SGB ಅರ್ಲಿ-ಎಕ್ಸಿಟ್: ಇಂದು ಕೊನೆಯ ಅವಕಾಶ, ಚಿನ್ನದ ಬಾಂಡ್ ಹಣ ಪಡೆಯಲು ಹೀಗೆ ಮಾಡಿ

ಸಾಲ್ವರನ್ ಗೋಲ್ಡ್ ಬಾಂಡ್ (SGB) 2021–22ರ ಸರಣಿ II ರಿಂದ ನಿಗದಿತ ಅವಧಿಗೂ ಮುನ್ನ ನಿರ್ಗಮಿಸಲು (Early-exit) ಇಂದು, ಅಂದರೆ ನವೆಂಬರ್ 21 ಕೊನೆಯ ದಿನವಾಗಿದೆ. ಮುಂದಿನ ಬಡ್ಡಿ ಪಾವತಿ ದಿನಾಂಕವಾದ ಡಿಸೆಂಬರ್ 1, 2026 ರಂದು ಹಣ ಹಿಂಪಡೆಯಲು (Redemption) ಈ ಅವಕಾಶ ನೀಡಲಾಗಿದೆ. ಜೂನ್ 1, 2021 ರ ಟ್ರಾಂಚ್ ಬಾಂಡ್ ಹೊಂದಿರುವವರು ಬ್ಯಾಂಕ್ ಶಾಖೆ ಅಥವಾ ಡಿಪಿ (DP) ಕಟ್-ಆಫ್ ಸಮಯಕ್ಕೂ ಮುನ್ನ ಅರ್ಜಿ ಸಲ್ಲಿಸುವುದು ಕಡ್ಡಾಯ. ಅರ್ಜಿಗಳನ್ನು ಬ್ಯಾಂಕ್‌ಗಳು, ಡೆಪಾಸಿಟರಿ ಪಾರ್ಟಿಸಿಪೆಂಟ್‌ಗಳು ಅಥವಾ ಆರ್‌ಬಿಐ ರಿಟೇಲ್ ಡೈರೆಕ್ಟ್ ಪೋರ್ಟಲ್ ಮೂಲಕ ಸಲ್ಲಿಸಬಹುದು. ಒಂದು ವೇಳೆ ಇಂದು ಈ ಅವಕಾಶ ತಪ್ಪಿದರೆ, ನಿಮಗೆ ಮತ್ತೆ ನಿರ್ಗಮಿಸುವ ಮುಂದಿನ ಅವಕಾಶ ಸಿಗುವುದು ಜೂನ್ 1, 2027 ರಂದೇ.

ಈ ಟ್ರಾಂಚ್‌ಗಾಗಿ ಮನವಿ ಸಲ್ಲಿಸಲು ಆರ್‌ಬಿಐ ಕ್ಯಾಲೆಂಡರ್ ಅಕ್ಟೋಬರ್ 31 ರಿಂದ ನವೆಂಬರ್ 21 ರವರೆಗೆ ಸಮಯ ನಿಗದಿಪಡಿಸಿದೆ. ಆರ್‌ಬಿಐ ನಿಯಮಗಳ ಪ್ರಕಾರ, "ಚಿನ್ನದ ಬಾಂಡ್‌ಗಳನ್ನು ವಿತರಿಸಿದ ದಿನಾಂಕದಿಂದ ಐದು ವರ್ಷಗಳ ನಂತರ ಅವಧಿಗೆ ಮುನ್ನ ಹಿಂಪಡೆಯಲು ಅವಕಾಶವಿರುತ್ತದೆ." ಬಾಂಡ್‌ಗಳು ಪೇಪರ್ ಬಾಂಡ್ ಲೆಡ್ಜರ್ ಅಕೌಂಟ್‌ನಲ್ಲಿರಲಿ ಅಥವಾ ಡಿಮ್ಯಾಟ್ ರೂಪದಲ್ಲಿರಲಿ, ಈ ಅರ್ಹತೆ ಅನ್ವಯಿಸುತ್ತದೆ. ಆದರೆ, ಇಂದೇ ಅರ್ಜಿ ಸಲ್ಲಿಸುವ ಮುನ್ನ ನಿಮ್ಮ ಬಾಂಡ್ ಯೂನಿಟ್‌ಗಳ ಮೇಲೆ ಯಾವುದೇ ಪ್ಲೆಡ್ಜ್ ಅಥವಾ ಲಿಯನ್ (ಅಡಮಾನ/ಬಾಕಿ ಸಾಲದ ಹಕ್ಕು) ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.

