ಹಿರಿಯ ನಾಗರಿಕರಿಗೆ ಹಣ ಉಳಿತಾಯ ಮಾಡಲು ಸಹಾಯವಾಗುವಂತೆ ಹಲವಾರು ಯೋಜನೆಗಳಿವೆ. ಅದರಲ್ಲೂ ನೀವು ಈ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಅತ್ಯಂತ ಸುರಕ್ಷಿತವಾಗಿದೆ. ಯಾಕೆಂದರೆ ಇದಕ್ಕೆ ಸರ್ಕಾರ ಬೆಂಬಲಿತವಾದ ಯೋಜನೆಯಾಗಿದೆ.
ಅಂತಹ ಯೋಜನೆಗಳಲ್ಲಿ ಹಿರಿಯ ನಾಗರಿಕರಿಗಾಗಿ ಇರುವ ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್‌ಸಿಎಸ್‌ಎಸ್) ಕೂಡಾ ಒಂದಾಗಿದೆ. ಹಾಗಿದ್ರೆ ಹಿರಿಯ ನಾಗರಿಕರ ಹೊಡಿಕೆ 5 ಲಕ್ಷ, 10 ಲಕ್ಷ ಮತ್ತು 15 ಲಕ್ಷ ಉಳಿತಾಯದ ಮೇಲೆ ಎಷ್ಟು ಪಿಂಚಣಿ ನೀಡಲಾಗುತ್ತದೆ ಇದನ್ನು ಹೇಗೆ ಲೆಕ್ಕಾಚಾರ ಮಾಡಹುದು ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ.

ಹಿರಿಯ ನಾಗರಿಕ ಉಳಿತಾಯ ಯೋಜನೆ (SCSS) ಶೇ. 8.2 ಬಡ್ಡಿದರದೊಂದಿಗೆ ಸುರಕ್ಷಿತ ಹೂಡಿಕೆ ಆಯ್ಕೆಯಾಗಿದೆ. 5 ಲಕ್ಷ, 10 ಲಕ್ಷ ಮತ್ತು 15 ಲಕ್ಷದ ಹೂಡಿಕೆಯು ವಾರ್ಷಿಕವಾಗಿ 41,000, 82,000 ಮತ್ತು 1,23,000 ಆದಾಯವನ್ನು ನೀಡುತ್ತದೆ. ಸರ್ಕಾರದ ಖಾತರಿ ಮತ್ತು ತಿಂಗಳ ಆದಾಯದ ಆಯ್ಕೆಯೊಂದಿಗೆ ನಿವೃತ್ತಿ ಯೋಜನೆಗೆ ಈ ಯೋಜನೆಯು ಉತ್ತಮವಾಗಿದೆ.
ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS)ಯು ಹಿರಿಯ ನಾಗರಿಕರಿಗೆ ಸುರಕ್ಷಿತ ಮತ್ತು ವಿಶ್ವಾಸಾರ್ಹ ಆಯ್ಕೆಯಾಗಿದೆ. ಈ ಸರ್ಕಾರಿ ಯೋಜನೆಯು ಖಾತರಿಯ ಆದಾಯವನ್ನು ನೀಡುತ್ತದೆ ಮತ್ತು ನಿವೃತ್ತಿ ನಿಧಿಯನ್ನು ನಿರ್ಮಿಸಲು ಸೂಕ್ತವಾಗಿದೆ. ಈಗ ಮೂರು ತಿಂಗಳಿಗೊಮ್ಮೆ ಶೇ. 8.2 ರ ಬಡ್ಡಿ ದರದೊಂದಿಗೆ ಈ ಯೋಜನೆಯು ಹಿರಿಯ ನಾಗರಿಕರಿಗೆ ನಿಯಮಿತ ಆದಾಯವನ್ನು ಖಾತರಿಪಡಿಸುತ್ತದೆ.
ಈ ಯೋಜನೆಯು ನಿಮಗೆ ಸುರಕ್ಷಿತವಲ್ಲವಾದರೂ ಸರ್ಕಾರದಿಂದ ಬೆಂಬಲಿತವಾಗಿರುವ ಕಾರಣ ಹೂಡಿಕೆದಾರರಿಗೆ ಖಾತರಿಯ ಆದಾಯವನ್ನು ನೀಡುತ್ತದೆ. ಶೇ. 8.2 ರ ಬಡ್ಡಿ ದರ ಮತ್ತು ತಿಂಗಳ ಆದಾಯದ ಆಯ್ಕೆಯೊಂದಿಗೆ, ಹಿರಿಯ ನಾಗರಿಕರಿಗೆ ಆರ್ಥಿಕ ಆದಾಯದ ಸ್ಥಿರತೆಯನ್ನು ನೀಡುತ್ತದೆ.
SCSS ಯೋಜನೆಯ ಲಕ್ಷಣಗಳು
ಖಾತರಿಪಡಿಸಿದ ಆದಾಯ: ಈ ಯೋಜನೆಯು ಸರ್ಕಾರದಿಂದ ಬೆಂಬಲಿತವಾಗಿದೆ. ಇದು ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಈ ಯೋಜನೆ ಹೊಂದಿದೆ.
