ಭಾರತದಲ್ಲಿ ಬೆಳ್ಳಿ ಬೆಲೆ ಇಂದು 1200 ರೂಪಾಯಿ ಏರಿಕೆಯಾಗಿದ್ದು, 75,300 ರೂಪಾಯಿಗೆ ತಲುಪಿದೆ. ಅಕ್ಟೋಬರ್ 12 ರಿಂದ ಈವರೆಗೆ ಹತ್ತು ದಿನಗಳ ಅವಧಿಯಲ್ಲಿ ಬೆಳ್ಳಿಯ ಬೆಲೆಯು ಒಟ್ಟಾಗಿ 4200 ರೂಪಾಯಿ ಏರಿಕೆಯನ್ನು ಕಂಡಿದೆ. ಅಕ್ಟೋಬರ್ 14 ರಂದು ಬೆಳ್ಳಿ ದರವು ಬರೋಬ್ಬರಿ 1500 ರೂಪಾಯಿಗಳಷ್ಟು ಜಿಗಿತ ಕಂಡಿದೆ.
ಪ್ರಸ್ತುತ ಹಬ್ಬದ ಸೀಸನ್ ನಡೆಯುತ್ತಿದೆ. ಈ ನಡುವೆ ಮುಂದಿನ ದಿನಗಳಲ್ಲಿ ಭಾರತದಲ್ಲಿ ಈ ಅಮೂಲ್ಯ ಲೋಹದ ಬೇಡಿಕೆಯೂ ಕೂಡಾ ಅಧಿಕವಾಗುತ್ತಾ ಸಾಗುತ್ತದೆ. ಈ ನಡುವೆ ಬೆಳ್ಳಿ ಬೆಲೆಯು ಕೂಡಾ ಭಾರೀ ಅಧಿಕವಾಗುತ್ತಾ ಸಾಗಿದೆ. ಬೆಳ್ಳಿ ದರಕ್ಕೆ ಹಬ್ಬದ ಸೀಸನ್ ಸಹಾಯ ಮಾಡಿದೆ.

ಚೆನ್ನೈನಲ್ಲಿ ಶನಿವಾರ 1 ಕೆಜಿ ಲೋಹವು 78,700 ರೂಪಾಯಿಗೆ ಮಾರಾಟವಾಗುತ್ತಿದೆ. ದೆಹಲಿಯಲ್ಲಿ, 1 ಕೆಜಿ ಬೆಳ್ಳಿಯನ್ನು ಖರೀದಿಸಲು ನೀವು 75,300 ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ಆದರೆ ಮುಂಬೈನಲ್ಲಿ ಲೋಹವು 75,300 ರೂಪಾಯಿಗೆ ಮಾರಾಟವಾಗುತ್ತಿದೆ. ಕೋಲ್ಕತ್ತಾದಲ್ಲಿ 1 ಕೆಜಿ ಬೆಳ್ಳಿಗೆ 75,300 ರೂಪಾಯಿ ಆಗಿದೆ.
ಬೆಳ್ಳಿಯ ಬೆಲೆಗಳ ಮೇಲೆ ಪ್ರಭಾವ ಬೀರುವ ಅಂಶಗಳು
ಲೋಹದ ಅತಿದೊಡ್ಡ ಗ್ರಾಹಕರಾಗಿರುವ ಭಾರತವು ಯುಎಸ್ ಮತ್ತು ಜಪಾನ್ ನಂತರ ಮೂರನೇ ಸ್ಥಾನದಲ್ಲಿದೆ. ಭಾರತವು ಬೆಳ್ಳಿಯನ್ನು ಯುನೈಟೆಡ್ ಕಿಂಗ್‌ಡಮ್, ಇಯು, ಆಸ್ಟ್ರೇಲಿಯಾ, ಚೀನಾ ಮತ್ತು ದುಬೈನಿಂದ ಆಮದು ಮಾಡಿಕೊಳ್ಳುತ್ತದೆ. ಭಾರತ ಆಮದು ಮಾಡು ಅರ್ಧಕ್ಕಿಂತ ಹೆಚ್ಚು ಲೋಹವನ್ನು ಚೀನಾವು ಆಮದು ಮಾಡಿಕೊಳ್ಳುತ್ತದೆ.