SGB ಅರ್ಲಿ-ಎಕ್ಸಿಟ್: ಇಂದು ಅರ್ಜಿ ಸಲ್ಲಿಸಲು ಕೊನೆಯ ದಿನ

SGB ಅರ್ಲಿ-ಎಕ್ಸಿಟ್ ಕಟ್-ಆಫ್: ಇಂದೇ ಅರ್ಜಿ ಸಲ್ಲಿಸಲು ಹೀಗೆ ಮಾಡಿ

ಬ್ಯಾಂಕ್‌ಗಳಲ್ಲಿ ಅರ್ಜಿ ಸಲ್ಲಿಸುವುದಾದರೆ, ಪ್ಯಾನ್ (PAN) ಜೊತೆಗೆ ನಿಮ್ಮ ಸರ್ಟಿಫಿಕೇಟ್ ಆಫ್ ಹೋಲ್ಡಿಂಗ್ ಅಥವಾ ಇನ್ವೆಸ್ಟರ್ ಐಡಿ ಸಹಿತ 'ಅರ್ಲಿ ರಿಡೆಂಪ್ಶನ್ ಫಾರ್ಮ್' ನೀಡಬೇಕಾಗುತ್ತದೆ. ಡಿಪಿಗಳಲ್ಲಾದರೆ ಸೂಕ್ತ ISIN ಸಂಖ್ಯೆ ಹಾಗೂ ಜಂಟಿ ಖಾತೆದಾರರ ಹೆಸರು ಸರಿಯಾಗಿ ಹೊಂದಾಣಿಕೆಯಾಗುವ 'ರಿಪರ್ಚೇಸ್ ಅಥವಾ ರಿಡೆಂಪ್ಶನ್ ರಿಕ್ವೆಸ್ಟ್ ಫಾರ್ಮ್' ಸಲ್ಲಿಸಬೇಕು. ಇನ್ನು ಆರ್‌ಬಿಐ ರಿಟೇಲ್ ಡೈರೆಕ್ಟ್ ಬಳಕೆದಾರರು ಆನ್‌ಲೈನ್‌ನಲ್ಲಿ 'SGB Service Request' ಸಲ್ಲಿಸಿ, ಅದರ ರೆಫರೆನ್ಸ್ ಸಂಖ್ಯೆಯನ್ನು ನೋಟ್ ಮಾಡಿಟ್ಟುಕೊಳ್ಳಬಹುದು. ನೀವು ಯಾವುದೇ ಮಾರ್ಗದ ಮೂಲಕ ಅರ್ಜಿ ಸಲ್ಲಿಸಿದರೂ, ಟ್ರ್ಯಾಕಿಂಗ್‌ಗಾಗಿ ಸ್ವೀಕೃತಿ ಪತ್ರ (Acknowledgement) ಪಡೆಯುವುದನ್ನು ಮರೆಯಬೇಡಿ.

