ಸರ್ಕಾರವು ಜನರಿಗೆ ಹಣ ಉಳಿತಾಯ ಮಾಡಲು ಸಹಾಯವಾಗುವಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ನೀವು ಈ ಯೋಜನೆಗಳಲ್ಲಿ ನಾವು ಹೂಡಿಕೆ ಮಾಡುವುದರಿಂದ ನಿಮ್ಮ ಹಣ ಅತ್ಯಂತ ಸುರಕ್ಷಿತವಾಗಿ ಇರುತ್ತದೆ. ಯಾಕೆಂದರೆ ಈ ಯೋಜನೆ ಸರ್ಕಾರ ಬೆಂಬಲಿತವಾದ ಯೋಜನೆಯಾಗಿದೆ. ಅಂತಹ ಯೋಜನೆಗಳಲ್ಲಿ ಹಿರಿಯ ನಾಗರಿಕರಿಗಾಗಿ ಇರುವ ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್‌ಸಿಎಸ್‌ಎಸ್) ಕೂಡಾ ಒಂದಾಗಿದೆ. ಇಲ್ಲಿ ಹೂಡಿಕೆ ಮಾಡಿದ್ದರೆ ಹೆಚ್ಚಿನ ಹಣವನ್ನು ಗಳಿಸಬಹುದು. ಹಾಗಿದ್ರೆ ಈ ಖಾತೆಯನ್ನು ತರೆಯುವುದು ಹೇಗೆ..? ಬಡ್ಡಿ ದರ ಎಷ್ಟು ತೆರಿಗೆ ಪ್ರಯೋಜನಗಳೇನ..? ಏನೆಲ್ಲಾ ಅರ್ಹತೆ ಮತ್ತು ನಿಯಮಗಳು ಇರುತ್ತೇವೆ ಎಂಬ ಹೆಚ್ಚಿನ ವಿವರವನ್ನು ನಾವು ಈ ಲೇಖನದಲ್ಲಿ ತಿಳಿಯೋಣ ಬನ್ನಿ...
ಹೌದು, ನಿವೃತ್ತಿಯ ನಂತರ ಹಿರಿಯ ನಾಗರಿಕರಿಗೆ ಆರ್ಥಿಕ ಭದ್ರತೆಯನ್ನು ಒದಗಿಸಲು ಇರುವಂತಹ ಯೋಜನೆಯೇ ನಾಗರಿಕರ ಉಳಿತಾಯ ಯೋಜನೆ (ಎಸ್‌ಸಿಎಸ್‌ಎಸ್).ಈ ಯೋಜನೆಯನ್ನು 2004 ರಲ್ಲಿ ಜಾರಿಗೆ ತರಲಾಗಿತು. ಇದು ಹಿರಿಯ ನಾಗರಿಕರಿಗೆ ಅತ್ಯಂತ ಸುರಕ್ಷಿತ ಹೂಡಿಕೆ ಆಯ್ಕೆಯಾಗಿದೆ. 60 ವರ್ಷಕ್ಕಿಂತ ಮೇಲ್ಪಟ್ಟವರು ಪ್ರತ್ಯೇಕವಾಗಿ ಅಥವಾ ಜಂಟಿಯಾಗಿ SCSS ಖಾತೆಯನ್ನು ತೆರೆಯಬಹುದು.

ಇದನ್ನು ಅಂಚೆ ಕಚೇರಿಯಲ್ಲಿ ಅಥವಾ ಅಧಿಕೃತ ಬ್ಯಾಂಕಿನಲ್ಲಿ ಖಾತೆಯನ್ನು ತೆರೆಯಬಹುದು. ಇದು ಪ್ರಸ್ತುತ ತ್ರೈಮಾಸಿಕಕ್ಕೆ ಶೇ.8.2 ಬಡ್ಡಿದರವನ್ನು ನೀಡುತ್ತದೆ. ಈ ಯೋಜನೆಯು ಗರಿಷ್ಠ 30 ಲಕ್ಷ ಠೇವಣಿಯನ್ನು ಬೆಂಬಲಿಸುತ್ತದೆ. 5 ವರ್ಷಗಳ ಅವಧಿಯೊಂದಿಗೆ ಇದನ್ನು 3 ವರ್ಷಗಳವರೆಗೆ ವಿಸ್ತರಿಸಬಹುದು. ಈ ಐದು ವರ್ಷದ ಯೋಜನೆಯಲ್ಲಿ ವಾರ್ಷಿಕವಾಗಿ ಶೇಕಡ 8.2ರಷ್ಟು ಬಡ್ಡಿದರವನ್ನು ಪಡೆಯಬಹುದಾಗಿದೆ. ನಿಗದಿತ ಮೊತ್ತದ ಹೂಡಿಕೆ ಮೇಲೆ ಎಸ್‌ಸಿಎಸ್‌ಎಸ್‌ನಲ್ಲಿ ಸುರಕ್ಷತೆ ಇದೆ. ಯಾವುದೇ ಒಂದು ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದಾಗಿ ಪ್ರಯೋಜನ, ಅನಾನುಕೂಲತೆ ಎರಡು ಇದೆ. ಈ ಯೋಜನೆಗೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ಕಡಿತಗಳನ್ನು ಅನುಮತಿಸಲಾಗಿದೆ. ಠೇವಣಿಗಳ ಮೇಲಿನ ಬಡ್ಡಿಯು ಸಂಪೂರ್ಣವಾಗಿ ತೆರಿಗೆಗೆ ಒಳಪಡುತ್ತದೆ.