ಭಾರತದ ಪ್ರಮುಖ ಆಮದು ಕೇಂದ್ರಗಳಲ್ಲಿ ಮುಂಬೈ, ಅಹಮದಾಬಾದ್ ಮತ್ತು ಜೈಪುರ ಸೇರಿವೆ. ಭಾರತದಲ್ಲಿ ಬೆಳ್ಳಿಯ ಬೆಲೆಯ ಮೇಲೆ ಪರಿಣಾಮ ಬೀರುವ ಹಲವಾರು ಅಂಶಗಳಿವೆ. ಆಮದು ಸುಂಕಗಳು, ಯುಎಸ್ ಡಾಲರ್ ಸೂಚ್ಯಂಕದ ಏರಿಳಿತ, ತೈಲ ಬೆಲೆಗಳು, ವ್ಯಾಪಾರ ಕೊರತೆ, ಹಣದುಬ್ಬರ ಮತ್ತು ಚಿನ್ನದ ಬೆಲೆಗಳು, ಇತರವುಗಳು ಬೆಳ್ಳಿ ಬೆಲೆಯ ಮೇಲೆ ಪ್ರಭಾವ ಬೀರುತ್ತದೆ.
ಹಳದಿ ಲೋಹದ ಬೆಲೆಗಳು ಏರಿದಾಗ, ಬೆಳ್ಳಿಯ ಬೆಲೆಗಳು ಅದೇ ರೀತಿಯಲ್ಲಿ ಹೆಚ್ಚಳವಾಗುತ್ತದೆ. ಚಿನ್ನದ ಬೆಲೆ ಕುಸಿತವಾದರೆ ಬೆಳ್ಳಿ ಬೆಲೆಯು ಕೂಡಾ ಇಳಿಕೆಯಾಗುತ್ತದೆ. ಟಿವಿ, ಸೋಲರ್ ಪ್ಯಾನೆಲ್, ಬ್ಯಾಟರಿಗಳು, ಪದಕಗಳು, ನಾಣ್ಯಗಳು, ಕಂಪ್ಯೂಟರ್‌ಗಳು, ಆಭರಣಗಳು ಮುಂತಾದ ಹಲವಾರು ರೀತಿಯ ಸರಕುಗಳ ಉತ್ಪಾದನೆಯಲ್ಲಿ ಲೋಹವನ್ನು ಬಳಸುವುದರಿಂದ ಉದ್ಯಮದ ಬೇಡಿಕೆಯು ಬೆಳ್ಳಿಯ ಬೆಲೆಗಳ ಮೇಲೆ ತನ್ನ ಪ್ರಭಾವವನ್ನು ಬೀರುತ್ತದೆ.
ಭಾರತದಲ್ಲಿ ಬೆಳ್ಳಿ ಏಕೆ ಕಡಿಮೆ ದುಬಾರಿ?
ಭಾರತದಲ್ಲಿ ಬೆಳ್ಳಿಯು ಎಂದಿಗೂ ಕೂಡಾ ಜನಪ್ರಿಯ ಲೋಹವಾಗಿಯೇ ಇದೆ. ಆದ್ದರಿಂದ, ಇದು ಹಳದಿ ಲೋಹಕ್ಕಿಂತ ಭಾರತದಲ್ಲಿ ಹೆಚ್ಚು ಸಾಮಾನ್ಯವಾದ ಸರಕಾಗಿದೆ. ಭಾರತದಲ್ಲಿ ಬೆಳ್ಳಿ ದರಕ್ಕಿಂತ ಚಿನ್ನದ ಬೆಲೆಯು ಕಡಿಮೆಯಾಗಿದೆ. ಈ ನಡುವೆ ಚಿನ್ನದ ಆಮದುಗಳಿಗೆ ಹೋಲಿಸಿದರೆ ಬೆಳ್ಳಿಯ ಆಮದು ಕ್ರಮೇಣವಾಗಿ ಏರಿಕೆಯಾಗುತ್ತಿದೆ.
ಚಿನ್ನದ ಬೆಲೆ ಹೇಗಿದೆ?
ಅಕ್ಟೋಬರ್ 21ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 200 ರೂಪಾಯಿ ಏರಿಕೆಯಾಗಿದ್ದು 56,600 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 220 ರೂಪಾಯಿ ಏರಿಕೆಯಾಗಿದ್ದು ಪ್ರಸ್ತುತ 61,750 ರೂಪಾಯಿ ಆಗಿದೆ.
ಈ ನಡುವೆ ಕೊನೆಯ ಅಕ್ಟೋಬರ್ 21ರಂದು ಈ ಸಮಯಕ್ಕೆ ನಡೆದ ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು 60725 ರೂಪಾಯಿ ಆಗಿದೆ. ಬೆಳ್ಳಿ ಹಿಗ್ಗಿದ್ದು 72915.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ.0.20ರಷ್ಟು ಏರಿಕೆ ಕಂಡಿದ್ದು 1,981.22 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.26ರಷ್ಟು ಹಿಗ್ಗಿದ್ದು 23.36 ಯುಎಸ್ ಡಾಲರ್ ಆಗಿದೆ.


Click it and Unblock the Notifications