ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಅಧಿಕೃತವಾಗಿ ತನ್ನ ಗೃಹ ಸಾಲದ ರಿಯಾಯಿತಿಗಳ ವಿಸ್ತರಣೆಯನ್ನು ಘೋಷಿಸಿದೆ. ಎಸ್‌ಬಿಐ 65 ಮೂಲಾಂಕದವರೆಗೆ ಕಡಿತವನ್ನು ಒದಗಿಸುತ್ತದೆ. ಡಿಸೆಂಬರ್ 31, 2023 ರವರೆಗೆ ಈ ವಿಸ್ತರಣೆ ಅನ್ವಯವಾಗಲಿದೆ ಎಂದು ಅಧಿಕೃತ ವೆಬ್‌ಸೈಟ್ ಮೂಲಕ ಬ್ಯಾಂಕ್ ದೃಢಪಡಿಸಿದೆ.
ಈ ರಿಯಾಯಿತಿಯು ಸಿಬಿಲ್ ಸ್ಕೋರ್ ಆಧಾರವಾಗಿದೆ. 300 ರಿಂದ 900 ರವರೆಗಿನ ಸಿಬಿಲ್ ಸ್ಟೋರ್, ಗೃಹ ಸಾಲಗಳು, ವೈಯಕ್ತಿಕ ಸಾಲಗಳು ಅಥವಾ ಕ್ರೆಡಿಟ್ ಕಾರ್ಡ್ ವಹಿವಾಟುಗಳಂತಹ ಹಿಂದಿನ ವ್ಯವಹಾರಗಳ ಆಧಾರದ ಮೇಲೆ ಸಾಲವನ್ನು ನೀಡಲಾಗುತ್ತದೆ. ಹೆಚ್ಚಿನ ಸ್ಕೋರ್ ಇದ್ದರೆ, ಎಸ್‌ಬಿಐ ರಿಯಾಯಿತಿ ಅಧಿಕ ಪಡೆಯಲು ಅನುಕೂಲಕರ.

ಮರುಮಾರಾಟ, ರೆಡಿ-ಟು-ಮೂವ್ ಆಯ್ಕೆಗಳನ್ನು ಅನ್ವೇಷನೆ ಮಾಡುವವರು ಗೃಹ ಸಾಲವನ್ನು ಪಡೆಯಲು ಮುಂದಾದರೆ, ಸಿಬಿಲ್ ಸ್ಕೋರ್ 700 ಅಥವಾ ಅದಕ್ಕಿಂತ ಅಧಿಕವಾಗಿದ್ದರೆ, ಹೆಚ್ಚುವರಿ 20 ಬೇಸಿಸ್ ಪಾಯಿಂಟ್‌ಗಳ ರಿಯಾಯಿತಿಯನ್ನು ಪಡೆಯಬಹುದು.
ಬಿಲ್ಡರ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವವರಿಗೆ ಹೆಚ್ಚುವರಿ 5 ಬಿಪಿಎಸ್ ರಿಯಾಯಿತಿಯನ್ನು ನೀಡಲಾಗುತ್ತದೆ. ಶೌರ್ಯ, ಶೌರ್ಯ ಫ್ಲೆಕ್ಸಿ ಮತ್ತು ಶೌರ್ಯ ಫ್ಲೆಕ್ಸಿ ವಿಶಿಷ್ಟ್ ಉತ್ಪನ್ನದಂತಹ ನಿರ್ದಿಷ್ಟ ಸಾಲಕ್ಕೆ ಆಕರ್ಷಕ ಬಡ್ಡಿ ಇದೆ. ಹಾಗೆಯೇ ಇದಕ್ಕೆ ಹೆಚ್ಚುವರಿ 10 ಬಿಪಿಎಸ್ ರಿಯಾಯಿತಿಯನ್ನು ಪಡೆಯಬಹುದಾಗಿದೆ.
ಮಹಿಳಾ ಸಾಲಗಾರರಿಗೆ ಈಗಾಗಲೇ ಲಭ್ಯವಿರುವ ಬಡ್ಡಿ ರಿಯಾಯಿತಿ, ಕಾರ್ಡ್ ದರಗಳ ಬಗ್ಗೆ ಒತ್ತು ನೀಡುತ್ತದೆ. 750 ಕ್ಕಿಂತ ಅಧಿಕ ಸಿಬಿಲ್ ಸ್ಕೋರ್‌ಗಳನ್ನು ಹೊಂದಿರುವವರು ಎಸ್‌ಬಿಐ ಕಾರ್ಡ್‌ನಲ್ಲಿ 5 ಬಿಪಿಎಸ್‌ನಷ್ಟು ರಿಯಾಯಿತಿಯನ್ನು ಪಡೆಯಬಹುದು. ಇನ್ನು ಕಾರು ಸಾಲಗಳಿಗೆ ಬ್ಯಾಂಕ್ ಪ್ರೋಸೆಸಿಂಗ್ ಶುಲ್ಕವನ್ನು ಮನ್ನಾ ಮಾಡುತ್ತದೆ. ಈ ಆಫರ್ 2024ರ ಜನವರಿ 31ರವರಗೆ ಇರಲಿದೆ.
ಎಸ್‌ಬಿಐನಲ್ಲಿ ಕಾರು ಸಾಲಗಳಿಗೆ ಒಂದು ವರ್ಷದ ಎಂಸಿಎಲ್‌ಆರ್ ದರವು ಶೇಕಡ 8.55 ಆಗಿದೆ. ಎಸ್‌ಬಿಐ ನೀಡುವ ಕಾರು ಸಾಲದ ಬಡ್ಡಿದರಗಳು ಶೇಕಡ 8.80 ರಿಂದ 9.70 ರವರೆಗೆ ಇರುತ್ತದೆ. ಸಾಲದ ಅವಧಿಯು ಐದು ವರ್ಷಗಳನ್ನು ಮೀರಿದರೆ ಬಡ್ಡಿದರ ಹೆಚ್ಚಳವಾಗಬಹುದು ಎಂಬುವುದು ನೆನಪಿನಲ್ಲಿಟ್ಟುಕೊಳ್ಳಿ.


Click it and Unblock the Notifications