8.75% ಬಡ್ಡಿ..₹12 ಲಕ್ಷದ ಎಫ್‌ಡಿಗೆ ₹15 ಲಕ್ಷದವರೆಗೂ ಆದಾಯ..! ಹಿರಿಯ ನಾಗರಿಕರಿಗೆ ಈ ಬ್ಯಾಂಕ್‌ನಲ್ಲಿವೆ ಉತ್ತಮ ಅವಕಾಶ!

ಸ್ಥಿರ ಠೇವಣಿ..ಅಂದರೆ ಫಿಕ್ಸ್‌ಡ್‌ ಡೆಪಾಸಿಟ್‌ಗಳು ಆರ್ಥಿಕ ನೆರವು ಒದಗಿಸುವ ಮೂಲಗಳು. ಫಿಕ್ಸ್ಡ್ ಡೆಪಾಸಿಟ್ (FD) ಗಳು ಬಡ್ಡಿದರದ ಭದ್ರತೆ ಮತ್ತು ಹೂಡಿಕೆ ಮೇಲಿನ ಖಚಿತ ಆದಾಯದೊಂದಿಗೆ ಹಿರಿಯ ನಾಗರಿಕರಿಗೆ ಆರ್ಥಿಕ ಭದ್ರತೆಯ ಭರವಸೆ ನೀಡುತ್ತವೆ. ಅದರಲ್ಲೂ ಖಾಸಗಿ ಸ್ಮಾಲ್ ಫೈನಾನ್ಸ್ ಬ್ಯಾಂಕುಗಳು ಅತಿಹೆಚ್ಚು ಬಡ್ಡಿದರ ನೀಡುತ್ತವೆ. ಹಾಗೂ ಎಫ್‌ಡಿ ಯೋಜನೆಗಳನ್ನು ಪರಿಚಯಿಸುತ್ತವೆ. ಹಾಗಾದ್ರೆ ಯಾವ್ಯಾವ ಸ್ಮಾಲ್ ಫೈನಾನ್ಸ್ ಬ್ಯಾಂಕುಗಳು ಎಷ್ಟು ಬಡ್ಡಿ ನೀಡುತ್ತವೆ.

8.75% ಬಡ್ಡಿ..₹12 ಲಕ್ಷದ ಎಫ್‌ಡಿಗೆ ₹15 ಲಕ್ಷದವರೆಗೂ ಆದಾಯ..!

AU ಸ್ಮಾಲ್ ಫೈನಾನ್ಸ್ ಬ್ಯಾಂಕ್ FD ದರ (18 ತಿಂಗಳು):

AU ಬ್ಯಾಂಕ್‌ವು 18 ತಿಂಗಳ FD ಗೆ ಶೇ.8.25 ರಷ್ಟು ಬಡ್ಡಿದರ ನೀಡುತ್ತಿದೆ. ಹಿರಿಯ ನಾಗರಿಕರು ಬಡ್ಡಿದರದ ಲಾಭವನ್ನು ಕಡಿಮೆ ಅವಧಿಯಲ್ಲಿಯೇ ಪಡೆಯಬಹುದಾದ ಯೋಜನೆಯಿದು.

ಮೆಚ್ಯುರಿಟಿ ಲೆಕ್ಕಾಚಾರ:

₹12,00,000 ಎಫ್‌ಡಿಯು 18 ತಿಂಗಳಲ್ಲಿ ₹13,56,370 ಆಗಿ ಹಿಂತಿರುಗುತ್ತದೆ.
₹13,00,000 ಎಫ್‌ಡಿಯು 18 ತಿಂಗಳಲ್ಲಿ ₹14,69,402 ಆಗಿ ಹಿಂತಿರುಗುತ್ತದೆ.
₹14,00,000 ಎಫ್‌ಡಿಯು 18 ತಿಂಗಳಲ್ಲಿ ₹15,82,433 ಆಗಿ ಹಿಂತಿರುಗುತ್ತದೆ.

AU FD ಯೋಜನೆ ಕಡಿಮೆ ಅವಧಿಯಲ್ಲಿಯೇ ಉತ್ತಮ ಲಾಭವನ್ನೂ, ಬ್ಯಾಂಕ್‌ನ ನಂಬಿಕೆಯನ್ನು ನೀಡುವ ಯೋಜನೆಯಾಗಿರಬಹುದು.

ಈಕ್ವಿಟಾಸ್ ಬ್ಯಾಂಕ್ FD..888 ದಿನಗಳ ವಿಶೇಷ ಯೋಜನೆ:

ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ 888 ದಿನಗಳ FD ಮೇಲೆ ಶೇ.8.55 ರಷ್ಟು ಬಡ್ಡಿದರ ನೀಡುತ್ತಿದೆ. ಕಡಿಮೆ ಅವಧಿಯ ಜೊತೆಗೆ ಜಾಸ್ತಿ ಬಡ್ಡಿದರ ಹುಡುಕುವವರಿಗೆ ಇದು ಲಾಭದಾಯಕ ಆಯ್ಕೆ.

ಮೆಚ್ಯುರಿಟಿ ಲೆಕ್ಕಾಚಾರ:

₹12,00,000 ಎಫ್‌ಡಿ 888 ದಿನಗಳಲ್ಲಿ ₹14,74,237 ಆಗಿ ಹಿಂತಿರುಗುತ್ತದೆ.
₹13,00,000 ಎಫ್‌ಡಿ 888 ದಿನಗಳಲ್ಲಿ ₹15,97,090 ಆಗಿ ಹಿಂತಿರುಗುತ್ತದೆ.
₹14,00,000 ಎಫ್‌ಡಿ 888 ದಿನಗಳಲ್ಲಿ ₹17,19,943 ಆಗಿ ಹಿಂತಿರುಗುತ್ತದೆ.

