ಜನಪ್ರಿಯ ಸ್ಟಾರ್ಟ್ ಆಪ್ ಕಂಪನಿ "ಓಯೊ"ದ ಸಂಸ್ಥಾಪಕ ಹಾಗೂ ಸಿಇಓ ರಿತೇಶ್ ಅಗರ್ವಾಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಂಗಳವಾರದಂದು ದೆಹಲಿಯಲ್ಲಿ ನಡೆದ ಅವರ ವಿವಾಹ ಆರಕ್ಷತೆಯಲ್ಲಿ ಭಾಗವಹಿಸಿದ್ದ ಕಾರ್ಪೊರೇಟರ್ ನಾಯಕರಲ್ಲಿ ಸಾಫ್ಟ್‌ಬ್ಯಾಂಕ್‌ನ ಮುಖ್ಯಸ್ಥ ಮಸೊಯೊಶಿ ಸನ್ ಅವರು ಕೂಡ ಸೇರಿದ್ದಾರೆ. 29 ವರ್ಷದ ಉದ್ಯಮಿ ಅಗರ್ವಾಲ್, ಅವರ ಪಾದವನ್ನು ಸ್ಪರ್ಶಿಸಿ ಆಶೀರ್ವಾದವನ್ನು ಪಡೆಯುವುದನ್ನು ಫೋಟೊದಲ್ಲಿ ಕಾಣಬಹುದು.
ಉದ್ಯಮಿ ರಿತೇಶ್ ಅಗರ್ವಾಲ್ ಅವರು ದೇಶದ ಯುವ ಬಿಲಿಯನೇರ್‌ಗಳ ಸಾಲಿನಲ್ಲಿದ್ದು, ತಮಗೆ ಕೇವಲ 19 ವರ್ಷ ಇರುವಾಗಲೇ 2013ರಲ್ಲಿ ಓಯೋ ಕಂಪೆನಿಯನ್ನು ಸ್ಥಾಪಿಸಿದ್ದರು. ಜಪಾನ್‌ನ ಸಂಘಟಿತ ಸಂಸ್ಥೆಯಾದ ಸಾಫ್ಟ್‌ಬ್ಯಾಂಕ್ ಓಯೋದಲ್ಲಿನ ಅತಿದೊಡ್ಡ ಹೂಡಿಕೆದಾರರಾಗಿದ್ದಾರೆ. ಈ ಯುವ ಉದ್ಯಮಿಯು ನಿನ್ನೆ ಗೀತಾಂಶ ಸೂದ್ ಅವರನ್ನು ಮದುವೆಯಾಗಿದ್ದಾರೆ.

ಪೇಟಿಯಂನ ವಿಜಯ್ ಶೇಖರ್ ಶರ್ಮಾ ಹಾಗೂ ಲೆನ್ಸ್‌ಕಾರ್ಟ್‌ನ ಪಿಯೂಷ್ ಬನ್ಸಾಕ್ ಸೇರಿದಂತೆ ಕಾರ್ಪೊರೇಟ್ ಲೀಡರ್‌ಗಳು ಈ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದಾರೆ.
"ಮಾಸಾ ಅವರು ನಗು, ಸಂತೋಷ ಹಾಗೂ ಅವರ ಭಾರತ ಪ್ರವಾಸವನ್ನು ನೋಡಿ ಇಂದು ಅತೀವ ಖುಷಿಯಾಗಿದೆ. ನಮ್ಮ ಸ್ಟಾರ್ಟಪ್‌ಗೆ ಮೇಲಿನ ನಂಬಿಕೆ ಹಾಗೂ ಅದಕ್ಕೆ ಅವರು ನೀಡಿದ ಬೆಂಬಲವನ್ನು ನೋಡಿ ನಮ್ಮಲ್ಲಿರುವ ಪ್ರತಿಯೊಬ್ಬರೂ ವರ್ಣಿಸಲಾಗದ ಕೃತಜ್ಞತೆಯನ್ನು ಹೊಂದಿದ್ದೇವೆ" ಎಂದು ಟ್ವೀಟ್ ಮಾಡುವ ಮೂಲಕ ಪೇಟಿಯಂನ ವಿಜಯ್ ಶೇಖರ್ ಶರ್ಮಾ ಅವರು ಮಸೊಯೊಶಿ ಹಾಗೂ ಇತರೆ ಬಿಸಿನಸ್ ಲೀಡರ್‌ಗಳ ಜತೆಯಿರುವ ಪೋಟೊವನ್ನು ಟ್ಯಾಗ್ ಮಾಡಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್ ಕೂಡ ದಂಪತಿ ಜತೆಗಿನ ಫೋಟೊಗಳನ್ನು ಹಂಚಿಕೊಂಡು ಅಭಿನಂದನೆ ಸಲ್ಲಿಸಿದ್ದಾರೆ.
ಕಳೆದ ತಿಂಗಳು ಅಗರ್‌ವಾಲ್ ಅವರು ತಾವು ಮದುವೆಯಾಗುವ ಹುಡುಗಿ ಹಾಗೂ ತಮ್ಮ ತಾಯಿಯೊಂದಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ವಿವಾಹ ಸಮಾರಂಭಕ್ಕೆ ಆಹ್ವಾನಿಸಿದ್ದರು. ಆ ವೇಳೆ ಜೋಡಿಯು ಮೋದಿ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುತ್ತಿದ್ದ ಫೋಟೊಗಳು ಆನ್‌ಲೈನ್‌ನಲ್ಲಿ ಶೇರ್ ಆಗಿದ್ದವು.
ಈ ಜೋಡಿಯು ಇತ್ತೀಚೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡಿತ್ತು. ಈ ವೇಳೆ ಅಗರ್ವಾಲ್ ಅವರು ರಾಷ್ಟ್ರಪತಿ ಜತೆಗಿನ ಫೋಟೊವನ್ನು ಇನ್‌ಸ್ಟಾದಲ್ಲಿ ಶೇರ್ ಮಾಡಿ "ಒಡಿಶ್ಸಾದಲ್ಲಿ ನಿಮ್ಮೊಂದಿಗೆ ಮಾತನಾಡುವುದು ಮನೆಯಂತೆ ಭಾಸವಾಗುತ್ತಿದೆ" ಎಂದು ಬರೆದುಕೊಂಡಿದ್ದರು.
ಯಾವುದೇ ಆಡಂಬರವಿಲ್ಲದ ವಸತಿ ಸೌಕರ್ಯವನ್ನು ಒದಗಿಸುವಲ್ಲಿ ಓಯೋ ಜನಪ್ರಿಯತೆ ಪಡೆದಿದ್ದು, ಪ್ರವಾಸಿಗರನ್ನು ಬಜೆಟೆಡ್ ಹೋಟೆಲ್‌ಗಳೊಂದಿಗೆ ಸಂಪರ್ಕಿಸಲು ನೆರವಾಗುತ್ತಿದೆ. ಇದು 800ಕ್ಕೂ ಹೆಚ್ಚು ನಗರಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ.


Click it and Unblock the Notifications