SCSS ಪ್ರಸ್ತುತ ಬಡ್ಡಿ ದರ
SCSS ಗೆ ಅನ್ವಯವಾಗುವ ಪ್ರಸ್ತುತ ಬಡ್ಡಿ ದರ ವರ್ಷಕ್ಕೆ ಶೇ.8.2 ಆಗಿದೆ . ಈ ಬಡ್ಡಿದರವು 2025-26 ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕಕ್ಕೆ ಅನ್ವಯಿಸುತ್ತದೆ.
ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಬಡ್ಡಿದರಗಳನ್ನು ತ್ರೈಮಾಸಿಕ ಆಧಾರದ ಮೇಲೆ ಪರಿಷ್ಕರಿಸಲಾಗುತ್ತದೆ. ಬಡ್ಡಿಯನ್ನು ತ್ರೈಮಾಸಿಕವಾಗಿ ಸಂಯೋಜಿಸಲಾಗುತ್ತದೆ. ಠೇವಣಿ ಅವಧಿ, ಬಡ್ಡಿದರ ಮತ್ತು ಅಸಲು ಮೊತ್ತವನ್ನು ಆಧರಿಸಿ ಪಾವತಿಸುವ ಬಡ್ಡಿಯ ಮೊತ್ತವು ಬದಲಾಗುತ್ತದೆ.
ಪಾವತಿ ಹೇಗೆ..?
SCSS ಖಾತೆಯನ್ನು ತೆರೆಯುವ ವ್ಯಕ್ತಿಗಳು ಸರ್ಕಾರ ನಿಗದಿಪಡಿಸಿದ ದರದಲ್ಲಿ ಅಸಲು ಠೇವಣಿ ಮೊತ್ತದ ಮೇಲೆ ಬಡ್ಡಿಯನ್ನು ಪಡೆಯುತ್ತಾರೆ. ಬಡ್ಡಿ ಪಾವತಿಯನ್ನು ಏಪ್ರಿಲ್, ಜುಲೈ, ಅಕ್ಟೋಬರ್ ಮತ್ತು ಜನವರಿ ಮೊದಲ ದಿನಾಂಕದಂದು ವ್ಯಕ್ತಿಯ ಖಾತೆಗೆ ಜಮಾ ಮಾಡಲಾಗುತ್ತದೆ.
ಠೇವಣಿ ವಿಧಾನ
ಒಬ್ಬ ವ್ಯಕ್ತಿಯು ರೂ. 1 ಲಕ್ಷಕ್ಕಿಂತ ಕಡಿಮೆ ಇದ್ದಾಗ ಹಣವನ್ನು ನಗದು ರೂಪದಲ್ಲಿ ಠೇವಣಿ ಮಾಡಬಹುದು. ಠೇವಣಿ ಮೊತ್ತ ರೂ. 1 ಲಕ್ಷಕ್ಕಿಂತ ಹೆಚ್ಚಿದ್ದಾಗ, ವ್ಯಕ್ತಿಯು ಚೆಕ್ ಮೂಲಕ ಪಾವತಿ ಮಾಡಬೇಕು.
ಯೋಜನೆ ಮುಕ್ತಾಯವಾಗುವುದು ಯಾವಾಗ..?
SCSS ನ ಮುಕ್ತಾಯ ಅವಧಿ 5 ವರ್ಷಗಳು. ಆದಾಗ್ಯೂ, ವ್ಯಕ್ತಿಗಳು ಅರ್ಜಿಯನ್ನು ಸಲ್ಲಿಸುವ ಮೂಲಕ ಮುಕ್ತಾಯ ಅವಧಿಯನ್ನು ಇನ್ನೂ 3 ವರ್ಷಗಳವರೆಗೆ ವಿಸ್ತರಿಸಬಹುದು. ಮುಕ್ತಾಯ ವಿಸ್ತರಣೆಗೆ ಅರ್ಜಿಯು ಮುಕ್ತಾಯ ದಿನಾಂಕದಿಂದ ಒಂದು ವರ್ಷದೊಳಗೆ ಇರಬೇಕು.
ಆಗಸ್ಟ್ 29, 2024 ರಿಂದ ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಖಾತೆಗಳಿಂದ ಹಿಂಪಡೆಯುವಿಕೆಗೆ ತೆರಿಗೆ ವಿನಾಯಿತಿ ನೀಡಲಾಗುವುದು. ಈ ತಿದ್ದುಪಡಿಯಿಂದ ಹಿರಿಯ ನಾಗರಿಕರು ಹೆಚ್ಚಿನ ಪ್ರಯೋಜನ ಪಡೆಯುತ್ತಾರೆ.
SCSS ಅರ್ಹತೆಗಳೇನು..?
- 60 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು.
