ಯುಎಸ್ ಫೆಡರಲ್ ರಿಸರ್ವ್ ಬಡ್ಡಿದರ, ಡಾಲರ್ ಮತ್ತು ಟ್ರೆಜರಿ ಯೀಲ್ಡ್‌ಗಳ ಮೇಲೆ ಒತ್ತಡ ಹೇರುತ್ತದೆ ಎಂದು ಹೂಡಿಕೆದಾರರು ನಂಬಿದ್ದಾರೆ. ಈ ನಡುವೆ ಚಿನ್ನ, ಬೆಳ್ಳಿ ಬೆಲೆಗಳು ನಿರಂತರವಾಗಿ ಏರಿಕೆಯನ್ನು ಕಾಣುತ್ತಾ ಬಂದಿದೆ.
ಭಾರತದಲ್ಲಿ ನವೆಂಬರ್ 17 ರಂದು 10 ಗ್ರಾಂಗೆ 22 ಕ್ಯಾರೆಟ್ ಚಿನ್ನದ ಬೆಲೆ 600 ರೂಪಾಯಿ ಏರಿಕೆಯಾಗಿ, 56,550 ರೂಪಾಯಿಗೆ ತಲುಪಿದೆ. 10 ಗ್ರಾಂ 24 ಕ್ಯಾರೆಟ್ ಹಳದಿ ಲೋಹದ ಬೆಲೆ 650 ರೂಪಾಯಿ ಜಿಗಿದು, 61,690 ರೂಪಾಯಿಗೆ ತಲುಪಿದೆ.

ಮೆಟ್ರೋಪಾಲಿಟನ್ ನಗರದಲ್ಲಿ ಚಿನ್ನದ ಬೆಲೆ
ಬೆಂಗಳೂರಿನಲ್ಲಿ ಚಿನ್ನದ ಬೆಲೆ: ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆಯು ಇಂದು 600 ರೂಪಾಯಿ ಏರಿಕೆಯಾಗಿ, 56550 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆಯು 650 ರೂಪಾಯಿ ಜಿಗಿತ ಕಂಡು 61,690 ರೂಪಾಯಿ ಆಗಿದೆ.
ಚೆನ್ನೈನಲ್ಲಿ ಚಿನ್ನದ ಬೆಲೆ: ಇಂದು ಚೆನ್ನೈನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 57,000 ರೂಪಾಯಿ ಮತ್ತು 24 ಕ್ಯಾರೆಟ್ ಹಳದಿ ಲೋಹದ 10 ಗ್ರಾಂ ಬೆಲೆ 62,180 ರೂಪಾಯಿ ಆಗಿದೆ.
ಮುಂಬೈನಲ್ಲಿ ಚಿನ್ನದ ಬೆಲೆ: ಭಾರತದ ಆರ್ಥಿಕ ರಾಜಧಾನಿ ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 56,550 ರೂಪಾಯಿ ಮತ್ತು 10 ಗ್ರಾಂ 24 ಕ್ಯಾರೆಟ್ ಹಳದಿ ಲೋಹದ ಬೆಲೆಯು 61,690 ರೂಪಾಯಿಗೆ ತಲುಪಿದೆ.
ದೆಹಲಿಯಲ್ಲಿ ಚಿನ್ನದ ಬೆಲೆ: ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 56,700 ರೂಪಾಯಿ ಆಗಿದೆ. 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 61,840 ರೂಪಾಯಿ ಆಗಿದೆ.
ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ: ನವೆಂಬರ್ 17, 2023 ರಂದು ಕೋಲ್ಕತ್ತಾದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 56,550 ರೂಪಾಯಿ ಮತ್ತು 10 ಗ್ರಾಂ 24 ಕ್ಯಾರೆಟ್ ಹಳದಿ ಲೋಹದ ಬೆಲೆ 61,690 ರೂಪಾಯಿ ಆಗಿದೆ.
ಭಾರತದಲ್ಲಿ ಬೆಳ್ಳಿ ಬೆಲೆ
ಬೆಳ್ಳಿ ಬೆಲೆಯು ಇಂದು ಭಾರತದಲ್ಲಿ ಪ್ರತಿ ಕೆಜಿಗೆ 1500 ರೂಪಾಯಿ ಏರಿಕೆಯಾಗಿ, 76,500 ರೂಪಾಯಿಗೆ ತಲುಪಿದೆ. ಭಾರತದಲ್ಲಿ 10 ಗ್ರಾಂ ಬೆಳ್ಳಿಯ ಬೆಲೆ ಇಂದು 765 ರೂಪಾಯಿ, 100 ಗ್ರಾಂ ಬೆಳ್ಳಿಯ ಬೆಲೆ ಇಂದು 7650 ರೂಪಾಯಿ ಜಿಗಿತ ಕಂಡಿದೆ. ಭಾರತದಲ್ಲಿ 4 ದಿನಗಳ ಅವಧಿಯಲ್ಲಿ ಬೆಳ್ಳಿ ಬೆಲೆ 4100 ರೂಪಾಯಿ ಏರಿಕೆಯಾಗಿದೆ.
ಚಿನ್ನದ ಬೆಲೆ ಹೇಗಿದೆ?
ಈ ನಡುವೆ ಕೊನೆಯ ನವೆಂಬರ್ 17ರಂದು ಈ ಸಮಯಕ್ಕೆ ನಡೆದ ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು 60953.00 ರೂಪಾಯಿ ಆಗಿದೆ. ಬೆಳ್ಳಿ ಹಿಗ್ಗಿದ್ದು 73721.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ.0.42ರಷ್ಟು ಏರಿಕೆ ಕಂಡಿದ್ದು 1,990.83 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.06ರಷ್ಟು ಹಿಗ್ಗಿದ್ದು 24.02 ಯುಎಸ್ ಡಾಲರ್ ಆಗಿದೆ.


Click it and Unblock the Notifications