SGB ರಿಡೆಂಪ್ಶನ್ ಬೆಲೆ, ಹಣ ಪಾವತಿ ಮತ್ತು ತೆರಿಗೆ ನಿಯಮಗಳು

ಕಳೆದ ಮೂರು ಕೆಲಸದ ದಿನಗಳ IBJA 999 ಚಿನ್ನದ ದರಗಳ ಸರಾಸರಿಯನ್ನು ಆಧಾರವಾಗಿಟ್ಟುಕೊಂಡು ರಿಡೆಂಪ್ಶನ್ ಬೆಲೆಯನ್ನು ನಿಗದಿಪಡಿಸಲಾಗುತ್ತದೆ. ರಿಡೆಂಪ್ಶನ್ ಹಣವು ಡಿಸೆಂಬರ್ 1 ರಂದು ನಿಮ್ಮ ನೋಂದಾಯಿತ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ. ಬ್ಯಾಂಕ್ ವಿವರಗಳಲ್ಲಿ ಲೋಪವಿದ್ದು ಹಣ ಜಮಾ ಆಗದಿದ್ದರೆ, ವಿವರಗಳನ್ನು ಸರಿಪಡಿಸಿದ ನಂತರ ಮತ್ತೆ ಜಮಾ ಮಾಡಲು ಪ್ರಯತ್ನಿಸಲಾಗುತ್ತದೆ. ಇನ್ನು ಬಾಂಡ್‌ನಿಂದ ಬರುವ ಬಡ್ಡಿಗೆ ನಿಮ್ಮ ಆದಾಯ ತೆರಿಗೆ ಸ್ಲ್ಯಾಬ್‌ ಪ್ರಕಾರವೇ ತೆರಿಗೆ ಅನ್ವಯಿಸುತ್ತದೆ. ಏಪ್ರಿಲ್ 1, 2026 ರಿಂದ ಜಾರಿಗೆ ಬರುವಂತೆ, ಮೆಚ್ಯೂರಿಟಿ ಅವಧಿಯವರೆಗೆ ಇಟ್ಟುಕೊಳ್ಳುವ ಮೂಲ ಚಂದಾದಾರರಿಗೆ ಮಾತ್ರ ಬಂಡವಾಳ ಲಾಭ ತೆರಿಗೆ ವಿನಾಯಿತಿ ಸಿಗಲಿದೆ; ಹಾಗಾಗಿ ಇಂದು ಅವಧಿಗೂ ಮುನ್ನ ನಿರ್ಗಮಿಸಿದರೆ ತೆರಿಗೆ ಪಾವತಿಸಬೇಕಾಗುತ್ತದೆ.

SGB ಅರ್ಲಿ-ಎಕ್ಸಿಟ್ ಕಟ್-ಆಫ್: ಅರ್ಜಿ ತಿರಸ್ಕೃತವಾಗದಂತೆ ತಡೆಯುವುದು ಹಾಗೂ ಸ್ಟೇಟಸ್ ಚೆಕ್ ಮಾಡುವುದು ಹೇಗೆ?

ಆರ್‌ಬಿಐ ವಿಂಡೋ ಸಮಯ ಮೀರಿದ ನಂತರ ಅರ್ಜಿ ಸಲ್ಲಿಸುವುದು, ಹೆಸರು ಅಥವಾ ಪ್ಯಾನ್‌ ನಂಬರ್ ಹೊಂದಾಣಿಕೆಯಾಗದಿರುವುದು, ಸಕ್ರಿಯ ಪ್ಲೆಡ್ಜ್ ಅಥವಾ ಲಿಯನ್ ಇರುವುದು, ತಪ್ಪು ಟ್ರಾಂಚ್ ಅಥವಾ ISIN ಆಯ್ಕೆ ಮಾಡುವುದು ಮತ್ತು ನಿಷ್ಕ್ರಿಯ (Dormant) ಬ್ಯಾಂಕ್ ಖಾತೆ ನೀಡುವುದರಿಂದ ಅರ್ಜಿಗಳು ತಿರಸ್ಕೃತಗೊಳ್ಳುವ ಸಾಧ್ಯತೆ ಹೆಚ್ಚು. ಹೀಗಾಗಿ ನಿಮ್ಮ ಬ್ಯಾಂಕ್ ಮ್ಯಾಂಡೇಟ್ ಮತ್ತು ಕೆವೈಸಿ ವಿವರಗಳನ್ನು ಅಪ್‌ಡೇಟ್ ಆಗಿಡಿ. ನಿಮ್ಮ ಅರ್ಜಿಯ ಸ್ಥಿತಿಗತಿಯನ್ನು ಬ್ಯಾಂಕ್‌ ನೀಡಿದ ಸೀಲ್ ಹೊಂದಿರುವ ರಸೀದಿ, ಡಿಪಿ ಟಿಕೆಟ್/RRF ಸಂಖ್ಯೆ ಅಥವಾ ರಿಟೇಲ್ ಡೈರೆಕ್ಟ್‌ನಲ್ಲಿ 'Service Requests' ಅಡಿಯಲ್ಲಿ ಕಾಣಿಸುವ ರೆಫರೆನ್ಸ್ ಸಂಖ್ಯೆ ಬಳಸಿ ಪರಿಶೀಲಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+