ಉಜ್ಜೀವನ್ ಬ್ಯಾಂಕ್ FD 18 ತಿಂಗಳ ಆಫರ್:

ಉಜ್ಜೀವನ್ ಬ್ಯಾಂಕು ಕೂಡ AU ಬ್ಯಾಂಕ್‌ಂತೆ 18 ತಿಂಗಳ FD ಯೋಜನೆಯನ್ನು ಶೇ.8.55 ಬಡ್ಡಿದರದಲ್ಲಿ ನೀಡುತ್ತಿದೆ.

ಮೆಚ್ಯುರಿಟಿ ಲೆಕ್ಕಾಚಾರ:

₹12,00,000 ಎಫ್‌ಡಿಯು 18 ತಿಂಗಳಲ್ಲಿ ₹13,62,362 ಆಗಿ ಹಿಂತಿರುಗುತ್ತದೆ.
₹13,00,000 ಎಫ್‌ಡಿಯು 18 ತಿಂಗಳಲ್ಲಿ ₹14,75,892 ಆಗಿ ಹಿಂತಿರುಗುತ್ತದೆ.
₹14,00,000 ಎಫ್‌ಡಿಯು 18 ತಿಂಗಳಲ್ಲಿ ₹15,89,422 ಆಗಿ ಹಿಂತಿರುಗುತ್ತದೆ.

ಉತ್ಕರ್ಷ್ ಬ್ಯಾಂಕ್ FD ದೀರ್ಘಾವಧಿಯ ಬಂಡವಾಳಕ್ಕೆ ಶ್ರೇಷ್ಠ:

ಉತ್ಕರ್ಷ್ ಬ್ಯಾಂಕ್ 2-3 ವರ್ಷಗಳ FD ಯೋಜನೆಗೆ ಶೇ.8.75 ರಷ್ಟು ಬಡ್ಡಿ ನೀಡುತ್ತಿದೆ. ಉದ್ದಗಾಲ ಹೂಡಿಕೆ ಬಯಸುವವರಿಗೆ ಇದು ಹೆಚ್ಚು ಲಾಭ ನೀಡುವ ಯೋಜನೆ.

ಮೆಚ್ಯುರಿಟಿ ಲೆಕ್ಕಾಚಾರ:

₹12,00,000 ಎಫ್‌ಡಿ 2-3 ವರ್ಷಗಳಲ್ಲಿ ₹14,26,801 ಆಗಿ ಹಿಂತಿರುಗುತ್ತದೆ.
₹13,00,000 ಎಫ್‌ಡಿ 2-3 ವರ್ಷಗಳಲ್ಲಿ ₹15,45,701 ಆಗಿ ಹಿಂತಿರುಗುತ್ತದೆ.
₹14,00,000 ಎಫ್‌ಡಿ 2-3 ವರ್ಷಗಳಲ್ಲಿ ₹16,64,601 ಆಗಿ ಹಿಂತಿರುಗುತ್ತದೆ.

FD ಹೂಡಿಕೆಯಲ್ಲಿ ಕಡಿಮೆ ಅಪಾಯ ಮತ್ತು ಸ್ಥಿರ ಆದಾಯವಿದೆ. ಮೇಲ್ಕಂಡ 4 ಸ್ಮಾಲ್ ಫೈನಾನ್ಸ್ ಬ್ಯಾಂಕುಗಳ ಯೋಜನೆಗಳ ವಿಶ್ಲೇಷಣೆಯು, ನಿಮಗೆ ಹೂಡಿಕೆಯ ತೀರ್ಮಾನ ತೆಗೆದುಕೊಳ್ಳಲು ಸ್ಪಷ್ಟತೆ ನೀಡುತ್ತದೆ. ನಿವೃತ್ತಿಯ ಜೀವನದಲ್ಲಿ ಶಾಂತಿ, ಭದ್ರತೆ ಮತ್ತು ಖಚಿತ ಆದಾಯ ಬಯಸುವವರಿಗೆ ಈ ಮಾಹಿತಿಯFD ಆಯ್ಕೆಗಳು ಅಮೂಲ್ಯವಾಗಿವೆ.

ಇದಾದಮೇಲೆ, ನೀವು ಹೂಡಿಕೆ ಮಾಡಲು ಯಾವುದೇ ಬ್ಯಾಂಕ್‌ FD ಯೋಜನೆಯನ್ನು ಆಯ್ಕೆಮಾಡುವಾಗ, ಅದರ ಅವಧಿ, ಬಡ್ಡಿದರ, ಮರುಹೂಡಿಕೆ ನಿಯಮಗಳು ಮತ್ತು ಬ್ಯಾಂಕ್‌ನ ವಿಶ್ವಾಸಾರ್ಹತೆ ಎಂಬ ಪ್ರಮುಖ ಅಂಶಗಳನ್ನು ಗಮನದಲ್ಲಿ ಇಡಬೇಕು. AU, ಈಕ್ವಿಟಾಸ್, ಉಜ್ಜೀವನ್ ಮತ್ತು ಉತ್ಕರ್ಷ್ ಬ್ಯಾಂಕುಗಳು ಪ್ರಸ್ತುತ ಕೊಡುವ ವಿಶೇಷ FD ಯೋಜನೆಗಳು, ಹಿರಿಯ ನಾಗರಿಕರಿಗೆ ಸ್ಥಿರ ಹಾಗೂ ಹೆಚ್ಚು ಲಾಭದಾಯಕ ಆದಾಯವನ್ನು ನೀಡುವ ಸಾಧ್ಯತೆ ಹೊಂದಿವೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+