಿಂದ 4 ಪರ್ಸೆಂಟ್‌ಗೆ ಇಳಿಕೆಯಾಗಲಿದೆ. ಇನ್ನು ಒಂದು ವರ್ಷದ ಮೇಲಿನ ಫಿಕ್ಸೆಡ್ ಡೆಪಾಸಿಟ್‌ಗಳ ಮೇಲಿನ ಬಡ್ಡಿದರವು 0.10 ಪರ್ಸೆಂಟ್ ಕಡಿಮೆ ಆಗಲಿದೆ.

1 ವರ್ಷದೊಳಗಿನ ಎಫ್‌ಡಿ ಮೇಲಿನ ಹೊಸ ಬಡ್ಡಿ ದರಗಳು

1 ವರ್ಷದೊಳಗಿನ ಎಫ್‌ಡಿ ಮೇಲಿನ ಹೊಸ ಬಡ್ಡಿ ದರಗಳು

7 ರಿಂದ 45 ದಿನಗಳಿಗೆ 4.00% ( 0.50% ಇಳಿಕೆ)

46 ರಿಂದ 179 ದಿನಗಳವರೆಗೆ 5.00% ( ಯಾವುದೇ ಬದಲಾವಣೆ ಇಲ್ಲ) -

180 ದಿನಗಳಿಂದ 210 ದಿನಗಳವರೆಗೆ 5.50% (ಯಾವುದೇ ಬದಲಾವಣೆ ಇಲ್ಲ)

211 ದಿನಗಳಿಂದ 1 ವರ್ಷದವರೆಗೆ 5.50% (ಯಾವುದೇ ಬದಲಾವಣೆ ಇಲ್ಲ)

 

1 ರಿಂದ 10 ವರ್ಷದವರೆಗಿನ ಎಫ್‌ಡಿ ಮೇಲಿನ ಹೊಸ ಬಡ್ಡಿ ದರಗಳು
 

1 ರಿಂದ 10 ವರ್ಷದವರೆಗಿನ ಎಫ್‌ಡಿ ಮೇಲಿನ ಹೊಸ ಬಡ್ಡಿ ದರಗಳು

1 ವರ್ಷದಿಂದ 2 ವರ್ಷದವರೆಗೆ 5.9% (0.10% ಇಳಿಕೆ)

2 ವರ್ಷದಿಂದ 3 ವರ್ಷದೊಳಗೆ 5.9% (0.10% ಇಳಿಕೆ)

3 ವರ್ಷದಿಂದ 5 ವರ್ಷದೊಳಗೆ 5.9% (0.10% ಇಳಿಕೆ)

5 ವರ್ಷದಿಂದ 10 ವರ್ಷದೊಳಗೆ 5.9% (0.10% ಇಳಿಕೆ)

 

ಹಿರಿಯ ನಾಗರೀಕರಿಗೆ ನೀಡುವ ಹೊಸ ಬಡ್ಡಿ ದರಗಳು:

ಹಿರಿಯ ನಾಗರೀಕರಿಗೆ ನೀಡುವ ಹೊಸ ಬಡ್ಡಿ ದರಗಳು:

7 ರಿಂದ 45 ದಿನಗಳಿಗೆ 4.5% ( 0.50% ಇಳಿಕೆ)

46 ರಿಂದ 179 ದಿನಗಳವರೆಗೆ 5.50% (ಯಾವುದೇ ಬದಲಾವಣೆ ಇಲ್ಲ )

180 ದಿನಗಳಿಂದ 210 ದಿನಗಳವರೆಗೆ 6.00% (ಯಾವುದೇ ಬದಲಾವಣೆ ಇಲ್ಲ )

211 ದಿನಗಳಿಂದ 1 ವರ್ಷದೊಳಗೆ 6.00% (ಯಾವುದೇ ಬದಲಾವಣೆ ಇಲ್ಲ )

1 ವರ್ಷದಿಂದ 2 ವರ್ಷದವರೆಗೆ 6.40% (0.10% ಇಳಿಕೆ)

2 ವರ್ಷದಿಂದ 3 ವರ್ಷದೊಳಗೆ 6.40% (0.10% ಇಳಿಕೆ)

3 ವರ್ಷದಿಂದ 5 ವರ್ಷದೊಳಗೆ 6.40% (0.10% ಇಳಿಕೆ)

5 ವರ್ಷದಿಂದ 10 ವರ್ಷದೊಳಗೆ 6.40% (0.10% ಇಳಿಕೆ)

 

English summary

SBI Reduced FD Interest Rates Again

For the 3rd time in less than a 3 month, the State Bank of India (SBI) has cut interest rates on fixed deposits (FD) for certain tenors.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X