ಹೂಡಿಕೆಯ ಮಿತಿ: ಈ ಯೋಜನೆ ಮೂಲಕ ನೀವು 30 ಲಕ್ಷದವರೆಗೆ ಹೂಡಿಕೆ ಮಾಡಬಹುದು ಮತ್ತು 5 ವರ್ಷಗಳ ಅವಧಿಯೊಂದಿಗೆ ನಿಮ್ಮ ಹೊಡಿಕೆಯನ್ನು (3 ವರ್ಷಗಳವರೆಗೆ ವಿಸ್ತರಿಸಬಹುದು).
ತೆರಿಗೆ ಪ್ರಯೋಜನಗಳು: ಹೂಡಿಕೆಯು ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿ ಹೊಂದಿದೆ.ಬಡ್ಡಿ ಆದಾಯವು ತೆರಿಗೆಗೆ ಒಳಪಡುತ್ತದೆ ಮತ್ತು ವಾರ್ಷಿಕ ಆದಾಯವು 50,000 ಮೀರಿದರೆ TDS ಸಹ ಅನ್ವಯಿಸುತ್ತದೆ.
ನಿಯಮಿತ ಆದಾಯ: ಈ ಯೋಜನೆಯು ತಿಂಗಳು ಮೂರು ತಿಂಗಳು ವರ್ಷದ ಆದಾಯವನ್ನು ನೀಡಲು ಸೂಕ್ತವಾಗಿದೆ.
SCSS ನಲ್ಲಿ ಹೂಡಿಕೆ ಮತ್ತು ಗಳಿಕೆಯ ವಿಶ್ಲೇಷಣೆ
5 ಲಕ್ಷ ಹೂಡಿಕೆಯ ಮೇಲೆ ನಿಮಗೆ ಸಿಗುವ ಮಾನಸಿಕ ಆದಾಯ
ಪ್ರತಿ ತಿಂಗಳ ಆದಾಯ: 3,416 ರೂ
ಮೂರು ತಿಂಗಳ ಆದಾಯ: 10,250 ರೂ
ವರ್ಷದ ಗಳಿಕೆ: 41,000 ರೂ
ಬಡ್ಡಿ 5 ವರ್ಷಗಳಲ್ಲಿ: 2,05,000 ರೂ
ಮೆಚ್ಯೂರಿಟಿ ಮೊತ್ತ: 7,05,000
10 ಲಕ್ಷ ಹೂಡಿಕೆಯ ಮೇಲೆ
ಪ್ರತಿ ತಿಂಗಳ ಆದಾಯ: 6,833
ಮೂರು ತಿಂಗಳ ಆದಾಯ: 20,500
ವರ್ಷದ ಆದಾಯ: 82,000
5 ವರ್ಷಗಳಲ್ಲಿ ಬಡ್ಡಿ ಆದಾಯ: 4,10,000
ಮೆಚ್ಯೂರಿಟಿ ಮೊತ್ತ: 14,10,000
15 ಲಕ್ಷ ಹೂಡಿಕೆಯಲ್ಲಿ
ತಿಂಗಳ ಆದಾಯ: 10,250
ಮೂರು ತಿಂಗಳ ಆದಾಯ: 30,750
ವರ್ಷದ ಆದಾಯ: 1,23,000
5 ವರ್ಷಗಳಲ್ಲಿ ಬಡ್ಡಿ ಆದಾಯ: 6,15,000
ಮೆಚ್ಯೂರಿಟಿ ಮೊತ್ತ: 21,15,000
SCSS ಯೋಜನೆ ಏಕೆ ವಿಶೇಷವಾಗಿದೆ?
ಸರ್ಕಾರದ ಗ್ಯಾರಂಟಿ ಮತ್ತು ಹೆಚ್ಚಿನ ಬಡ್ಡಿದರದೊಂದಿಗೆ, ನಿವೃತ್ತಿಯ ನಂತರ ನಿಯಮಿತ ಆದಾಯವನ್ನು ಪಡೆಯಲು SCSS ಯೋಜನೆಯು ಸುರಕ್ಷಿತ ಮತ್ತು ಪ್ರಯೋಜನಕಾರಿ ಆಯ್ಕೆಯಾಗಿದೆ. ಈ ಯೋಜನೆಯು ಆರ್ಥಿಕ ಭದ್ರತೆಯನ್ನು ಒದಗಿಸುವುದಲ್ಲದೆ ಹಿರಿಯ ನಾಗರಿಕರನ್ನು ಅವರ ಭವಿಷ್ಯದ ಯೋಜನೆಗಳಿಗೆ ಸ್ವಾವಲಂಬಿಗಳನ್ನಾಗಿ ಮಾಡುತ್ತದೆ.
ಹಿರಿಯನಾಗರಿಕರು ಕಷ್ಟಪಟ್ಟು ಹೊಡಿಕೆ ಮಾಡಿದ ಹಣಕ್ಕೆ ಹೆಚ್ಚಿನ ಬಡ್ಡಿಯನ್ನು ನೀಡಲು ಈ ಯೋಜನೆ ಸಹಾಯಕಾರಿಯಾಗಿದೆ.


Click it and Unblock the Notifications