ಬ್ಯುಸಿನೆಸ್ (Business) ಆರಂಭಿಸಬೇಕೆಂಬುದು ಹಲವರ ಕನಸು. ಆದ್ರೆ ಏನ್ ಮಾಡೋದು ಹೇಳಿ. ಬಂಡವಾಳದ ಕೊರತೆಯೋ, ನಷ್ಟದ ಭಯದಿಂದಲೋ, ಆ ಸಾಹಸಕ್ಕೆ ಮುಂದಾಗೋದೆ ಇಲ್ಲ. ಆದ್ರೆ ಇದೀಗ ಇಲ್ಲೊಬ್ಬರು ಕಡಿಮೆ ಹೂಡಿಕೆಯಲ್ಲಿ ಬ್ಯುಸಿನೆಸ್ ಆರಂಭಿಸಿ, ಇದು ಸಕ್ಸಸ್ ಉದ್ಯಮಿಯಾಗಿದ್ದಾರೆ. ಅಷ್ಟಕ್ಕೂ ಅವರು ಆರಂಭಿಸಿದ ಬ್ಯುಸಿನೆಸ್ ಯಾವುದು? ನೀವೂ ಆರಂಭಿಸಬಹುದಾ? ಈ ಎಲ್ಲಾ ಪ್ರಶ್ನೆಗೆ ಉತ್ತರ ಇಲ್ಲಿದೆ.

ಹೌದು, ನಾವು ಹೇಳುತ್ತಿರುವ ಇಂದಿನ ಬ್ಯುಸಿನೆಸ್ ಬಟ್ಟೆ ಅಂಗಡಿ (Dress Shop). ಮಂಗಳೂರು ಮೂಲಕ ಹೇಮಚಂದ್ರ ಎಂಬುವವರು ಈ ಬ್ಯುಸಿನೆಸ್ ಆರಂಭಿಸಿ ಸಕ್ಸಸ್ ಕಂಡವರು. ವಿಶೇಷವಾಗಿ ಇವರು ಮೆನ್ಸ್ ಬಟ್ಟೆ ಅಂಗಡಿಯನ್ನು ಆರಂಭಿಸಿದ್ದಾರೆ. ಕಡಿಮೆ ಹೂಡಿಕೆಯೊಂದಿಗೆ, ಹೆಚ್ಚಿನ ಆದಾಯ ಸಂಪಾದಿಸಲು ಇದು ಬೆಸ್ಟ್ ಐಡಿಯಾ ಅಂತಾರೆ ಹೇಮಚಂದ್ರ.
ಬಟ್ಟೆ ಅಂಗಡಿ ಆರಂಭಿಸಿದ್ದು ಹೇಗೆ?
ಯಾವುದೇ ವ್ಯವಹಾರ ಆರಂಭಿಸುವ ಮುನ್ನ ಅದನ್ನು ಮ್ಯಾನೇಜ್ ಮಾಡುವುದು ಹೇಗೆ ಎಂಬುದು ಎಲ್ಲರಿಗೂ ಪ್ರಶ್ನೆ ಇರುತ್ತದೆ. ಅದೇ ಪ್ರಶ್ನೆ ಹೇಮಚಂದ್ರ ಅವರ ಬಳಿಯೂ ಇತ್ತು. ಅದರಲ್ಲೂ ಬಟ್ಟೆ ಅಂಗಡಿ ಮ್ಯಾನೇಜ್ ಮಾಡುವುದೆಂದರೆ ದೊಡ್ಡ ಸಾಹಸ. ಕಾರಣ, ದಿನಕ್ಕೊಂದರಂತೆ ಹೊಸ ಹೊಸ ಟ್ರೆಂಡ್‌ಗಳು ಬರುತ್ತಿರುತ್ತದೆ. ಅದೇ ರೀತಿ ಫ್ಯಾಷನ್‌ಗಳಲ್ಲೂ ಬದಲಾವಣೆಯಾಗುತ್ತಿರುತ್ತದೆ. ಅದರಲ್ಲೂ ಹುಡುಗಿಯ ಫ್ಯಾಷನ್ ಟ್ರೆಂಡ್ ಬದಲಾದಷ್ಟು, ಹುಡುಗರ ಫ್ಯಾಷನ್ ಟ್ರೆಂಡ್ ಬದಲಾವಣೆ ತುಂಬಾ ಕಡಿಮೆ. ಅದೇ ಕಾರಣದಿಂದ ಹುಡುಗರ ಬಟ್ಟೆ ಅಂಗಡಿ ತೆರೆಯುವುದು ಸುಲಭ ಅಂತಾರೆ ಹೇಮಚಂದ್ರ. ಅದೇ ಕಾರಣದಿಂದ ಇಂದು "ಅರ್ವಮ್ ಡ್ರೆಸ್ ಹೌಸ್" ಗುರುತಿಸಿಕೊಂಡಿದೆ.