- 55 ವರ್ಷ ಮೇಲ್ಪಟ್ಟ ಮತ್ತು 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ನಿವೃತ್ತ ನಾಗರಿಕ ನೌಕರರು. ಆದಾಗ್ಯೂ, ನಿವೃತ್ತಿ ಪ್ರಯೋಜನಗಳನ್ನು ಪಡೆದ 1 ತಿಂಗಳೊಳಗೆ ಹೂಡಿಕೆ ಮಾಡಬೇಕು.
- 50 ವರ್ಷ ಮೇಲ್ಪಟ್ಟ ಮತ್ತು 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ನಿವೃತ್ತ ರಕ್ಷಣಾ ನೌಕರರು. ಆದಾಗ್ಯೂ, ನಿವೃತ್ತಿ ಪ್ರಯೋಜನಗಳನ್ನು ಪಡೆದ 1 ತಿಂಗಳೊಳಗೆ ಹೂಡಿಕೆ ಮಾಡಬೇಕು.
- ಖಾತೆಯನ್ನು ವೈಯಕ್ತಿಕ ಸಾಮರ್ಥ್ಯದಲ್ಲಿ ಅಥವಾ ಸಂಗಾತಿಯೊಂದಿಗೆ ಜಂಟಿಯಾಗಿ ಮಾತ್ರ ತೆರೆಯಬಹುದು. ಜಂಟಿ ಖಾತೆಯಲ್ಲಿ ಠೇವಣಿ ಇಟ್ಟಿರುವ ಸಂಪೂರ್ಣ ಮೊತ್ತವನ್ನು ಮೊದಲ ಖಾತೆದಾರರಿಗೆ ಮಾತ್ರ ಜಮಾ ಮಾಡಲಾಗುತ್ತದೆ.
- ಅನಿವಾಸಿ ಭಾರತೀಯರು (NRI) ಮತ್ತು ಹಿಂದೂ ಅವಿಭಜಿತ ಕುಟುಂಬಗಳು (HUFs) SCSS ತೆರೆಯಲು ಅರ್ಹರಲ್ಲ.
- ಮಾರ್ಚ್ 31, 2023 ರಿಂದ SCSS ಖಾತೆ ತೆರೆಯಲು ಪ್ಯಾನ್ ಮತ್ತು ಆಧಾರ್ ಸಂಖ್ಯೆಗಳು ಕಡ್ಡಾಯವಾಗಿದೆ.
ತೆರಿಗೆ ಪ್ರಯೋಜನಗಳು
- 1961 ರ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ , ವ್ಯಕ್ತಿಗಳು ರೂ.1.5 ಲಕ್ಷದವರೆಗಿನ ಹೂಡಿಕೆಗಳ ಮೇಲೆ ತೆರಿಗೆ ವಿನಾಯಿತಿಗಳಿಗೆ ಅರ್ಹರಾಗಿರುತ್ತಾರೆ.
- ಎಲ್ಲಾ SCSS ಖಾತೆಗಳಲ್ಲಿನ ಒಟ್ಟು ಬಡ್ಡಿಯು ರೂ.50,000 ಕ್ಕಿಂತ ಹೆಚ್ಚಾದರೆ, TDS ಅನ್ನು ಕಡಿತಗೊಳಿಸಲಾಗುತ್ತದೆ.
- 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳು ಖಾತೆಯನ್ನು ತೆರೆದರೆ, ಒಟ್ಟು ಬಡ್ಡಿ ವಾರ್ಷಿಕ ರೂ.10,000 ಮೀರಿದರೆ ಟಿಡಿಎಸ್ ಕಡಿತಗೊಳಿಸಲಾಗುತ್ತದೆ.
- ಶೇ. 8.2 ವಾರ್ಷಿಕ ಬಡ್ಡಿದರ ಮತ್ತು 30 ಲಕ್ಷ ಹೂಡಿಕೆ ಮೊತ್ತದಲ್ಲಿ, ಪ್ರತಿ ಹೂಡಿಕೆದಾರರಿಗೆ ಮಾಸಿಕ ಆದಾಯ 20,500 ಎಂದು ಹೇಳಲಾಗಿದೆ.
ಹಿರಿಯ ನಾಗರಿಕರ ಉಳಿತಾಯ ಯೋಜನೆಯು ಸರ್ಕಾರ ಬೆಂಬಲಿತ ಯೋಜನೆಯಾಗಿದೆ. ಆದ್ದರಿಂದಾಗಿ ಈ ಯೋಜನೆಯಲ್ಲಿ ನಾವು ಹೂಡಿಕೆ ಮಾಡುವುದು ಎಂದಿಗೂ ಕೂಡಾ ಸುರಕ್ಷಿತವಾಗಿದೆ. ಎಸ್‌ಸಿಎಸ್‌ಎಸ್ ಯೋಜನೆಯಲ್ಲಿ ಮಾಡಿದ ಹೂಡಿಕೆ ಎಂದಿಗೂ ಕೂಡಾ ನಷ್ಟಕ್ಕೆ ಒಳಗಾಗುವುದಿಲ್ಲ.


Click it and Unblock the Notifications