ಈಗಾಗಲೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಹೊಸ ವರ್ಷದಲ್ಲಿ ಬ್ಯಾಂಕ್ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈಗ ಎನ್‌ಎಸ್‌ಇ ಮತ್ತು ಬಿಎಸ್‌ಇ 2024ರಲ್ಲಿ ಒಟ್ಟು 14 ದಿನ ರಜೆಯನ್ನು ಹೊಂದಿರಲಿದೆ.
ಮುಂದಿನ ವರ್ಷದ ಮೊದಲ ನಾಲ್ಕು ರಜಾದಿನಗಳಲ್ಲಿ ಷೇರು ಮಾರುಕಟ್ಟೆಗೆ ದೀರ್ಘ ವಾರಾಂತ್ಯ ಇರಲಿದೆ. ಐದು ರಜಾದಿನಗಳು ಇರಲಿದೆ. ಪ್ರಮುಖವಾಗಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ, ಶ್ರೀ ಮಹಾವೀರ ಜಯಂತಿ, ಗಣೇಶ ಚತುರ್ಥಿ, ದಸರಾ, ಮತ್ತು ದೀಪಾವಳಿ ರಜೆ ಇರಲಿದೆ. ಇದು ಶನಿವಾರ ಮತ್ತು ಭಾನುವಾರದಂದು ಬರುತ್ತದೆ. 2024 ರ ವ್ಯಾಪಾರ/ಸ್ಟಾಕ್ ಮಾರುಕಟ್ಟೆ ರಜಾ ಕ್ಯಾಲೆಂಡರ್ ಇಲ್ಲಿದೆ. ಮುಂದೆ ಓದಿ....

ಬಿಎಸ್‌ಇ ರಜಾದಿನಗಳ ಪಟ್ಟಿ
ಬಿಎಸ್‌ಇಯಲ್ಲಿ ಲಭ್ಯವಿರುವ ರಜಾದಿನಗಳ ಸಂಪೂರ್ಣ ಪಟ್ಟಿಯು ವರ್ಷದ ಮೊದಲ ರಜಾದಿನವು ವಿಸ್ತೃತ ವಾರಾಂತ್ಯವನ್ನು ಉಂಟು ಮಾಡುತ್ತದೆ ಎಂದು ಸೂಚಿಸುತ್ತದೆ. ಗಣರಾಜ್ಯೋತ್ಸವದ ರಜೆಯ ಕಾರಣ ಜನವರಿ 26, ಶುಕ್ರವಾರದಂದು ಮಾರುಕಟ್ಟೆ ಮುಚ್ಚಲಿದೆ. ಅದಾದ ಬಳಿಕ ಶನಿವಾರ ಮತ್ತು ಭಾನುವಾರ ಬಂದ್ ಆಗಲಿದೆ.
ಇನ್ನು ಮುಂದಿನ ಮೂರು ರಜಾದಿನಗಳು, ಎಲ್ಲಾ ಮಾರ್ಚ್‌ನಲ್ಲಿ ಬರುತ್ತದೆ. ವಿಸ್ತೃತ ರಜಾದಿನ ಆ ತಿಂಗಳಲ್ಲಿ ಬರಲಿದೆ. ಅವುಗಳಲ್ಲಿ ಮಾರ್ಚ್ 8 (ಶುಕ್ರವಾರ) ಮಹಾಶಿವರಾತ್ರಿ, ಮಾರ್ಚ್ 25 (ಸೋಮವಾರ) ರಂದು ಹೋಳಿ ಮತ್ತು ಮಾರ್ಚ್ 29 ರಂದು ಶುಭ ಶುಕ್ರವಾರದಂದು ಟ್ರೇಡಿಂಗ್ ಇರುವುದಿಲ್ಲ.
