ಕಳೆದ 10 ದಿನಗಳಿಂದ ಭಾರತದಲ್ಲಿ ಚಿನ್ನದ ಬೆಲೆ ಇಳಿಕೆಯಾಗುತ್ತಲೇ ಇದೆ. ಭಾರತದಲ್ಲಿ ಗುರುವಾರ 190 ರೂಪಾಯಿಯಷ್ಟು ದರ ಕುಸಿತವಾಗಿದ್ದು, ಬಳಿಕ 22 ಕ್ಯಾರೆಟ್ 10 ಗ್ರಾಂ ಚಿನ್ನದ ಪ್ರಸ್ತುತ ಬೆಲೆ 52,400 ರೂಪಾಯಿ ಆಗಿದೆ
ಭಾರತದಲ್ಲಿ ಅಕ್ಟೋಬರ್ 5, 2023 ರಂದು 190 ರೂಪಾಯಿಗಳ ಕುಸಿತದ ನಂತರ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 57,160 ರೂಪಾಯಿ ಆಗಿದೆ. ಭಾರತದಲ್ಲಿ 22 ಕ್ಯಾರೆಟ್ 100 ಗ್ರಾಂ ಚಿನ್ನದ ಬೆಲೆ ಇಂದು 1900 ರೂಪಾಯಿ ಕುಸಿದು, 5,24,000 ರೂಪಾಯಿ ಆಗಿದೆ.

ಭಾರತದಲ್ಲಿ ಇಂದು 2100 ರೂಪಾಯಿ ಕುಸಿತದ ಬಳಿಕ 24 ಕ್ಯಾರೆಟ್ 100 ಗ್ರಾಂ ಚಿನ್ನದ ಬೆಲೆ 5,71,600 ರೂಪಾಯಿ ಆಗಿದೆ. ಕಳೆದ ಹತ್ತು ದಿನಗಳ ಚಿನ್ನದ, ಬೆಳ್ಳಿ ಬೆಲೆ ಎಷ್ಟಿದೆ, ತಜ್ಞರು ಏನು ಹೇಳುತ್ತಾರೆ ಎಂದು ತಿಳಿಯೋಣ ಮುಂದೆ ಓದಿ...
"ಮಾರುಕಟ್ಟೆ ಸಂಪೂರ್ಣ ಕರಡಿ ಕುಣಿತದಿಂದ ಕೂಡಿದೆ. ನಿನ್ನೆ ಯುಎಸ್ ಡಾಲರ್ ಸೂಚ್ಯಂಕ ಅಮೂಲ್ಯವಾದ ಲೋಹದ ಬೆಲೆ ಏರಿಕೆಗೆ ಸಹಾಯ ಮಾಡುವಲ್ಲಿ ವಿಫಲವಾಗಿದೆ. ಬೆಲೆಬಾಳುವ ಲೋಹಗಳು ಯಾವುದೇ ಬೆಂಬಲವನ್ನು ಪಡೆಯಲು ವಿಫಲವಾಗಿವೆ," ಎಂದು ಮೆಹ್ತಾ ಇಕ್ವಿಟೀಸ್‌ನ ರಾಹುಲ್ ಕಲಂತ್ರಿ ಹೇಳಿದರು.
Festive Season: ಹಬ್ಬದ ಸೀಸನ್‌ನಲ್ಲಿ ಬೆಳ್ಳಿ, ಚಿನ್ನದ ಬೆಲೆ ಜಿಗಿತ- ಈಗ ಎಷ್ಟಿದೆ?
"ಯುಎಸ್ ಎಡಿಪಿ ನಾನ್-ಫಾರ್ಮ್ ಉದ್ಯೋಗದ ಮಾಹಿತಿಯು 1,54,000 ಉದ್ಯೋಗಗಳ ನಿರೀಕ್ಷೆಯ ವಿರುದ್ಧ ಕಳೆದ ತಿಂಗಳಲ್ಲಿ 89,000 ಉದ್ಯೋಗಗಳನ್ನು ಸೃಷ್ಟಿಸಿರುವುದು ಆಶ್ಚರ್ಯ ಉಂಟು ಮಾಡಿದೆ," ಎಂದು ರಾಹುಲ್ ಕಲಂತ್ರಿ ತಿಳಿಸಿದರು.
10 ಗ್ರಾಂ ಲೆಕ್ಕಾಚಾರದಲ್ಲಿ
ಬೆಂಗಳೂರು
22 ಕ್ಯಾರೆಟ್ ಚಿನ್ನ: 52,400 ರೂಪಾಯಿ (-190 ರೂಪಾಯಿ)
24 ಕ್ಯಾರೆಟ್ ಚಿನ್ನ: 57,160 ರೂಪಾಯಿ (-210 ರೂಪಾಯಿ)
ಮುಂಬೈ
22 ಕ್ಯಾರೆಟ್ ಚಿನ್ನ: 52,400 ರೂಪಾಯಿ (-190 ರೂಪಾಯಿ)
24 ಕ್ಯಾರೆಟ್ ಚಿನ್ನ: 57,160 ರೂಪಾಯಿ (-210 ರೂಪಾಯಿ)
ದೆಹಲಿ
22 ಕ್ಯಾರೆಟ್ ಚಿನ್ನ: 52,550 ರೂಪಾಯಿ (-200 ರೂಪಾಯಿ)
24 ಕ್ಯಾರೆಟ್ ಚಿನ್ನ: 57,310 ರೂಪಾಯಿ (-220 ರೂಪಾಯಿ)
ಕೇರಳ
22 ಕ್ಯಾರೆಟ್ ಚಿನ್ನ: 52,400 ರೂಪಾಯಿ (-190 ರೂಪಾಯಿ)
24 ಕ್ಯಾರೆಟ್ ಚಿನ್ನ: 57,160 ರೂಪಾಯಿ (-210 ರೂಪಾಯಿ)
ಮಂಗಳೂರು
22 ಕ್ಯಾರೆಟ್ ಚಿನ್ನ: 52,400 ರೂಪಾಯಿ (-190 ರೂಪಾಯಿ)
24 ಕ್ಯಾರೆಟ್ ಚಿನ್ನ: 57,160 ರೂಪಾಯಿ (-210 ರೂಪಾಯಿ)
ಮೈಸೂರು
22 ಕ್ಯಾರೆಟ್ ಚಿನ್ನ: 52,400 ರೂಪಾಯಿ (-190 ರೂಪಾಯಿ)
24 ಕ್ಯಾರೆಟ್ ಚಿನ್ನ: 57,160 ರೂಪಾಯಿ (-210 ರೂಪಾಯಿ)

Click it and Unblock the Notifications