ಬಜೆಟ್ ಎಷ್ಟು ಬೇಕು?
ಸಾಮಾನ್ಯವಾಗಿ ಹುಡುಗರ ಬಟ್ಟೆ ಅಂಗಡಿ ತೆರೆಯಲು ಕಮ್ಮಿಯಂದರೂ 6 ರಿಂದ 7 ಲಕ್ಚ ಬೇಕಾಗುತ್ತದೆ. ಮೊದಲಿಗೆ ಬಟ್ಟೆ ಅಂಗಡಿ ಸೆಟಪ್ ರೆಡಿ ಮಾಡಬೇಕು. ಅಲ್ಲಿ ಅಡ್ವಾನ್ಸ್, ಬಾಡಿಗೆ ಎಲ್ಲಾ ಪಾವತಿ ಮಾಡಬೇಕಾಗುತ್ತದೆ. ಬಳಿಕ ಇಂಟೀರಿಯರ್ ಡಿಸೈನ್, ಬೋರ್ಡ್ ಎಲ್ಲವನ್ನೂ ಸೆಟಪ್ ಮಾಡಬೇಕು. ಅದಕ್ಕಾಗಿ ಕಮ್ಮಿ ಅಂದರೂ 2 ರಿಂದ 3 ಲಕ್ಷ ಮೀಸಲಿಡಬೇಕು. ಎಲ್ಲಾ ಸೆಟಪ್ ಆದ ನಂತರ ಬಟ್ಟೆ ಖರೀದಿ ಮಾಡಬೇಕು. ಬಹುತೇಕ ಬಟ್ಟೆ ಅಂಗಡಿ ಮಾಲೀಕರು ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಖರೀದಿ ಮಾಡುತ್ತಾರೆ. ಅಲ್ಲಿ ಬಟ್ಟೆ ಅಂಗಡಿಗಳಿಗೆ ಹೋಲ್‌ಸೇಲ್‌ನಲ್ಲಿ ಬಟ್ಟೆಗಳನ್ನು ನೀಡಲಾಗುತ್ತದೆ. ಇನ್ನು ಆರಂಭದಲ್ಲಿ ಒಂದು ಸಣ್ಣ ಅಂಗಡಿಯಂದರೂ 3 ರಿಂದ 4 ಲಕ್ಷದ ಬಟ್ಟೆಗಳನ್ನು ಖರೀದಿ ಮಾಡಬೇಕಾಗುತ್ತದೆ. ಅದರಲ್ಲಿ ಪ್ಯಾಂಟ್, ಶರ್ಟ್, ಹೀಗೆ ಹಲವು ರೀತಿಗಳಲ್ಲಿ ಖರೀದಿಸ ಬೇಕಾಗುತ್ತದೆ.
ಲಾಭ ಗಳಿಸುವುದು ಹೇಗೆ?
ಹೋಲ್‌ಸೇಲ್ ಅಂಗಡಿಗಳಲ್ಲಿ ಕಮ್ಮಿಯಂದರೂ 100 ರೂ.ನಿಂದ 300 ರೂ. ಒಳಗಡೆ ಕೆಲವು ಶರ್ಟ್‌ಗಳು ಸಿಗುತ್ತದೆ. ಇನ್ನು ಜೀನ್ಸ್ ಪ್ಯಾಂಟ್‌ಗಳು 250 ರೂ. ನಿಂದ 500 ರೂ. ಒಳಗಡೆ ಸಿಗುತ್ತದೆ. ಆದ್ರೆ ಒಂದು ಶರ್ಟ್ ಅನ್ನು ಮಿನಿಮಮ್ ಅಂದರೂ 500 ರೂ.ನಲ್ಲಿ ಮತ್ತು ಜೀನ್ಸ್ ಪ್ಯಾಂಟ್ ಅನ್ನು 750 ರೂ.ನಿಂದ 1000 ರೂ.ಬೆಲೆಯಲ್ಲಿ ಮಾರಾಟ ಮಾಡಲಾಗುತ್ತದೆ. ಇಲ್ಲಿಯೇ ಹೆಚ್ಚು ಲಾಭ ಗಳಿಸಬಹುದು ಅಂತಾರೆ ಉದ್ಯಮಿ.
ಇನ್ನು ಈ ಕುರಿತು ಮಾತನಾಡಿರುವ ಹೇಮಚಂದ್ರ, "ಯಾವುದೇ ಬ್ಯುಸಿನೆಸ್ ಆಗಲಿ, ಆರಂಭಿಸುವುದು ಸುಲಭದ ಮಾತಲ್ಲ. ಅಷ್ಟೇ ಅಲ್ಲ ಅದನ್ನು ಸರಿಯಾಗಿ ಮ್ಯಾನೇಜ್ ಮಾಡಬೇಕು. ಹಾಗಿದ್ದರೆ ಮಾತ್ರ ಒಂದು ಬ್ಯುಸಿನೆಸ್ ಸಕ್ಸಸ್ ಕಾಣಬಹುದು. ಆದ್ದರಿಂದ ದಿನಂಪ್ರತಿ ಬದಲಾಗುತ್ತಿರುವ ಟ್ರೆಂಡ್ ನಡುವೆ, ಬಟ್ಟೆ ಅಂಗಡಿ ಮ್ಯಾನೇಜ್ ಮಾಡುವುದು ಕೂಡಾ ಒಂದು ಸವಾಲು" ಎಂದು ಹೇಳಿದ್ದಾರೆ.


Click it and Unblock the Notifications