ಏಪ್ರಿಲ್, ಜುಲೈ ಮತ್ತು ನವೆಂಬರ್‌ನಲ್ಲಿ ತಲಾ ಎರಡು ಮಾರುಕಟ್ಟೆ ರಜಾದಿನಗಳು ಇದೆ. ಫೆಬ್ರವರಿ ಮತ್ತು ಸೆಪ್ಟೆಂಬರ್‌ನಲ್ಲಿ ಮಾರುಕಟ್ಟೆ ರಜೆ ಇರುವುದಿಲ್ಲ. ಈದ್-ಉಲ್-ಫಿತರ್ (ರಂಜಾನ್ ಐದ್) ಮತ್ತು ರಾಮ ನವಮಿಯು ಏಪ್ರಿಲ್ 11 (ಗುರುವಾರ) ಮತ್ತು ಏಪ್ರಿಲ್ 17 (ಬುಧವಾರ) ರಂದು ಬರುತ್ತದೆ. ಮಹಾರಾಷ್ಟ್ರ ದಿನವು ಮೇ 1 ರಂದು (ಬುಧವಾರ) ಬರುತ್ತದೆ.
ಬಕ್ರಿದ್ ಹಬ್ಬದ ಕಾರಣ ಜೂನ್ 17 ರಂದು (ಸೋಮವಾರ) ಮಾರುಕಟ್ಟೆಯನ್ನು ಮುಚ್ಚಲಾಗುವುದು, ಈ ಸಂದರ್ಭದಲ್ಲಿಯೂ ವಿಸ್ತೃತ ರಜೆ ಇರಲಿದೆ. ಅಂದರೆ ಶನಿವಾರ, ಭಾನುವಾರ, ಸೋಮವಾರ ರಜೆ ಇರಲಿದೆ. ಜುಲೈ 17 ರಂದು ಮೊಹರಂ ಆಗಿ ಆಚರಿಸಲಾಗುತ್ತದೆ. ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನವು ಗುರುವಾರ, ಮಹಾತ್ಮಾ ಗಾಂಧಿ ಜಯಂತಿ (ಅಕ್ಟೋಬರ್ 2) ಬುಧವಾರ ಬರುತ್ತದೆ.
ನವೆಂಬರ್ 1 ರಂದು ದೀಪಾವಳಿ, ವಿಶೇಷ ಮುಹೂರ್ತದ ವ್ಯಾಪಾರದ ಕಾರಣ ಮಾರುಕಟ್ಟೆಯನ್ನು ಮುಚ್ಚಲಾಗುತ್ತದೆ. ಅದರ ಸಮಯವನ್ನು ಹಬ್ಬದ ದಿನದಂದು ಪ್ರಕಟಿಸಲಾಗುತ್ತದೆ. ಗುರುನಾನಕ್ ಜಯಂತಿಯನ್ನು ನವೆಂಬರ್ 15 ರಂದು ಶುಕ್ರವಾರ ಆಚರಿಸಲಾಗುತ್ತದೆ. ಈ ದಿನ ವಿಸ್ತೃತ ರಜೆ ಇರಲಿದೆ. ಕೊನೆಯದಾಗಿ ಡಿಸೆಂಬರ್ 25 (ಬುಧವಾರ) ಕ್ರಿಸ್ ಮಸ್ ರಜೆಗೆ ಮಾರುಕಟ್ಟೆ ಬಂದ್ ಆಗಲಿದೆ.
ಸರಕು ಉತ್ಪನ್ನಗಳ ಮಾರುಕಟ್ಟೆಗೆ ಐದು ಪೂರ್ಣ-ದಿನದ ವ್ಯಾಪಾರ ರಜಾದಿನಗಳಿವೆ. ಗಣರಾಜ್ಯೋತ್ಸವ, ಶುಭ ಶುಕ್ರವಾರ, ಸ್ವಾತಂತ್ರ್ಯ ದಿನ, ಗಾಂಧಿ ಜಯಂತಿ ಮತ್ತು ಕ್ರಿಸ್ಮಸ್ ಈ ಐದು ದಿನಗಳ ರಜೆ ಆಗಿರಲಿದೆ. ಈ ದಿನ ಸಂಜೆಯ ವಹಿವಾಟು ಇರಲಿದೆ. ಹೊಸ ವರ್ಷದ ದಿನದಂದು, ಜನವರಿ 1 ರಂದು, ಸಂಜೆಯ ಸೆಷನ್‌ಗಾಗಿ ಸರಕು ಉತ್ಪನ್ನ ಮಾರುಕಟ್ಟೆಯನ್ನು ಮುಚ್ಚಲಾಗುತ್ತದೆ.


Click it and Unblock the Notifications