ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಲೋನ್ ಗಳಿಗೆ ಆಫರ್ ಗಳ ಸುರಿಮಳೆ

ದೇಶದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (SBI) Yono ಅಪ್ಲಿಕೇಷನ್ ಮೂಲಕ ಸಾಲಕ್ಕೆ ಅರ್ಜಿ ಸಲ್ಲಿಸುವವರಿಗೆ ಪ್ರೊಸೆಸಿಂಗ್ ಶುಲ್ಕದಲ್ಲಿ ಸಂಪೂರ್ಣ ಮನ್ನಾ ಮಾಡಲಾಗುವುದು ಎಂದು ಘೋಷಣೆ ಮಾಡಲಾಗಿದೆ. ಹಬ್ಬದ ಸೀಸನ್ ಪ್ರಯುಕ್ತ ಹಲವು ಆಫರ್ ಗಳನ್ನು ಸಹ ನೀಡಲಿದೆ.

"ಮಂಜೂರಾದ ಪ್ರಾಜೆಕ್ಟ್ ಗಳಲ್ಲಿ ಮನೆ ಖರೀದಿ ಮಾಡುವವರಿಗೆ ಪ್ರೊಸೆಸಿಂಗ್ ಶುಲ್ಕ ಸಂಪೂರ್ಣ ಮನ್ನಾ ಮಾಡಲಾಗುವುದು. ಇನ್ನು ಕ್ರೆಡಿಟ್ ಸ್ಕೋರ್ ಆಧಾರದಲ್ಲಿ ಗ್ರಾಹಕರಿಗೆ ಸಾಲದ ಮೊತ್ತದ ಮೇಲೆ 10 ಬಿಪಿಎಸ್ ತನಕ ಬಡ್ಡಿ ದರದಲ್ಲಿ ವಿನಾಯಿತಿ ನೀಡಲಾಗುವುದು. ಇನ್ನು YONO ಆಪ್ ಮೂಲಕ ಹೋಮ್ ಲೋನ್ ಗೆ ಅರ್ಜಿ ಹಾಕಿಕೊಂಡಲ್ಲಿ ಹೆಚ್ಚುವರಿಯಾಗಿ 5 ಬಿಪಿಎಸ್ ವಿನಾಯಿತಿ ನೀಡಲಾಗುವುದು," ಎಂದು ಪತ್ರಿಕಾ ಹೇಳಿಕೆಯಲ್ಲಿ ಬ್ಯಾಂಕ್ ನಿಂದ ತಿಳಿಸಲಾಗಿದೆ.

ಇನ್ನು ಕಾರು ಲೋನ್ ಪಡೆಯುವರಿಗಾಗಿ ಬ್ಯಾಂಕ್ ನಿಂದ ರಿಯಾಯಿತಿ ದೊರೆಯುತ್ತದೆ. "ಎಸ್ ಬಿಐನಿಂದ ಅತ್ಯಂತ ಕಡಿಮೆ ಬಡ್ಡಿ ದರವಾದ 7.5%ನಿಂದ ಗ್ರಾಹಕರಿಗೆ ಕಾರಿನ ಸಾಲ ಆರಂಭವಾಗುತ್ತದೆ. ಅವರಿಗೆ 100% ಆಯ್ದ ಮಾಡೆಲ್ ಗಳ ಮೇಲೆ ಶೇಕಡಾ ನೂರರಷ್ಟು ಹಣಕಾಸು ಸೌಲಭ್ಯ ದೊರೆಯುತ್ತದೆ," ಎಂದು ಬ್ಯಾಂಕ್ ತಿಳಿಸಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಲೋನ್ ಗಳಿಗೆ ಆಫರ್ ಗಳ ಸುರಿಮಳೆ

ಚಿನ್ನದ ಮೇಲೆ ಸಾಲ ಪಡೆಯುವವರು 36 ತಿಂಗಳ ತನಕ ಮರುಪಾವತಿ ಮಾಡುವುದಕ್ಕೆ ಅವಕಾಶ ಇದೆ. ಇನ್ನು ಅತ್ಯಂತ ಕಡಿಮೆ ಬಡ್ಡಿ ದರವಾದ 7.5 ಪರ್ಸೆಂಟ್ ಇದೆ. ಇನ್ನು ಪರ್ಸನಲ್ ಲೋನ್ ವಿಚಾರಕ್ಕೆ ಬಂದಲ್ಲಿ, ಕೊರೊನಾದ ಸಂಕಷ್ಟದ ಸಮಯದಲ್ಲಿ ವೈಯಕ್ತಿಕವಾಗಿ ಸಾಲ ಪಡೆಯುವವರಿಗೆ ಅನುಕೂಲ ಆಗಲಿ ಎಂಬ ಕಾರಣಕ್ಕೆ 9.6% ಬಡ್ಡಿ ದರಕ್ಕೆ ನೀಡಲಾಗುತ್ತಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+